Homeಅಂಕಣಗಳುಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

- Advertisement -
- Advertisement -

ಜರ್ನಲಿಸಂನಲ್ಲಿ ಜಗತ್ತಿಗೆ ಮಾದರಿಯೆನ್ನಬಹುದಾದ ’ಘಟನೆಯೊಂದರ ತನಿಖಾ ವರದಿ’ ಕೆಲವು ದಿನಗಳ ಹಿಂದೆ ಪ್ರಕಟವಾಯಿತು. ಅದು ಆದದ್ದು ಅಮೆರಿಕದಲ್ಲಿ. ಆ ವರದಿ ತನ್ನದೇ ಪ್ರಭುತ್ವದ ವಿರುದ್ಧವಾಗಿತ್ತು. ಅದೇ ರೀತಿ ಪತ್ರಿಕೋದ್ಯಮಕ್ಕೆ ಕಪ್ಪುಚುಕ್ಕಿ ಎನ್ನುವಂತಹ ವಿದ್ಯಮಾನ ಭಾರತದಲ್ಲಿ ನಡೆಯಿತು. ಮೊದಲನೆಯದರಿಂದ, ತಾನು ನಡೆಸಿದ ಹೀನಾಯ ಅಪರಾಧವನ್ನು ಒಪ್ಪಿಕೊಳ್ಳುವ ಒತ್ತಡ ಪ್ರಭುತ್ವದ ಮೇಲೆ ಸೃಷ್ಟಿಯಾದರೆ, ಎರಡನೆಯ ಘಟನೆಯಲ್ಲಿ ಫೋಟೋಜರ್ನಲಿಸ್ಟ್ ಆಗಿ ತೆರಳಿದ್ದ ವ್ಯಕ್ತಿಯೊಬ್ಬನ ಹಿಂಸಾತ್ಮಕ ಮತ್ತು ಅಮಾನವೀಯ ನಡತೆಯ ಕಾರಣದಿಂದಾಗಿ ಪ್ರಭುತ್ವದ ಅಪರಾಧಗಳು ಹಿನ್ನೆಲೆಗೆ ನೂಕಲ್ಪಟ್ಟವು.

ಮೊದಲನೆಯದು; ರಕ್ತ ಮೆತ್ತಿಕೊಂಡ ಅಮೆರಿಕ ಸ್ಟೇಟ್‌ಗೆ ಮುಜುಗರ ಉಂಟುಮಾಡಿದ ಜರ್ನಲಿಸಂ

ಆಫ್ಘಾನಿಸ್ತಾನವನ್ನು ಆಗಸ್ಟ್ 15ರ ಹೊತ್ತಿಗೆ ತಾಲಿಬಾನ್ ಬಹುತೇಕ ಸಂಪೂರ್ಣವಾಗಿ ವಶಪಡಿಸಿಕೊಂಡ ಮೇಲೆ, ಅಮೆರಿಕನ್ ಮಿತ್ರ ಪಡೆಗಳು ಕಾಬೂಲ್‌ನಿಂದ ಹಿಂದಿರುಗಲು ಇನ್ನೂ ಹರಸಾಹಸ ಪಡುತ್ತಿದ್ದವು. ಆಗಸ್ಟ್ 26ರಂದು ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದ ಸ್ಫೋಟವೊಂದರಿಂದ ಸುಮಾರು 180ಕ್ಕೂ ಹೆಚ್ಚು ಜನ ಮೃತಪಟ್ಟರು ಮತ್ತು ಹಲವರು ಗಾಯಗೊಂಡಿದ್ದರು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಅಫ್ಘನ್ ಪ್ರಜೆಗಳೂ ಸೇರಿದ್ದರು. ಇಸ್ಲಾಮಿಕ್ ಸ್ಟೇಟ್ ಇದರ ಹೊಣೆ ಹೊತ್ತಿದೆ ಎಂದು ವರದಿಯಾಗಿತ್ತು.

