Homeಕರ್ನಾಟಕನಿಮ್ಮ ಗುಲಾಮರಾಗಿ ಇರ್ತೇವೆ: ಬೊಮ್ಮಾಯಿ ಮೆಚ್ಚಿಸುವ ಭರದಲ್ಲಿ ರಾಜುಗೌಡ ಎಡವಟ್ಟು

ನಿಮ್ಮ ಗುಲಾಮರಾಗಿ ಇರ್ತೇವೆ: ಬೊಮ್ಮಾಯಿ ಮೆಚ್ಚಿಸುವ ಭರದಲ್ಲಿ ರಾಜುಗೌಡ ಎಡವಟ್ಟು

- Advertisement -
- Advertisement -

‘ನಾವು ನಿಮ್ಮ ಗುಲಾಮರಾಗಿ ಇರ್ತೀವಿ…’ ಎಂದು ಸುರಪುರದ ಬಿಜೆಪಿ ಶಾಸಕ ರಾಜುಗೌಡ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ವಿಧಾನಸೌಧದ ಮುಂಭಾಗ ನಡೆದ ವಾಲ್ಮೀಕಿ ಜಯಂತಿ ದಿನಾಚರಣೆಯಲ್ಲಿ ರಾಜುಗೌಡ ಅವರು ಸಿಎಂ ಬೊಮ್ಮಾಯಿಗೆ ಹೀಗೆ ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಅವರ ಸಮಿತಿ ಸಾಕಷ್ಟು ಶ್ರಮ ವಹಿಸಿ, ತಿಂಗಳಾನುಗಟ್ಟಲೆ ಅಧ್ಯಯನಗಳನ್ನು ನಡೆಸಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ವರದಿ ನೀಡಿತ್ತು. ನಾಗಮೋಹನ್ ದಾಸ್ ವರದಿಯಲ್ಲಿ ಸತ್ಯಾಂಶ ಇದ್ದಿದ್ದರಿಂದ ರಾಜ್ಯ ಸರ್ಕಾರ ಎರಡೂ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಇದನ್ನೆಲ್ಲ ಗಮನಿಸದ ಸುರಪುರ ಬಿಜೆಪಿ ಶಾಸಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೊಗಳುವ ಭರದಲ್ಲಿ ‘ನಾವು ನಿಮ್ಮ ಗುಲಾಮರಾಗಿ ಇರ್ತೀವಿ’ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಮೀಸಲಾತಿ ಎಂಬುದು ಭಿಕ್ಷೆಯಲ್ಲ, ಅದು ಸಾಂವಿಧಾನಿಕ ಹಕ್ಕು’, ‘ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ, ಸಾಮಾಜಿಕ ನ್ಯಾಯ ಜಾರಿಗೆ ಇರುವ ಅಸ್ತ್ರ’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಪ್ರತಿಪಾದಿಸಿದ್ದಾರೆ. ಆದರೆ, ರಾಜುಗೌಡ ಈ ರೀತಿ ನೀಡಿರುವ ಹೇಳಿಕೆ ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ರಾಜುಗೌಡ ಹೇಳಿದ್ದೇನು?

ವಿಧಾನಸೌಧದ ಮುಂಭಾಗ ನಡೆದ ವಾಲ್ಮೀಕಿ ಜಯಂತಿ ದಿನಾಚರಣೆಯಲ್ಲಿ ಮಾತನಾಡಿದ ಶಾಸಕರು “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡು ನಮಗೆ ಜೇನು ತಿನ್ನಿಸುವ ಕೆಲಸ ಮಾಡಿದ್ದಾರೆ. ಈ ಜೀವ ಇರುವವರೆಗೆ ನಿಮಗೆ ಗುಲಾಮರಾಗಿ ಇರ್ತಿವಿ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಜೀವನದಲ್ಲಿ ಮರೆಯಲಾದ ದಿನ ಇದು, ಇಂತಹ ಕೆಲಸ ಆಗಬೇಕು ಅಂದರೆ ಎರಡು ಗುಂಡಿಗೆ ಇರಬೇಕು. ಆ ಗುಂಡಿಗೆ ನಮ್ಮ ಬಸಪ್ಪಣ್ಣನಿಗೆ ಇದೆ. ಅವರು ನಿಜವಾದ ಗಂಡುಗಲಿ” ಎಂದು ಬಣ್ಣಿಸಿದ್ದಾರೆ.

