Homeಕರೋನಾ ತಲ್ಲಣಬಿಹಾರ; ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ, ತಜ್ಞರ ಅನುಮಾನ!

ಬಿಹಾರ; ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ, ತಜ್ಞರ ಅನುಮಾನ!

ವೈದ್ಯಕೀಯ ಸಂಪನ್ಮೂಲಗಳ ಕೊರತೆ ಇರುವ ರಾಜ್ಯದಲ್ಲಿ, ಇಂತಹ ಅಂಕಿ-ಅಂಶಗಳು ಸತ್ಯವಾಗಿವೆಯೇ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ರಿಜೊ ಜಾನ್ ಪ್ರಶ್ನಿಸಿದ್ದಾರೆ.

- Advertisement -
- Advertisement -

ಬಿಹಾರದಲ್ಲಿ ಚುನಾವಣಾ ಪ್ರಚಾರಗಳಲ್ಲಿ ಸಮಾವೇಶಗೊಳ್ಳುತ್ತಿರುವ ಜನಸಮೂಹ ಯಾವ ಕೊರೊನಾ ನಿಬಂಧನೆಗಳನ್ನು ಅನುಸರಿಸುತ್ತಿಲ್ಲ. ಇದು ಚುನಾವಣಾ ಆಯೋಗದ ಗಮನಕ್ಕೂ ಬಂದಿದ್ದು, ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ. ಆದರೆ ಕೊರೊನಾ ಪ್ರಕರಣಗಳ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿದೆ.

ಆದರೆ, ಇಷ್ಟೊಂದು ಮಟ್ಟದಲ್ಲಿ ಜನ ಸೇರುತ್ತಿದ್ದರೂ, ಮಾಸ್ಕ್‌ ಧರಿಸುವುದರಲ್ಲಿ, ದೈಹಿಕ ಅಂತರ ಪಾಲಿಸುವುದರಲ್ಲಿ ಕಾಳಜಿ ವಹಿಸದ, ಅತಿರೇಕದ ವರ್ತನೆ ತೋರುತ್ತಿದ್ದರೂ, ಕೊರೊನಾ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಇದು ಆರೋಗ್ಯ ತಜ್ಞರ ಅನುಮಾನಕ್ಕೆ ಕಾರಣವಾಗಿದೆ. ಬಿಹಾರದಲ್ಲಿ ವೈದ್ಯಕೀಯ ಸೌಕರ್ಯಗಳ ಕೊರತೆ ಹೆಚ್ಚಾಗಿದೆ.

ಬಿಹಾರದಲ್ಲೇ ಒಂದು ಕೋಟಿ ಜನರಿಗೆ ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗಿದೆ. ಪ್ರತಿದಿನ 1.5 ಲಕ್ಷ ಮಾದರಿಗಳನ್ನು ಪರೀಕ್ಷಿಸುತ್ತಿದೆ. ಆದರೆ, ಕಳೆದೆರಡು ತಿಂಗಳಲ್ಲಿ ಶೇ. 5ರಷ್ಟು ಕೊರೊನಾ ಪಾಸಿಟಿವ್‌ ಪ್ರಕರಣಗಳು ಮಾತ್ರ ವರದಿ ಆಗಿವೆ.

ರಾಜ್ಯದಲ್ಲಿ ನಿರಂತರವಾಗಿ ಪಾಸಿಟಿವ್ ಪ್ರಕರಣಗಳು ಕುಸಿತಗೊಂಡಿವೆ. ವೈದ್ಯಕೀಯ ಸಂಪನ್ಮೂಲಗಳ ಕೊರತೆ ಇರುವ ರಾಜ್ಯದಲ್ಲಿ, ಇಂತಹ ಅಂಕಿ-ಅಂಶಗಳು ಸತ್ಯವಾಗಿವೆಯೇ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ರಿಜೊ ಜಾನ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಉಚಿತ ಕೊರೊನಾ ಲಸಿಕೆ: ಬಿಹಾರದ ನಂತರ ಇದೀಗ ಮಧ್ಯಪ್ರದೇಶ!

