Homeಅಂತರಾಷ್ಟ್ರೀಯಟ್ರಂಪ್ ಒಬ್ಬ ವಿಫಲ ನಾಯಕ, ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ: ಅರ್ನಾಲ್ಡ್‌

ಟ್ರಂಪ್ ಒಬ್ಬ ವಿಫಲ ನಾಯಕ, ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ: ಅರ್ನಾಲ್ಡ್‌

ನಿಮ್ಮ ರಾಜಕೀಯ ನಿಲುವು ಮತ್ತು ಸಂಬಂಧ ಏನೇ ಇರಲಿ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡೆನ್‌ಗೆ ಶುಭ ಹಾರೈಸಿ - ಅರ್ನಾಲ್ಡ್

- Advertisement -
- Advertisement -

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕ್ಯಾಪಿಟಲ್‌ ಮೇಲಿನ ದಾಳಿಯನ್ನು ಖ್ಯಾತ ಬಾಡಿ ಬಿಲ್ಡರ್‍, ಟರ್ಮಿನೇಟರ್‍ ಖ್ಯಾತಿಯ ಹಾಲಿವುಡ್ ನಟ ಮತ್ತು ಕ್ಯಾಲಿಫೋರ್ನಿಯದ ಮಾಜಿ ಗವರ್ನರ್ ಅರ್ನಾಲ್ಡ್ ಖಂಡಿಸಿದ್ದು, ಈ ಕೃತ್ಯವನ್ನು ಜರ್ಮನಿಯ ನಾಜಿ ದೌರ್ಜನ್ಯಕ್ಕೆ ಹೋಲಿಸಿದ್ದಾರೆ. ಜೊತೆಗೆ ಈ ಕುರಿತು ತಾವು ಮಾಡಿರುವ ವೀಡಿಯೋದಲ್ಲಿ ಐಕ್ಯತೆಗಾಗಿ ಮನವಿ ಮಾಡಿದ್ದಾರೆ.

ಈ ಕುರಿತ ವೀಡಿಯೋವನ್ನು ಅರ್ನಾಲ್ಡ್ ಟ್ವೀಟ್ ಮಾಡಿದ್ದು, “ಜಗತ್ತಿನಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಈ ವಾರ ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಕುರಿತು ನನ್ನ ಅಮೆರಿಕದ ಪ್ರಜೆಗಳಿಗೆ ಮತ್ತು ಗೆಳೆಯರಿಗೆ ನನ್ನ ಸಂದೇಶ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ‌ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು

ಇದನ್ನೂ ಓದಿ: ಅಮೆರಿಕ ಇತಿಹಾಸದಲ್ಲೆ ನನ್ನ ಅವಧಿ ಅತ್ಯುತ್ತಮ; ಅದೀಗ ಕೊನೆಯಾಗುತ್ತಿದೆ- ಟ್ರಂಪ್

1938 ರಲ್ಲಿ ನಾಜಿಗಳು “ಕ್ರಿಸ್ಟಲ್‌ನಚ್ ಅಥವಾ ನೈಟ್ ಆಫ್ ಬ್ರೋಕನ್ ಗ್ಲಾಸ್” ಎಂದು ಕರೆಯಲ್ಪಡುವ ದಾಳಿಯಲ್ಲಿ ಯಹೂದಿ ಒಡೆತನದ ಮಳಿಗೆಗಳ ಕಿಟಕಿಗಳನ್ನು ಒಡೆದಿದ್ದರು. ಈ ದಾಳಿಯನ್ನು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಮೇಲೆ ಮಾಡಿದ ದಾಳಿಗೆ ಹೋಲಿಸಿದ್ದಾರೆ.

“ಬುಧವಾರ ಅಮೆರಿಕದಲ್ಲಿ ಬ್ರೋಕನ್ ಗ್ಲಾಸ್ ದಿನ” ಎಂದು ಅಮೆರಿಕ ಮತ್ತು ಕ್ಯಾಲಿಫೋರ್ನಿಯ ಧ್ವಜಗಳ ನಡುವೆ ಕುಳಿತು ವೀಡಿಯೋದಲ್ಲಿ ಹೇಳಿದ್ದಾರೆ. ಇದು ಸಾಕಷ್ಟು ವೈರಲ್ ಆಗಿತ್ತು. ಮುಂದುವರಿದು, ತನ್ನ ಬಾಲ್ಯ ಮತ್ತು ತನ್ನ ಕುಟುಂಬದ ಬಗ್ಗೆ ಮತ್ತು ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ ಸಂಸತ್‌ ದಾಳಿಯಲ್ಲಿ ಭಾರತೀಯ ಧ್ವಜ ಹಾರಾಟ: ವ್ಯಾಪಕ ಟೀಕೆ

