Homeಮುಖಪುಟಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! - ಬಿ.ಚಂದ್ರೇಗೌಡ

ಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! – ಬಿ.ಚಂದ್ರೇಗೌಡ

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಉತ್ತರಗಳು ಸಿಕ್ಕಿದವು.

- Advertisement -
- Advertisement -

ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ, ಭಾಗವಹಿಸುತ್ತಿರುವ ಸಾಹಿತಿಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಘಟನೆ ಅವರ ಪ್ರಜ್ಞೆಯನ್ನು ಕೆಣಕಿದರೆ ಶುಭ ಸೂಚನೆ ಎಂದು ಭಾವಿಸಬಹುದು. ಇವತ್ತು ಶೃಂಗೇರಿ ಘಟನೆ ನಾಳೆ ಬೆಂಗಳೂರು ಸಾಹಿತ್ಯ ಪರಿಷತ್‌ಗೂ ಸಂಭವಿಸಬಹುದು. ಆಗ ಮನುಬಳಿಗಾರ್ ತರಹದವರು ಏನೂ ಮಾಡಲಾಗುವುದಿಲ್ಲ ಆದ್ದರಿಂದ, ಈ ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆಯಾಗಿ ಉಳಿಯುವುದರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ.

ವಾಸ್ತವವಾಗಿ ಶೃಂಗೇರಿ ಘಟನೆ ನಮ್ಮ ಸಾಹಿತಿಗಳನ್ನು ಕೆರಳಿಸಿ ಪ್ರತಿಭಟನೆ ಇತ್ಯಾದಿ ಚಟುವಟಿಕೆ ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ಅವರೆಲ್ಲಾ ಕಲ್ಬುರ್ಗಿಯ ವಸತಿ, ಪ್ರಯಾಣಭತ್ಯೆ, ಊಟದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿರಬಹುದು. ಕೆಲವೇ ಕೆಲವು ದಿಟ್ಟ ಸಾಹಿತಿಗಳು ಮಾತ್ರ ನಿಜವಾಗಿ ಪ್ರತಿಭಟನಾ ಹೇಳಿಕೆ ಕೊಟ್ಟರು.

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಕಾರಣಗಳು ಸಿಕ್ಕಿದವು. ಅವರು ವಾಸವಾಗಿರುವ ಪ್ರದೇಶದ ಮಠ ಸ್ವಜಾತಿಯ ಹಿತ ಕಾಪಾಡುವುದಕ್ಕೆ ಮೀಸಲಾದ ಮಠ. ಅಂದರೆ ಸ್ವಜಾತಿಯ ಸಾಮಾನ್ಯ ಮನೆಕಟ್ಟಿಕೊಳ್ಳುತ್ತಿದ್ದರೆ, ಇಟ್ಟಿಗೆ ಸಿಮೆಂಟು ಮರಮುಟ್ಟುಗಳನ್ನು ಪೂರೈಸಿ ಸ್ವಜಾತಿಬಂಧುವಿಗೆ ಸಹಾಯ ಮಾಡುವ ಮಠ. ಜೊತೆಗೆ ಅವರ ಮಕ್ಕಳಿಗೆ ಶಾಲಾಕಾಲೇಜಿಗೆ ಫೀಜು ಕಟ್ಟುತ್ತ ವಿದೇಶಿ ಓದಿಗೂ ಸಹಾಯ ಮಾಡುವ ಮಾತೃಸಂಸ್ಥೆ.

