Homeಕರ್ನಾಟಕಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ - ದಲಿತ ಮುಖಂಡರ ಮೇಲೆ...

ಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ – ದಲಿತ ಮುಖಂಡರ ಮೇಲೆ ‘ಗೂಂಡಾ ಪಟ್ಟ’

- Advertisement -
- Advertisement -

ಹಲವು ಪ್ರಕರಣಗಳ ಆರೋಪದ ಮೇಲೆ ದಲಿತ ಮುಖಂಡ, ಚಿತ್ರದುರ್ಗದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಅವರನ್ನು ‘ಗೂಂಡಾ ಕಾಯ್ದೆ’ಯಡಿ ಜೈಲಿಗೆ ಕಳಿಸಲಾಗಿದೆ. ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಎಸ್‌ಡಿಪಿಐ ಪಕ್ಷವು, ಚಿತ್ರದುರ್ಗದಲ್ಲಿ ದಲಿತ ಮಹಾಗಣಪತಿ ಕೂರಿಸುವುದು, ಮಧುಗಿರಿ ಮೋದಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರನ್ನು ಟೀಕಿಸಿದ್ದು, ಟಿಪ್ಪು ಜಯಂತಿ ಪರ ಕರಪತ್ರ ಹಂಚಿಕೆ ಮಾಡಿದ್ದು ಅಪರಾಧವೇ? ಇದಕ್ಕೆ ಗೂಂಡಾ ಕಾಯ್ದೆ ಹಾಕುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ. ಇದು ಪಟ್ಟಭದ್ರರ ರಾಜಕೀಯ ಶಡ್ಯಂತ್ರಕ್ಕೆ ತಲೆಬಾಗಿ, ಪಿತೂರಿ ಮಾಡಿ, ಗೂಂಡಾ ಕಾಯ್ದೆ ಹಾಕಲಾಗಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾಯನ್ನು ಮುಸ್ಲಿಂ ಪಕ್ಷವೆಂದು ಉಲ್ಲೇಖಿಸಿರುವ ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು, ಶ್ರೀನಿವಾಸ್ ಅವರ ಮೇಲಿನ ಪ್ರಕರಣ ಪಟ್ಟಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸಲ್ಲಿಸಿ ಬಂಧಿಸಲು ಅನುಮತಿ ಕೋರಿದ್ದರು. ಜಿಲ್ಲಾಧಿಕಾರಿಗಳು ಬಂಧನಕ್ಕೆ ಅನುಮತಿ ನೀಡಿದ ನಂತರ ಶ್ರೀನಿವಾಸ್‌ ಅವರನ್ನು ಜೈಲಿಗೆ ಕಳಿಸಲಾಗಿದೆ.

ಪ್ರಕರಣಗಳು ಮತ್ತು ಸಂಕ್ಷಿಪ್ತ ವಿವರ

1. ದಸಂಸ (ಎಸ್‌.ಎಸ್.ಬಣ) ವತಿಯಿಂದ ದಲಿತ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ಸಮಾನತೆ ಯಾತ್ರೆ ಮಾಡಿದ್ದು, ಜಿಲ್ಲಾಡಳಿತ ಆದೇಶದ ವಿರುದ್ಧವಾಗಿ ಮೆರವಣಿಗೆ ವೇಳೆ ಡಿ.ಜೆ.ಸೌಂಡ್‌ ಬಳಸಿದ್ದು ಮೊದಲನೇ ಪ್ರಕರಣವಾಗಿದೆ.

2. ದಲಿತ ಗಣಪತಿ ಸಮಾನತಾ ಯಾತ್ರೆಯ ಸಂಬಂಧ ನಿಷೇಧಿತ ಪ್ರದೇಶಗಳಲ್ಲಿ ನೀಲಿ ಬಣ್ಣದ ಬಟ್ಟೆ ಮತ್ತು ಪ್ಲೆಕ್ಸ್‌ಗಳನ್ನು ಹಾಕಿಸಿ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ ಪ್ರಕರಣ.

3. ಟಿಪ್ಪು ಜಯಂತಿ ಸಂಬಂಧ ಪರ, ವಿರೋಧದ ಕರಪತ್ರಗಳ ಹಂಚುವ ವಿಚಾರವಾಗಿ ಚಿತ್ರದುರ್ಗ ನಗರದ ಗಾಂಧಿ ಸರ್ಕಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದು ಇದೇ ವಿಚಾರವಾಗಿ ಪರ ಮತ್ತು ವಿರೋಧ ವ್ಯಕ್ತಪಡಿಸುವ ಎರಡೂ ಗುಂಪುಗಳು ಸೇರಿಕೊಂಡು ಚಿತ್ರದುರ್ಗ ನಗರದಲ್ಲಿ ಇರುವ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದ ಪ್ರಕರಣ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿರುವ ಪ್ರಕರಣ ಇದಾಗಿದೆ.

