Homeಮುಖಪುಟ'ವಿಶ್ವಾಸ' ಗಳಿಸಿದ ಚಂಪೈ; ಜಾರ್ಖಂಡ್‌ನಲ್ಲಿ 'ರಾಷ್ಟ್ರಪತಿ ಆಳ್ವಿಕೆ' ತಪ್ಪಿಸಿದ್ದೇಗೆ ಹೇಮಂತ್ ಸೊರೇನ್?

‘ವಿಶ್ವಾಸ’ ಗಳಿಸಿದ ಚಂಪೈ; ಜಾರ್ಖಂಡ್‌ನಲ್ಲಿ ‘ರಾಷ್ಟ್ರಪತಿ ಆಳ್ವಿಕೆ’ ತಪ್ಪಿಸಿದ್ದೇಗೆ ಹೇಮಂತ್ ಸೊರೇನ್?

- Advertisement -
- Advertisement -

ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತದ ಮೊದಲು ಹೇಳಿಕೆ ನೀಡಿದ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು, ಹಿಂದಿನ ಮುಖ್ಯಮಂತ್ರಿಯನ್ನು “ಹೇಮಂತ್ ಬಾಬು” ಎಂದು ಉಲ್ಲೇಖಿಸಿದ್ದಾರೆ. ‘ಹೇಮಂತ್ ಸೊರೇನ್ ಭಾಗ 2″ ಎಂದು ಸರ್ಕಾರವನ್ನು ನಡೆಸುವುದಾಗಿ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಆರೋಪದ ನಡುವೆ ರಾಜೀನಾಮೆ ನೀಡುವಂತೆ ಒತ್ತಾಯಿಸಲ್ಪಟ್ಟ ನಂತರ, ಜೈಲು ಪಾಲಾದ ಮಾಜಿ ಮುಖ್ಯಮಂತ್ರಿ ಹೇಮಂತ್, ಹಾಲಿ ಮುಖ್ಯಮಂತ್ರಿಗಿಂತ ಹೆಚ್ಚು ಕಾಲ ಸದನವನ್ನು ಉದ್ದೇಶಿಸಿ ಮಾತನಾಡಿದರು. ಚಂಪೈ ಸೊರೇನ್ ಅವರು ವಿಶ್ವಾಸ ಮತವನ್ನು ಎದುರಿಸುತ್ತಿದ್ದರೆ; ಹೇಮಂತ್ ಸೊರೇನ್ ಅವರು ಅದರ ಉಸ್ತುವಾರಿ ವಹಿಸಿದ್ದ ಚಿತ್ರಣ ಇಂದು ಜಾರ್ಖಂಡ್ ವಿಧಾನಸಭೆಯಲ್ಲಿ ಕಂಡುಬಂತು.

