ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಮುಂದುವರೆದಿದ್ದು, ಮೂರು ವರ್ಷದ ಹಿಂದೆ ಕಟ್ಟಲಾಗಿದ್ದ ಪೊಲೀಸ್ ಕ್ವಾರ್ಟರ್ಸ್ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದಿಂದ 32 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಬಿನ್ನಿ ಮಿಲ್ಸ್ ಬಳಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಈಗ ನಗರದ ನಾಗರಭಾವಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪೊಲೀಸ್ ಕ್ವಾರ್ಟರ್ಸ್‌ಗೆ ಸ್ಥಳಾಂತರಿಸಲಾಗಿದೆ.
ಬಿನ್ನಿಪೇಟೆ ಬಳಿ ಇರುವ ಪೊಲೀಸ್ ವಸತಿ ಸಮುಚ್ಛಯದ ಬಿ ಬ್ಲಾಕ್ ಕಟ್ಟಡ ತನ್ನ ಬಲಭಾಗಕ್ಕೆ ವಾಲಿಕೊಂಡಿದೆ. ಕಳೆದ ಮೂರು ವಾರಗಳಲ್ಲಿ, ಬೆಂಗಳೂರಿನಲ್ಲಿ ಮೂರು ಕಟ್ಟಡಗಳು ಕುಸಿದಿವೆ. ಸಾಲು ಸಾಲು ಕಟ್ಟಡಗಳು ಕುಸಿತ ಕಾಣುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರು: ಪೌರಕಾರ್ಮಿಕರ ಘನತೆಯ ಬದುಕು, ಗೌರವ, ವಸತಿ, ಶಿಕ್ಷಣಕ್ಕಾಗಿ 15 ದಿನಗಳ ಜಾಥಾ
#JustIn: An 8-storeyed police quarters in #Bengaluru has tilted by 1.5 feet due to a wide crack.spotted a few month ago, the crack has now developed into wide gap forcing the structure to tilt.@DeccanHerald video:@janardhanbk.#Building #Karnataka @PMOIndia @BSBommai @DgpKarnataka pic.twitter.com/l9flDSW7tl
— Niranjan Kaggere (@nkaggere) October 16, 2021
ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಕಟ್ಟಡಗಳ ಕುಸಿತಕ್ಕೆ ಒಂದು ಕಾರಣ ಎನ್ನಲಾಗಿದೆ. ಈ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಬೆಂಗಳೂರಿನಲ್ಲಿ 155 ಮಿ.ಮೀ.ಗಿಂತ ಹೆಚ್ಚು ಮಳೆ ದಾಖಲಾಗಿದೆ.
ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸುವ ಸಮೀಕ್ಷೆಯು ಎರಡು ವರ್ಷಗಳಿಂದ ನಡೆಯುತ್ತಿದೆ. ಸೆಪ್ಟೆಂಬರ್ 27 ರಂದು ವಿಲ್ಸನ್ ಗಾರ್ಡನ್‌ನಲ್ಲಿ ಮೊದಲ ಕಟ್ಟಡ ಕುಸಿದ ಬಳಿಕ ಸರ್ವೇಯನ್ನು ತೀವ್ರಗೊಳಿಸಲಾಗಿದೆ.
ವಿಲ್ಸನ್ ಗಾರ್ಡನ್ ಕಟ್ಟಡ ಕುಸಿದ ಮರುದಿನ, ಡೈರಿ ವೃತ್ತದಲ್ಲಿ ಮತ್ತೊಂದು ಕಟ್ಟಡ, ಅದರ ನಂತರ ಕಸ್ತೂರಿ ನಗರದಲ್ಲಿ ಕಟ್ಟಡ ಕುಸಿತವಾಗಿತ್ತು. ಬಳಿಕ ಕಮಲಾ ನಗರದ ಕಟ್ಟಡವೊಂದು ವಾಲಿದ್ದರಿಂದ ಅದನ್ನು ನೆಲಸಮ ಮಾಡಲಾಗಿದೆ. ನಗರದಲ್ಲಿ ಸಾಲು ಸಾಲಾಗಿ ಕಟ್ಟಡಗಳು ಕುಸಿಯುತ್ತಿರುವ ಮಧ್ಯೆಯೇ ಹೊಸದಾಗಿ 404 ಶಿಥಿಲ ಕಟ್ಟಡಗಳನ್ನು ಪಾಲಿಕೆ ಗುರುತಿಸಿದೆ.
ಇದನ್ನೂ ಓದಿ: ಬೆಂಗಳೂರು: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ



155 mm 15 says?