Homeಕರ್ನಾಟಕಕುಮಾರಸ್ವಾಮಿ 10 ಕೋಟಿ ಹಣ ಪಡೆದ ಆರೋಪ: ಬಹಿರಂಗ ಚರ್ಚೆಗೆ ಆಹ್ವಾನಿಸಿದ ಜಮೀರ್ ಅಹ್ಮದ್

ಕುಮಾರಸ್ವಾಮಿ 10 ಕೋಟಿ ಹಣ ಪಡೆದ ಆರೋಪ: ಬಹಿರಂಗ ಚರ್ಚೆಗೆ ಆಹ್ವಾನಿಸಿದ ಜಮೀರ್ ಅಹ್ಮದ್

ಮುಸ್ಲಿಂ ಸಮುದಾಯದ ಮೇಲೆ ನಿಜವಾಗಿ ಪ್ರೀತಿ ಇದ್ದಿದ್ದರೆ ರಾಮನಗರದಲ್ಲೋ, ಮಂಡ್ಯದಲ್ಲೋ, ಹಾಸನದಲ್ಲೋ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ- ಜಮೀರ್‌ ಅಹ್ಮದ್ ಖಾನ್

- Advertisement -
- Advertisement -

ರಾಜ್ಯದಲ್ಲಿ ಉಪಚುನಾವಣಾ ಕಾವು ರಂಗೇರುತ್ತಿದೆ. ಇದೆ ಜೊತೆಗೆ ಬಸವಕಲ್ಯಾಣ ಉಪಚುನಾವಣೆಯ ಮುಸ್ಲಿಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಡುವಿನ ಟ್ವಿಟ್ಟರ್‌ ಸಮರ ತಾರಕಕ್ಕೆ ಏರಿದೆ.

ಬಸವಕಲ್ಯಾಣದಲ್ಲಿ ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಹಾಕಲು ಎಚ್.ಡಿ ಕುಮಾರಸ್ವಾಮಿಯವರು ಬಿಜೆಪಿಯಿಂದ 10 ಕೋಟಿ ಹಣ ಪಡೆದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದರು. ಇದಕ್ಕೆ ಬುಧವಾರ ಟ್ವಿಟರ್‌ನಲ್ಲಿ ಕುಮಾರಸ್ವಾಮಿ, ಜಮೀರ್ ಅಹ್ಮದ್‌ ಖಾನ್‌ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದರು.

ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಜಮೀರ್‌ ಅಹ್ಮದ್ ಖಾನ್, “ಹಿಂದೆ ಯಾರು ಯಾರಿಗೆ ಎಷ್ಟು ಸಹಾಯ ಮಾಡಿದ್ದಾರೆ? ಎಂದು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನೀವು ಸಿದ್ಧರಿದ್ದೀರಾ ಬ್ರದರ್?” ಎನ್ನುವ ಮೂಲಕ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಹಾಕಲು 10 ಕೋಟಿ ಹಣ ಆರೋಪ: ಜಮೀರ್ ಅಹ್ಮದ್‌ಗೆ ಪ್ರಶ್ನೆಗಳ ಸುರಿಮಳೆಗೈದ ಕುಮಾರಸ್ವಾಮಿ

“2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಎಚ್.ಡಿ.ಕುಮಾರಸ್ವಾಮಿ, ಅಡ್ಜಸ್ಟ್‌ಮೆಂಟ್ ರಾಜಕೀಯದ ಮೂಲಕ ಇವತ್ತು ತುಂಬಿದ ಕೊಡವಾಗಿದ್ದಾರೆ. ಹಾಗಾಗಿ ದುಡ್ಡಿನ ವಿಚಾರ ಮಾತಾಡ್ತಾರೆ. ಹಿಂದೆ ಯಾರು ಯಾರಿಗೆ ಎಷ್ಟು ಸಹಾಯ ಮಾಡಿದ್ದಾರೆ? ಎಂದು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನೀವು ಸಿದ್ಧರಿದ್ದೀರಾ ಬ್ರದರ್?” ಎಂದು ಪ್ರಶ್ನಿಸಿದ್ದಾರೆ.