ಈ ರೂಪದಲ್ಲಿರುವ ಬ್ರಾಹ್ಮಣ ಮಠಗಳಲ್ಲಿ ಇದು ಮೊದಲನೆಯದು ಆದರೆ ಲಿಂಗಾಯತ ಮತ್ತಿತರ ಜಾತಿ ಮಠಗಳು ಎಲ್ಲಾ ಜನಾಂಗದ ಹಿತ ಕಾಯುತ್ತವೆ. ಉದಾಹರಣೆಗೆ ಸಿದ್ದಗಂಗೆ ಆವರಣದಲ್ಲಿ ಆಡುವ ಮಕ್ಕಳನ್ನು ವಿಚಾರಿಸಿದರೆ ಅವರೆಲ್ಲಾ ಕೆಳಜಾತಿ ಬಡವರ ಮಕ್ಕಳು, ಹಾಗೆಯೇ ಚುಂಚನಗಿರಿ ಮಠದಲ್ಲಿ ಓದುತ್ತಿರುವ ಮಕ್ಕಳನ್ನ ಕೇಳಿದರೆ ಅವರೂ ಕೂಡ ಒಂದೇ ಜಾತಿಗೆ ಸೀಮಿತವಾಗದ ಬಡವರ್ಗದ ಮಕ್ಕಳು. ಆದರೆ ಬ್ರಾಹ್ಮಣ ಮಠಗಳು ತಮ್ಮವರ ಹಿತಕಾಯುವ ಮಠ. ದುರಂತವೆಂದರೆ ದಡ್ಡ ಶೂದ್ರರ ಕಾಣಿಕೆ ಹೇರಳವಾಗಿ ಹರಿದುಬರುವುದು ಈ ಪುರೋಹಿತರ ಮಠಗಳಿಗೆ. ರಾಜಕಾರಣಿಗಳ ನಿಧಿ ಹರಿದು ಬರುವುದು ಇಲ್ಲಿಗೆ.

ಇಂತಹದನ್ನು ಗುರುತಿಸುತ್ತ ಮುಖ್ಯವಾಗಿ ಬ್ರಾಹ್ಮಣರೆಂದರೆ ಯಾರು, ಶೂದ್ರರ ಆಚರಣೆಗಳೇನು ಎಂದು ವಿಂಗಡಿಸಿ ತೋರುವ ವಿಠಲ ಹೆಗಡೆ ಮಠಗಳ ಪರಮವೈರಿ; ಜೊತೆಗೆ ಆರೆಸೆಸ್ ಭಜರಂಗಿ ವಿಶ್ವಹಿಂದೂಗಳ ಹಿಕಮತ್ತನ್ನು ವಿರೋಧಿಸುವ ಹೆಗಡೆಯನ್ನು ಗೌಡರ ಹುಡುಗನಾಗಿ ಪರಿಗಣಿಸದೆ, ನಕ್ಸಲ್ ಹಣೆಪಟ್ಟಿ ಕಟ್ಟಿ ಜನರ ವಿರುದ್ಧ ಎತ್ತಿ ಕಟ್ಟಲು ಪುರೋಹಿತರು ಕಂಡುಕೊಂಡ ಕುಯುಕ್ತಿಯಿದು. ಏಕೆಂದರೆ ಮಠದ ಮರ್ಯಾದೆಯನ್ನು ತನ್ನ ಮಂಗನಬೇಟೆಯಲ್ಲಿ ಹರಾಜು ಹಾಕಿರುವ ಈತ, ಎಂದೂ ಕ್ಷಮಿಸದ ಸಾಹಿತಿಯಾಗಿದ್ದಾನೆ. ಸಾಹಿತಿಯಾದವನು ಸತ್ಯ ಹೇಳಬೇಕು, ಅದನ್ನ ಹೇಳಿದ್ದಕ್ಕೆ ಸಮಯ ಕಾಯತ್ತಿದ್ದ ಬ್ರಾಹ್ಮಣರು, ಮತ್ತೊಬ್ಬ ಒಕ್ಕಲಿಗ ಸಿ.ಟಿ.ರವಿ ಎಂಬುವನ ಹೆಗಲ ಮೇಲೆ ಗನ್ನಿಡಿದು ಉಡಾಯಿಸಿವೆ. ಆದರೆ ಗನ್ನಿನಲ್ಲಿದ್ದದ್ದು ಗುಂಡಲ್ಲ ಬರಿ ಪುಡಿ ಅಷ್ಟೇ.

