Homeಅಂತರಾಷ್ಟ್ರೀಯಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕ ಆನಂದ್‌ ಪಟವರ್ಧನ್‌ಗೆ ‘2022 ರ ಅತ್ಯುತ್ತಮ ಸಾಧನೆ ಪ್ರಶಸ್ತಿ’

ಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕ ಆನಂದ್‌ ಪಟವರ್ಧನ್‌ಗೆ ‘2022 ರ ಅತ್ಯುತ್ತಮ ಸಾಧನೆ ಪ್ರಶಸ್ತಿ’

ಬಾಬರಿ ಮಸೀದಿ ಧ್ವಂಸ ಕುರಿತ ಆನಂದ್‌ ಅವರ ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರವನ್ನು ಅನುಮತಿ ನಿರಾಕರಣೆ ನಡುವೆಯೂ ವಿದ್ಯಾರ್ಥಿಗಳು ಜೆಎನ್‌ಯುವಿನಲ್ಲಿ ಪ್ರದರ್ಶಿಸಿದ್ದರು

- Advertisement -
- Advertisement -

ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರು ಕೆನಡಾದ ಟೊರೊಂಟೊದ ಹಾಟ್ ಡಾಕ್ಸ್ ಫೆಸ್ಟಿವಲ್‌ನಲ್ಲಿ ‘2022 ರ ಅತ್ಯುತ್ತಮ ಸಾಧನೆ ಪ್ರಶಸ್ತಿ’ಯನ್ನು ಸ್ವೀಕರಿಸಲಿದ್ದಾರೆ. ತಮ್ಮ ಕಾರ್ಯವೈಖರಿಗಾಗಿ ಅವರು ಈ ಗೌರವಕ್ಕೆ ಬಾಜನರಾಗಿದ್ದರೆ. ಕಾರ್ಯಕ್ರಮದಲ್ಲಿ ಹಿಂದುತ್ವ ಮತ್ತು ಬಹುಸಂಖ್ಯಾತವಾದದ ಕುರಿತ ಅವರ ಕೆಲವು ಚಲನಚಿತ್ರಗಳನ್ನು ಪ್ರದರ್ಶಿಸಲಾತ್ತದೆ.

ಏಪ್ರಿಲ್ 28 ರಂದು ಪ್ರಾರಂಭವಾಗಲಿರುವ ಹಾಟ್ ಡಾಕ್ಸ್ ಫೆಸ್ಟಿವಲ್, ಉತ್ತರ ಅಮೆರಿಕಾದಲ್ಲಿ ಅತಿದೊಡ್ಡ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವವಾಗಿದೆ. ಅಲ್ಲದೆ ಈ ಕಾರ್ಯಕ್ರಮವು ಆಸ್ಕರ್‌ಗಾಗಿ ಸಾಕ್ಷ್ಯಚಿತ್ರಗಳ ಅರ್ಹತಾ ಕಾರ್ಯಕ್ರಮವು ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

72 ವರ್ಷ ವಯಸ್ಸಿನ ಚಲನಚಿತ್ರ ನಿರ್ಮಾಪಕರಾದ ಆನಂದ್‌ ಅವರು ತಮ್ಮ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳಾದ, ಸ್ಲಂ ನಿವಾಸಿಗಳ ಕುರಿತ ‘ಬಾಂಬೆ: ಅವರ್ ಸಿಟಿ’ (1985), ಪಂಜಾಬ್ ಬಂಡಾಯದ ಕುರಿತ ‘ಇನ್ ಮೆಮೊರಿ ಆಫ್ ಫ್ರೆಂಡ್ಸ್’ (1990), ಬಾಬರಿ ಮಸೀದಿ ಧ್ವಂಸದ ಕುರಿತ ‘ಇನ್ ದ ನೇಮ್ ಆಫ್ ಗಾಡ್’ (1992), ಹಿಂದುತ್ವದ ಕುರಿತ ಫಾದರ್‌‌, ‘ಸನ್‌ ಆಂಡ್‌ ಹೋಲಿ ವಾರ್‌’ (1995), ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದ 1998 ರ ಪರಮಾಣು ಪರೀಕ್ಷೆಗಳ ಕುರಿತ, ‘ವಾರ್‌ ಆಂಡ್‌ ಪೀಸ್‌’ (2002) ಮೇಲೆ ಮತ್ತು 1997 ರ ಮುಂಬೈನಲ್ಲಿ ದಲಿತರ ಮೇಲೆ ನಡೆದ ಪೋಲಿಸ್ ಗುಂಡಿನ ದಾಳಿಯ ಕುರಿತ ‘ಜೈ ಭೀಮ್ ಕಾಮ್ರೇಡ್’ (2011) ಗೆ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿಯ ಆಖಾಡ!

