Homeಮುಖಪುಟಬೌದ್ಧಧಮ್ಮದ ಅನುಯಾಯಿ ರಾಜೇಂದ್ರ ಪಾಲ್ ರಾಜೀನಾಮೆ; ಎಎಪಿಯ ಮೃದು ಹಿಂದುತ್ವ ಮುನ್ನೆಲೆಗೆ

ಬೌದ್ಧಧಮ್ಮದ ಅನುಯಾಯಿ ರಾಜೇಂದ್ರ ಪಾಲ್ ರಾಜೀನಾಮೆ; ಎಎಪಿಯ ಮೃದು ಹಿಂದುತ್ವ ಮುನ್ನೆಲೆಗೆ

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸ್ವೀಕರಿಸಿದ ಪ್ರತಿಜ್ಞೆಗಳನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸಲು ಬಿಜೆಪಿ ನಾಯಕರು ಯತ್ನಿಸಿದ್ದಾರೆ.

- Advertisement -
- Advertisement -

ದೆಹಲಿ ಕ್ಯಾಬಿನೆಟ್ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ‘ಧಾರ್ಮಿಕ ಮತಾಂತರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಉಂಟಾದ ವಿವಾದದ ನಡುವೆ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗುಜರಾತ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಕೇಜ್ರಿವಾಲ್ ಅವರನ್ನು ‘ಹಿಂದೂ ವಿರೋಧಿ’ ಎಂದು ಪ್ರಚಾರ ಮಾಡಲಾಯಿತು. ಸ್ಕಲ್ ಕ್ಯಾಪ್ ಧರಿಸಿರುವ ಬ್ಯಾನರ್‌ಗಳನ್ನು ರಾಜ್ಯದ ಹಲವಾರು ನಗರಗಳಲ್ಲಿ ಹಾಕಲಾಗಿತ್ತು. ಕೇಜ್ರಿವಾಲ್ ಅವರ ಚಿತ್ರಗಳೊಂದಿಗೆ, “ನಾನು ಹಿಂದೂ ಧರ್ಮವನ್ನು ಹುಚ್ಚುತನವೆಂದು ಪರಿಗಣಿಸುತ್ತೇನೆ”, “ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್” ಎಂಬ ಸಾಲುಗಳನ್ನು ಬರೆಯಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪೋಸ್ಟರ್‌ಗಳಲ್ಲಿ ತನ್ನ ಪಾತ್ರವಿಲ್ಲ” ಎಂದು ಬಿಜೆಪಿ ಹೇಳಿದೆ. ಆದರೆ ಬಿಜೆಪಿಯ ಕೆಲವು ನಾಯಕರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಕ್ಟೋಬರ್ 5ರಂದು ಸುಮಾರು 10,000 ಹಿಂದೂಗಳು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಅದರಲ್ಲಿ ರಾಜೇಂದ್ರ ಪಾಲ್‌ ಪಾಲ್ಗೊಂಡಿದ್ದರು. ವಿಷ್ಣು, ಶಿವ, ಬ್ರಹ್ಮ, ರಾಮ, ಕೃಷ್ಣ, ಗೌರಿ ಮತ್ತು ಗಣಪತಿಯಂತಹ ಹಿಂದೂ ದೇವತೆಗಳನ್ನು ಪ್ರಾರ್ಥಿಸುವುದಿಲ್ಲ ಎಂದು ಕಾರ್ಯಕ್ರಮದಲ್ಲಿದ್ದವರು ಪ್ರತಿಜ್ಞೆ ಮಾಡಿದ್ದರು. ರಾಜೇಂದ್ರ ಅವರು ಆ ವೇಳೆ ಹಾಜರಿದ್ದರು.