2005ರಲ್ಲಿ SM ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್‌ ಬಿಜೆಪಿಯಿಂದ ದುಡ್ಡು ತಂದಿತ್ತೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು ಇದಕ್ಕೆ ಉತ್ತರಿಸಿಉವ ಜಮೀರ್‌ ಅಹ್ಮದ್ ಖಾನ್, “ಚಾಮರಾಜಪೇಟೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿ, ಗಲ್ಲಿಗಲ್ಲಿ ಸುತ್ತಿ ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದ್ದವರು ದೇವೇಗೌಡರು ಮತ್ತು ಸಿದ್ದರಾಮಯ್ಯನವರು. ಆಗ ಕುಮಾರಸ್ವಾಮಿ ಅಂದರೆ ಯಾರು ಅಂತಲೇ ಜನಕ್ಕೆ ಗೊತ್ತಿರಲಿಲ್ಲ. ನನ್ನ ಕ್ಷೇತ್ರದಲ್ಲಿ ಎಷ್ಟು ವಾರ್ಡ್‌ಗಳಿವೆ ಎಂದು ಈಗಲಾದರೂ ನಿಮಗೆ ಗೊತ್ತಾ ಎಚ್.ಡಿ.ಕುಮಾರಸ್ವಾಮಿ ಬ್ರದರ್?” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ನಿಮಗೆ ಅಧಿಕಾರ ಸಿಕ್ಕಿದ್ದು ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ: ಸಿಎಂ v/s ಈಶ್ವರಪ್ಪ ಬಗ್ಗೆ ಕಾಂಗ್ರೆಸ್

“ಜಮೀರ್ ಎಂದೂ ಕೊಟ್ಟ ಹಣಕ್ಕೆ ಲೆಕ್ಕ ಇಟ್ಟವನಲ್ಲ ಆದರೆ ಪಡ್ಕೊಂಡವರು ಮರೆಯಬಾರದಲ್ವಾ ಬ್ರದರ್ ! 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಜೆಡಿ(ಎಸ್) ಅಭ್ಯರ್ಥಿ ಯಾರಿಂದ ಎಷ್ಟು ಪಡ್ಕೊಂಡಿದ್ದರು ಎನ್ನುವುದನ್ನು ಒಳ್ಳೆಯ ಮೂಡಿನಲ್ಲಿದ್ದಾಗ ನೆನಪು ಮಾಡಿಕೊಳ್ಳಿ ಬ್ರದರ್” ಎಂದು ಕುಮಾರಸ್ವಾಮಿ ಅವರನ್ನು ಕಿಚಾಯಿಸಿದ್ದಾರೆ.

ಜೊತೆಗೆ “ನನ್ನನ್ನು ಗೆಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಜಾತ್ಯತೀತ ನಾಯಕರೇ, ಜಮೀರ್ ಅಹ್ಮದ್ ಜೆಡಿ(ಎಸ್) ಪಕ್ಷದಿಂದ ಹೊರ ಬಂದ ಮೇಲೆ ಎಷ್ಟು ಮುಸ್ಲಿಂ ನಾಯಕರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದೀರಿ? ಇಷ್ಟು ಹೇಳಿಬಿಡಿ ಸಾಕು” ಎಂದು ಸವಾಲು ಹಾಕಿದ್ದಾರೆ.

ತಮಗೆ ಮುಸ್ಲಿಂ ಸಮುದಾಯದ ಮೇಲೆ ನಿಜವಾಗಿ ಪ್ರೀತಿ ಇದ್ದಿದ್ದರೆ ರಾಮನಗರದಲ್ಲೋ, ಮಂಡ್ಯದಲ್ಲೋ, ಹಾಸನದಲ್ಲೋ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಬ್ರದರ್? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಉಪಚುನಾವಣಾ ಕಣ ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಬ್ಯುಸಿಯಾಗಿದ್ದರೇ, ಇತ್ತ ಕುಮಾರಸ್ವಾಮಿ ಮತ್ತು ಶಾಸಕ ಜಮೀರ್‌ ಅಹ್ಮದ್ ಖಾನ್ ಹಣದ ವಿಷಯ ಮತ್ತು ಮುಸ್ಲಿಂ ಅಬ್ಯರ್ಥಿ ವಿಚಾರವಾಗಿ ಟ್ವಿಟರ್‌ ಸಮರ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಮುಖ್ಯಮಂತ್ರಿ ವಿರುದ್ದವೇ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...