ಅಮೆರಿಕಾ

ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದರು. ಇದರಿಂದ ತನ್ನ ಕಣ್ಗಾವಲನ್ನು ಹೆಚ್ಚಿಸಿಕೊಂಡಿದ್ದ ಅಮೆರಿಕನ್ ಸೇನೆ, ಆಫ್ಘಾನಿಸ್ತಾನದ ನೆಲದಲ್ಲಿ ಆಗಸ್ಟ್ 29ರಂದು ಹಲವು ಸಂಶಯಾತ್ಮಕ ಚಲನವಲನಗಳನ್ನು ಗುರುತಿಸಿರುವುದಾಗಿ ಮತ್ತು ಐಸಿಸ್ ’ಸುರಕ್ಷಿತ ಮನೆ’ಗೆ ಹೋಗಿಬರುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿರುವುದಾಗಿ ಹೇಳಿ, ಡ್ರೋನ್ ಕ್ಷಿಪಣಿ ದಾಳಿ ನಡೆಸಿ, ಮೂವರನ್ನು ಕೊಂದುಹಾಕಿದ್ದರ ಬಗ್ಗೆ ತಿಳಿಸಿತ್ತು.

ಅಮೆರಿಕದ ಪ್ರತಿಷ್ಟಿತ ಪತ್ರಿಕೆಯಾದ ’ದ ನ್ಯೂಯಾರ್ಕ್ ಟೈಮ್ಸ್’ ಸೆಪ್ಟಂಬರ್ ಎರಡನೇ ವಾರದಲ್ಲಿ ಮಾಡಿದ ತನಿಖಾ ಪತ್ರಿಕೋದ್ಯಮ ಅಮೆರಿಕ ಸೇನೆಯ ಮೇಲಿನ ಸುಳ್ಳುಗಳನ್ನು ಬಯಲು ಮಾಡಿತ್ತು. ಅಮೆರಿಕದ ಮಿಸೈಲ್ ದಾಳಿಯಿಂದ ಮೃತಪಟ್ಟಿದ್ದು ಐಸಿಸ್ ಉಗ್ರಗಾಮಿಗಳಲ್ಲ, ಬದಲಿಗೆ ಸಾಮಾನ್ಯ ಆಫ್ಘನ್ ನಾಗರಿಕರು ಎಂದು ಆ ವರದಿ ಬಹಿರಂಗಪಡಿಸಿತ್ತು. ಹಾಗೂ ಅಮೆರಿಕ ಸೇನೆ ತಿಳಿಸಿದಂತೆ ಮೃತಪಟ್ಟವರು ಕೇವಲ ಮೂರು ಜನರಲ್ಲ ಬದಲಿಗೆ ಏಳು ಮಕ್ಕಳನ್ನು ಸೇರಿಸಿ 10 ಸಾಮಾನ್ಯ ನಾಗರಿಕರು ಬಲಿಯಾಗಿರುವುದನ್ನು ವರದಿ ತಿಳಿಸಿತ್ತು. ಅಲ್ಲದೆ, ನೇರ ಕ್ಷಿಪಣಿ ದಾಳಿಯಿಂದಲ್ಲದೆ, ತಾನು ದಾಳಿ ಮಾಡಿದ ಕಾರಿನಲ್ಲಿ ಇದ್ದ ಸ್ಫೋಟಕ ವಸ್ಥುಗಳು ಸಿಡಿದ ಕಾರಣಕ್ಕೆ ಅಲ್ಲಿ ಮೃತರ ಸಂಖ್ಯೆ ಹೆಚ್ಚಿತ್ತು ಎಂಬ ಅಮೆರಿಕ ಸೇನೆಯ ಹೇಳಿಕೆ ಕೂಡ ಸುಳ್ಳಿನಿಂದ ಕೂಡಿದ್ದು ಎಂದು ಆ ಪತ್ರಿಕಾ ವರದಿ ಮತ್ತು ತನಿಖಾ ವಿಡಿಯೋ ಸಾಬೀತುಪಡಿಸಿತ್ತು.