ಕಾರ್ಯಕ್ರಮದ 39 ಸೆಕೆಂಡುಗಳ ವೀಡಿಯೊವನ್ನು ಟ್ವೀಟ್ ಮಾಡಿದ ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ, “ಎಎಪಿ ಏಕೆ ಹಿಂದೂ ವಿರೋಧಿ? ಈ ಎಎಪಿ ಸಚಿವರು ಹಿಂದೂ ಧರ್ಮದ ವಿರುದ್ಧ ಪ್ರತಿಜ್ಞೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

ಇದನ್ನೂ ಓದಿರಿ: ನಿಮ್ಮ ಗುಲಾಮರಾಗಿ ಇರ್ತೇವೆ: ಬೊಮ್ಮಾಯಿ ಮೆಚ್ಚಿಸುವ ಭರದಲ್ಲಿ ರಾಜುಗೌಡ ಎಡವಟ್ಟು

ಅಂಬೇಡ್ಕರ್ ಅವರು 1956ರಲ್ಲಿ ಹಿಂದೂ ಧರ್ಮವನ್ನು ತ್ಯಜಿಸಿ ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮರಳಿದ ಬಳಿಕ 22 ಪ್ರತಿಜ್ಞೆಯನ್ನು ಸ್ವೀಕರಿಸಿದ್ದರು. ಅಂದಿನಿಂದಲೂ ಇಂತಹ ಕಾರ್ಯಕ್ರಮಗಳನ್ನು ಅಂಬೇಡ್ಕರ್‌ ಅನುಯಾಯಿಗಳು ನಿಯಮಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಮುಖ್ಯವಾಗಿ ದಮನಿತ ಜಾತಿಗಳ ಜನರು 22 ಪ್ರತಿಜ್ಞೆಗಳನ್ನು ಪಠಿಸಿ ಬೌದ್ಧ ಧರ್ಮವನ್ನು ಸ್ವೀಕರಿಸುವುದು ನಡೆದುಬಂದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದಮನಿತ ಸಮುದಾಯಕ್ಕೆ ತೋರಿದ ವಿಮೋಚನೆಯ ಮಾರ್ಗವೂ ಇದಾಗಿದೆ.

22 ಪ್ರತಿಜ್ಞೆಗಳು

ಅಕ್ಟೋಬರ್ 15, 1956ರಂದು ನಾಗ್ಪುರದ ದೀಕ್ಷಾ ಭೂಮಿಯಲ್ಲಿ ಡಾ.ಅಂಬೇಡ್ಕರ್ ಅವರು ತಮ್ಮ 3,65,000 ಅನುಯಾಯಿಗಳೊಂದಿಗೆ ಹಿಂದೂ ಧರ್ಮವನ್ನು ತೊರೆದರು. ಈ ಸಂದರ್ಭದಲ್ಲಿ ಅವರು 22 ಪ್ರತಿಜ್ಞೆಗಳನ್ನು ಸ್ವೀಕರಿಸಿದ್ದರು. ಅವುಗಳು ಹೀಗಿವೆ.

