Homeಮುಖಪುಟಬಾಬರಿ ಮಸೀದಿ ಧ್ವಂಸ: ತೀರ್ಪು ನೀಡಿದ ನ್ಯಾಯಾಧೀಶರಿಗೆ ಭದ್ರತೆ ನಿರಾಕರಿಸಿದ ಸುಪ್ರೀಂ!

ಬಾಬರಿ ಮಸೀದಿ ಧ್ವಂಸ: ತೀರ್ಪು ನೀಡಿದ ನ್ಯಾಯಾಧೀಶರಿಗೆ ಭದ್ರತೆ ನಿರಾಕರಿಸಿದ ಸುಪ್ರೀಂ!

ಬಿಜೆಪಿ ಮತ್ತು ವಿಶ್ವಹಿಂದೂ ಪರಿಷತ್‌ನ ಸದಸ್ಯರು ದೋಷಮುಕ್ತರು ಎಂದು 32 ಆರೋಪಿಗಳ ಮೆಲಿನ ಪ್ರಕರಣವನ್ನು ಖಲಾಸೆಗೊಳಿಸಿ ಸೆಪ್ಟಂಬರ್ 30 ರಂದು ತೀರ್ಪು ನೀಡಿದ್ದರು

- Advertisement -
- Advertisement -

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತೀರ್ಪು ನೀಡಿದ್ದ ಲಖನೌ ವಿಶೇಷ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರಿಗೆ ಭದ್ರತೆ ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮತ್ತು ವಿಶ್ವಹಿಂದೂ ಪರಿಷತ್‌ನ ಸದಸ್ಯರು ದೋಷಮುಕ್ತರು ಎಂದು 32 ಆರೋಪಿಗಳ ಮೆಲಿನ ಪ್ರಕರಣವನ್ನು ಖಲಾಸೆಗೊಳಿಸಿ ಸೆಪ್ಟಂಬರ್ 30 ರಂದು ತೀರ್ಪು ನೀಡಿದ್ದರು. ಪ್ರಕರಣದ 32 ಆರೋಪಿಗಳೂ ದೋಷಮುಕ್ತರು ಎಂದಿರುವ ನ್ಯಾಯಾಲಯ, “ಈ ದ್ವಂಸ ಪೂರ್ವನಿರ್ಧರಿತವಲ್ಲ” ಎಂದು ತೀರ್ಪು ನೀಡಿತ್ತು.

ಪ್ರಕರಣದ ಸೂಕ್ಷ್ಮತೆಯ ಆಧಾರದ ಮೇಲೆ ಎಸ್‌.ಕೆ.ಯಾದವ್ ತಮ್ಮ ವೈಯಕ್ತಿಕ ಭದ್ರತೆಯನ್ನು ವಿಸ್ತರಿಸಲು ಕೋರಿದ್ದರು. ಇಂದು ಬೆಳಿಗ್ಗೆ ಉನ್ನತ ನ್ಯಾಯಾಲಯವು, “ಸೆಪ್ಟೆಂಬರ್ 30 ರ ಪತ್ರವನ್ನು ಅವಲೋಕಿಸಿದ ನಂತರ, ಭದ್ರತೆ ಮುಂದುವರಿಸುವುದು ಅಗತ್ಯವೆಂದು ನಾವು ಪರಿಗಣಿಸುವುದಿಲ್ಲ” ಎಂದು ಹೇಳಿದೆ.

ಇದನ್ನೂ ಓದಿ: ಡಿಸೆಂಬರ್‌ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು: ತೀರ್ಪು ವಿರುದ್ದ ಟ್ವಿಟ್ಟರ್‌‌ನಲ್ಲಿ ಆಕ್ರೋಶ

ವಿಶೇಷ ನ್ಯಾಯಾಲಯವು 2 ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಂಡಿತ್ತು. ಮೊದಲನೆಯದ್ದು, 197/1992, ಮಸೀದಿಯನ್ನು ಕೆಡವಿದ್ದ ಅನಾಮಧೇಯ ಕರಸೇವಕರ ವಿರುದ್ಧ ಮತ್ತು ಎರಡನೆಯದು, 198/1992, ಮಸೀದಿ ಕೆಡವುವಿಕೆಗೆ ಪ್ರಚೋದನೆ ನೀಡಿದ್ದಕ್ಕಾಗಿ 8 ಜನ ಬಿಜೆಪಿ ಮುಖಂಡರ (ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್, ಲಲ್ಲು ಸಿಂಗ್, ಬಿಬಿ ಶರಣ್ ಸಿಂಗ್) ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಈ ಆರೋಪಿಗಳ ಮೇಲೆ 1992 ರ ಡಿಸೆಂಬರ್‌ನಲ್ಲಿ 15 ನೇ ಶತಮಾನದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲು ಕಾರಣವಾದ ಪಿತೂರಿಯ ಆರೋಪ ಇದೆ. ಈ ಪ್ರಕರಣದಲ್ಲಿ ದೇಶಾದ್ಯಂತ ಗಲಭೆಗಳು ಸಂಭವಿಸಿ ಸುಮಾರು 3,000 ಜನರು ಸಾವನ್ನಪ್ಪಿದ್ದರು.

ಏಪ್ರಿಲ್ 2017 ರಲ್ಲಿ, ಉನ್ನತ ನ್ಯಾಯಾಲಯವು, ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಎರಡು ವರ್ಷಗಳಲ್ಲಿ ಮಸೀದಿ ದ್ವಂಸ ಪ್ರಕರಣದ ವಿಚಾರಣೆಯನ್ನು ನಡೆಸಿ ಪೂರ್ಣಗೊಳಿಸಲು ಕೇಳಿಕೊಂಡಿತ್ತು. ಅದರ ನಂತರ ಹಲವು ಬಾರಿ ಗಡುವು ವಿಸ್ತರಿಸಲಾಗಿತ್ತು. ಮತ್ತೆ ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ್ ಹೆಚ್ಚಿನ ಸಮಯವನ್ನು ಕೇಳಿದಾಗ, ಸೆಪ್ಟೆಂಬರ್ 30 ರೊಳಗೆ ತನ್ನ ತೀರ್ಪನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಸೆಪ್ಟಂಬರ್ 30ರಂದು ತೀರ್ಪು ಹೊರಬಿದ್ದ ನಂತರ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.


ಇದನ್ನೂ ಓದಿ: ಬಾಬ್ರಿ ಮಸೀದಿ ಕೆಡವುದರ ಹಿಂದೆ ಯಾರ ಸಂಚು ಇಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಧೀಶರು ಕೊಟ್ಟ10 ಕಾರಣಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...