ಒಂಟಿ ಮಹಿಳೆಯನ್ನು ‘ಕುಟುಂಬ’ ಎಂದು ಗುರುತಿಸಿ ರೇಷನ್ ಕಾರ್ಡ್‌ ನೀಡಲಿರುವ ತಮಿಳುನಾಡು ಸರ್ಕಾರ | Naanu Gauri

ಮೋದಿ ಸರ್ಕಾರವನ್ನು “ಕೇಂದ್ರ ಸರ್ಕಾರ” ಎಂದು ಉಲ್ಲೇಖಿಸುವುದರ ಬದಲು “ಒಕ್ಕೂಟ ಸರ್ಕಾರ” ಎಂದೇ ತಮಿಳುನಾಡು ಸರ್ಕಾರ ಉಲ್ಲೇಖಿಸುತ್ತದೆ ಎಂದು ಮುಖ್ಯಮಂತ್ರಿ ಬುಧವಾರ ಸ್ಪಷ್ಟಪಡಿಸಿದ್ದಾರೆ. 1957 ರಲ್ಲಿ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ “ಇಂಡಿಯನ್ ಯೂನಿಯನ್” ಎಂಬ ಪದವನ್ನು ಬಳಸಿದ್ದನ್ನು ಅವರು ವಿಧಾನಸಭೆಯಲ್ಲಿ ನೆನಪಿಸಿಕೊಂಡಿದ್ದಾರೆ.

ಸಂವಿಧಾನ ಕೂಡಾ ಭಾರತವನ್ನು “ರಾಜ್ಯಗಳ ಒಕ್ಕೂಟ” ಎಂದು ಬಣ್ಣಿಸಿದೆ. ನಾವು ‘‘ಒಕ್ಕೂಟ’’ ಎಂದು ಬಳಸಿದ್ದೇವೆ ಮತ್ತು ಹಾಗೆ ಬಳಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಸ್ಟಾಲಿನ್ ಅವರು ಅಧಿಕಾರ ವಹಿಸಿದಾಗಿನಿಂದ ಮೋದಿ ಸರ್ಕಾರವನ್ನು “ಕೇಂದ್ರ ಸರ್ಕಾರ” ಎಂದು ಕರೆಯುವುದರ ಬದಲಿಗೆ “ಒಕ್ಕೂಟ ಸರ್ಕಾರ” ಎಂಬ ಪದವನ್ನು ಬಳಸಲು ಪ್ರಾರಂಭಿಸಿದ್ದರು.

ಇದನ್ನೂ ಓದಿ: ಮೋದಿ ಸರ್ಕಾರವನ್ನು ‘ಕೇಂದ್ರ ಸರ್ಕಾರ’ ಎಂದು ಉಲ್ಲೇಖಿಸುವುದನ್ನು ಕೈಬಿಟ್ಟ ತಮಿಳುನಾಡು!

ವಿಧಾನಸಭೆಯಲ್ಲಿನ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು “ಒಕ್ಕೂಟ” ಎಂಬ ಪದವನ್ನು ಬಳಸುವುದರ ಹಿಂದೆ ಏನಾದರೂ ಉದ್ದೇಶವಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಮುಖ್ಯಮಂತ್ರಿಯಿಂದ ಪ್ರತಿಕ್ರಿಯೆ ಬಯಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, “ಈ ಪದ ಬಳಕೆಯ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಏಕೆಂದರೆ ರಾಜಾಜಿ(ಸಿ. ರಾಜಗೋಪಾಲಾಚಾರಿ) ಅವರೆ ಅಧಿಕಾರದ ಕೇಂದ್ರೀಕರಣದ ವಿರುದ್ಧ ಮತ್ತು ನಿಜವಾದ ಫೆಡರಲಿಸಂ ಪರವಾಗಿ ಮಾತನಾಡಿದ್ದರು. ದಿವಂಗತ ಮಾ.ಪೋ.ಸಿ.(ಶಿವಜ್ಞನಂ) ಸಮಷ್ಠಿ ಎಂಬ ಪದವನ್ನು ಬಳಸಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಒಕ್ಕೂಟ” ಎಂಬ ಪದದ ಬಳಕೆಯನ್ನು “ಸಾಮಾಜಿಕ ಅಪರಾಧ” ಎಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. “ನಾವು ಸಂವಿಧಾನದಲ್ಲಿರುವುದನ್ನು ಮಾತ್ರ ಬಳಸುತ್ತಿದ್ದೇವೆ. ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ” ಎಂದು ಅವರು ತಿಳಿಸಿದ್ದಾರೆ.

ಭಾರತವನ್ನು ಅದರ ರಾಜ್ಯಗಳು ರಚಿಸಿವೆ ಎಂದು ಅವರು ಹೇಳಿದ್ದಾರೆ. “ನಮ್ಮ ನಾಯಕರಾದ ಅಣ್ಣಾ (ಸಿ.ಎನ್. ಅನ್ನದುರೈ) ಮತ್ತು ಕಲೈನಾರ್ (ಎಂ. ಕರುಣಾನಿಧಿ) ಅವರು ಬಳಸದ ಪದವನ್ನು ಕೆಲವರು ಬಳಸುತ್ತಿದ್ದಾರೆಂದು ಕೆಲವರು ಆರೋಪಿಸುತ್ತಾರೆ. ಆದರೆ ಡಿಎಂಕೆ 1957 ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಂಡಿಯನ್ ಯೂನಿಯನ್ ಎಂಬ ಪದವನ್ನು ಬಳಸಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 11 ವರ್ಷಕ್ಕೆ ಮನೆ ಬಿಟ್ಟ, ಪದ್ಮಶ್ರಿ ಪಡೆದ, ತಮಿಳುನಾಡು ಸರ್ಕಾರದ ಭಾಗವಾದ ತೃತೀಯ ಲಿಂಗಿ ಭರತನಾಟ್ಯ ಕಲಾವಿದೆ ನರ್ತಕಿ ನಟರಾಜನ್

1 COMMENT

LEAVE A REPLY

Please enter your comment!
Please enter your name here