ಜಾರ್ಖಂಡ್ ಮುಕ್ತಿ ಮೋರ್ಚಾದ 48 ವರ್ಷದ ಕಾರ್ಯಾಧ್ಯಕ್ಷ ಹೇಮಂತ್, ತಮ್ಮ ತಂದೆ ಮತ್ತು ಪಕ್ಷದ ಸಂಸ್ಥಾಪಕ ಶಿಬು ಸೊರೇನ್ ಅವರ ನೆರಳಿನಲ್ಲಿ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಳೆದ ವಾರ ಜಾರ್ಖಂಡ್‌ನಲ್ಲಿ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದ ಚತುರ ರಾಜಕೀಯ ನಡೆಗಳಿಂದ ಅನೇಕರನ್ನು ಆಶ್ಚರ್ಯಗೊಳಿಸಿದ್ದಾರೆ. ಹೇಮಂತ್ ಸೊರೇನ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಡೆಯಲು ಮತ್ತು ತಮ್ಮ ಆಪ್ತರಿಗೆ ಅಧಿಕಾರವನ್ನು ಸುಗಮವಾಗಿ ಹಸ್ತಾಂತರಿಸುವಲ್ಲಿ ಹೇಗೆ ಯಶಸ್ವಿಯಾದರು ಎಂಬುದರ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕಳೆದ ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಹೇಮಂತ್ ಸೊರೇನ್ ಅವರ ದೆಹಲಿ ನಿವಾಸಕ್ಕೆ ಆಗಮಿಸಿ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿತ್ತು. ದಾಳಿ ಸಂದರ್ಭದಲ್ಲಿ, ಸೊರೇನ್ ಪತ್ತೆಯಾಗಿರಲಿಲ್ಲ; ಅವರ ಸಿಬ್ಬಂದಿಗಳಿಗೂ ಅವರ ಇರುವಿಕೆಯ ಬಗ್ಗೆ ಸುಳಿವು ಇರಲಿಲ್ಲ. ಈ ಅವಕಾಶವನ್ನು ತ್ವರಿತವಾಗಿ ಬಳಸಿಕೊಂಡ ಬಿಜೆಪಿಯು, ಮುಖ್ಯಮಂತ್ರಿಯನ್ನು “ಕಾಣೆಯಾಗಿದೆ” ಎಂದು ಘೋಷಿಸಿತು. ಜಾರ್ಖಂಡ್ ರಾಜ್ಯವು ಸಾಂವಿಧಾನಿಕ ಬಿಕ್ಕಟ್ಟಿನ ಮಧ್ಯದಲ್ಲಿದೆ ಎಂದು ಹೇಳಿತು. ಆದರೆ ಪಕ್ಷ ಮಾತ್ರ, ‘ಹೇಮಂತ್ ಸೊರೇನ್ ನಮ್ಮ ಸಂಪರ್ಕದಲ್ಲಿದ್ದಾರೆ, ಅವರು ಜನವರಿ 31 ರಂದು ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುತ್ತಾರೆ’ ಎಂದು ಭರವಸೆ ನೀಡಿದರು. ‘ಹೇಮಂತ್ ಸೊರೇನ್ ದೆಹಲಿ ತಲುಪಿದ ವಿಶೇಷ ವಿಮಾನವು ವಿಮಾನ ಏರ್‌ಪೋರ್ಟಿನಲ್ಲೆ ನಿಂತಿದೆ, ಹೇಮಂತ್ ಸೊರೇನ್ ಎಲ್ಲಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ’ ಎಂದು ಇಡಿ ಅಧಿಕಾರಿಗಳು ಹೇಳಿದರು.

ಜನವರಿ 30ರಂದು ಹೇಮಂತ್ ಸೊರೇನ್ ರಾಂಚಿಯಲ್ಲಿ ಕಾಣಿಸಿಕೊಂಡರು. ಜೆಎಂಎಂ ಮತ್ತು ಕಾಂಗ್ರೆಸ್, ಆರ್‌ಜೆಡಿಯ ಆಡಳಿತ ಒಕ್ಕೂಟದ ಶಾಸಕರನ್ನು ಭೇಟಿಯಾದರು. 1,300 ಕಿಮೀ ದೂರದ ರಸ್ತೆ ಪ್ರಯಾಣದ ಮೂಲಕ ಅವರು ಮಾಧ್ಯಮಗಳು, ಇಡಿ ಮತ್ತು ಟೋಲ್ ಬೂತ್ ಕ್ಯಾಮೆರಾಗಳ ಕಣ್ತಪ್ಪಿಸಿ, ಅವರು ರಾಂಚಿ ತಲುಪುವಲ್ಲಿ ಯಶಸ್ವಿಯಾಗಿದ್ದರು.

ವಾಸ್ತವವಾಗಿ, ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಅವರು ಭಾನುವಾರ ರಾತ್ರಿ ಸೊರೇನ್ ತಮ್ಮ ದೆಹಲಿ ನಿವಾಸದಿಂದ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದರು. ಆದರೆ, ಇಡಿ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ಮಾಡುತ್ತಾರೆ ಮತ್ತು ಸಮಯಕ್ಕೆ ಸರಿಯಾಗಿ ತಲುಪುತ್ತಾರೆ ಎಂದು ಮುಖ್ಯಮಂತ್ರಿಗೆ ಹೇಗೆ ತಿಳಿದಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹೇಮಂತ್ ಸೊರೇನ್ ಅವರನ್ನು ಬುಧವಾರದವರೆಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದರು. ಅವರನ್ನು ಬಂಧಿಸಲಾಗುವುದು ಎಂದು ಸ್ಪಷ್ಟವಾದಾಗ, ಅವರು ತಮ್ಮ ಸರ್ಕಾರವನ್ನು ಉಳಿಸುವ ದಿಟ್ಟ ನಡೆಗೆ ಮುಮದಾದರು. ಇಡಿ ಮೂಲಗಳ ಪ್ರಕಾರ, ಹೇಮಂತ್ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಬಂಧನ ಮೆಮೊಗೆ ಸಹಿ ಹಾಕಲು ನಿರಾಕರಿಸಿದ್ದರು ಎನ್ನಲಾಗಿದೆ. ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಿದರೆ ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ರಾಜೀನಾಮೆ ಸಲ್ಲಿಸಿ, ಶಾಸಕಾಂಗ ಪಕ್ಷದ ಸಭೆ ನಡೆಸಿದ ನಂತರ ಇಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.