ಮಂಗನಬ್ಯಾಟಿಯಲ್ಲಿ ದಾಖಲಾಗಿರುವ ಪ್ರಕರಣ ಒಂದು ಹೀಗಿದೆ. ಮಠಕ್ಕೆ ಪ್ರವಾಸಿ ಹೆಂಗಸೊಬ್ಬಳು ಬಂದಿದ್ದಳು; ಅವಳು ಹೊಳೆಯಲ್ಲಿ ಸ್ನಾನ ಮಾಡುವುದು ಮಠದ ಉಗ್ರಾಣದ ಕಿಟಕಿಯಲ್ಲಿ ಕಾಣುತ್ತಿತ್ತು. ನೀರಲ್ಲಿ ಮುಳುಗಿದನಂತರ ಆಕೆಯ ತೆಳುವಾದ ಸೀರೆ ಮೈಗಂಟಿಕೊಂಡು, ಆಕೆಯ ದೇಹಾಕೃತಿಯನ್ನು ಉನ್ಮತ್ತಗೊಳಿಸಿದವು. ಮಠದ ಭಕ್ತಾದಿಗಳಿಗೆ ಸಾಕ್ಷಾತ್ ಶಾರದೆಯೇ ಬಂದು ಮೀಯುತ್ತಿರುವಂತೆ ಕಂಡರೆ, ಮಠದ ಕಾಮುಕರಿಗೆ ಅಂದರೆ ಮಠದ ಮುಖ್ಯಸ್ಥರಿಗೆ ಹಾಗೆ ಕಾಣಲಿಲ್ಲ. ಅವರು ಪುಣ್ಯಕ್ಷೇತ್ರದಲ್ಲಿದ್ದರೂ ನಿರ್ಭಯಾಳನ್ನು ಮುಗಿಸಿದ ಕಾಮುಕರಂತಾದರು, ಆಗ ಅವರು ಮಾಡಿದ ಉಪಾಯವೆಂದರೆ, ಸ್ನಾನ ಮುಗಿಸಿದ ಆ ಹೆಂಗಸು ಬಟ್ಟೆ ಬದಲಿಸಬೇಕಿತ್ತು. ಅದಕ್ಕೆ ಉಗ್ರಾಣದಲ್ಲಿಯೇ ಅವಕಾಶ ಮಾಡಿಕೊಟ್ಟರು ಪಾಪ ಆಕೆ ಪುಣ್ಯಕ್ಷೇತ್ರದಲ್ಲಿ ಕಾಮುಕರಿರುವುದಿಲ್ಲ ಎಂದು ಭಾವಿಸಿ ಒದ್ದೆ ಬಟ್ಟೆಯಲ್ಲೇ ಮುಗ್ಧವಾದಿ ಉಗ್ರಾಣ ಸೇರಿದಳು ಇದೀಗ ತಾನೆ ತನ್ನ ಕುಟುಂಬದಂತೆ ಕಂಡಿದ್ದ ದೈತ್ಯ ಜನಿವಾರಿಗಳು, ಹಠಾತ್ತನೆ ಅವಳ ಮೇಲೆರಗಿ ಬಾಯಿಗೆ ಬಟ್ಟೆ ತುರುಕಿ, ಆಕೆಯನ್ನ ಬಲಾತ್ಕಾರವಾಗಿ ಕೆಡಿಸಿ ಕೈಕಾಲು ಕಟ್ಟಿ ಉಗ್ರಾಣಕ್ಕೆ ಬೀಗ ಹಾಕಿ ಹೊರಟುಹೋದರು. ಆ ಮಠದ ಗುರುಗಳು ತಮ್ಮ ಸುತ್ತ ಏನು ನಡೆಯುತ್ತದೆ ಎಂಬುದನ್ನ ಅರಿಯದ ಮುಗ್ಧರು. ಕಾಮುಕರಿಗೆ ಇದೇ ವರದಾನವಾಯ್ತು.