ಹಲವು ದೇಶಗಳ ಮೇಲಿನ ತನ್ನ ಸುದೀರ್ಘ ಯುದ್ಧದಲ್ಲಿ ಎಷ್ಟೋ ಬಾರಿ ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡಿ ಕೊಂದಿರುವ ಆರೋಪಗಳಿಂದ ನುಣುಚಿಕೊಂಡಿದ್ದ ಅಮೆರಿಕ ಆಡಳಿತ ವ್ಯವಸ್ಥೆಗೆ ಈ ಬಾರಿ ಭಾರಿ ಮುಜುಗರ ತಂದೊಡ್ಡಿದ್ದು ’ದ ನ್ಯೂಯಾರ್ಕ್ ಟೈಮ್ಸ್’ನ ಪತ್ರಿಕೋದ್ಯಮ. ಕ್ಯಾಲಿಫೋರ್ನಿಯಾ ಮೂಲದ ’ನ್ಯೂಟ್ರಿಶನಲ್ ಅಂಡ್ ಎಜುಕೇಶನಲ್ ಇಂಟರ್‌ನ್ಯಾಷನಲ್’ ಎಂಬ ನೆರವು ನೀಡುವ ಸಂಸ್ಥೆಯೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೆಮಾರಿ ಅಹ್ಮದಿಯ ಚಲನವಲನವನ್ನು ಐಎಸ್ ಉಗ್ರರ ಚಲನವಲನ ಎಂದು ಕರೆದು, ಅಮೆರಿಕ ಸೇನೆ ಆತನ ಕಾರಿನ ಮೇಲೆ ದ್ರೋಣ್ ಕ್ಷಿಪಣಿ ನಡೆಸಿದ್ದರ ಪರಿಣಾಮವಾಗಿ ಆತನ ಜೊತೆಗೆ ಏಳು ಪುಟ್ಟ ಮಕ್ಕಳು ಸೇರಿದಂತೆ 10 ಜನರನ್ನು ಆಹುತಿ ತೆಗೆದುಕೊಂಡಿತ್ತು. ಆದರೆ ಅಂದು ಜೆಮಾರಿ ಅಹ್ಮದಿಯ ಎಲ್ಲಾ ಚಲನವಲನಗಳು ಎಂದಿನ ದಿನದ ಸಾಮಾನ್ಯ ಕೆಲಸದ ಭಾಗವಾಗಿತ್ತು ಎಂದು ತನಿಖಾ ವರದಿ ಸಾಬೀತುಪಡಿಸಿತ್ತು.

ಚಿತ್ರ ಕೃಪೆ: ದ ನ್ಯೂಯಾರ್ಕ್ ಟೈಮ್ಸ್

ಭಯೋತ್ಪಾದನೆ ವಿರುದ್ಧದ ಯುದ್ಧ ಎಂದು ಹೇಳಿಕೊಂಡು ನಡೆಸುವ ಇಂತಹ ನಾಗರಿಕ ಹತ್ಯೆಗಳಿಗೆ ಪರಿಹಾರವೇನು? ಇದಕ್ಕೆ ಅಮೆರಿಕ ಪ್ರಭುತ್ವ ಬೆಲೆತೆತ್ತುವುದು ಯಾವಾಗ? ಈಗ ಇದೊಂದು “ದುರಂತಮಯ ತಪ್ಪು” ಎಂದು ಅಮೆರಿಕ ಪ್ರಭುತ್ವ ಒಪ್ಪಿಕೊಂಡಿದ್ದರೂ, ಹೋದ ಅಮಾಯಕ ಜೀವಗಳನ್ನು ಮರಳಿ ತರಬಲ್ಲದೇ ಅದು? ಕೊನೆ ಪಕ್ಷ ಈ ತಪ್ಪುಗಳನ್ನು ಜಗತ್ತಿನ ಮುಂದೆ ತೋರಿಸಲು, ಒಂದು ಪ್ರಭುತ್ವ ನಡೆಸಬಲ್ಲ ಹೀನಾಯ ಕೃತ್ಯಗಳನ್ನು ಬಯಲಿಗೆಳೆಯಲು ಅದೇ ದೇಶದ ಕೆಲವಾದರೂ ಪತ್ರಕರ್ತರು ಇನ್ನೂ ತಮ್ಮ ಸಿಟ್ಟನ್ನು, ತಾವೂ ನಿಭಾಯಿಸಬೇಕಿರುವ ಕರ್ತವ್ಯವನ್ನು ಜೀವಂತವಾಗಿರಿಸಿಕೊಂಡಿದ್ದಾರೆ ಎಂಬುದೇ ನಿಟ್ಟುಸಿರು!