ಮೆಮೊಗೆ ಸಹಿ ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಹೇಮಂತ್ ಸೊರೇನ್ ಅವರನ್ನು ರಾಜ್ಯಪಾಲರ ನಿವಾಸಕ್ಕೆ ಕರೆದೊಯ್ದರು. ಆದರೆ, ಅಲ್ಲಿಗೆ ಹೋದಾಗ ಆಡಳಿತಾರೂಢ ಸಮ್ಮಿಶ್ರ ಪಕ್ಷದ ಉನ್ನತ ಶಾಸಕರು ಅವರ ಜೊತೆಗಿದ್ದರು. ಹೇಮಂತ್ ಸೊರೇನ್ ಕೆಳಗಿಳಿದ ತಕ್ಷಣ, ಚಂಪೈ ಸೊರೇನ್ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.

ಇದಕ್ಕೂ ಮೊದಲು, ಚಂಪೈ ಸೊರೇನ್ ಅವರು ಜೆಎಂಎಂನ ಶಾಸಕಾಂಗ ಪಕ್ಷದ ನಾಯಕರಾಗಿ ಚುನಾಯಿತರಾಗಿದ್ದರು. ಹೇಮಂತ್ ಸೊರೇನ್ ಅವರು ತಮ್ಮ ಪತ್ನಿ ಕಲ್ಪನಾ ಅವರಿಗೆ ಅಧಿಕಾರ ನೀಡಬಹುದು ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿದರು. ವಾಸ್ತವವಾಗಿ ಕಲ್ಪನಾ ಸೊರೇನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದಕ್ಕೆ ಸೊರೇನ್ ಕುಟುಂಬದಿಂದಲೇ ವಿರೋಧ ವ್ಯಕ್ತವಾಗಿತ್ತು ಎಂದು ಹೇಮಂತ್ ಸೊರೇನ್ ಅವರ ಸೊಸೆ, ಜಾಮಾದ ಜೆಎಂಎಂ ಶಾಸಕಿ ಸೀತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಲ್ಪನಾ ಸೊರೇನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಯಾವುದೇ ಕ್ರಮವನ್ನು ನಾನು ವಿರೋಧಿಸುತ್ತೇನೆ. ಏಕೆಂದರೆ, ಅವರಿಗೆ ರಾಜಕೀಯದ ಅನುಭವವಿಲ್ಲ ಎಂದಿದ್ದರು. ಪಕ್ಷದ ನಾಯಕತ್ವವು ಈ ನಿರ್ಣಾಯಕ ಹಂತದಲ್ಲಿ ಬಿರುಕು ಉಂಟುಮಾಡುವ ಯಾವುದೇ ಮನಸ್ಥಿತಿಯಿಲ್ಲದೆ, ಸುರಕ್ಷಿತ ಆಯ್ಕೆಯತ್ತ ಹೋಯಿತು. ಅಂತಿಮವಾಗಿ ಶಿಬು ಸೊರೇನ್ ಅವರ ದೀರ್ಘಾವಧಿಯ ಸಹಾಯಕ, 67 ವರ್ಷದ ಚಂಪೈ ಸೊರೇನ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಹೇಮಂತ್ ಸೊರೇನ್ ಅವರು ಜನವರಿ 31 ರಂದು ಅಧಿಕಾರದಿಂದ ಕೆಳಗಿಳಿದ ಕೂಡಲೇ ಚಂಪೈ ಸೊರೇನ್ ಅವರು ಹಕ್ಕು ಚಲಾಯಿಸಿದ್ದರೂ ಸಹ, ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಜಾರ್ಖಂಡ್‌ನಲ್ಲಿ ಸರ್ಕಾರ ರಚನೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಜೆಎಂಎಂ ಮತ್ತು ಕಾಂಗ್ರೆಸ್ ಆರೋಪಿಸಿದೆ. ಫೆಬ್ರವರಿ 1 ರಂದು ಚಂಪೈ ಸೊರೇನ್ ಅವರು ರಾಜ್ಯಪಾಲರಿಗೆ ಪತ್ರ ಬರೆದು, ಕಳೆದ 18 ಗಂಟೆಗಳ ಕಾಲದಿಂದ  ಜಾರ್ಖಂಡ್ ರಾಜ್ಯದಲ್ಲಿ ಸರ್ಕಾರವಿಲ್ಲ; ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಅದೇ ದಿನ, ಅವರು ಮತ್ತು ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ಇತರ ನಾಯಕರು ರಾಜ್ಯಪಾಲರನ್ನು ಭೇಟಿಯಾದರು. ವಾಸ್ತವವಾಗಿ, ಚಂಪೈ ಸೊರೇನ್ ಅವರನ್ನು ಬೆಂಬಲಿಸುವ ಶಾಸಕರು ಸಹಿ ಸಂಗ್ರಹಿಸಿ, ತಮ್ಮ ಬೆಂಬ ರೆಕಾರ್ಡ್ ಮಾಡಿ ಬಹುಮತದ ಪುರಾವೆಯಾಗಿ ರಾಜ್ಯಪಾಲರಿಗೆ ತೋರಿಸಿದರು.

