ಕೊರೊನಾ ಸಾಂಕ್ರಾಮಿಕದ ಚಿಕಿತ್ಸೆ ಕುರಿತು ಅಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ದಾಖಲಾಗಿರುವ ಪ್ರಕರಣಗಳ ವಿಚಾರಣೆಗೆ ತಡೆಯೊಡ್ಡುವಂತೆ ಯೋಗ ಗುರು ಬಾಬಾ ರಾಮ್‌ದೇವ್ ಸುಪ್ರೀಂ ಮೊರೆ ಹೋಗಿದ್ದಾರೆ.
ರಾಮ್‌ದೇವ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ವೈದ್ಯಕೀಯ ಸಂಘ ವಿವಿಧ ರಾಜ್ಯಗಳಲ್ಲಿ ಹಲವು ಪ್ರಕರಣ ದಾಖಲಿಸಿತ್ತು. ಹೀಗಾಗಿ ತಮ್ಮ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯಬೇಕೆಂದು ಕೋರಿ ರಾಮ್‌ದೇವ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಬಲವಂತದ ಕ್ರಮಗಳಿಂದ ರಾಮ್‌ದೇವ್ ರಕ್ಷಣೆ ಕೋರಿದ್ದಾರೆ. ಪಾಟ್ನಾ ಮತ್ತು ರಾಯ್‌ಪುರ ಶಾಖೆಗಳಲ್ಲಿ ಐಎಂಎ ಸಲ್ಲಿಸಿರುವ ಎಫ್‌ಐಆರ್‌ಗಳಲ್ಲಿನ ವಿಚಾರಣೆಯನ್ನು ತಡೆಹಿಡಿಯಲು ರಾಮ್‌ದೇವ್ ಕೋರಿದ್ದಾರೆ. ಜೊತೆಗೆ ಎಫ್‌ಐಆರ್‌ಗಳನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅಲೋಪತಿ ವೈದ್ಯರು ದೇವದೂತರು, ಲಸಿಕೆ ಪಡೆಯುವೆ; ಯೂಟರ್ನ್ ಹೊಡೆದ ಬಾಬಾ ರಾಮ್‌ದೇವ್
Yoga guru Baba Ramdev moves Supreme Court seeking a stay on the proceedings in multiple cases lodged against him in various states over his alleged remarks on efficacy of allopathy in treatment of COVID-19; seeks protection from coercive actions in FIRs lodged by IMA pic.twitter.com/NLnB49egpH
— ANI (@ANI) June 23, 2021
ಅಲೋಪತಿಯ ಬಗ್ಗೆ ನೀಡಿದ್ದ ಹೇಳಿಕೆಯಿಂದಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಘಟಕವು ನೀಡಿದ ದೂರಿನ ಮೇರೆಗೆ ಬಾಬಾ ರಾಮ್‌ದೇವ್ ವಿರುದ್ಧ ಛತ್ತೀಸ್‌ಗಢದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದರು.
ಬಾಬಾ ರಾಮದೇವ್ ವಿರುದ್ಧ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ದುರು ದಾಖಲಿಸಿದ್ದೇವೆ. ಐಎಂಎ ಮತ್ತು ಛತ್ತೀಸ್‌ಗಢ ಆಸ್ಪತ್ರೆ ಮಂಡಳಿಯ ಅಧ್ಯಕ್ಷ ಡಾ. ರಾಕೇಶ್ ಗುಪ್ತಾ ನೀಡಿದ ದೂರಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ” ಎಂದು ರಾಯಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಿಎಸ್‌ಪಿ ನಾಸರ್ ಸಿದ್ದಿಕಿ ತಿಳಿಸಿದ್ದರು.
ಎಫ್‌ಐಆರ್ ಅನ್ನು ಐಪಿಸಿ ಸೆಕ್ಷನ್ಸ್ 186 (ಸಾರ್ವಜನಿಕ ಸೇವೆಯಲ್ಲಿರುವುವರನ್ನು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸ್ವಯಂಪ್ರೇರಣೆಯಿಂದ ತಡೆಯುವುದು), 188 (ಅಧಿಕೃತವಾಗಿ ಜಾರಿಗೆ ಬಂದಿರುವ ನಿಯಮಗಳನ್ನು ಪಾಲಿಸಲು ನಿರಾಕರಿಸುವುದು), 270 (ಜೀವಕ್ಕೆ ಅಪಾಯಕಾರಿಯಾಗಿರುವ ಸೋಂಕನ್ನು ಹರಡುವ ಸಾಧ್ಯತೆ ), 504 (ಶಾಂತಿಯನ್ನು ಉಲ್ಲಂಘಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು) ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಬಾಬಾ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಛತ್ತೀಸ್‌ಗಢ ಪೊಲೀಸರು