  1. ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
  2. ದೇವರ ಅವತಾರವೆಂದು ನಂಬಲಾದ ರಾಮ ಮತ್ತು ಕೃಷ್ಣರಲ್ಲಿ ನನಗೆ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
  3. ಗೌರಿ, ಗಣಪತಿ ಮತ್ತು ಇತರ ಹಿಂದೂಗಳ ದೇವರುಗಳಲ್ಲಿ ನನಗೆ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
  4. ನನಗೆ ದೇವರ ಅವತಾರದಲ್ಲಿ ನಂಬಿಕೆ ಇಲ್ಲ.
  5. ಭಗವಾನ್ ಬುದ್ಧ ವಿಷ್ಣುವಿನ ಅವತಾರ ಎಂದು ನಾನು ನಂಬುವುದಿಲ್ಲ. ಇದು ಸಂಪೂರ್ಣ ಹುಚ್ಚುತನ ಮತ್ತು ಸುಳ್ಳಿನ ಪ್ರಚಾರವೆಂದು ನಂಬುತ್ತೇನೆ.
  6. ನಾನು ‘ಶ್ರಾದ್ಧ’ವನ್ನು ಮಾಡುವುದಿಲ್ಲ ಅಥವಾ ‘ಪಿಂಡ-ದಾನ’ ನೀಡುವುದಿಲ್ಲ.
  7. ನಾನು ಬುದ್ಧನ ತತ್ವಗಳು ಮತ್ತು ಬೋಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ವರ್ತಿಸುವುದಿಲ್ಲ.
  8. ನಾನು ಬ್ರಾಹ್ಮಣರಿಂದ ಯಾವುದೇ ಸಮಾರಂಭಗಳನ್ನು ಮಾಡಿಸುವುದಿಲ್ಲ.
  9. ನಾನು ಮನುಷ್ಯ ಸಮಾನತೆಯನ್ನು ನಂಬುತ್ತೇನೆ.
  10. ನಾನು ಸಮಾನತೆಯನ್ನು ತರಲು ಪ್ರಯತ್ನಿಸುತ್ತೇನೆ.
  11. ನಾನು ಬುದ್ಧನ ‘ಉದಾತ್ತವಾದ ಎಂಟು ಮಾರ್ಗಗಳನ್ನು’ ಅನುಸರಿಸುತ್ತೇನೆ.
  12. ನಾನು ಬುದ್ಧನು ಸೂಚಿಸಿದ ‘ಪರಮಿತಗಳನ್ನು’ ಅನುಸರಿಸುತ್ತೇನೆ.
  13. ನಾನು ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿ, ಪ್ರೀತಿ ಮತ್ತು ದಯೆಯನ್ನು ಹೊಂದಿದ್ದೇನೆ, ಅವುಗಳನ್ನು ರಕ್ಷಿಸುತ್ತೇನೆ.
  14. ನಾನು ಕದಿಯುವುದಿಲ್ಲ.
  15. ನಾನು ಸುಳ್ಳು ಹೇಳುವುದಿಲ್ಲ.
  16. ನಾನು ವಿಷಯಲೋಲುಪತೆಯ ಪಾಪಗಳನ್ನು ಮಾಡುವುದಿಲ್ಲ.
  17. ನಾನು ಮದ್ಯ, ಡ್ರಗ್ಸ್ ಮುಂತಾದ ಅಮಲು ಪದಾರ್ಥಗಳನ್ನು ತೆಗೆದುಕೊಳ್ಳುವುದಿಲ್ಲ.
  18. ನಾನು ಉದಾತ್ತವಾದ ಎಂಟು ಮಾರ್ಗಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ. ದೈನಂದಿನ ಜೀವನದಲ್ಲಿ ಸಹಾನುಭೂತಿ ಮತ್ತು ಪ್ರೀತಿಯ ದಯೆಯನ್ನು ಅಭ್ಯಾಸ ಮಾಡುತ್ತೇನೆ.
  19. ಮಾನವೀಯತೆಗೆ ಹಾನಿಕಾರಕವಾದ ಮತ್ತು ಮಾನವೀಯತೆಯ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯುಂಟುಮಾಡುವ ಹಿಂದೂ ಧರ್ಮವನ್ನು ನಾನು ತ್ಯಜಿಸುತ್ತೇನೆ. ಏಕೆಂದರೆ ಅದು ಅಸಮಾನತೆಯನ್ನು ಆಧರಿಸಿದೆ. ಬೌದ್ಧ ಧರ್ಮವನ್ನು ನನ್ನ ಧರ್ಮವಾಗಿ ಸ್ವೀಕರಿಸುತ್ತೇನೆ.
  20. ಬುದ್ಧನ ಧಮ್ಮ ಒಂದೇ ನಿಜವಾದ ಧರ್ಮ ಎಂದು ನಾನು ದೃಢವಾಗಿ ನಂಬುತ್ತೇನೆ.
  21. ನನಗೆ ಪುನರ್ಜನ್ಮವಿದೆ ಎಂದು ನಾನು ನಂಬುತ್ತೇನೆ.
  22. ನಾನು ಇನ್ನು ಮುಂದೆ ಬುದ್ಧನ ತತ್ವಗಳು, ಬೋಧನೆಗಳ ಪ್ರಕಾರ ಮತ್ತು ಅವನ ಧಮ್ಮದ ಪ್ರಕಾರ ನನ್ನ ಜೀವನವನ್ನು ನಡೆಸುತ್ತೇನೆ ಎಂದು ನಾನು ಗಂಭೀರವಾಗಿ ಘೋಷಿಸುತ್ತೇನೆ ಮತ್ತು ದೃಢೀಕರಿಸುತ್ತೇನೆ.