ಮರುದಿನ, ಚಂಪೈ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ, ಮೈತ್ರಿ ಪಕ್ಷಗಳ ಇಬ್ಬರು ಶಾಸಕರಾದ ಕಾಂಗ್ರೆಸ್‌ನ ಅಲಂಗೀರ್ ಆಲಂ ಮತ್ತು ಆರ್‌ಜೆಡಿಯ ಸತ್ಯಾನಂದ್ ಭೋಕ್ತಾ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಚಂಪೈ ಸೊರೇನ್ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ನಿಜವಾದ ಯುದ್ಧ ಇಂದು ವಿಶ್ವಾಸಮತ ಗಳಿಸುವ ಪರೀಕ್ಷೆಯಾಗಿತ್ತು. ಚಂಪೈ ಸೊರೇನ್ ಮತ್ತು ಅವರ ಇಬ್ಬರು ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಆಡಳಿತಾರೂಢ ಸಮ್ಮಿಶ್ರ ಶಾಸಕರನ್ನು ಹೈದರಾಬಾದ್‌ಗೆ ವಿಮಾನದಲ್ಲಿ ಕಳುಹಿಸಲಾಗಿತ್ತು. ನಿರ್ಣಾಯಕ ಬಹುಮತ ಯಾಚನೆಗೆ ಮುನ್ನ ಬಿಜೆಪಿಯಿಂದ ಯಾವುದೇ ಕಳ್ಳಬೇಟೆಯ ಪ್ರಯತ್ನವನ್ನು ತಡೆಯಲು ಅವರನ್ನು ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಈ ಮಧ್ಯೆ, ಹೇಮಂತ್ ಸೊರೇನ್ ಅವರು ಬಹುಮತಕ್ಕೆ ಹಾಜರಾಗಲು ಅನುಮತಿಗಾಗಿ ನ್ಯಾಯಾಲಯದಲ್ಲಿ ವಿನಂತಿಯನ್ನು ಸಲ್ಲಿಸಿದರು. ಜೆಎಂಎಂ ನಾಯಕತ್ವವು ಲೋಬಿನ್ ಹೆಂಬ್ರೋಮ್‌ನಂತಹ ಅಸಮಾಧಾನಗೊಂಡ ಶಾಸಕರನ್ನು ಸಮಾಧಾನಪಡಿಸಲು ಪ್ರಾರಂಭಿಸಿತು.

