Homeಮುಖಪುಟಲಿಂಗ ಸಮಾನತೆ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್‌ ಜಾಹೀರಾತಿಗೆ ಭರಪೂರ ಮೆಚ್ಚುಗೆ

ಲಿಂಗ ಸಮಾನತೆ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್‌ ಜಾಹೀರಾತಿಗೆ ಭರಪೂರ ಮೆಚ್ಚುಗೆ

- Advertisement -
- Advertisement -

ಲಿಂಗ ಸಮಾನತೆ ಸಂದೇಶ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್‌ ಚಾಕೋಲೆಟ್ ಜಾಹೀರಾತಿಗೆ ಪ್ರೇಕ್ಷಕರು ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್‌ ಎಂದರೆ ಪುರುಷರಷ್ಟೇ ಎಂದು ಭಾವಿಸಿರುವ ಸಮಾಜದಲ್ಲಿ ಕ್ಯಾಡ್‌ಬರಿಯ ನೂತನ ಜಾಹೀರಾತು ಲಿಂಗ ಸಮಾನತೆಯ ಆಶಯವನ್ನು ಎತ್ತಿ ಹಿಡಿದಿದೆ. ಜಾಹೀರಾತು ವೀಕ್ಷಿಸಿದ ಸಹಸ್ರಾರು ಜನರು ಭಾವುಕರಾಗಿದ್ದಾರೆ. ಈ ಜಾಹೀರಾತನ್ನು ನೋಡಿ ಕಣ್ತುಂಬಿ ಬಂತು ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್ ಮಾಡಿದ್ದಾರೆ.

ಏನಿದು ಜಾಹೀರಾತು?

ನೆನಪುಗಳೊಂದಿಗೆ ಬೆರೆತ ನಗು-ಅಳು ಮಿಶ್ರಿತ ಭಾವ (ನಾಸ್ಟಾಲ್ಜಿಯಾ) ಸೃಷ್ಟಿಸಿರುವ ಈ ಜಾಹೀರಾತು, 90ರ ದಶಕ ಹಾಗೂ 2021ನೇ ಇಸವಿಯ ನಡುವೆ ಆಗಿರುವ ಬದಲಾವಣೆಯನ್ನು ಒಳಗೊಂಡಿದೆ. ಈಗಿನ ಜಾಹೀರಾತು ಕ್ರಿಕೆಟ್‌ನಲ್ಲಿ ಮಹಿಳೆಯರೂ ಸಾಧನೆ ಮಾಡಿರುವುದನ್ನು ಬಿಂಬಿಸುತ್ತದೆ. ಹಿಂದೆ ಕೇವಲ ಪುರುಷರಷ್ಟೇ ಕ್ರೀಡಾಂಗಣದ ಮೇಲೆ ಹಿಡಿತ ಸಾಧಿಸಿದ್ದರು. 2021ನೇ ಇಸವಿಯಲ್ಲಿ ಹೆಣ್ಣುಮಕ್ಕಳೂ ಸಾಧನೆಗೈದಿದ್ದಾರೆ ಎಂಬ ಸಮಾನತೆಯ ಸಂದೇಶವನ್ನು ಕ್ಯಾಡ್‌ಬರಿ ಕಟ್ಟಿಕೊಟ್ಟಿರುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ.