4. ಚಿತ್ರದುರ್ಗ ನಗರದ ಚೇಳುಗಡ್ಡ ಏರಿಯಾದಲ್ಲಿ ಬಸವರಾಜ್‌ ಎಂಬವರೊಂದಿಗೆ ಆದ ಜಗಳದ ಪ್ರಕರಣ. ಚರಂಡಿ ಮೇಲೆ ಇರುವ ಗೋಡೆಯನ್ನು ತೆಗೆಯಲು ಶ್ರೀನಿವಾಸ್‌ ಹೇಳಿದಾಗ ಆಗಿರುವ ಗಲಾಟೆ ಇದಾಗಿದೆ.

5. ಮಧುಗಿರಿ ಮೋದಿ ಎಂಬವರು ಮಾಡಿದ್ದ ವಿಡಿಯೊಗೆ ವಿರುದ್ಧವಾಗಿ ಮಾತನಾಡಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ವಿಚಾರವನ್ನು ಪ್ರಸ್ತಾಪಿಸಿ ಮುಸ್ಲಿಂ ಧರ್ಮದ ಪರ ಮಾತನಾಡಿದ ಪ್ರಕರಣ. ಮುಸ್ಲಿಂ ಧರ್ಮದ ಪರ ಮಾತನಾಡಿದ್ದರಿಂದ ಜನರ ನಡುವೆ ಭೇದ ಹಾಗೂ ವೈಶಮ್ಯ ಹರಡಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.

6. ಚಿತ್ರದುರ್ಗ ನಗರದ ಚೇಳೂಗುಡ್ಡದ ಈಶ್ವರನ ಕಲ್ಲು ದೇವಸ್ಥಾನದ ಮುಂಭಾಗ ಗೋಡೆಯ ಮೇಲೆ ಬರೆಯಿಸಿದ್ದ ಶ್ರೀ ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಶಿವಕೇಸರಿ ಚೇಳುಗುಡ್ಡ ಚಿತ್ರದುರ್ಗ ಎಂಬ ಬೋರ್ಡ್‌‌ಗೆ ಕಪ್ಪುಬಣ್ಣ ಬಳಿದ ಪ್ರಕರಣ.

7. ಅಪಘಾತ ಪ್ರಕರಣದಲ್ಲಿ ಮೋಟಾರ್‌ ಸೈಕಲ್‌ ಬೋರ್ಡ್ ಬದಲಿಸಿದ ಪ್ರಕರಣ.

8. ಆರೋಪಿಯು ಸಾಕ್ಷಿದಾರರನ್ನು ಬೆದರಿಸುವ ಉದ್ದೇಶ ಹೊಂದಿರುವ ಆರೋಪ ಹೊರಿಸಲಾಗಿದೆ.  ಆ ಮೂಲಕ ನ್ಯಾಯಾಲಯದ ಶಿಕ್ಷೆಗಳಿಂದ ಪಾರಾಗುವ ತಂತ್ರಗಳನ್ನು ಅನುಸರಿಸುತ್ತಿರುವುದಾಗಿ ಶ್ರೀನಿವಾಸ್ ಮೇಲೆ ದೂರಲಾಗಿದೆ. ಶ್ರೀನಿವಾಸ್‌ ಮುಸ್ಲಿಂ ರಾಜಕೀಯ ಪಕ್ಷವಾದ ಎಸ್‌ಡಿಪಿಐಗೆ ಸೇರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

9. ಎಸ್‌ಡಿಪಿಐನಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಪ್ರಕರಣ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಅನುಮತಿ ಇಲ್ಲದೆ ರಸ್ತೆ ಮಧ್ಯೆಯಲ್ಲಿ ಶಾಮಿಯಾನ ಹಾಕಿ, ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ಎಸ್‌ಡಿಪಿಐನ 50-60 ಜನರನ್ನು ಒಂದೆಡೆ ಸೇರಿಸಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಆರೋಪ ಮಾಡಲಾಗಿದೆ.