“ರಾಜುಗೌಡ ಅವರೇ ಮೀಸಲಾತಿ ಎಂಬುದು ಭಿಕ್ಷೆಯಲ್ಲ, ಅದು ನಮ್ಮ ಸಾಂವಿಧಾನಿಕ ಹಕ್ಕು. ಜಮೀನ್ದಾರರ ಗುಲಾಮಗಿರಿಯಿಂದ ಮುಕ್ತಿ ಪಡೆಯುವುದಕ್ಕಾಗಿಯೇ ಬಾಬಾ ಸಾಹೇಬರು ನಮಗೆ ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ನೀಡಿದ್ದಾರೆ. ನಿಮ್ಮ ಅಧಿಕಾರದ ಹಪಹಪಿಗೆ ಗುಲಾಮಗಿರಿ ಮಾತುಗಳನ್ನಾಡಬೇಡಿ, ‘ಗುಲಾಮರಾಗಿ ಇರ್ತೀವಿ’ ಅನ್ನೋ ನಿಮ್ಮ ಮಾತನ್ನು ವಾಪಸ್ ಪಡೆದುಕೊಳ್ಳಿ; ಬಹಿರಂಗವಾಗಿ ಕ್ಷಮೆ ಕೇಳಿ” ಎಂದು ರವಿಕುಮಾರ್‌ ಗಂಗಪ್ಪ ಎಂಬವರು ಆಗ್ರಹಿಸಿದ್ದಾರೆ.

ರಾಜುಗೌಡ ಮಾತಿಗೆ ಮುಖ್ಯಮಂತ್ರಿಯಿಂದಲೇ ಆಕ್ಷೇಪಣೆ!

ಗುಲಾಮರಾಗಿ ಇರ್ತೀವಿ ಅನ್ನೋ ರಾಜುಗೌಡ ಮಾತಿಗೆ ವೇದಿಕೆ ಮೇಲೆಯೇ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬೊಮ್ಮಾಯಿ, “ನೀನು ತಪ್ಪು ಮಾತಾಡಿದ್ಯಲೇ ರಾಜೂಗೌಡ. ನೀನು ಯಾರಿಗೂ ಗುಲಾಮ ಆಗಬೇಕಿಲ್ಲ. ಬದುಕು ಕೊಟ್ಟ ದೈವಕ್ಕೆ ಮಾತ್ರ ಗುಲಾಮನಾಗಬೇಕು. ಅಪ್ಪಿತಪ್ಪಿ ಇನ್ನೊಮ್ಮೆ ಆ ಶಬ್ದ ಬಂದರೆ ನಿನ್ನ ನಾನು ಬಿಡಲ್ಲ” ಎಂದು ಗದರಿದರು.

ಇದನ್ನೂ ಓದಿರಿ: ವಿಶ್ಲೇಷಣೆ: ಭಾರತ್‌ ಜೋಡೋ ನಂತರ ಕರ್ನಾಟಕ ಬಿಜೆಪಿಯ ಪ್ರತಿಕ್ರಿಯೆಗಳು

“ಪರಿಶಿಷ್ಟ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಾಗಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಶ್ರಮ ದೊಡ್ಡದು” ಎಂದು ಬೊಮ್ಮಾಯಿ ಶ್ಲಾಘಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Raajakiiya laabhakkaagi gulaamaragava manastiti raajaakaaranigalige hosadenu alla, aadare miisalaati hechchala yaaru saha kaiyetti Dana niiduvudalla, samvidhanadalli ruupisiruvantaha mulabhoota hakku.

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...