ಈ ಪ್ರತಿಜ್ಞೆ ಸ್ವೀಕರಿಸಿ 66 ವರ್ಷಗಳು ಕಳೆದ ಬಳಿಕ ಬಿಜೆಪಿ ನಾಯಕರು ಟೀಕೆಗಳನ್ನು ಮಾಡಲಾರಂಭಿಸಿದ್ದಾರೆ. ಬಾಬಾ ಸಾಹೇಬರು ಸ್ವೀಕರಿಸಿದ ಪ್ರತಿಜ್ಞೆಯನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸಲು ಆರಂಭಿಸಿದ್ದಾರೆ. ಪ್ರತಿಜ್ಞೆಯಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಅವಹೇಳನಕಾರಿ ಪದಗಳಿಲ್ಲ ಎಂದು ಇನ್ನು ಕೆಲವರು ಗಮನ ಸೆಳೆದಿದ್ದಾರೆ.

ಅಂಬೇಡ್ಕರರು ನಂಬಿದ್ದ ವಿಚಾರಗಳನ್ನೇ ಈ ಪ್ರತಿಜ್ಞೆಗಳು ಹೇಳುತ್ತಿವೆ. ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಯು ಆಳವಾಗಿ ಬೇರು ಬಿಟ್ಟಿದೆ. ದಲಿತರು ಎಂದಿಗೂ ಹಿಂದೂ ಧರ್ಮದೊಳಗೆ ಸಮಾನತೆ ಮತ್ತು ಗೌರವವನ್ನು ಕಾಣಲು ಸಾಧ್ಯವಿಲ್ಲ ಎಂಬುದು ಅಂಬೇಡ್ಕರ್‌ ತೋರಿದ ಮಾರ್ಗವಾಗಿದೆ.

ಇದನ್ನೂ ಓದಿರಿ: ಇದು ಹಿಂದೂ ದೇವರಲ್ಲ, ಬೌದ್ಧ ವಿಗ್ರಹ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಮತ್ತು ಬಿಹಾರದ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಡಾ.ಸಂಜಯ್ ಪಾಸ್ವಾನ್ ಪ್ರತಿಕ್ರಿಯಿಸಿ, “ಡಾ.ಅಂಬೇಡ್ಕರ್ ತಮ್ಮ ವಚನಗಳ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಲು ಪ್ರಯತ್ನಿಸುತ್ತಿಲ್ಲ. ಆದರೆ ‘ಮೇಲ್ಜಾತಿ’ ಹಿಂದೂಗಳನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಜಾತಿ ತಾರತಮ್ಯ ಮತ್ತು ಅವಮಾನಗಳ ವಿರುದ್ಧ ಹೋರಾಡಿದರು. ದಲಿತರು ಅನುಭವಿಸುತ್ತಿರುವ ನೋವುಗಳನ್ನು ಮನವರಿಕೆ ಮಾಡಿಸಲು ಬಯಸಿದ್ದರು” ಎಂದಿದ್ದಾರೆ.

ರಾಜೇಂದ್ರ ಅವರು ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಬಿಜೆಪಿ ಸಂಸದ ಮನೋಜ್‌ ತಿವಾರಿ ಪ್ರತಿಕ್ರಿಯಿಸಿ, “ಎಎಪಿ ಸಚಿವರು ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಸಚಿವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ನಾವು ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ” ಎಂದು ಹೇಳಿಕೆ ನೀಡಿದರು.