90ರ ದಶಕದ ಹಿನ್ನೆಲೆಯ ಹಳೆಯ ಕ್ಯಾಡ್‌ಬರಿ ಜಾಹೀರಾತು ಹೀಗಿದೆ: “ಶತಕದ ಹೊಸ್ತಿಲಿನಲ್ಲಿರುವ ಬ್ಯಾಟ್‌ಮನ್‌ ಕೊನೆಯ ಎಸೆತದಲ್ಲಿ ಸಿಕ್ಸ್‌ ಹೊಡೆಯಲೇ ಬೇಕಿದೆ. ಆತ ಬ್ಯಾಟ್‌ ಬೀಸಿದಾಗ ಗಾಳಿಯಲ್ಲಿ ತೂರಿದ ಬಾಲ್‌, ಫೀಲ್ಡರ್‌ ಕೈಗೆ ಸಿಗುತ್ತದೆ ಎಂದು ಭಾವಿಸಿರುವಾಗಲೇ ಅದು ಬೌಂಡರಿ ದಾಟಿರುತ್ತದೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವತಿ ಕ್ಯಾಡ್‌ಬರಿ ಡೈರಿ ಮಿಲ್ಕ್ ತಿನ್ನುತ್ತಾ, ಖುಷಿಯಲ್ಲಿ ಓಡೋಡಿ ಬರುತ್ತಾಳೆ. ಮೈದಾನದೊಳಗೆ ಯುವತಿ ಬಾರದಂತೆ ತಡೆಯಲು ಸೆಕ್ಯುರಿಟಿ ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಎಲ್ಲಾ ಪ್ರೇಕ್ಷಕರೂ ಯುವತಿಯ ಉತ್ಸಾಹವನ್ನು ನೋಡಿ ಖುಷಿ ಪಡುತ್ತಾರೆ”.

2021ರ ಕ್ಯಾಡ್‌ಬರಿ ಜಾಹೀರಾತು ಹೀಗಿದೆ: “ಶತಕದ ಹೊಸ್ತಿಲಿನಲ್ಲಿರುವ ಆಟಗಾರ್ತಿ ಕೊನೆಯ ಎಸೆತದಲ್ಲಿ ಸಿಕ್ಸ್‌ ಹೊಡೆಯಲೇ ಬೇಕಿದೆ. ಆಕೆ ಬ್ಯಾಟ್‌ ಬೀಸಿದಾಗ ಗಾಳಿಯಲ್ಲಿ ತೂರಿದ ಬಾಲ್‌, ಫೀಲ್ಡರ್‌ ಕೈಗೆ ಸಿಗುತ್ತದೆ ಎಂದು ಭಾವಿಸಿರುವಾಗಲೇ ಅದು ಬೌಂಡರಿ ದಾಟಿರುತ್ತದೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವಕ ಕ್ಯಾಡ್‌ಬರಿ ಡೈರಿಮಿಲ್ಕ್ ತಿನ್ನುತ್ತಾ, ಖುಷಿಯಲ್ಲಿ ಓಡೋಡಿ ಬರುತ್ತಾನೆ. ಸೆಕ್ಯುರಿಟಿ ತಡೆಯಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಎಲ್ಲಾ ಪ್ರೇಕ್ಷಕರೂ ಯುವಕನ ಖುಷಿಯನ್ನು ನೋಡಿ ತಾವೂ ಖುಷಿಪಡುತ್ತಾರೆ”

ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ  ಕ್ಯಾಡ್‌ಬರಿ ಡೈರಿ ಮಿಲ್ಕ್‌ ಸಂಸ್ಥೆಯು, “ಯುವಜನರಿಗೆ ಮಾದರಿಯಾಗಿ ಹೊರಹೊಮ್ಮಿರುವ ನಮ್ಮ ಯುವತಿಯರ ಅದ್ಭುತ ಯಶಸ್ಸನ್ನು ಆಚರಿಸಲು, ಖುಷಿಪಡಲು ಕ್ಯಾಡ್‌ಬರಿ ಡೈರಿಮಿಲ್ಕ್‌‌ ಸವಿಯೋಣ” ಎಂದು ಹೇಳಿದೆ.


ಇದನ್ನೂ ಓದಿ: ಹೃತಿಕ್, ಕತ್ರಿನಾ ಆಡ್‌ಗೆ ಹಣ ಸುರಿಯುವುದು ಬಿಟ್ಟು ಡೆಲಿವೆರಿ ಬಾಯ್‌ಗಳಿಗೆ ಸಮರ್ಪಕ ವೇತನ ನೀಡಿ: ಜೊಮ್ಯಾಟೊ ಪ್ರತಿಕ್ರಿಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...