ಇಡೀ ಮಠದ ಆಡಳಿತವನ್ನ ಕೈಗೆತ್ತಿಕೊಂಡು ಅದನ್ನ ಉನ್ನತ ಸ್ಥಿತಿಗೆ ತಂದಿದ್ದ ಘನಪಾಟಿ ಎಂಬಾತ, ತನ್ನ ಕೃತ್ಯದ ನಂತರ ಜನಿವಾರ ಬದಲಾಯಿಸಿ ಸ್ನಾನಮಾಡಿ ಕ್ರೌರ್ಯದ ನಂತರ ಮೂಡುವ ಸಂತೃಪ್ತತೆಯನ್ನು ಅನುಭವಿಸುತ್ತ, ತಾನು ಮಾಡಿದ ಸಾಹಸಕ್ಕೆ ಅಮಲ್ದಾರ ಶಂಕರಶಾಸ್ತ್ರಿಗಳನ್ನ ಕರೆಸಿಕೊಂಡು ವಿಷಯ ತಿಳಿಸಿದರು. ಹಸಿದ ದಾಸಾಚಾರಿಯಾಗಿದ್ದ ಶಂಕರಶಾಸ್ತ್ರಿ ಉಗ್ರಾಣಕ್ಕೆ ಗೂಳಿಯಂತೆ ನುಗ್ಗಿ, ಪ್ರಜ್ಞೆ ಕಳೆದುಕೊಂಡಿದ್ದ ಆ ಮಹಿಳೆಯನ್ನ ಮನಸೋಇಚ್ಛೆ ಭೊಗಿಸಿ ಬಂದನು, ಮಠದ ಗಣ್ಯಾತಿಗಣ್ಯರೇ ಮೀಸಲು ಉಂಡಮೇಲೆ ಇನ್ನುಳಿದ ನಗಣ್ಯರು ಸುಮ್ಮನಿದ್ದಾರೆಯೇ, ಅವರೂ ಮೃಗಗಳಾದರು. ಆಣತಿ ದೂರದಲ್ಲೇ ಸುಂದರವಾದ ಶಾರದಾದೇವಿಯ ಪೂಜಾಮೂರ್ತಿಯಿದ್ದು ಆಕೆಯ ಪ್ರತಿರೂಪದಂತಿದ್ದ ಆ ಮಹಿಳೆಗೆ ಆದ ಆಘಾತವೆಂದರೆ, ಆಕೆ ಯಾವಾಗ ಪ್ರಜ್ಞೆ ಕಳೆದುಕೊಂಡಳೊ ಏನೊ ಅದು ಅತ್ಯಾಚಾರಿಗಳಿಗೆ ವರದಾನವಾಯ್ತು.

ಉಗಾಣದ ಪಾಸಾಲೆಯನ್ನು ಕಾಯುತ್ತಿದ್ದ ಶೂದ್ರ ಭೈರ ಗಮನಿಸಿದಂತೆ, ಉಗ್ರಾಣದೊಳಕ್ಕೆ ಹೋಗುತ್ತಿದ್ದ ವಿಪ್ರೋತ್ತಮರು ಬರುವಾಗ ಕೆಲಸ ಮುಗಿಸಿದ ನಾಯಿಯಂತೆ ಓಡಿ ಬರುತ್ತಿದ್ದುದು ಕುತೂಹಲ ಮೂಡಿಸಿತು ಆದ್ದರಿಂದ ಅಲ್ಲಿ ಇಣುಕಿದವನಿಗೆ ಸತ್ಯ ಸಂಗತಿ ತಿಳಿಯಿತು. ಆದರೆ ಆಕೆ ಯಾರು ಎಂಬುದು ತಿಳಿಯಲಿಲ್ಲ. ಸಂಜೆಯಾಗುತ್ತಿದ್ದಂತೆ, ಹೊಳೆಗೆ ಸ್ನಾನಕ್ಕೆ ಬಂದಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತು. ಆಗ ಭೈರನಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅವರೇ ಎಂಬುದು ತಿಳಿಯಿತು. ಭೈರನಿಗೆ ಗೊತ್ತಾಯಿತು ಎಂದು ಘನಪಾಟಿಗಳಿಗೆ ಗೊತ್ತಾದ ಕೂಡಲೆ ಅವರು ಅವನನ್ನು ಕರೆಸಿಕೊಂಡು ಪ್ರೀತಿಯಿಂದ ಮಾತನಾಡಿಸಿದರು ಮತ್ತು ಒಳಕೋಣೆಗೆ ಕರೆದುಕೊಂಡು ಹೋದರು. ಭೈರನಿಗಿದು ಆಶ್ಚರ್ಯಕರ ಘಟನೆ ಕೂಡಲೇ ಘನಪಾಟಿ ತಗೊ ಭೈರಪ್ಪ ಎಂದು ಒಂದು ಪವನಿನ ಉಂಗುರ ಕೊಟ್ಟು, ಯಾರೋ ಗಂಡಬಿಟ್ಟ ಹೆಂಗಸು ಬಂದು ಹೊಳೆಯಲ್ಲಿ ಸ್ನಾನಮಾಡಿ ಕಾಣೆಯಾಗಿದ್ದಾಳೆ. ಆದರೆ ನಮ್ಮ ಉಗ್ರಾಣದಲ್ಲಿದ್ದಾಳಂತೆ ಕಿಲ್ಲೆದಾರ ನರಸಿಂಹ ಅವಧಾನಿ ನಿನ್ನ ಜೊತೆ ಇರ್ತಾರೆ ರಾತ್ರಿ ಹತ್ತು ಗಂಟೆಗೆ ನೀನು ಅವರೂ ಸೇರಿ ಮಠದ ಮರ್ಯಾದೆ ಉಳಿಸಬೇಕು ಎಂದು ಆಜ್ಞಾಪಿಸಿ ಭೈರನನ್ನು ಕಳಿಸಿಕೊಟ್ಟರು.