10. ಎಸ್‌ಡಿಪಿಐ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಕರಣ. ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ ಆರೋಪ ಹೊರಿಸಲಾಗಿದೆ. 70-80 ಜನರನ್ನು ಒಂದೆಡೆ ಸೇರಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

New Doc 01-19-2022 21.21-compressed

ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ದಲಿತ ಮುಖಂಡ, ಎಸ್‌ಡಿಪಿಐ ನಾಯಕ ಬಿ.ಆರ್‌.ಭಾಸ್ಕರ್‌ ಪ್ರಸಾದ್ ಖಂಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಚಿತ್ರದುರ್ಗ ಕೋಟೆ ಪೋಲಿಸ್ ಠಾಣೆಯ ಪೊಲೀಸ್‌ ನಿರೀಕ್ಷಕರು ಒಟ್ಟು 10 ಕಾರಣಗಳನ್ನು ನೀಡಿ, ಬಾಳೆಕಾಯಿ ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಅವರು ಪೋಲಿಸ್ ನಿರೀಕ್ಷಕರು ಸಲಿಸಿದ ಅರ್ಜಿಯನ್ನು ಪರಿಶೀಲಿಸಿ ಶ್ರೀನಿವಾಸ್ ಅವರನ್ನು ಜೈಲಿಗೆ ಕಳಿಸಲು ಆದೇಶಿಸಿದ್ದಾರೆ. ಚಿತ್ರದುರ್ಗದ ಸೂಪರಿಂಟೆಂಡೆಂಟ್ ಪೋಲಿಸ್ ರಾಧಿಕಾ ಇದೆಲ್ಲವನ್ನು ನೋಡಿಯೂ, ಇಲ್ಲಿ ಅನ್ಯಾಯ ಆಗ್ತಾ ಇದೆ ಎಂದು ಗೊತ್ತಿದ್ದೂ, ತಮ್ಮ‌ಇಲಾಖೆಯ ಸಿಬ್ಬಂದಿ ರಾಜಕೀಯ ದಾಳಗಳಾಗಿ ಶ್ರೀನಿವಾಸ್ ಅವರನ್ನು ಬಲಿ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷವಾಗಿ ಗೋಚರಿಸುತ್ತಿದ್ದರೂ, ಅದ್ಯಾರ ಮರ್ಜಿಗೂ ಒಳಗಾದಂತೆ ತಮ್ಮ‌ ಇಲಾಖೆಯ ನಡೆಯನ್ನೇ ಸಮರ್ಥನೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ಒಬ್ಬ ದೊಡ್ಡ ಗ್ಯಾಂಗ್ಸ್ಟರ್ ಎಂದು ಬಿಂಬಿಸಲು ಪಣ ತೊಟ್ಟು ನಿಂತು ಬಿಟ್ಟಿದ್ದಾರೆ” ಎಂದು ದೂರಿದ್ದಾರೆ.

ಪೊಲೀಸರು ನೀಡಿರುವ ಕಾರಣಗಳು ನಿಜಕ್ಕೂ ಅಪರಾಧಗಳೋ ಅಥವಾ ಹೋರಾಟದ ಕೆಚ್ಚೆದೆಯ ಹೆಜ್ಜೆಗಳೋ. ನಿಜಕ್ಕೂ ಇವೆಲ್ಲಾ ಗೂಂಡಾ ಕಾಯ್ದೆ ಅಡಿ ಬಂದು, ಜೈಲು ಶಿಕ್ಷೆ ಆಗುವುದೇ ಆಗಿದ್ದರೆ ಇವತ್ತು ಯಾವೊಬ್ಬ ರಾಜಕಾರಣಿಯೂ ಜೈಲಿನಿಂದ ಹೊರಗೆ ಇರುತ್ತಲೇ ಇರಲಿಲ್ಲ. ಆದರೇ ಜನರ ಪರವಾಗಿ ಹೋರಾಟ ಮಾಡಿದ ಶ್ರೀನಿವಾಸ್ ಇವತ್ತು ಜೈಲಿನಲ್ಲಿದ್ದಾರೆ‌. ಇದೇನಾ ನ್ಯಾಯ? ಇದೇನಾ ನೀತಿ? ಇದೇನಾ ಸತ್ಯ, ಧರ್ಮ? ಇವತ್ತು ಶ್ರೀನಿವಾಸ್‌ ಅವರಿಗೆ ಆಗಿದ್ದು ನಾಳೆ ಯಾರಿಗೂ ಆಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗಕ್ಕೆ ಇವತ್ತು ಕಳಂಕ ಹತ್ತಿಕೊಳ್ತಾ ಇದೆ. ಯಾರೋ ಕೆಲವರ ರಾಜಕೀಯ ಸ್ವಾರ್ಥ ಮತ್ತು ದುರಾಸೆಗಳಿಗೆ ಚಿತ್ರದುರ್ಗದ ಹೋರಾಟಗಾರರು ಮತ್ತು ಸಾಮಾನ್ಯ ಜನ ಬೆಲೆ ತೆರಬೇಕಾಗುತ್ತಿದೆ. ಪೊಲೀಸರ ರಾಜಕೀಯ ಪಿತೂರಿ ಮತ್ತು ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇವತ್ತು ನಾವು, ನಾಳೆ ಯಾರು ಅನ್ನುವ ಹಾಗಾಗಿದೆ. ಈ ಅನ್ಯಾಯ ಅಕ್ರಮ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ದ ನಿಲ್ಲದೇ ಹೋದರೇ, ಇವನ್ನು ತಡೆಯದೆ ಹೋದರೆ, ಮುಂದಿನ‌ ನಮ್ಮ‌ ತಲೆಮಾರು ಖಂಡಿತಾ ನಮ್ಮನ್ನು ಕ್ಷಮಿಸುವುದಿಲ್ಲ. ಬನ್ನಿ ನ್ಯಾಯ ಕೇಳೋಣ ಎಂದು ಕೋರಿದ್ದಾರೆ.

