ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ ಎಂದ ಮಮತಾ ಬ್ಯಾನರ್ಜಿ
PC: PTI

ದೇಶಾದ್ಯಂತ ತೀವ್ರ ಕೂತುಹಲ ಹುಟ್ಟಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗಿದ್ದು ಸದ್ಯದ ವರದಿ ಪ್ರಕಾರ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಸಿಂ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆಯತ್ತ ದಾಪುಗಾಲಿಟ್ಟಿದೆ. ಈ ಬಾರಿ ಅಧಿಕಾರಕ್ಕೆ ಏರುತ್ತೇವೆ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದ್ದ ಬಿಜೆಪಿ ಟಿಎಂಸಿಯ ಅರ್ಧದಷ್ಟು ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಲಾಗದೆ, 88 ಸ್ಥಾನಗಳಿಗೆ ಕುಸಿದಿದೆ.

294 ಕ್ಷೇತ್ರಗಳ ಪಶ್ಚಿಮ ಬಂಗಾಳದಲ್ಲಿ ಸರಳ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಸದ್ಯದ ಮತ ಎಣಿಕೆ ಪ್ರಕಾರ ಟಿಎಂಸಿ 202 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಸುರಕ್ಷಿತವಾಗಿದೆ. ಗೆದ್ದೆ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿ ಬಿಜೆಪಿಗೆ ತೀವ್ರ ನಿರಾಶೆಯಾಗಿದೆ. ಆದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 03 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ.

ಟಿಎಂಸಿ ಉತ್ತಮ ಸಾಧನೆ ಮಾಡಿದರೂ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ 5 ಸಾವಿರ ಮತಗಳ ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದರು. ಆದರೆ ಸದ್ಯದ ಮತ ಎಣಿಕೆ ಪ್ರಕಾರ ನೇರಾನೇರ ಪೈಪೋಟಿ ಏರ್ಪಟ್ಟಿದೆ ಎಂದು ಚುನಾವನಾ ಆಯೋಗದ ವೆಬ್‌ಸೈಟ್ ತಿಳಿಸಿದೆ.


ಇದನ್ನೂ ಓದಿ: ಕೇರಳ: ಎಡಪಕ್ಷಗಳ ಆಡಳಿತಕ್ಕೆ ಮಣೆ ಹಾಕಿದ ಜನ – ಮತ್ತೊಮ್ಮೆ ಅಧಿಕಾರದತ್ತ ಎಲ್‌ಡಿಎಫ್‌

LEAVE A REPLY

Please enter your comment!
Please enter your name here