Homeಮುಖಪುಟಮತ್ತೆ ನಾಲಗೆ ಹರಿಬಿಟ್ಟ ಯತಿ ನರಸಿಂಗಾನಂದ; ಎಫ್‌ಐಆರ್‌‌

ಮತ್ತೆ ನಾಲಗೆ ಹರಿಬಿಟ್ಟ ಯತಿ ನರಸಿಂಗಾನಂದ; ಎಫ್‌ಐಆರ್‌‌

- Advertisement -
- Advertisement -

ಏಪ್ರಿಲ್ 3ರ ಭಾನುವಾರದಂದು ನಡೆದ ಸಮಾರಂಭದಲ್ಲಿ ದ್ವೇಷಪೂರಿತ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಬುರಾರಿಯಲ್ಲಿ ನಡೆದ ‘ಹಿಂದೂ ಮಹಾಪಂಚಾಯತ್’ನಲ್ಲಿ ಪಾಲ್ಗೊಂಡಿದ್ದ ಭಾಷಣಕಾರರು ಹಾಗೂ ಸಂಘಟಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ವಿವಾದಿತ ಹಿಂದುತ್ವ ಮುಖಂಡ ಯತಿ ನರಸಿಂಗಾನಂದ ಸರಸ್ವತಿ ಮತ್ತು ಸುದರ್ಶನ ನ್ಯೂಸ್‌ನ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಆದೇಶಕ್ಕೆ ಅಸಹಕಾರ) ಮತ್ತು 153ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಎಸಗುವುದು) ಅಡಿಯಲ್ಲಿ ಮುಖರ್ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

“ದಾಸನ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ ಮತ್ತು ಸುದರ್ಶನ ನ್ಯೂಸ್‌ನ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಸೇರಿದಂತೆ ಕೆಲವು ಭಾಷಣಕಾರರು ಎರಡು ಸಮುದಾಯಗಳ ನಡುವೆ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಮಾತುಗಳನ್ನು ಹೇಳಿದ್ದಾರೆ” ಎಂದು ವಾಯುವ್ಯ ದೆಹಲಿ ಉಪ ಪೊಲೀಸ್ ಆಯುಕ್ತರಾದ ಉಷಾ ರಂಗಾನಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

“ಕಾರ್ಯಕ್ರಮದ ಸ್ಥಳದಲ್ಲಿ 700-800 ಜನರು ಜಮಾಯಿಸಿದರು. ಆಯೋಜಕರ ಆಹ್ವಾನಿತರು ವೇದಿಕೆಯಿಂದ ಭಾಷಣ ಮಾಡಲು ಪ್ರಾರಂಭಿಸಿದರು. ಪೊಲೀಸರು ಸಹ ಕಾರ್ಯಕ್ರಮದ ಸ್ಥಳಕ್ಕೆ ತಲುಪಿ ಸುವ್ಯವಸ್ಥೆಯನ್ನು ಕಾಪಾಡಲು ಪ್ರಯತ್ನಿಸಿದರು” ಎಂದು ಡಿಸಿಪಿ ಹೇಳಿದ್ದಾರೆ.

ಮಹಾಪಂಚಾಯತ್ ಭಾಷಣಕಾರರು ಹೇಳಿದ್ದೇನು?

ಭಾರತಕ್ಕೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಯತಿನರಸಿಂಗಾನಂದ  ಪ್ರಚೋದಿಸಿರುವುದು ವರದಿಯಾಗಿದೆ.

ಭಾರತಕ್ಕೆ ಮುಸ್ಲಿಂ ಪ್ರಧಾನಿ ಸಿಕ್ಕರೆ ಶೇಕಡಾ 40ರಷ್ಟು ಹಿಂದೂಗಳು ಸಾಯುತ್ತಾರೆ ಎಂದು ನರಸಿಂಹಾನಂದ ಪ್ರಚೋದಿಸಿದ್ದಾರೆ.

2021ರಲ್ಲಿ ಹರಿದ್ವಾರದ ಸಮಾವೇಶದಲ್ಲಿ ಮುಸ್ಲಿಮರ ನರಮೇಧಕ್ಕೆ ಪ್ರಚೋದಿಸಿದ್ದ ನರಸಿಂಗಾನಂದ ವಿರುದ್ಧ ಪ್ರಕರಣ ದಾಖಲಾಗಿತ್ತು. ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇದಲ್ಲದೆ, ಸುದರ್ಶನ ಸುದ್ದಿ ಸಂಪಾದಕ ಚವ್ಹಾಂಕೆ, ಭಾನುವಾರ ಮಹಾಪಂಚಾಯತ್‌ನಲ್ಲಿ ಮಾತನಾಡುತ್ತಾ ಭಾರತೀಯ ಮುಸ್ಲಿಮರಿಗೆ ಭಾರತೀಯ ಹಿಂದೂಗಳಿಗೆ ನೀಡಿದಂತೆಯೇ ಸಮಾನವಾದ ಹಕ್ಕುಗಳನ್ನು ನೀಡಬಾರದು ಎಂದಿದ್ದಾರೆ.