ಎರಡನೆಯದು; ದೇಹ ತಣ್ಣಗಾಗುವ ಮುನ್ನವೇ ಅದರ ಮೇಲೆ ಕುಪ್ಪಳಿಸಿ ಗುದ್ದಿದ ಫೋಟೋಗ್ರಾಫರ್!

ಪ್ರವಾಸ ಕೈಗೊಂಡಿದ್ದ ಈ ದೇಶದ ಪ್ರಧಾನಿ ಅಮೆರಿಕ ನೆಲದಲ್ಲಿ, ಆಫ್ಘಾನಿಸ್ತಾನ ಭಯೋತ್ಪಾದನೆಯ ನೆಲವಾಗುವುದರ ಬಗ್ಗೆ ಒಂದು ಕಡೆ ಆತಂಕ ವ್ಯಕ್ತಪಡಿಸುತ್ತಿದ್ದರೆ, ತಮ್ಮದೇ ದೇಶದ ರಾಜ್ಯವಾದ ಅಸ್ಸಾಂನ ಪೊಲೀಸರು ಸಾಮಾನ್ಯ ನಾಗರಿಕರ ಮೇಲೆ ಗುಂಡುಹಾರಿಸಿ ಕನಿಷ್ಟ ಇಬ್ಬರನ್ನು ಹತ್ಯೆಗೈದಿದ್ದರು. ಅಷ್ಟು ಸಾಲದು ಎಂಬಂತೆ, ಪೊಲೀಸರ ಜೊತೆಗೆ ತೆರಳಿದ್ದ ಫೋಟೋಜರ್ನಲಿಸ್ಟ್ ಒಬ್ಬ ಆಗತಾನೆ ಗುಂಡುಬಿದ್ದು ನೆಲಕ್ಕುರುಳಿದ ವ್ಯಕ್ತಿಯ ಮೃತ ದೇಹ ತಣ್ಣಗಾಗುವ ಮುಂಚೆಯೇ, ಆ ದೇಹದ ಮೇಲೆ ಕುಪ್ಪಳಿಸುವ, ಆ ದೇಹಕ್ಕೆ ಗುದ್ದುವ ವಿಡಿಯೋ ಮತ್ತು ಫೋಟೋಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದವು. ತನ್ನ ಮುಂದೆ ಘಟಿಸಿದ ಒಂದು ಸಾವು ಕೊನೆಪಕ್ಷ ಮನುಷ್ಯನ ಕ್ರೌರ್ಯವನ್ನು ಅದುಮಿಟ್ಟುಕೊಳ್ಳುವಂತೆ ಮಾಡಿ, ಸಣ್ಣ ವೇದನೆಯನ್ನೂ ಸೃಷ್ಟಿಸಲು ಸಾಧ್ಯವಾಗದೆ ಹೋದರೆ, ಎಂತಹ ವಿಕೃತ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ ಎಂಬುದಕ್ಕೆ ಅದು ದ್ಯೋತಕವಾಗಿತ್ತು.

ಅಸ್ಸಾಂನ ರಾಜಧಾನಿ ಗೌಹಾಟಿಯಿಂದ ಸುಮಾರು 70 ಕಿಲೋಮೀಟರ ದೂರದಲ್ಲಿರುವ ಧೋಲಾಪುರ್‌ನಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ಆರೋಪಿಸಲಾಗಿರುವ ಪೂರ್ವ ಬಂಗಾಳ ಮೂಲದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 800 ಕುಟುಂಬಗಳನ್ನು ಅವರ ಟಿನ್ ಶೆಡ್‌ಗಳಿಂದ ತೆರವುಗೊಳಿಸುವ ಯೋಜನೆಯ ಭಾಗವಾಗಿ ಸೆಪ್ಟಂಬರ್ 20- 23ರ ನಡುವೆ ಪೊಲೀಸರು ಅಲ್ಲಿ ನೆರೆದಿದ್ದರು. ಸರಿಯಾದ ನೋಟಿಸ್ ಸಿಗದಿದ್ದಕ್ಕೆ ಕಂಗಾಲಾಗಿದ್ದ ಆ ಕುಟುಂಬಗಳ ಜನರು ಪ್ರತಿರೋಧ ತೋರಿದ್ದಾರೆ. ಒಬ್ಬ ವ್ಯಕ್ತಿ ಬೆತ್ತವೊಂದನ್ನು ಹಿಡಿದು ಪೊಲೀಸರತ್ತ ನುಗ್ಗಿ ಬರುವ ಒಂದು ದೃಶ್ಯವನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಆದರೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪೊಲೀಸರಿಗೆ ಆ ಗುಂಪನ್ನು ಚದುರಿಸುವುದು ಕಷ್ಟವೇನಿರಲಿಲ್ಲ. ಬದಲಿಗೆ ಏಕಾಏಕಿ ಗುಂಡಿನ ಸುರಿಮಳೆಗೈದು ಇಬ್ಬರ ಹತ್ಯೆಗೆ ಮತ್ತು ಹಲವರ ಗಾಯಗಳಿಗೆ ಕಾರಣವಾಗಿದ್ದಾರೆ. ಕೆಲವರು ಪೊಲೀಸರು ಕೂಡ ಗಾಯಗೊಂಡಿದ್ದಾರೆ.

