Homeಅಂತರಾಷ್ಟ್ರೀಯವಜ್ರದ ಹುಡುಕಾಟಕ್ಕೆ ನೆರೆದ ಸಾವಿರಾರು ಜನರು: ದಕ್ಷಿಣ ಆಫ್ರಿಕಾದ ಹಳ್ಳಿಯಲ್ಲಿ ಜನಸಾಗರ

ವಜ್ರದ ಹುಡುಕಾಟಕ್ಕೆ ನೆರೆದ ಸಾವಿರಾರು ಜನರು: ದಕ್ಷಿಣ ಆಫ್ರಿಕಾದ ಹಳ್ಳಿಯಲ್ಲಿ ಜನಸಾಗರ

- Advertisement -
- Advertisement -

ಚಿನ್ನ, ವಜ್ರಗಳು ಸಿಗುವುದಾದರೆ ಜನರು ಎಷ್ಟು ದೂರ ಬೇಕಾದರೂ ಹುಡುಕಾಟವನ್ನು ನಡೆಸುತ್ತಾರೆ. ನಿಧಿ ಶೋಧವನ್ನು ನಡೆಸುತ್ತಾರೆ. ನೆಲದಾಳವನ್ನು ಅಗೆಯುತ್ತಾರೆ. ಎಲ್ಲೊ ಕೆಲವರು ರಾತ್ರಿ ಹೊತ್ತು ನಿಧಿ ಶೋಧವನ್ನು ನಡೆಸಿರುವ, ನೆಲವನ್ನು ಅಗೆದಿರುವ, ದೇವಸ್ಥಾನಗಳ ಸ್ಥಳವನ್ನು ಒಡೆದಿರುವ ಘಟನೆಗಳು ಇದುವರೆಗೆ ನಡೆಯುತ್ತಿದ್ದವು. ಸಾವಿರಾರು ಜನರು ವಜ್ರಗಳಿಗಾಗಿ ಒಮ್ಮೆಲೆ ಮುಗಿಬಿದ್ದು ನೆಲವನ್ನು ಅಗೆಯುತ್ತಿರುವ ಘಟನೆಗಳು ಇದುವರೆಗೆ ವರದಿಯಾಗಿಲ್ಲ. ಈಗ ನೂರಾರು ಜನರು ತಮ್ಮಷ್ಟಕ್ಕೆ ಅನೇಕ ದಿನಗಳಿಂದ ನಿಧಿಗಾಗಿ ನೆಲವನ್ನು ಅಗೆಯುತ್ತಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ದಕ್ಷಿಣ ಆಫ್ರಿಕಾ ಜಗತ್ತಿನಲ್ಲಿಯೇ ಅತಿಹೆಚ್ಚು ವಜ್ರದ ಗಣಿಯನ್ನು ಹೊಂದಿರುವ ದೇಶ. ಜಗತ್ತಿನ ಮುಕ್ಕಾಲು ಪಾಲು ವಜ್ರಗಳು ದಕ್ಷಿಣ ಆಫ್ರಿಕಾದಿಂದಲೇ ರಫ್ತಾಗುತ್ತವೆ. ದಕ್ಷಿಣ ಆಫ್ರಿಕಾದ ಹತ್ತಾರು ವಜ್ರದ ಗಣಿಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಜನರು ಹೊಸ ಹೊಸ ಪ್ರದೇಶಗಳಲ್ಲಿ ವಜ್ರದ ನಿಕ್ಷೇಪ ಸಿಗುವ ನಿರೀಕ್ಷೆಯಿಂದ ನೆಲವನ್ನು ಅಗೆಯುವ ಕೆಲಸವನ್ನೂ ಮಾಡುತ್ತಾರೆ. ಆದರೆ ದಕ್ಷಿಣ ಆಫ್ರಿಕಾದ ಪ್ರಾಂತ್ಯದ ಕ್ವಾ ಜುಲು ನಟಾಲ್‌ನ ಒಂದು ಸಣ್ಣ ಹಳ್ಳಿಯಲ್ಲಿ ಕಳೆದ ಒಂದು ತಿಂಗಳಿಂದ ವಿಚಿತ್ರ ಘಟನೆಗಳು ನಡೆಯತೊಡಗಿವೆ.

