Homeಅಂತರಾಷ್ಟ್ರೀಯಬೈಡನ್‌ರ ಎಚ್‌-1ಬಿ ವೀಸಾ, ಗ್ರೀನ್ ಕಾರ್ಡ್ ಯೋಜನೆಗಳು ಸಾವಿರಾರು ಭಾರತೀಯರಿಗೆ ಉಪಯೋಗವಾಗಲಿವೆ..

ಬೈಡನ್‌ರ ಎಚ್‌-1ಬಿ ವೀಸಾ, ಗ್ರೀನ್ ಕಾರ್ಡ್ ಯೋಜನೆಗಳು ಸಾವಿರಾರು ಭಾರತೀಯರಿಗೆ ಉಪಯೋಗವಾಗಲಿವೆ..

ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಭಾರತದ 5 ಲಕ್ಷ ಜನರು ಸೇರಿದಂತೆ ಸುಮಾರು 1 ಕೋಟಿ 10 ಲಕ್ಷ ವಲಸಿಗರಿಗೆ ಅಮೆರಿಕದ ಪೌರತ್ವ ನೀಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಬೈಡನ್‌ ಆಲೋಚಿಸಿದ್ದಾರೆ ಎನ್ನಲಾಗಿದೆ.

- Advertisement -

ಭಾರತೀಯ ಮೂಲದ ಮಹಿಳೆಯೊಬ್ಬರು ಮೊದಲ ಬಾರಿಗೆ ಅಮೆರಿಕಾ ಉಪಾಧ್ಯಕ್ಷರಾಗಿ ಶ್ವೇತಭವನದೊಳಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಅಂಶದ ಹೊರತಾಗಿಯೂ, ಬೈಡೆನ್-ಹ್ಯಾರಿಸ್ ಗೆಲುವು ಮತ್ತೊಂದು ಕಾರಣಕ್ಕಾಗಿ ಭಾರತೀಯರಿಗೆ, ಭಾರತೀಯ ವೃತ್ತಿಪರರಿಗೆ ಶುಭ ಸುದ್ದಿಯಾಗಿದೆ.

ಹೌದು, ಟ್ರಂಪ್ ನಿರ್ಗಮನದ ನಂತರ ಆರಂಭವಾಗಲಿರುವ ಹೊಸ ಆಡಳಿತವು ಎಚ್ -1ಬಿ ವೀಸಾ ಸೇರಿದಂತೆ, ಕೆಲವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹೊಸ ನಿಯಮದಲ್ಲಿ ವೀಸಾಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದರೆ ಸಾವಿರಾರು ಭಾರತೀಯರಿಗೆ, ಭಾರತೀಯ ವೃತ್ತಿಪರರಿಗೆ ಅನುಕೂಲವಾಗುತ್ತದೆ.

ಇದು ಸಮಗ್ರ ವಲಸೆ ಸುಧಾರಣೆಯ ಒಂದು ಭಾಗವಾಗಿದ್ದು, ಬೈಡೆನ್ ಆಡಳಿತವು ಒಂದೇ ಬಾರಿಗೆ ಅಥವಾ ಪ್ರತ್ಯೇಕವಾಗಿ ಈ ಕೆಲಸ ಮಾಡಲು ಯೋಜಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಭಾರತದ 5 ಲಕ್ಷ ಜನರು ಸೇರಿದಂತೆ ಸುಮಾರು 1 ಕೋಟಿ 10 ಲಕ್ಷ ವಲಸಿಗರಿಗೆ ಅಮೆರಿಕದ ಪೌರತ್ವ ನೀಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಬೈಡನ್‌ ಆಲೋಚಿಸಿದ್ದಾರೆ ಎನ್ನಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಉಲ್ಬಣಗೊಂಡಿರುವ ನಿರುದ್ಯೋಗದಿಂದ ಅಮೆರಿಕಾದ ಉದ್ಯೋಗಿಗಳನ್ನು ರಕ್ಷಿಸಲು ಟ್ರಂಪ್ 2020 ರ ಜೂನ್ ಅಂತ್ಯದವರೆಗೆ ಎಚ್ -1 ಬಿ ವೀಸಾಗಳ ಜೊತೆಗೆ ಇತರ ರೀತಿಯ ವಿದೇಶಿ ಕೆಲಸದ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.

ಇದನ್ನೂ ಓದಿ: ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!