ಈ ಕುರಿತು ‘ನಾನುಗೌರಿ.ಕಾಂ’ ಕೋಟೆ ಠಾಣೆಯ ಪಿಎಸ್‌‌ಐರವರನ್ನು ಸಂಪರ್ಕಿಸಿತು. “ಈ ಹಿಂದೆ ನಡೆದಿರುವ ಪ್ರಕರಣಗಳ ಆಧಾರದಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಗೂಂಡಾ ಕಾಯ್ದೆಯಡಿ ಇತ್ತೀಚಿನ ವರ್ಷಗಳಲ್ಲಿ ಬಂಧನಕ್ಕೊಳಗಾದವರು ಇವರೊಬ್ಬರೇ. ದಲಿತ ಮುಖಂಡ ಎಂಬ ಕಾರಣಕ್ಕೆ ಅವರನ್ನು ಬಂಧಿಸಿಲ್ಲ. ಈ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಆಧರಿಸಿ ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಎಸ್‌ಡಿಪಿಐ’ ಒಂದು ಮುಸ್ಲಿಂ ಪಕ್ಷವೆಂದು ಅರ್ಜಿಯಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಸರಿ? ಮಹಾಗಣಪತಿ ಕೂರಿಸಿದ್ದು ಅಪರಾಧವೇ ಎಂಬ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿ ಸ್ಪಷ್ಟ ಉತ್ತರ ನೀಡಿಲ್ಲ.

ಬಾಳೇಕಾಯಿ ಶ್ರೀನಿವಾಸ್‌ರವರನ್ನು ಅನ್ಯಾಯಯುತವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಎಸ್‌ಡಿಪಿಐ ಪಕ್ಷವು ಅವರ ಬಿಡುಗಡೆಗೆ ಒತ್ತಾಯಿಸಿ ಇಂದು ಸಂಜೆಗೆ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿದೆ.


ಇದನ್ನೂ ಓದಿರಿ: ಹಿಜಾಬ್‌ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಜನಪರ ಹೋರಾಟಗಾರ ಶ್ರೀನಿವಾಸ್ ಅವರನ್ನು ಗೂಂಡಾಕಾಯ್ದೆ ಅಡಿ ಬಂದಿಸಿರುವುದು ಕಂಡನಾರ್ಹ.

  2. rss rajakiya kutantra dc hagu police ilakege kappu chukke aagide, samanya praje ge arivu ide , janara rakshakara hesari nalli bhkshakaragi iddare, samaya inthavarige buddhi kalisuttade, Deena dalitaru shoshanege valapattavaru echchettakulla bekagi vinanti
    jai Hind, jai bheem

  3. ಜನರನ್ನು ಹತ್ಯೆ ಮಾಡುವಂತೆ ಕರೆ ನೀಡಿ ದ್ವೇಷವನ್ನು ಹರಡಿ, ಶಾಂತಿ ಕದಡುವ ಅನೇಕ ಜನರು ರಾಜಾರೋಷವಾಗಿ ಕರೆನೀಡುವವರನ್ನು ಬಂಧಿಸದೆ ಅವರ ಹೇಳಿಕೆ ಖಂಡಿಸುವವರನ್ನೇ ಗುರಿಯಾಗಿಸಿ ಬಂಧಿಸುತ್ತಿರುವುದನ್ನು ದೇಶವು ಪ್ರಜಾಪ್ರಭುತ್ವದಿಂದ ಸವಾ೯ಧಿಕಾರತ್ವಕ್ಕೆ ಸಾಗುತ್ತಿದೆಯೇನೋ….?

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...