ಹಾಟ್ ಡಾಕ್ಸ್ ಫೆಸ್ಟಿವಲ್‌ನಲ್ಲಿ ಆನಂದ್‌ ಅವರ ‘ಫಾದರ್, ಸನ್ ಅಂಡ್ ಹೋಲಿ ವಾರ್’ ಮತ್ತು ‘ವಾರ್ ಅಂಡ್ ಪೀಸ್’ ಜೊತೆಗೆ, ಕೆನಡಾದ ರೈತರ ಕುರಿತ ಅವರ 1981 ರ ಸಾಕ್ಷ್ಯಚಿತ್ರವಾದ ‘ಎ ಟೈಮ್ ಟು ರೈಸ್’ ಮತ್ತು ಭಾರತದಲ್ಲಿನ ಸಂಖ್ಯಾತವಾದದ ಇತಿಹಾಸದ ಕುರಿತ ಅವರ ಇತ್ತೀಚಿನ ಚಲನಚಿತ್ರ ‘ರೀಸನ್’ (2018) ಅನ್ನು ಕೂಡಾ ಪ್ರದರ್ಶಿಸಲಾಗುತ್ತದೆ.

“ಇಂತಹ ಪ್ರಶಸ್ತಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ವೀಕ್ಷಕರನ್ನು ಹೆಚ್ಚಿಸುತ್ತದೆ. ಆದರೆ ಜನರು ಏನು ನೋಡಬೇಕು ಮತ್ತು ಏನು ನೋಡಬಾರದು ಎಂಬುದನ್ನು ನಿಯಂತ್ರಿಸಲು ಬೇಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಆಡಳಿತದ ಅಡಿಯಲ್ಲಿ ನಾವು ವಾಸಿಸುತ್ತೇವೆ” ಎಂದು ಆನಂದ್‌ ಅವರು ದಿ ಟೆಲಿಗ್ರಾಫ್‌ಗೆ ಹೇಳಿದ್ದಾರೆ.

ಆನಂದ್‌ ಅವರ ಚಲನಚಿತ್ರಗಳ ಪ್ರದರ್ಶನಕ್ಕೆ ಬಿಜೆಪಿ ಪ್ರೇರಿತ ಸಂಘ ಪರಿವಾರದ ಗುಂಪುಗಳು ಆಗಾಗ್ಗೆ ಅಡ್ಡಿಪಡಿಸುತ್ತಿವೆ. ದೂರದರ್ಶನದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ಅರ್ಹತೆ ಇದ್ದು ಕೂಡಾ ಅದರ ಪ್ರದರ್ಶನಕ್ಕೆ ಅವರು ಹಲವಾರು ಬಾರಿ ನ್ಯಾಯಾಲಯಕ್ಕೆ ಹೋಗಬೇಕಾಯಿತು.

“ಒಂದೆಡೆ ಈ ದೇಶದ ಪ್ರಧಾನಿ ದಿ ಕಾಶ್ಮೀರ್ ಫೈಲ್ಸ್‌ನಂತಹ ಚಲನಚಿತ್ರದ ಮಾರಾಟದ ಏಜೆಂಟ್‌ನಂತೆ ವರ್ತಿಸುತ್ತಾರೆ. ಆಡಳಿತವು ಈ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗುವುದನ್ನು ಖಚಿತಪಡಿಸುತ್ತದೆ. ಮತ್ತೊಂದೆಡೆ, ‘ಯೂನಿವರ್ಸಲ್'(ಎಲ್ಲರೂ ನೋಡಬಹುದಾದಂತಹ) ವೀಕ್ಷಣೆಗೆ ಅವಕಾಶ ನೀಡುವ ಸೆನ್ಸಾರ್ ಪ್ರಮಾಣ ಪತ್ರಗಳನ್ನು ಗೆದ್ದ ನನ್ನ ಹಳೆಯ ಚಲನಚಿತ್ರಗಳ ಪ್ರದರ್ಶನಗಳ ಮೇಲೆ ಗೂಂಡಾಗಳು ದೈಹಿಕವಾಗಿ ದಾಳಿ ಮಾಡುತ್ತಾರೆ. ಈ ಸಂದರ್ಭಗಳಲ್ಲಿ, ಹಾಟ್ ಡಾಕ್ಸ್ ಪ್ರಶಸ್ತಿಯು ಪ್ರಪಂಚದಾದ್ಯಂತ ಮೌನವಾಗಿ ಬೆದರಿಸಲು ನಿರಾಕರಿಸುವ ಚಲನಚಿತ್ರಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಜನರಿದ್ದಾರೆ ಎಂಬುದಕ್ಕೆ ದೃಢೀಕರಣವಾಗಿದೆ” ಎಂದು ಆನಂದ್ ಹೇಳಿದ್ದಾರೆ.

ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿಲ್ಲವೆಂದ ಯುಪಿ ಸರ್ಕಾರ

2019 ರ ಕೇರಳದ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರು ಚಲನಚಿತ್ರೋತ್ಸವದಲ್ಲಿ ಆನಂದ್‌ ಅವರ ‘ರೀಸನ್‌’ ಪ್ರದರ್ಶನವನ್ನು ಒಕ್ಕೂಟ ಸರ್ಕಾರ ಸ್ಥಗಿತಗೊಳಿಸಿತ್ತು. ಈ ಚಲನಚಿತ್ರೋತ್ಸವವು ಆಸ್ಕರ್‌ಗೆ ಅರ್ಹತೆ ಪಡೆಯುವ ಏಕೈಕ ಭಾರತೀಯ ಫಿಲ್ಮ್‌ ಫೆಸ್ಟಿವಲ್ ಆಗಿದೆ.

ಪಿಲ್ಮ್‌ ಫೆಸ್ಟಿವಲ್‌ನ ಆಯೋಜಕರಾಗಿದ್ದ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಮತ್ತು ಆನಂದ್ ಅವರು ಕೇರಳ ಹೈಕೋರ್ಟ್‌ಗೆ ಈ ಬಗ್ಗೆ ಅರ್ಜಿ ಸಲ್ಲಿಸಿ, ಚಲನ ಚಿತ್ರವನ್ನು ಪ್ರದರ್ಶಿಸುವ ಹಕ್ಕನ್ನು ಗೆದ್ದಿದ್ದರು. ಇದರ ನಂತರ ಈ ಚಿತ್ರವು ಲಾಂಗ್ ಡಾಕ್ಯುಮೆಂಟರಿ ವಿಭಾಗದಲ್ಲಿ ರನ್ನರ್ ಅಪ್ ಆಗಿತ್ತು.

2020 ರ ಮುಂಬೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಇದನ್ನು ಆಯ್ಕೆ ಮಾಡಲಾಗಿರಲಿಲ್ಲ. ಒಕ್ಕೂಟ ಸರ್ಕಾರವು ಈ ಚಿತ್ರಕ್ಕೆ “ಹಿಂಬಾಗಿಲಿನ ಮೂಲಕ ಸೆನ್ಸಾರ್‌ ಶಿಪ್‌” ಮಾಡುತ್ತಿದೆ ಎಂದು ಆನಂದ್‌ ಆರೋಪಿಸಿದ್ದರು.

2019 ರಲ್ಲಿ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಅನುಮತಿ ನಿರಾಕರಣೆ ಮತ್ತು ಮಧ್ಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ ಸಹ ಹಿಂದಿಯಲ್ಲಿ ‘ರಾಮ್ ಕೆ ನಾಮ್’ ಎಂದು ಕರೆಯಲ್ಪಡುವ ‘ಇನ್ ದಿ ನೇಮ್ ಆಫ್ ಗಾಡ್’ ಅನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಇಷ್ಟೆ ಅಲ್ಲದೆ, ಅನುಮತಿ ನಿರಾಕರಣೆ ನಡುವೆಯೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ವರ್ಷ ಈ ಚಿತ್ರವನ್ನು ಪ್ರದರ್ಶಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಇದನ್ನೂ ಓದಿ: ಮತ್ತೆ ನಾಲಗೆ ಹರಿಬಿಟ್ಟ ಯತಿ ನರಸಿಂಗಾನಂದ; ಎಫ್‌ಐಆರ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...