ಲಸಿಕೆಗಾಗಿ ಆನ್‌ಲೈನ್ ನೋಂದಣಿ: ಇಂಟರ್‌ನೆಟ್ ಇಲ್ಲದವರಿಗೂ ಬದುಕುವ ಹಕ್ಕಿದೆ ಎಂದ ರಾಹುಲ್ ಗಾಂಧಿ
PC: [email protected]

ನಾಲ್ಕು ವರ್ಷದ ಹಿಂದೆ ಇದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ ಡಿಮಾನಿಟೈಜೇಷನ್‌ನಿಂದ ಭಾರತದ ಆರ್ಥಿಕತೆ ನಾಶವಾಗಿದ್ದು, ಅದರಿಂದ ಮೋದಿಯವರ ಸ್ನೇಹಿತರಾದ ಕೆಲವೇ ಕ್ರೋನಿ ಕ್ಯಾಪಿಟಲಿಸ್ಟ್‌ಗಳಿಗೆ ಅನುಕೂಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಆರೋಪಿಸಿದ್ದಾರೆ.

SpeakUpAgainstDeMoDisaster ಪ್ರಚಾರಾಭಿಯಾನದಲ್ಲಿ ಮಾತನಾಡಿದ ರಾಹುಲ್, “ಇದು ಬಡವರ ಪರವಾಗಿನ ಕಾಳಜಿಯಿಂದ ಜಾರಿಗೊಳಿಸಿದ ಯೋಜನೆಯಲ್ಲ. ಮೋದಿಯವರ ಅನಾಹುತದಿಂದ ಭಾರತದ ಆರ್ಥಿಕತೆ ಬಾಂಗ್ಲಾದೇಶಕ್ಕಿಂತ ಕೆಳಗಿಳಿಯಬೇಕಾದ ಪರಿಸ್ಥಿತಿ ಬಂದಿದೆ” ಎಂದಿದ್ದಾರೆ.

ಭಾರತದ ಆರ್ಥಿಕತೆ ಕುಸಿಯಲು ಕೋವಿಡ್ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಅದು ಸುಳ್ಳು. ಏಕೆಂದರೆ ಬಾಂಗ್ಲಾದೇಶ ಸೇರಿದಂತೆ ಇಡೀ ದೇಶದಲ್ಲಿ ಕೋವಿಡ್ ಇದೆ. ಆದರೂ ಅಲ್ಲೆಲ್ಲಿಯೂ ಭಾರತದಷ್ಟು ಆರ್ಥಿಕತೆ ಕುಸಿದಿಲ್ಲ. ಭಾರತದ ಪರಿಸ್ಥಿತಿಗೆ ನೋಟ್ ಬಂದಿ ಮತ್ತು ಜಿಎಸ್‌ಟಿ ಜಾರಿಯೇ ಕಾರಣ ಎಂದಿದ್ದಾರೆ.

ನಾಲ್ಕು ವರ್ಷದ ಹಿಂದೆ ಭಾರತದ ಆರ್ಥಿಕತೆ ಮೇಲೆ ನರೇಂದ್ರ ಮೋದಿಯವರು ಪ್ರಹಾರ ನಡೆಸಿದರು. ಅದು ಭಾರತದ ರೈತರು, ಕಾರ್ಮಿಕರು ಮತ್ತು ಸಣ್ಣ ವ್ಯಾಪರಿಗಳನ್ನು ಸಂಕಷ್ಟಕ್ಕೆ ದೂಡಿತು. ಮೋದಿಯವರು ಇದು ಕಪ್ಪು ಹಣದ ವಿರುದ್ಧ ಯುದ್ಧ ಎಂದು ಕರೆದರು. ಆದರೆ ಕಪ್ಪು ಹಣ ಬಂದಿತೆ? ಅದು ದೊಡ್ಡ ಸುಳ್ಳು. ನಿಮ್ಮ ಹಣವನ್ನು ತೆಗೆದುಕೊಂಡು ಅವರ 2-3 ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿತರಿಗೆ ನೀಡಿದ್ದಾರೆ. ನಿಮ್ಮ ಹಣದಿಂದ ಅವರ ಸ್ನೇಹಿತರ ಮೂರೂವರೆ ಲಕ್ಷ ಕೋಟಿ ಬಂಡವಾಳಿಗರ ಸಾಲ ಮನ್ನಾ ಮಾಡಲಾಗಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲದೆ ಅದರ ಮರುವರ್ಷ ಪ್ರಧಾನಿ ನರೇಂದ್ರ ಮೋದಿಯವರು ಅಸಮರ್ಪಕ ಜಿಎಸ್‌ಟಿ ಜಾರಿಗೊಳಿಸಿದರು. ಇದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ನಷ್ಟ ಹೊಂದಿದ್ದಾರೆ. ಅದರಿಂದ ಮೋದಿಯವರ ಸ್ನೇಹಿತರಾದ ಕಂಪನಿಗಳಿಗೆ ಮಾತ್ರ ಲಾಭವಾಗುತ್ತಿದೆ ಎಂದು ರಾಹುಲ್ ತಿಳಿಸಿದ್ದಾರೆ.

ಮೋದಿಯವರು ಭಾರತದ ಘನತೆಗೆ ಚ್ಯುತಿ ತಂದಿದ್ದಾರೆ. ಆರ್ಥಿಕತೆಯನ್ನು ನಾಶಗೊಳಸಿದ್ದಾರೆ. ಮೂರು ಕೃಷಿ ಕಾನೂನುಗಳ ಮೂಲಕ ರೈತರನ್ನು ಮುಗಿಸಲು ಹೊರಟಿದ್ದಾರೆ. ಈಗ ಇದೆಲ್ಲವನ್ನು ನಾವೆಲ್ಲರೂ ಸೇರಿ ಮರುನಿರ್ಮಾಣ ಮಾಡಬೇಕಿದೆ ಎಂದು ರಾಹುಲ್ ಹೇಳಿದ್ದಾರೆ.

ಡಿಮಾನಿಟೈಜೇಷನ್ ನ 4 ನೇ ವರ್ಷವನ್ನು ಕರಾಳ ದಿನಾಚರಣೆಯಂದು ದೇಶಾದ್ಯಂತ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಅದನ್ನು ‘ವಿಶ್ವಾಸಘಾತ ದಿನ’ ಎಂದು ಕರೆದಿದೆ.


ಇದನ್ನೂ ಓದಿ: ನೋಟು ಅಮಾನ್ಯೀಕರಣಕ್ಕೆ 4 ವರ್ಷ!; #SpeakUpAgainstDeMoDisaster ಟ್ರೆಂಡಿಂಗ್!

LEAVE A REPLY

Please enter your comment!
Please enter your name here