Homeದಲಿತ್ ಫೈಲ್ಸ್ಆಂಧ್ರ ಪ್ರದೇಶ: ಠಾಣೆಯಲ್ಲಿ ದಲಿತ ಮಹಿಳೆಯನ್ನು ತೀವ್ರವಾಗಿ ಥಳಿಸಿದ ಪೊಲೀಸರು-ಆರೋಪ

ಆಂಧ್ರ ಪ್ರದೇಶ: ಠಾಣೆಯಲ್ಲಿ ದಲಿತ ಮಹಿಳೆಯನ್ನು ತೀವ್ರವಾಗಿ ಥಳಿಸಿದ ಪೊಲೀಸರು-ಆರೋಪ

ಚಿಕಿತ್ಸೆಗಾಗಿ ದಾಖಲಾಗಿದ್ದ ಸರ್ಕಾರಿ ಆಸ್ಪತ್ರೆಗೂ ಪೊಲೀಸರು ಬಂದು ನನ್ನನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಡ ಹೇರಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

- Advertisement -
- Advertisement -

ಆಂಧ್ರಪ್ರದೇಶದ ಚಿತ್ತೂರು ಪೊಲೀಸ್ ಠಾಣೆಯಲ್ಲಿ ಹಣ ಕಳ್ಳತನ ಮಾಡಿದ ಆರೋಪದಲ್ಲಿ ವಿಚಾರಣೆಗೆ ಬಂದಿದ್ದ ದಲಿತ ಮಹಿಳೆಯನ್ನು ಆರೋಪ ಒಪ್ಪುವಂತೆ ಪೊಲೀಸರು ಅಮಾನವೀಯವಾಗಿ ಥಳಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯ ವೀಡಿಯೊವನ್ನು ಹಂಚಿಕೊಂಡಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಘಟನೆಯನ್ನು ಖಂಡಿಸಿದೆ. ಇದೊಂದು ಅನಾಕರಿಕ, ಕ್ರೂರ ಘಟನೆ ಎಂದು ಹೇಳಿದೆ. ಜಸ್ಟಿಸ್ ಚಂದ್ರ ಅವರಂತ ವ್ಯಕ್ತಿಗಳು ಇಂತಹ ದುರಂತಗಳ ಕುರಿತು ಮಾತಾಡಬೇಕು ಎಂದು ಒತ್ತಾಯಿಸಿದೆ.

ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಲಕ್ಷ್ಮಿ ನಗರ ಕಾಲೋನಿಯ 34 ವರ್ಷದ ಎಂ ಉಮಾಮಹೇಶ್ವರಿ ಅವರು ಚಿತ್ತೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ತನಗೆ ಕಿರುಕುಳ ನೀಡಿದ್ದಾರೆ ಮತ್ತು ತನ್ನ ವಿರುದ್ಧ ಸುಳ್ಳು ಆರೋಪವನ್ನು ಒಪ್ಪುವಂತೆ ಒತ್ತಡ ಹೇರಿದ್ದಾರೆ ಎಂದು ಹೇಳಿದ್ದಾರೆ.

ಚಿತ್ತೂರಿನ ಜಿಲ್ಲಾ ಕಾರಾಗೃಹದ ಅಧೀಕ್ಷಕ ವೇಣುಗೋಪಾಲ್ ರೆಡ್ಡಿ ಅವರ ನಿವಾಸದಲ್ಲಿ ಸಹಾಯಕಿಯಾಗಿ ಉಮಾಮಹೇಶ್ವರಿ ಕೆಲಸ ಮಾಡುತ್ತಿದ್ದಾರೆ. 2 ಲಕ್ಷ ನಗದು ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: ಮಂಡ್ಯ: ಅಂಗಡಿ ಮುಂದೆ ದಲಿತರು ನಡೆದಾಡಿದ್ದಕ್ಕೆ ಮೈಲಿಗೆಯಾಯಿತೆಂದು ಸವರ್ಣೀಯರಿಂದ ಹಲ್ಲೆ

 