“ಪಾಕಿಸ್ತಾನದಲ್ಲಿ ಹಿಂದೂಗಳು ಯಾವ ಹಕ್ಕುಗಳನ್ನು ಪಡೆಯುತ್ತಾರೋ ಅದೇ ಹಕ್ಕುಗಳನ್ನು ಭಾರತೀಯ ಮುಸ್ಲಿಮರು ಪಡೆಯಬೇಕು. ಅದಕ್ಕಿಂತ ಹೆಚ್ಚೇನೂ ಇಲ್ಲ” ಎಂದು ಮತೀಯ ದ್ವೇಷ ಸೃಷ್ಟಿಸಲು ಯತ್ನಿಸಿದ್ದಾರೆ.

ಪೊಲೀಸ್ ಅನುಮತಿ ಇಲ್ಲದೆ ಮಹಾಪಂಚಾಯತ್!

ಶನಿವಾರ, ಏಪ್ರಿಲ್ 2ರಂದು ದಿ ಕ್ವಿಂಟ್ ವರದಿ ಮಾಡಿದ ಪ್ರಕಾರ, ಸೇವ್ ಇಂಡಿಯಾ ಫೌಂಡೇಶನ್‌ ‘ಹಿಂದೂ ಮಹಾಪಂಚಾಯತ್’ ನಡೆಸದಂತೆ ದೆಹಲಿ ಪೊಲೀಸ್, ದೆಹಲಿ ಅಭಿವೃದ್ಧಿ ಪ್ರಾಧಿಕಾರವು (ಡಿಡಿಎ) ನಿರ್ಬಂಧ ಹೇರಿತ್ತು. ಇದರ ಹೊರತಾಗಿಯೂ, ಭಾರೀ ಪೊಲೀಸ್ ನಿಯೋಜನೆಯಲ್ಲಿ ಕಾರ್ಯಕ್ರಮ ಸಮಾವೇಶಗೊಂಡಿತು.

ಸೂಕ್ತ ಅನುಮತಿ ಪಡೆಯದೆ ಮಹಾಪಂಚಾಯತ್‌ ನಡೆಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಹಿಂದೂ ಮಹಾಪಂಚಾಯತ್ ಸಭೆಯನ್ನು ಆಯೋಜಿಸಲು ಅನುಮತಿ ಕೋರಿ ಮನವಿ ಪತ್ರವನ್ನು ವಾಯವ್ಯ ಜಿಲ್ಲೆಯಲ್ಲಿ ಸಂಘಟಕ ಪ್ರೀತ್ ಸಿಂಗ್ ಸಲ್ಲಿಸಿದ್ದರು. ವಾಯುವ್ಯ ಜಿಲ್ಲಾ ಪೊಲೀಸರು ಮನವಿಯನ್ನು ನಿರಾಕರಿಸಿದ್ದರು.

“ದೆಹಲಿ ಪೊಲೀಸರ ನಿರಾಕರಣೆ ಹೊರತಾಗಿಯೂ, 3.04.2022 ರಂದು, ಸಂಘಟಕ ಪ್ರೀತ್ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಬುರಾರಿ ಮೈದಾನ ಪ್ರವೇಶಿಸಿದರು. ಹಿಂದೂ ಮಹಾಪಂಚಾಯತ್ ಸಭೆಯನ್ನು ಆಯೋಜಿಸಲು ಪ್ರಾರಂಭಿಸಿದರು. ಪೊಲೀಸರು ಕಾರ್ಯಕ್ರಮದ ಸ್ಥಳಕ್ಕೆ ತಲುಪಿ ಸುವ್ಯವಸ್ಥೆಯನ್ನು ಕಾಪಾಡಲು ಪ್ರಯತ್ನಿಸಿದರು” ಎಂದು ಡಿಸಿಪಿ ಉಷಾ ರಂಗನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿರಿ: ನರಸಿಂಗಾನಂದ ವಿರುದ್ದ ಸಂವಿಧಾನ ಮತ್ತು ಸುಪ್ರೀಂಕೋರ್ಟ್ ನಿಂದನೆ ಪ್ರಕ್ರಿಯೆ ಆರಂಭಿಸಲು ಸಮ್ಮತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...