“ಕೇಜ್ರಿವಾಲ್ ಮಂತ್ರಿ ಹಿಂದೂಗಳ ವಿರುದ್ಧ ಹೇಗೆ ವಿಷ ಉಗುಳುತ್ತಿದ್ದಾರೆ ನೋಡಿ. ಚುನಾವಣಾ ಹಿಂದೂ ಕೇಜ್ರಿವಾಲ್ ಮತ್ತು ಎಎಪಿಯ ಹಿಂದೂ ವಿರೋಧಿ ಮುಖ ಎಲ್ಲರ ಮುಂದೆ ಬಂದಿದೆ. ಹಿಂದೂ ವಿರೋಧಿ ಎಎಪಿಗೆ ಸಾರ್ವಜನಿಕರು ಶೀಘ್ರದಲ್ಲೇ ತಕ್ಕ ಉತ್ತರ ನೀಡಲಿದ್ದಾರೆ. ನಾಚಿಕೆ ಆಗುತ್ತಿದೆ ಕೇಜ್ರಿವಾಲ್” ಎಂದು ಅವರು ಟ್ವೀಟ್ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ರಾಜೇಂದ್ರ ಪಾಲ್ ಗೌತಮ್, “ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆಯಿದೆ. ಭಾರತದ ಸಂವಿಧಾನವು ನನಗಿಷ್ಟವಾದ ಧರ್ಮವನ್ನು ಅನುಸರಿಸುವ ಹಕ್ಕು ನೀಡಿದೆ. ಇದರಿಂದ ಯಾರಿಗೆ ತೊಂದರೆಯಾಗುತ್ತಿದೆ? ಬಿಜೆಪಿಯವರು ನಿಜವಾದ ದೇಶ ವಿರೋಧಿಗಳು. ಆಪ್ ಕಂಡರೆ ಅವರಿಗೆ ಭಯ, ಅದಕ್ಕಾಗಿ ಸುಳ್ಳು ದೂರು ನೀಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದರು.

“ಜಾತಿ ಆಧಾರಿತ ರಾಜಕೀಯ ಮಾಡುವವರು ದ್ರೋಹಿಗಳು. ಅವರಿಗೆ ಬೇರೆ ಯಾವುದೇ ಅಜೆಂಡಾಗಳಿಲ್ಲ. ಧರ್ಮ ಧರ್ಮದ ನಡುವೆ ಎತ್ತಿಕಟ್ಟುವುದು ಅವರ ಚಾಳಿ. ಅವರು ಆಪ್ ಕಾರ್ಯಕರ್ತರು ಏಕೆ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಪ್ರಶ್ನಿಸುತ್ತಾರೆ. ನನ್ನ ಪ್ರಕಾರ ಯಾರಿಗೆ ಯಾವ ಧರ್ಮದ ಮೇಲೆ ನಂಬಿಕೆಯಿದೆಯೊ ಅವರು ಆಯಾಯ ಧರ್ಮದ ಪೂಜಾಸ್ಥಳಿಗೆ ಹೋಗುವ ಹಕ್ಕು ಹೊಂದಿದ್ದಾರೆ. ನನಗೆ ಬೌದ್ಧ ಧರ್ಮದ ಮೇಲೆ ನಂಬಿಕೆಯಿದೆ. ಹಾಗಾಗಿ ನಾನು ಅಲ್ಲಿಗೆ ಹೋಗುತ್ತೇನೆ. ಯಾರಿಗೂ ಇನ್ನೊಂದು ಧರ್ಮವನ್ನು ಹೇರುವ ಅಧಿಕಾರವಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಆದರೆ ಎಎಪಿ ಮತ್ತು ಕೇಜ್ರೀವಾಲ್ ಮೇಲೆ ತೀವ್ರ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.