ವೇಣುಗೋಪಾಲ್ ರೆಡ್ಡಿ ಅವರ ಮನೆಗೆ ದಿನನಿತ್ಯದ ಕೆಲಸಕ್ಕೆ ಹೋದಾಗ, ಗಮಡ ಹೆಂಡತಿ ಹಣದ ವಿಷಯವಾಗಿ ಜಗಳವಾಡುತ್ತಿದ್ದರು. ಆ ವೇಳೆ ದಂಪತಿ ಹಣ ನಾಪತ್ತೆಯಾಗಿದ್ದು, ನೀನು ನೋಡಿದೆಯಾ ಎಂದು ಕೇಳಿದರು. ಹಣದ ಬಗ್ಗೆ ತನಗೆ ಗೊತ್ತಿಲ್ಲ ಎಂದು ಉತ್ತರಿಸಿದೆ. ನೀನೆ ಕದ್ದಿದಿಯ ಎಂದರು. ಇಲ್ಲ ಎಂದೆ. ಮನೆ ತುಂಬಾ ಹುಡುಕು ಎಂದರು ಮಧ್ಯಾಹ್ನ 3 ಗಂಟೆಯವರೆಗೂ ಹುಡುಕಾಡಿದೆವು. ಬಳಿಕ ನೀನು ಹೋಗಿ ಊಟ ಮಾಡಿಕೊಂಡು ಬಾ. ನಾವು ಆಮೇಲೆ ಫೋನ್ ಮಾಡುತ್ತೇವೆ ಎಂದರು. ಮನೆಗೆ ಬರುವಷ್ಟರಲ್ಲಿ ಪೊಲಿಸರು ಪೋನ್ ಮಾಡಿ ಠಾಣೆಗ ಬನ್ನಿ ನಿಮ್ಮ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾರೆ ಎಂದರು. ವಿಚಾರನೆಯಲ್ಲಿ ನಾನು ಹಣ ಕದ್ದಿಲ್ಲ ಎಂದು ಹೇಳಿದೆ. ರಾತ್ರಿ 9 ಗಂಟೆಯವರೆಗೂ ಠಾಣೆಯಲ್ಲಿ ಇರಿಸಿಕೊಂಡು, ಬೆಳಗ್ಗೆ ಬರುವಂತೆ ಹೇಳಿ ಕಳುಹಿಸಿದರು. ಮಾರನೆ ದಿನ ಠಾಣೆಗೆ 12 ಗಂಟೆಗೆ ಹೋದೆ. ಮಧ್ಯಾಹ್ನ 1 ಗಂಟೆಯಿಂದ ಒಂದೂವರೆ ಗಂಟೆಯವರೆಗೆ ಒಂದು ಕತ್ತಲೆ ರೂಮಿನಲ್ಲಿ ಕೂಡಿ ಹಾಕಿ, ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತೂರುಕಿ ಲಾಠಿ ಮತ್ತು ಬೂಟು ಕಾಲಿನಿಂದ ಆತ ತೀವ್ರವಾಗಿ ಥಳಿಸಿದರು. ಕೆಟ್ಟ ಕೆಟ್ಟ ಮಾತುಗಳಲ್ಲಿ ಬೈದರು. ಬಳಿಕ ಇನ್ಸ್‌ಪೆಕ್ಟರ್‌ ಬಳಿ ಕಡೆದುಕೊಂಡು ಹೋಗಿ ಅಲ್ಲೂ ಲಾಠಿಯಿಂದ ಹೊಡೆದರು. ಅಷ್ಟರಲ್ಲಿ ಅವರಿಗೆ ಒಂದು ಫೋನ್ ಬಂತು. ನಿನ್ನ ವಿರುದ್ಧ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಫಿಂಗರ್‌ ಪ್ರಿಂಟ್ ಕೂಡ ಮ್ಯಾಚ್ ಆಗುತ್ತಿಲ್ಲ. ಅವರ ಹೆಂಡತಿಯದೆ ತಪ್ಪು. ನಂಗೆ ಒಂದು ಒಳ್ಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೆವೆ. ದುಡ್ಡು ಇರುವವರ ಬಳಿ ಯಾಕೆ ಕೆಲಸಕ್ಕೆ ಹೋಗ್ತಿರಾ ಎಂದು ಹೇಳಿ ರಾತ್ರಿ 10 ಗಂಟೆಗೆ ಕಳುಹಿಸಿದರು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದೆ. ಅಲ್ಲಿಗೂ ಪೊಲೀಸರು ಬಂದು ನನ್ನನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಡ ಹೇರಿದರು. ಅಲ್ಲಿಂದಲೂ ವಾಪಸ್ ಕಳುಹಿಸಿದರು” ಎಂದು ಹಲ್ಲೆಗೊಳಗಾದ ಸಂತ್ರಸ್ತೆ ತಿಳಿಸಿದ್ದಾರೆ.

ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಚಿತ್ತೂರು ಉಪ ಪೊಲೀಸ್ ಮಹಾನಿರೀಕ್ಷಕ ಎಸ್ ಸೆಂಥಿಲ್ ಕುಮಾರ್, ಆರೋಪಿ ಕಾನ್‌ಸ್ಟೆಬಲ್ ವಿ ಸುರೇಶ್ ಬಾಬು ಅವರನ್ನು ಭಾನುವಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಡಿಐಜಿ ಎಸ್ ಸೆಂಥಿಲ್ ಕುಮಾರ್ ಅವರು ಪ್ರಕರಣದ ಕೂಲಂಕಷ ತನಿಖೆ ನಡೆಸಿ ಶೀಘ್ರವೇ ವಿವರವಾದ ವರದಿಯನ್ನು ಸಲ್ಲಿಸುವಂತೆ ಹೆಚ್ಚುವರಿ ಎಸ್ಪಿ ಡಿಎನ್ ಮಹೇಶ್ ಅವರಿಗೆ ಸೂಚಿಸಿದ್ದಾರೆ.

ಎಎನ್‌ಐ ಜೊತೆ ದೂರವಾಣಿ ಮೂಲಕ ಸಂವಾದದಲ್ಲಿ ಪ್ರತಿಕ್ರಿಯಿಸಿದ ಚಿತ್ತೂರು 1 ಟೌನ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ ರಾವ್ ಮಹಿಳೆ ಮಾಡಿದ್ದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಆಕೆಯ ಹೇಳಿಕೆಗಳಲ್ಲಿ “ಯಾವುದೇ ಸತ್ಯವಿಲ್ಲ” ಎಂದು ಹೇಳಿದ್ದರು.

“ಆಕೆಯನ್ನು ವಿಚಾರಿಸಿದ ನಂತರ, ಹಣ ಕದ್ದಿರುವುದನ್ನು ಆಕೆ ಒಪ್ಪಿಕೊಂಡರು. ಆ ಹಣವು ತನ್ನ ಪತಿ ದೀನಾ ಬಳಿ ಇದೆ ಎಂದು ಅವರು ತಿಳಿಸಿದ್ದರು. ಪೊಲೀಸರು ಅನುಮತಿಸಿದರೆ, ತನ್ನ ಗಂಡನ ಬಳಿಗೆ ಹೋಗಿ ಹಣವನ್ನು ಹಿಂತಿರುಗಿಸುತ್ತೇನೆ ಎಂದರು. ಆದರೆ, ಆಕೆ ಆರೋಪಿಸಿದಂತೆ ಪೊಲೀಸರು ಕಿರುಕುಳ ನೀಡಿಲ್ಲ, ಚಿತ್ರಹಿಂಸೆ ನೀಡಿಲ್ಲ, ನಿಂದನೀಯ ಪದಗಳನ್ನು ಬಳಸಿಲ್ಲ. ಹಣವನ್ನು ಹಿಂದಿರುಗಿಸುವಂತೆ ಆಕೆಯನ್ನು ಪೊಳಿಸರು ಕೇಳಿದ್ದರಿಂದ ಆಕೆ ಪೊಲೀಸರ ಮೇಲೆ ಆರೋಪ ಮಾಡಲು ಆರಂಭಿಸಿದ್ದಾರೆ’’ ಎಂದು ಹೇಳಿದ್ದರು.


ಇದನ್ನೂ ಓದಿ: ಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ – ದಲಿತ ಮುಖಂಡರ ಮೇಲೆ ‘ಗೂಂಡಾ ಪಟ್ಟ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...