ಕೆಲವು ದಿನಗಳ ಹಿಂದೆ ನಟಾಲ್‌ನ ಸಣ್ಣ ಹಳ್ಳಿಯಲ್ಲಿ ದಾರಿ ಹೋಕರೊಬ್ಬರಿಗೆ ವಜ್ರದ ತುಂಡೊಂದು ಸಿಕ್ಕಿತು ಎಂಬ ಸುದ್ದಿ ಹರಿದಾಡತೊಡಗಿತ್ತು. ವಜ್ರ ಸಿಕ್ಕಿದ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆಯೂ ಹರಡಿ ಮಾರನೇ ದಿನದಿಂದ ಸಾವಿರಾರು ಜನರು ನಟಾಲ್ ಹಳ್ಳಿಗೆ ಬಂದು ನೆಲ ಅಗೆಯಲು ಪ್ರಾರಂಭಿಸಿದ್ದಾರೆ. ವಜ್ರದ ಹುಡುಕಾಟದಲ್ಲಿ ತೊಡಗಿದ ಕೆಲವರು ತಮಗೆ ವಜ್ರ ಸಿಕ್ಕಿದೆ ಎಂದು ಹೇಳಿದ್ದಾರೆ.

ಇನ್ನು ಕೆಲವರು ನಮ್ಮಲ್ಲಿ ತುಂಬಾ ಬಡತನವಿದೆ. ಒಳ್ಳೆಯ ಆಹಾರ, ಒಳ್ಳೆಯ ಬಟ್ಟೆ, ಒಳ್ಳೆಯ ಮನೆ, ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ. ಒಂದು ವೇಳೆ ವಜ್ರ ದೊರೆತರೆ ನಮಗೆ ಒಳ್ಳೆಯ ಜೀವನ ಸಿಗಬಹುದು ಎಂಬ ನಿರೀಕ್ಷೆ ಇದೆ. ಹಾಗಾಗಿ ಇಲ್ಲಿ ವಜ್ರದ ಶೋಧಕ್ಕೆ ತೊಡಗಿದ್ದೇವೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಸರ್ಕಾರ ನಟಾಲು ಗ್ರಾಮದಲ್ಲಿ ವಜ್ರದ ನಿಕ್ಷೇಪವಿರುವುದನ್ನು ಇದುವರೆಗೆ ಖಚಿತ ಪಡಿಸಿಲ್ಲ. ಸರ್ಕಾರದ ಭೂಗೋಳ ಶಾಸ್ತ್ರಜ್ಞರು ನಟಾಲು ಹಳ್ಲಿಯಲ್ಲಿ ವಜ್ರ ಇರುವ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಕಾನೂನಿನ ಪ್ರಕಾರ ಜನರು ವಜ್ರವನ್ನು ನೆಲದಾಳದಿಂದ ತೆಗೆಯುವಂತಿಲ್ಲ. ನೆಲದಡಿಯ ಖನಿಜಗಳು ಸರ್ಕಾರಕ್ಕೆ ಸೇರಿದ್ದಾಗಿದೆ.

ಕಾನೂನು ಏನೇ ಇರಲಿ ನಟಾಲು ಗ್ರಾಮಕ್ಕೆ ವಜ್ರ ಹುಡುಕಲು ಬರುವವರ ಸಂಖ್ಯೆ ದಿನದಿಂದ ಹೆಚ್ಚುತ್ತಲೇ ಇದೆ. ಜನರು ವಜ್ರದಿಂದ ತಮ್ಮ ಜೀವನ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ಅದೃಷ್ಟ ಪರೀಕ್ಷೆಯಲ್ಲಿ ತೊಡಗುತ್ತಲೆ ಇದ್ದಾರೆ.


ಇದನ್ನೂ ಓದಿ : ಸರ್ಕಾರದ ಸಹಾಯಧನ ಕೇಂದ್ರ ಸರ್ಕಾರದ ಸಾಲಕ್ಕೆ ವಜಾ: ಬೀದಿ ಬದಿ ವ್ಯಾಪಾರಿಗಳನ್ನು ತಲುಪದ ಸರ್ಕಾರದ ನೆರವು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...