ಇದು ನೋವಿನ ಸಂಗತಿಯಾದ್ದರಿಂದ ಇದುವರೆಗೂ ಸಾರ್ವಜನಿಕವಾಗಿ ಇದನ್ನು ಹಂಚಿಕೊಂಡಿರಲಿಲ್ಲ. ನನ್ನ ತಂದೆ ವಾರದಲ್ಲಿ 2-3 ಬಾರಿ ಕುಡಿದು ಬಂದು ನನ್ನನ್ನು ಮತ್ತು ನನ್ನ ತಾಯಿಯನ್ನು ಹೊಡೆಯುತ್ತಿದ್ದರು. ಹೆದರಿಸುತ್ತಿದ್ದರು. ನನ್ನ ತಂದೆ ಮತ್ತು ನಮ್ಮ ಕೆಲವು ನೆರೆಹೊರೆಯವರನ್ನು ಸುಳ್ಳಿನ ಮೂಲಕ ದಾರಿ ತಪ್ಪಿಸಲಾಗಿತ್ತು. ಇಂತಹ ಸುಳ್ಳುಗಳಿಗೆ ಯಾವಾಗಲೂ ಮುನ್ನಡೆಯಿರುತ್ತದೆ.

ಇಂತಹ ಸುಳ್ಳುಗಳಿಂದಲೇ ಟ್ರಂಪ್‌ ಕೂಡಾ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದ ಅರ್ನಾಲ್ಡ್‌, “ಅಧ್ಯಕ್ಷ ಟ್ರಂಪ್, ಚುನಾವಣೆಯ ಫಲಿತಾಂಶಗಳನ್ನು ಮತ್ತು ನ್ಯಾಯಯುತವಾಗಿ ನಡೆದ ಚುನಾವಣೆಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಸುಳ್ಳಿನಿಂದ ಜನರನ್ನು ತಪ್ಪುದಾರಿಗೆಳೆಯುವ ಮೂಲಕ ಅವರು ದೊಂಬಿಯೆಬ್ಬಿಸಲು ಬಯಸಿದರು. ಟ್ರಂಪ್ ಒಬ್ಬ ವಿಫಲ ನಾಯಕ. ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ” ಎಂದು ಹೇಳಿದ್ದಾರೆ.

“ನಿಮ್ಮ ರಾಜಕೀಯ ನಿಲುವು ಮತ್ತು ಸಂಬಂಧ ಏನೇ ಇರಲಿ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡೆನ್‌ಗೆ ಶುಭ ಹಾರೈಸಿ. ‘ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡೆನ್, ನಮ್ಮ ಅಧ್ಯಕ್ಷರಾಗಿರುವ ನಿಮ್ಮ ಯಶಸ್ಸನ್ನು ನಾವು ಬಯಸುತ್ತೇವೆ. ನೀವು ಯಶಸ್ವಿಯಾದರೆ, ನಮ್ಮ ರಾಷ್ಟ್ರವು ಯಶಸ್ವಿಯಾಗುತ್ತದೆ’ ಎಂದು ನಮ್ಮೊಂದಿಗೆ ಸೇರಿ ಹರಸಿ ಎಂದು ಅರ್ನಾಲ್ಡ್‌ ಹೇಳಿದ್ದಾರೆ.

ಇದನ್ನೂ ಓದಿ: ಜೋ ಬೈಡನ್-ಕಮಲಾ ಹ್ಯಾರಿಸ್ ಗೆಲುವನ್ನು ಅಂಗೀಕರಿಸಿದ ಅಮೆರಿಕ ಕಾಂಗ್ರೆಸ್

ಕೊನೆಯದಾಗಿ ಅಮೆರಿಕದ ಸಂವಿಧಾನವನ್ನು ಬದಲಾಯಿಸಬೇಕು ಎಂದು ಭಾವಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು, “ನೀವು ಎಂದಿಗೂ ಗೆಲ್ಲುವುದಿಲ್ಲ” ಎಂದು ಹೇಳಿದ್ದಾರೆ.

ಅಮೆರಿಕದ ಚುನಾವಣೆ ಮುಗಿದು, ಜೋ ಬೈಡೆನ್‌ ಗೆಲುವು ಸಾಧಿಸಿದ್ದರೂ ಸಹ ಡೊನಾಲ್ಡ್‌ ಟ್ರಂಪ್‌ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮೊದಲಿನಿಂದಲೂ ಆರೋಪಿಸುತ್ತಲೇ ಇದ್ದಾರೆ. ಇದರ ಭಾಗವಾಗಿ ಟ್ರಂಪ್‌ ಬೆಂಬಲಿಗರು ಇತ್ತೀಚೆಗೆ ಶ್ವೇತ ಭವನಕ್ಕೆ ಮುತ್ತಿಗೆ ಹಾಕಿದ್ದರು. ಇಲ್ಲಿ ಭಾರತದ ಧ್ವಜವನ್ನೂ ಬಳಸಲಾಗಿತ್ತು. ಇದಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಟ್ರಂಪ್‌ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಗಳನ್ನು ಬ್ಯಾನ್‌ ಮಾಡಲಾಗಿದೆ.


ಇದನ್ನೂ ಓದಿ: ಅಮೆರಿಕಾ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ – ಜೋ ಬೈಡೆನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...