- Advertisement -
- Advertisement -
ಬೆಳಗಾವಿ ಲೋಕಸಭಾ ಉಪಚುನಾವಣೆಯ ಫಲಿತಾಂಶ ತೀವ್ರ ಕುತೂಹಲ ಹುಟ್ಟಿಸಿದೆ. ಬಿಜೆಪಿಯ ಮಂಗಳಾ ಅಂಗಡಿ ಮತ್ತು ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿದ್ದು ಇಬ್ಬರು ಪಡೆದ ಮತಗಳ ನಡುವಿನ ಅಂತರ 9 ಸಾವಿರಕ್ಕಿಳಿದಿದೆ.
48ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿಯ ಮಂಗಳಾ ಅಂಗಡಿ 2,36,872 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 2,46,468 ಮತಗಳನ್ನು ಪಡೆದಿದ್ದಾರೆ. ಅಲ್ಲಿಗ ಅಂತರ 8,426 ಮತಗಳಿಗೆ ಇಳಿದಿದ್ದು ರೋಚಕ ಫಿನಿಶ್ ಕಾಣುವ ಸಾಧ್ಯತೆ ಎದುರಾಗಿದೆ.
ಕೆಲ ಕ್ಷಣದ ಹಿಂದೆ ಮಂಗಳಾ ಅಂಗಡಿಯವರು 15 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ನಂತರ ಕುಸಿದಿದ್ದು ಈಗ ಸತೀಶ್ ಜಾರಕಿಹೊಳಿ 9,596 ಮತಗಳ ಮುನ್ನಡೆ ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: 187 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಟಿಎಂಸಿ – ಗಮನಾರ್ಹ ಸಾಧನೆ ಮಾಡಿದ ಬಿಜೆಪಿ



Belagaviya latest position tilisi.