ಎಎಪಿ ಮೊದಲಿನಿಂದಲೂ ಮೃದು ಹಿಂದುತ್ವವನ್ನು ಪಾಲನೆ ಮಾಡುತ್ತಾ ಬಂದಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಅಯೋಧ್ಯೆ ಹಾಗೂ ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ‘ತಿರಂಗಯಾತ್ರೆ’ಯನ್ನು ಎಎಪಿ ಹಮ್ಮಿಕೊಂಡಿತ್ತು. ಚುನಾವಣೆ ವೇಳೆ ಉತ್ತರಖಾಂಡ್‌ ರಾಜ್ಯದಲ್ಲಿ ಕೇಜ್ರಿವಾಲ್ ಮಾತನಾಡುತ್ತಾ, ”ನಮ್ಮ ಪಕ್ಷಕ್ಕೆ ಮತ ಚಲಾಯಿಸಿದರೆ, ಉತ್ತರಖಾಂಡ್ ರಾಜ್ಯವನ್ನು ಹಿಂದೂಗಳ ಜಾಗತಿಕ ರಾಜಧಾನಿಯನ್ನಾಗಿ ಮಾಡುತ್ತೇವೆ” ಎಂದಿದ್ದರು. ಎರಡು ವರ್ಷಗಳ ಕಾಲ ದೇವಾಲಯಗಳ ಪುರೋಹಿತರು ನಡೆಸಿದ, ಚಾರ್‌ ಧಮ್‌ ಟ್ರಸ್ಟ್‌ ವಿಸರ್ಜನಾ ಹೋರಾಟಕ್ಕೂ ಎಎಪಿ ಬೆಂಬಲಿಸಿತ್ತು. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ‘ದೇಶಭಕ್ತಿ ಪಠ್ಯಕ್ರಮ’ಕ್ಕೂ ಚಾಲನೆ ನೀಡಲಾಗಿತ್ತು. ಈ ಕುರಿತು ‘ದಿ ವೈರ್‌’ ವರದಿ ಮಾಡಿತ್ತು.

ಇದನ್ನೂ ಓದಿರಿ: ಬೌದ್ಧಧರ್ಮ ಅಪಾಯಕಾರಿಯೆ?

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೇಶಭಕ್ತಿ ಪಠ್ಯದ ಕುರಿತು ಮಾತನಾಡುತ್ತಾ, “ನರ್ಸರಿಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಕನಿಷ್ಠ 700-800 ಕಥೆಗಳನ್ನು ತಿಳಿಯುವರು, ಕನಿಷ್ಠ 500-600 ದೇಶಭಕ್ತಿ ಗೀತೆಗಳನ್ನು ಕಲಿಯುವರು. ಪ್ರತಿಯೊಂದು ತರಗತಿಯೂ ‘ದೇಶಭಕ್ತಿ ಧ್ಯಾನ’ (ಏಕಗ್ರತಾ ವ್ಯಾಯಾಮ) ಮಾಡುವ ಮೂಲಕ ಆರಂಭವಾಗಲಿವೆ. ಇದು ಐದು ನಿಮಿಷ ಇರಲಿದೆ. ಐವರು ದೇಶಪ್ರೇಮಿಗಳನ್ನು ನೆನೆಯುವುದು ಈ ಧ್ಯಾನದ ಉದ್ದೇಶ” ಎಂದಿದ್ದರು.

“ಹಲವು ಯೋಜನೆಗಳ ಮೂಲಕ ಬಹುಸಂಖ್ಯಾತರನ್ನು ಓಲೈಕೆ ಮಾಡಲು ಎಎಪಿ ಮುಂದಾಗಿದೆ. ಆಮ್‌ ಆದ್ಮಿ ಪಕ್ಷವು ದಲಿತರು ಮತ್ತು ಮುಸ್ಲಿಮರ ಮತಗಳಿಂದ ಗೆದ್ದಿದೆ. ಜೊತೆಗೆ ಇತರ ವರ್ಗಗಳನ್ನು ಸೆಳೆಯಲು ಮೃದು ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ. ಚುನಾವಣಾ ವೇಳೆ ಕೇಜ್ರಿವಾಲ್‌ ಹನುಮಾನ್ ಚಾಲೀಸ್‌ ಪಠಿಸಿದ್ದರು. ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಬಹುಸಂಖ್ಯಾತ ಹಿಂದೂಗಳ ಮತಗಳನ್ನು ಸೆಳೆದಿದ್ದರು” ಎಂದು ‘ದಿ ವೈರ್‌’ ವರದಿ ಉಲ್ಲೇಖಿಸಿತ್ತು. ಈಗ ಬೌದ್ಧಧರ್ಮವನ್ನು ಸ್ವೀಕರಿಸಿದ ರಾಜೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...