ಬಲ ಪರೀಕ್ಷೆಗೆ ಮುಂಚಿತವಾಗಿಯೆ, ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದ ಶಾಸಕರನ್ನು ರಾಂಚಿಗೆ ಹಿಂತಿರುಗಿಸಲಾಯಿತು. ಹೇಮಂತ್ ಸೊರೇನ್ ಕೂಡ ಸಮಯಕ್ಕೆ ಸರಿಯಾಗಿ ವಿಧಾನಸಭೆ ತಲುಪಿದರು. ಇದರ ಪರಿಣಾಮವಾಗಿ ಚಂಪೈ ಸೊರೇನ್ ಅವರ ಪರವಾಗಿ 47 ಮತಗಳೊಂದಿಗೆ ವಿಶ್ವಾಸ ಮತವನ್ನು ತೆರವುಗೊಳಿಸಿದರು. ಅವರ ವಿರುದ್ಧ ಇಪ್ಪತ್ತೊಂಬತ್ತು ಮತಗಳು ಚಲಾವಣೆಯಾದವು.

ಇದನ್ನೂ ಓದಿ; ‘ನಾನು ಕಣ್ಣೀರು ಸುರಿಸುವುದಿಲ್ಲ, ಆದಿವಾಸಿಗಳು, ಒಬಿಸಿಗಳ ಕಣ್ಣೀರಿಗೆ ಬೆಲೆಯಿಲ್ಲ’: ಹೇಮಂತ್‌ ಸೊರೆನ್‌ ಭಾವುಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆನ್‌ಲೈನ್ ರೈಲು ಬುಕಿಂಗ್‌ಗಳಿಗೆ ಮಾತ್ರ ಅಪಘಾತ ವಿಮೆ ಏಕೆ: ಸುಪ್ರೀಂ ಕೋರ್ಟ್ ಪ್ರಶ್ನೆ

ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ಮಾತ್ರ ಅಪಘಾತ ವಿಮಾ ರಕ್ಷಣೆಯನ್ನು ಏಕೆ ಒದಗಿಸಲಾಗುತ್ತಿದೆ? ಆಫ್‌ಲೈನ್ ಟಿಕೆಟ್ ಖರೀದಿಸುವವರಿಗೆ ಏಕೆ ವಿಸ್ತರಿಸುತ್ತಿಲ್ಲ ಎಂಬುದರ ಕುರಿತು ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಯಿಂದ ವಿವರಣೆ ಕೇಳಿದೆ. ರೈಲ್ವೆ ವ್ಯವಸ್ಥೆ...

ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶ ಕುರಿತ ವಿಶ್ವಸಂಸ್ಥೆಯ ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಎಸ್. ಮುರಳೀಧರ್

ಪೂರ್ವ ಜೆರುಸಲೆಮ್ ಮತ್ತು ಇಸ್ರೇಲ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಕುರಿತಾದ ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ಹಿರಿಯ ವಕೀಲ ಮತ್ತು ಒರಿಸ್ಸಾ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್....

ಲೈಂಗಿಕ ದೌರ್ಜನ್ಯ: ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ದೂರು ದಾಖಲು

ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ನಂತರ ಕೇರಳ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ...

ಉತ್ತರ ಪ್ರದೇಶ-ಮಹಾರಾಷ್ಟ್ರದಲ್ಲಿ ಜನನ ಪ್ರಮಾಣಪತ್ರಕ್ಕೆ ಆಧಾರ್ ಮಾನ್ಯವಲ್ಲ: ಹೊಸ ಮಾರ್ಗಸೂಚಿ

ಜನನ ಪ್ರಮಾಣಪತ್ರಗಳನ್ನು ನೀಡಲು ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಮಾನ್ಯ ಪುರಾವೆಯಾಗಿ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಘೋಷಿಸಿವೆ. ಈ ಉದ್ದೇಶಕ್ಕಾಗಿ ಆಧಾರ್ ಬಳಸುವುದನ್ನು...

ಉತ್ತರಾಖಂಡ| 150 ವರ್ಷಗಳ ಜಾತಿ ತಡೆಗೋಡೆ ಮುರಿದು ತಮ್ಮದೇ ಮುಖ್ಯಸ್ಥರ ಆಯ್ಕೆ ಮಾಡಿಕೊಂಡ ದಲಿತರು

ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ 'ಸೈನಾ' (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ...

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...