ಜನಸಾಮಾನ್ಯರ ಮೇಲಿನ ದರ್ಪ ಮತ್ತು ಪೊಲೀಸರ ಹದ್ದುಮೀರಿದ ವರ್ತನೆ ಒಂದು ಕಡೆಯಾದರೆ, ಅವರ ಜೊತೆಗೆ ತೆರಳಿದ್ದ ಫೋಟೋಗ್ರಾಫರ್, (ಈಗ ಘಟನೆಯ ನಂತರ ಬಂಧಿತನಾಗಿದ್ದಾನೆ) ಬಿಜೋಯ್ ಬನಿಯಾನ ವರ್ತನೆ ಇಡೀ ಮನುಕುಲಕ್ಕೆ ನಾಚಿಕೆ ತರುವಂತಿತ್ತು! ಅದರ ನಂತರ ಅಸ್ಸಾಂನ ಪತ್ರಿಕೆಗಳು ಈ ಘಟನೆಯನ್ನು ವರದಿ ಮಾಡಿದ ರೀತಿ ಕೂಡ, ಆಡಳಿತ ವ್ಯವಸ್ಥೆಯ ಪರವಾದ ನಿಲುವನ್ನೇ ವಹಿಸಿದ್ದವು ಎಂದು ಮುಂದಿನ ದಿನದ ದಿನಪತ್ರಿಕೆಗಳ ಬರಹಗಳನ್ನು ವಿಶ್ಲೇಷಿಸಿರುವ ’ನ್ಯೂಸ್‌ಲಾಂಡ್ರಿ’ ಪತ್ರಿಕೆ ತಿಳಿಸಿದೆ.

ಜನರಲ್ ಡೈಯರ್ ಮತ್ತವನ ಸಂತತಿ ಸತ್ತರೂ ಜಲಿಯನ್‌ವಾಲಾ ಬಾಗ್ ದುರಂತ ಹಲವು ರೂಪಗಳಲ್ಲಿ ಮರುಕಳಿಸುತ್ತಿರುತ್ತದೆ ಎಂಬುದಕ್ಕೆ ಅಸ್ಸಾಂನ ಈ ಘಟನೆಯೇ ಸಾಕ್ಷಿ. ಆದರೆ ನಾಗರಿಕ ಸಮಾಜದ ಒಂದು ವರ್ಗ ಅಂತಹ ಡೈಯರ್‌ಗಳ ಇಂದಿನ ಅವತಾರಗಳ ಪರ ವಹಿಸಿ ನಿಲ್ಲುತ್ತಿರುವುದು ಈ ಯುಗದ ದುರಂತವಷ್ಟೇ!


ಇದನ್ನೂ ಓದಿ: ಅಸ್ಸಾಂ: ಕ್ಯಾಮರಾ ಮುಂದೆಯೆ ಪೊಲೀಸರಿಂದ ಕ್ರೂರವಾಗಿ ಹತ್ಯೆಯಾದ ವ್ಯಕ್ತಿ ಅಕ್ರಮ ನಿವಾಸಿಯಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...