ಎಚ್ -1 ಬಿ ವಲಸೆರಹಿತ ವೀಸಾ ಕಾರ್ಯಕ್ರಮದ ಮೇಲೆ ಟ್ರಂಪ್ ಆಡಳಿತವು ಅಕ್ಟೋಬರ್‌ನಲ್ಲಿ ಹೊಸ ನಿರ್ಬಂಧಗಳನ್ನು ಘೋಷಿಸಿತ್ತು. ಈ ನಿರ್ಬಂಧಗಳು ಈಗಾಗಲೇ ಅಮೆರಿಕಾದಲ್ಲಿರುವವರಿಗೆ ಅನ್ವಯಿಸುವುದಿಲ್ಲ, ಆದರೆ ಅಮೆರಿಕಾಗೆ ಹೋಗುವ ಹೊಸ ವೀಸಾ ಹೊಂದಿರುವವರಿಗೆ ಮಾತ್ರ ಅನ್ವಯಿಸುತ್ತಿತ್ತು.

ನಗರಗಳು ಮತ್ತು ಜಿಲ್ಲಾ ಪ್ರದೇಶಗಳ ಬೆಳವಣಿಗೆಯನ್ನು ಬೈಡನ್ ಆಡಳಿತ ಬೆಂಬಲಿಸುವ ಕಾರಣ, ವಲಸಿಗರಿಗೆ ಅರ್ಜಿ ಸಲ್ಲಿಸಲು ಆಡಳಿತವು ಹೊಸ ವೀಸಾ ವರ್ಗವನ್ನು ರಚಿಸಲು ಯೋಜಿಸಿದೆ ಎಂದು ತಿಳಿದು ಬಂದಿದೆ.  ಅಲ್ಲದೆ ಪ್ರತಿ ವರ್ಷ ಕನಿಷ್ಠ 95 ಸಾವಿರ ವಲಸಿಗರು ಅಮೆರಿಕದಲ್ಲಿ ಪ್ರವೇಶ ಪಡೆಯುವ ಬಗ್ಗೆಯೂ ಕಾರ್ಯಕ್ರಮ ರೂಪಿಸಲಿದ್ದಾರೆ ಎಂದು ಬೈಡನ್‌ ಪ್ರಚಾರ ಕಾರ್ಯ ತಂಡವು ಬಿಡುಗಡೆ ಮಾಡಿರುವ ನೀತಿ ನಿರೂಪಣಾ ದಾಖಲೆಗಳಲ್ಲಿ ಹೇಳಲಾಗಿದೆ.

ತಂತ್ರಜ್ಞಾನ ಆಧಾರಿತ ಕಂಪನಿಗಳು ಎಚ್ -1 ಬಿ ವೀಸಾಗಳನ್ನು ಅವಲಂಬಿಸಿವೆ. ಇದು ಭಾರತೀಯರಿಗೆ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಗ್ರೀನ್ ಕಾರ್ಡ್‌ಗಳು ಎಂದೂ ಕರೆಯಲ್ಪಡುವ ಉದ್ಯೋಗ ಆಧಾರಿತ ವೀಸಾಗಳು, ನುರಿತ ಕೆಲಸದಲ್ಲಿ ತೊಡಗಿಸಿಕೊಳ್ಳಲು ವಲಸಿಗರಿಗೆ ಅಮೆರಿಕಾದನಲ್ಲಿ ಕಾನೂನುಬದ್ಧವಾಗಿ ಶಾಶ್ವತ ನೆಲೆಯೂರಲು ಅವಕಾಶ ನೀಡುತ್ತದೆ.

ಕುಟುಂಬ ಆಧಾರಿತ ವಲಸೆಗೆ ಬೈಡನ್‌ ಆಡಳಿತ ಬೆಂಬಲ ನೀಡಲಿದೆ. ಅವಿಭಕ್ತ ಕುಟುಂಬದ ಹಿತಾಸಕ್ತಿ ಕಾಪಾಡುವುದು ಅಮೆರಿಕದ ಪ್ರಮುಖ ನೀತಿ ಆಗಿರಲಿದೆ’ ಎಂದು ದಾಖಲೆ ಹೇಳಿದೆ. ಪ್ರಸ್ತುತ, ಉದ್ಯೋಗ ಆಧಾರಿತ ವೀಸಾಗಳ ಸಂಖ್ಯೆಯನ್ನು ಪ್ರತಿವರ್ಷ 1,40,000 ಎಂದು ಗುರುತಿಸಲಾಗಿದೆ.


ಇದನ್ನೂ ಓದಿ: ಅಮೆರಿಕಾ ಚುನಾವಣೆ: ಜೋ ಬೈಡನ್‌ಗೆ ಗೆಲುವು; ಟ್ರಂಪ್‌ಗೆ ಮುಖಭಂಗ!

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares