ಕನ್ನಡದ ಖ್ಯಾತ ಚಿತ್ರನಟ ಕಿಶೋರ್ ಕುಮಾರ್ ಅವರು ಮತ್ತೆ ಪ್ರಧಾನಿ ಮೋದಿ ಹಾಗೂ ವ್ಯವಸ್ಥೆ ವಿರುದ್ಧ ಗುಡುಗಿದ್ದಾರೆ. ಈ ವಿಕೃತ ವಿಶ್ವಗುರುವನ್ನು ಹೊಡೆದೋಡಿಸಿ, ಪ್ರೀತಿಯ ಶಾಂತಿಯ ನಮ್ಮ ಭಾರತಕ್ಕೆ ಮರಳಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಗಳು, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯಗಳು ಹಾಗೂ ಈ ಆಡಳಿತ ವ್ಯವಸ್ಥೆ ವಿರುದ್ಧ ಮೇಲಿಂದ ಮೇಲೆ ಪ್ರತಿಕ್ರಿಯಿಸುವ ಕನ್ನಡದ ಸಂವೇದನಾಶೀಲ ನಟ ಕಿಶೋರ್ ಕುಮಾರ್ ಅವರು ಇದೀಗ ಮತ್ತೆ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸಿ ವಿಶ್ವಗುರು ಎಂದು ಕರೆಯಿಸಿಕೊಳ್ಳುವ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕಿಶೋರ್ ಪೋಸ್ಟ್ ಹಾಕಿದ್ದು, ”ದೇಶದಲ್ಲಿ ವಿಶ್ವಗುರುಗಳಿದ್ದಾರೆ ಎಚ್ಚರ .. ಮಣಿಪುರದಲ್ಲಿ, ಹರಿಯಾಣದಲ್ಲಿ, ಮುಂಬೈ ರೈಲಿನಲ್ಲಿ , ಟಿವಿ ಚಾನೆಲ್ಲುಗಳಲ್ಲಿ , ಪಾರ್ಲಿಮೆಂಟಿನಲ್ಲಿ , ಕಪಟ ಕ್ಯಾಪಿಟಲಿಸ್ಟುಗಳ ಡ್ರಾಯಿಂಗು ರೂಮಿನಲ್ಲಿ , ಕೋರ್ಟು ಕಚೇರಿಗಳಲ್ಲಿ , ಪೋಲೀಸು ವೇಷದಲ್ಲಿ , ಐಟಿ ಸೆಲ್ಲುಗಳಲ್ಲಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಯಲ್ಲಿ.. ದೇವರ ಹೆಸರಲ್ಲಿ, ಅಧಿಕಾರ ದಾಹದ ಹೊಲಸಲ್ಲಿ , ಮತಿಭ್ರಮಿತರಾದ ಮತಾಂಧ ವಿಶ್ವಗುರುಗಳಿದ್ದಾರೆ.. ಎಚ್ಚರ…” ಎಂದು ಬರೆದಿದ್ದಾರೆ.
View this post on Instagram
”ಇವರಿಗೆ ಜೈ ಅನ್ನದಿದ್ದರೆ, ಇವರನ್ನು ಪ್ರಶ್ನಿಸಿದರೆ … ಯೋಚಿಸಿದರೂ ಸಹ … ಗುಂಡಿಕ್ಕುತ್ತಾರೆ, ಬಡಿದು ಕೊಲ್ಲುತ್ತಾರೆ, ಮನೆ ಮಠ ಸುಡುತ್ತಾರೆ, ಕೆಡವುತ್ತಾರೆ, ಮಕ್ಕಳನ್ನು ಕಡಿದು ಕೊಲ್ಲುತ್ತಾರೆ. ಬೆತ್ತಲೆ ಮೆರವಣಿಗೆ ಮಾಡಿಸಿ ಅತ್ಯಾಚಾರ ಮಾಡುತ್ತಾರೆ, ದೇಶದ ಕೀರ್ತಿ ವಿಶ್ವದಲ್ಲೆಲ್ಲ ಹರಡುತ್ತಾರೆ.. ಎಚ್ಚರ..” ಎಂದು ಹೇಳಿದ್ದಾರೆ.
”ಬನ್ನಿ ಒಂದಾಗುವ ನಮ್ಮ ನಮ್ಮಲ್ಲಿ ಹೊಡೆದಾಡುವುದನ್ನು ಬಿಟ್ಟು ನಾವೆಲ್ಲರೂ ಒಂದಾಗಿ ಹೊಡೆದೋಡಿಸಬೇಕಿದೆ. ಈ ವಿಕೃತ ವಿಶ್ವಗುರುಗಳನು.. ಮತ್ತೆ ಮರಳಬೇಕಿದೆ ಪ್ರೀತಿಯ ಶಾಂತಿಯ ನಮ್ಮ ಭಾರತಕೆ..” ಎಂದು ಕಿಶೋರ್ ಕುಮಾರ್ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ: ಮಣಿಪುರ ವಿಚಾರಕ್ಕೆ ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ



Super sir nimma hage yellaru yochisidare nam Bharath sarvajanangada shanthi thoota anisikolluttade