ಟಿ-20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಂದ್ಯಕ್ಕೂ ಮುನ್ನ ಬ್ಲಾಕ್ ಲೈವ್ಸ್ ಮ್ಯಾಟರ್ಸ್ (Black Lives Matters) ಚಳವಳಿಗೆ ಬೆಂಬಲ ಸೂಚಿಸುವುದು ನಡೆಯುತ್ತಿದೆ. ಆದರೆ, ಅ.26 ರಂದು ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ನಡುವೆ ನಡೆದ ಪಂದ್ಯದ ವೇಳೆ ಚಳವಳಿಗೆ ಬೆಂಬಲ ಸೂಚಿಸಿ ಮಂಡಿಯೂರಲು ನಿರಾಕರಿಸಿ ವಿವಾದಕ್ಕೆ ಕಾರಣರಾಗಿದ್ದ ಕ್ವಿಂಟನ್ ಡಿ ಕಾಕ್, ’ನಾನು ಜನಾಂಗಿಯ ದ್ವೇಷಿಯಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
Black Lives Matters ಚಳವಳಿಗೆ ಮಂಡಿಯೂರಿ ಬೆಂಬಲ ನೀಡದಕ್ಕೆ ತಮ್ಮ ಸಹ ಆಟಗಾರರು ಮತ್ತು ಅಭಿಮಾನಿಗಳಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಕ್ಷಮೆಯಾಚಿಸಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಚಳವಳಿಗೆ ಬೆಂಬಲ ವ್ಯಕ್ತಪಡಿಸಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೂಚಿಸಿತ್ತು. ಇದನ್ನು ವಿರೋಧಿಸಿ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ವೆಸ್ಟ್ ಇಂಡೀಸ್ ವಿರುದ್ದ ಆಡಿರಲಿಲ್ಲ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ‘Black Lives Matters’ ಬೆಂಬಲಿಸಿ ಮಂಡಿಯೂರಿದ ಭಾರತೀಯ ಕ್ರಿಕೆಟಿಗರು: ಮಿಶ್ರ ಪ್ರತಿಕ್ರಿಯೆ
Quinton de Kock statement ? pic.twitter.com/Vtje9yUCO6
— Cricket South Africa (@OfficialCSA) October 28, 2021
ಕ್ರಿಕೆಟ್ ದಕ್ಷಿಣ ಆಫ್ರಿಕಾದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿರುವ ಹೇಳಿಕೆಯಲ್ಲಿ ತಮ್ಮ ಸಹ ಆಟಗಾರರು ಮತ್ತು ಅಭಿಮಾನಿಗಳಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಕ್ಷಮೆಯಾಚಿಸಿದ್ದಾರೆ.
’ನಿಮಗೆ ನೋವು, ಗೊಂದಲ ಮತ್ತು ಕೋಪ ಉಂಟುಮಾಡಿದಕ್ಕೆ ನನ್ನನ್ನು ಕ್ಷಮಿಸಿ. ವರ್ಣಭೇದ ನೀತಿಯ ವಿರುದ್ಧ ಮಂಡಿಯೂರುವುದರ ಪ್ರಾಮುಖ್ಯತೆಯನ್ನು ತಿಳಿದುಕೊಂಡಿದ್ದೇನೆ. ನಾನು ಮಂಡಿಯೂರುವುದರಿಂದ ಇತರರಿಗೆ ತಿಳುವಳಿಕೆ ಬರುವುದಾದರೇ, ಇತರರ ಜೀವನ ಸುಧಾರಿಸುವುದಾದರೇ ಮಂಡಿಯೂರುವುದನ್ನು ನಾನು ಸಂತೋಷದಿಂದ ಮಾಡುತ್ತೇನೆ’ ಎಂದಿದ್ದಾರೆ.
“ತಪ್ಪು ತಿಳುವಳಿಕೆಯಿಂದಾಗಿ ನನ್ನನ್ನು ಜನಾಂಗೀಯ ದ್ವೇಷಿ ಎಂದು ಕರೆಯುವುದು ನನಗೆ ತುಂಬಾ ನೋವುಂಟುಮಾಡುತ್ತದೆ. ಇದು ನನ್ನ ಕುಟುಂಬವನ್ನು ದುಖಃಕ್ಕೆ ತಳ್ಳುತ್ತದೆ. ನನ್ನ ಗರ್ಭಿಣಿ ಹೆಂಡತಿಗೆ ನೋವುಂಟುಮಾಡುತ್ತದೆ. ನಾನು ಜನಾಂಗೀಯವಾದಿ ಅಲ್ಲ. ಇದು ನನಗೆ ಮತ್ತು ನನ್ನನ್ನು ತಿಳಿದಿರುವವರಿಗೆ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ಹನ್ನೆರಡರ ಹಂತದಲ್ಲಿ ಭಾನುವಾರ (ಅ.24) ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಿದವು. ಪಂದ್ಯದ ಆರಂಭಕ್ಕೂ ಮುನ್ನ ಬ್ಲಾಕ್ ಲೈವ್ಸ್ ಮ್ಯಾಟರ್ಸ್ Black Lives Matters ಚಳಿವಳಿಗೆ ಬೆಂಬಲ ಸೂಚಿಸಿ ಭಾರತ ಮತ್ತು ಪಾಕ್ ಕ್ರಿಕೆಟ್ ತಂಡಗಳು ಮಂಡಿಯೂರಿ ಗಮನ ಸೆಳೆದಿದ್ದವು.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮುಂದಾಳತ್ವದಲ್ಲಿ ಭಾರತದ ಆಟಗಾರರು ಮಂಡಿಯೂರಿ ಚಳವಳಿಗೆ ಬೆಂಬಲ ಸೂಚಿಸಿದಾಗ ಪಾಕಿಸ್ತಾನದ ಆಟಗಾರರೂ ತಮ್ಮ ಎದೆಯ ಮೇಲೆ ಕೈಯಿಟ್ಟು ಅದಕ್ಕೆ ಬೆಂಬಲಿಸಿದ್ದರು.
ಇದನ್ನೂ ಓದಿ:ಸೋಲೆ ಗೆಲುವಿನ ಸೋಪಾನ: T20 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಹುರಿದುಂಬಿಸಿದ ಬಾಲಿವುಡ್ ಮಂದಿ