ಸಾವಿರಾರು ಮಂದಿ ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಿದ ನಂತರ ಆಗಸ್ಟ್‌ನಲ್ಲಿ ಕೊರೊನಾ‌ ಪ್ರಕರಣಗಳು ಹೆಚ್ಚಾಳದವಾದರೂ, ನಂತರದ ದಿನಗಳಲ್ಲಿ  ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಕುಸಿತ ಕಾಣುತ್ತಿದೆ. ಸದ್ಯ ಬಿಹಾರದಲ್ಲಿ ಒಟ್ಟಾರೆ 2,14,946 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 1076 ಮಂದಿ ಮೃತಪಟ್ಟಿದ್ದಾರೆ.

ಕೆಲವು ಸಮಯದಿಂದ ಮೈಕ್ರೊ-ಲೆವೆಲ್ ಕೋವಿಡ್ ಡೇಟಾವನ್ನು ಟ್ರ್ಯಾಕ್ ಮಾಡುತ್ತಿರುವ ಹಿರಿಯ ಆರೋಗ್ಯ ಸಂಶೋಧಕರು ಹೇಳುವಂತೆ, “ಭಾರತದ ಬಡ ರಾಜ್ಯಗಳಲ್ಲಿ ಒಂದಾದ ಬಿಹಾರದ ಮಾಹಿತಿಯು ಕಾಗದದ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ, ಅದು ನಂಬಲಾಗದ ಮಟ್ಟಿಗೆ. ಆದರೆ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ನಮಗೆ ಹೆಚ್ಚಿನ ಮಾಹಿತಿ ಬೇಕು” ಎಂದು ತಿಳಿಸಿದ್ದಾರೆ.

“ಉದಾಹರಣೆಗೆ, ಸ್ಯಾಂಪಲ್ಸ್,  ಪರೀಕ್ಷಾ ಪ್ರಕಾರಗಳು, ಪರೀಕ್ಷೆಗಳನ್ನು ಮಾಡಿರುವ ಪ್ರದೇಶಗಳು ಇತ್ಯಾದಿಗಳ ಮೂಲಕ ಪರೀಕ್ಷಿಸುವುದು ನಮಗೆ ಸಹಾಯ ಮಾಡುತ್ತದೆ. ಈಗಿನಿಂದ ಸುಮಾರು ಎರಡು ವಾರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗದಿದ್ದರೆ, ಅದು ಪವಾಡ ಅಥವಾ ವರದಿಯ ಅಡಿಯಲ್ಲಿ ವ್ಯವಸ್ಥಿತವಾಗಿರುತ್ತದೆ” ಎಂದು ತಿಳಿಸಿದ್ದಾರೆ.

ಬಿಹಾರವು ದೇಶದಲ್ಲಿ ಅತಿ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದೆ. ಸಾವಿನ ಪ್ರಮಾಣ ಶೇಕಡಾ 0.52 ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ಶೇಕಡಾ 1.51 ಕ್ಕಿಂತ ಕಡಿಮೆಯಾಗಿದೆ. ರಾಷ್ಟ್ರೀಯ ಆರೋಗ್ಯ ವಿವರ 2018 ರ ಮಾಹಿತಿಯ ಪ್ರಕಾರ, ಬಿಹಾರದಲ್ಲಿ ಒಟ್ಟು 40,649 ಅಲೋಪತಿ ವೈದ್ಯರಿದ್ದಾರೆ. ರಾಜ್ಯದ ಪ್ರತಿ 2,435 ಜನರಿಗೆ ಒಬ್ಬ ವೈದ್ಯ ಲಭ್ಯವಿದ್ದಾರೆ.


ಇದನ್ನೂ ಓದಿ : ಬಿಹಾರ ದುರ್ಗಾ ಮೂರ್ತಿ ವಿಸರ್ಜನೆಯಲ್ಲಿ ಗಲಾಟೆ, ಪೊಲೀಸರಿಂದ ಅಮಾನವೀಯ ದಾಳಿ: ಓರ್ವ ಬಲಿ, 27 ಮಂದಿಗೆ ಗಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...