ಹತ್ತು ಗಂಟೆಗೆ ಸರಿಯಾಗಿ ಬಂದ ಕಿಲ್ಲೆದಾರ ನರಸಿಂಹ ಅವಧಾನಿ ಉಗ್ರಾಣದ ಬಾಗಿಲು ತೆಗೆದು ಅಲ್ಲಿ ಬಿದ್ದಿದ್ದ ಹೆಂಗಸನ್ನ ಎತ್ತಿಕೊಳ್ಳಲು ಭೈರನಿಗೆ ಹೇಳಿದ. ಭೈರ ಹಾಗೇ ಮಾಡಿದ ಅಲ್ಲಿಂದ ಅರ್ಚಕ ಕೃಷ್ಣಶರ್ಮರ ಬಾವಿ ಹತ್ತಿರ ತಂದು ಕಟ್ಟೆ ಮೇಲೆ ಕೂರಿಸಿ ಹಗ್ಗ ಬಿಗಿದು ಶವವನ್ನು ಬಾವಿಗೆ ಇಳೆಬಿಟ್ಟು ಆಕೆಯೇ ಆತ್ಮಹತ್ಯೆ ಮಾಡಿಕೊಂಡಂತೆ ಮಾಡಿದರು. ಆದರೆ ಭೈರನಿಗೆ ಆಕೆಯಲ್ಲಿನ್ನು ಜೀವವಿದ್ದ ಬಗ್ಗೆ ಅನುಮಾನ ಏಳೆಯಿತು! ಮರುದಿನ ಶವ ತೆಗೆದು ಪ್ರಕರಣವನ್ನ ಮುಚ್ಚಿಹಾಕಿದರು. ಏಕೆಂದರೆ ಇದು ಮಠದ ಮರ‍್ಯಾದೆ ಪ್ರಶ್ನೆಯಾಗಿತ್ತು. ಮುಂದೆ ಆಕೆಯ ಗಂಡನಿಗೆ ಮತಿಭ್ರಮಣೆಯಾಯ್ತು.

ಇದು ಕಲ್ಕುಳಿ ವಿಠ್ಠಲ ಹೆಗಡೆ ತಮ್ಮ ಮಂಗನ ಬ್ಯಾಟೆಯಲ್ಲಿ ದಾಖಲಿಸಿರುವ ಘಟನೆ. ಹಲವಾರು ಕಾರಣಗಳಿಗಾಗಿ ಮಂಗನಬ್ಯಾಟೆ ಮಲೆನಾಡನ್ನ ಕುರಿತು ಬರೆದ ಕುವೆಂಪು ತೇಜಸ್ವಿಯವರ ಕೃತಿಗಳ ನಂತರ ಮಹತ್ವ ಪಡೆದುಕೊಂಡಿದೆ. ಪ್ರಶಸ್ತಿಯನ್ನು ಪಡೆದಿದೆ. ಶೃಂಗೇರಿಯ ಊರ ಮಧ್ಯದಲ್ಲೇ ಇರುವ ವಿಠ್ಠಲಹೆಗಡೆಯನ್ನು ಏನೂ ಮಾಡಲಾಗದ ಪುರೋಹಿತಶಾಹಿಗಳು, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಅವರಿಗೆ ಸಿಕ್ಕ ಅವಕಾಶವೆಂದರೆ ಆತ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದಂತೆ ತಡೆಯುವುದಾಗಿತ್ತು. ಆದರೆ ಸಮ್ಮೇಳನ ನಡೆದೇ ತೀರುತ್ತದೆಂದಾಗ, ಇಡೀ ಶೃಂಗೇರಿಯನ್ನ ಬಂದ್ ಮಾಡಿಸಿದವು. ಬಲವಂತವಾಗಿ ಅಂಗಡಿ ಮುಂಗಟ್ಟಿನ ಬಾಗಿಲು ಹಾಕಿಸಿದವು. ಆಟೊ ಓಡಾಡದಂತೆ ನೋಡಿಕೊಂಡವು. ಪೊಲೀಸರು ಸಾಹಿತಿಗಳು ಮತ್ತು ಪುಂಡರ ನಡುವೆ ನಿಂತು, ಒಂದು ದಿನ ಮಾತ್ರ ಸಮ್ಮೇಳನ ನಡೆಯುವಂತೆ ನೋಡಿಕೊಂಡರು. ಈಗ ಗುಲ್ಬರ್ಗದಲ್ಲಿ ಸಮ್ಮೇಳನ ನಡೆಯುತ್ತಿರುವುದರ ಅಧ್ಯಕ್ಷರು ತುಂಬಾ ಬೇಜವಾಬ್ದಾರಿಯಿಂದ ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದಾರೆ. ಮನುಬಳಿಗಾರ್ ಸರ್ಕಾರಿ ಗುಮಾಸ್ತನಂತೆ ವರ್ತಿಸುತ್ತಿದ್ದಾರೆ. ಆದರೆ ಸತ್ಯಸಂಗತಿ ದಾಖಲಿಸುವ ಸಾಹಿತಿಗಳ ಅಭಿವ್ಯಕ್ತಿಗೆ ಗಂಡಾಂತರ ಬಂದಿರುವುದು ಯಾರ ಅರಿವಿಗೂ ಬಂದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುತೇಕ ಕನ್ನಡ ಸಾಹಿತಿಗಳು ಸ್ವಾಭಿಮಾನವನ್ನು ಮರೆತು, ಮನುವಾದಿಗಳ ಬಾಲಬಡುಕರಾಗಿದ್ದಾರೆ.

  2. ಸಾಹಿತಿಗಳು ಸತ್ಯವನ್ನ ಮರೆಮಾಚಿ, ಮನುವಾದಿಗಳ ಹೊಲಸು ತಿನ್ನುತ್ತ ಸುಳ್ಳನ್ನು ಸಮಾಜಕ್ಕೆ ನಾಚಿಕೆಗೇಡಿಗಳಾಗಿ ಪರಿಚಯಿಸಲು ಹೋಗಬಾರದು. ಏಕೆಂದರೆ; ಸಾಹಿತಿ ಸಮಾಜದ ಕಣ್ಣು ಅನ್ನುತ್ತಾತೆ ಅದನ್ನುವುಳಿಸಿಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...

ಮುಂಬೈ| ಬುರ್ಖಾ ಧರಿಸಿ ಲೋಕಲ್‌ ಟ್ರೈನ್‌ನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಬಂಧನ

ಮುಂಬೈನ ಉಪನಗರ ರೈಲಿನ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ನಾಸಿಕ್‌ನ 57 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಘಟನೆ ಫೆಬ್ರವರಿ 6 ರಂದು ಘಾಟ್ಕೋಪರ್...

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...