Homeಮುಖಪುಟಚಂಡೀಗಢ ಮೇಯರ್ ಚುನಾವಣೆ ವಿವಾದ: 'ಪ್ರಜಾಪ್ರಭುತ್ವದ ಕೊಲೆಗೆ ಅವಕಾಶ ನೀಡುವುದಿಲ್ಲ..' ಎಂದು ಕಿಡಿಕಾರಿದ ಸುಪ್ರೀಂ

ಚಂಡೀಗಢ ಮೇಯರ್ ಚುನಾವಣೆ ವಿವಾದ: ‘ಪ್ರಜಾಪ್ರಭುತ್ವದ ಕೊಲೆಗೆ ಅವಕಾಶ ನೀಡುವುದಿಲ್ಲ..’ ಎಂದು ಕಿಡಿಕಾರಿದ ಸುಪ್ರೀಂ

- Advertisement -
- Advertisement -

‘ಚಂಡೀಗಢ ಮೇಯರ್ ಚುನಾವಣೆಗೆ ವಿವಾದಕ್ಕೆ ಸಂಬಂಧಿಸಿದ ವೀಡಿಯೋಗ್ರಫಿ ಸೇರಿದಂತೆ ಎಲ್ಲ ಮತಪತ್ರಗಳು ಮತ್ತು ಇತರ ಮೂಲ ದಾಖಲೆಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಹಸ್ತಾಂತರಿಸುವಂತೆ’ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಚುನಾವಣಾ ಅಧಿಕಾರಿ ವಿರುದ್ಧ ಕಿಡಿಕಾರಿರುವ ಸುಪ್ರೀಂಕೋರ್ಟ್, ‘ಅವರು (ರಿಟರ್ನಿಂಗ್ ಆಫೀಸರ್) ಮತಪತ್ರಗಳನ್ನು ವಿರೂಪಗೊಳಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆಯೇ? ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾನಾ? ಪ್ರಜಾಪ್ರಭುತ್ವವನ್ನು ಈ ರೀತಿ ಕೊಲೆ ಮಾಡಲು ಅನುಮತಿಸುವುದಿಲ್ಲ’ ಎಂದು ಹೇಳಿ, ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮನೋಜ್ ಸೋಂಕರ್ ವಿರುದ್ಧ ಸೋತಿದ್ದ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಕುಲದೀಪ್ ಧಲೋರ್ ಅವರು ಸಲ್ಲಿಸಿದ ಅರ್ಜಿಯ ಮೇಲೆ ನೋಟಿಸ್ ಜಾರಿ ಮಾಡಿದೆ.

‘ಇದು ಪ್ರಜಾಪ್ರಭುತ್ವದ ಅಪಹಾಸ್ಯ’ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಫೆಬ್ರವರಿ 7 ರಂದು ನಿಗದಿಯಾಗಿದ್ದ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಸಭೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಪ್ರತಿಪಕ್ಷಗಳ ಎಂಟು ಮತಗಳನ್ನು ರದ್ದುಪಡಿಸಿದ ಅಧ್ಯಕ್ಷರ ಕ್ರಮದ ನಂತರ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಕೆಲವು ದಿನಗಳ ನಂತರ ಸುಪ್ರೀಂ ಕೋರ್ಟ್‌ನ ಕಟುವಾದ ಹೇಳಿಕೆ ಬಂದಿದೆ. ಈ ಕ್ರಮವು ವೋಟ್ ಟ್ಯಾಂಪರಿಂಗ್ ಆರೋಪಕ್ಕೆ ಕಾರಣವಾಗಿತ್ತು.

16 ಮತಗಳನ್ನು ಪಡೆದ ಬಿಜೆಪಿಯ ಸೋಂಕರ್ ಅವರು ಮೇಯರ್ ಚುನಾವಣೆಯಲ್ಲಿ ಎಎಪಿಯ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದರು, ಅವರು 12 ಮತಗಳನ್ನು ಪಡೆದರು. ಧಲೋರ್ ಪರವಾಗಿ ಚಲಾವಣೆಯಾಗಿದ್ದ ಎಂಟು ಮತಗಳನ್ನು ಚುನಾವಣಾಧಿಕಾರಿ ಯಾವುದೆ ಕಾರಣ ನೀಡದೆ ತಿರಸ್ಕರಿಸಿ, ಅಸಿಂಧು ಎಂದು ಘೋಷಿಸಿದ್ದರು.

ಭಾನುವಾರ, ಎಎಪಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿತು, ಮತ ಪತ್ರಗಳನ್ನು ‘ತಿರುಚಿದ’ ಆರೋಪದ ಮೇಲೆ ಅಧ್ಯಕ್ಷರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಪಕ್ಷದ ಚಂಡೀಗಢ ಸಹ-ಪ್ರಭಾರಿ ಸನ್ನಿ ಅಹ್ಲುವಾಲಿಯಾ ನೇತೃತ್ವದಲ್ಲಿ ಎಎಪಿ ಕೌನ್ಸಿಲರ್‌ಗಳು ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಯ ಹೊರಗೆ ಧರಣಿ ಕುಳಿತರು.

‘ಈ ರಿಲೇ ಉಪವಾಸ ಸತ್ಯಾಗ್ರಹವು ‘ವೋಟ್ ಚೋರ್’ (ಮತ ಕಳ್ಳ) ಬಿಜೆಪಿ ವಿರುದ್ಧ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ನಡೆಸುತ್ತಿದೆ. ಅಧ್ಯಕ್ಷ ಅನಿಲ್ ಮಸಿಹ್ ಅವರನ್ನು ಬಂಧಿಸುವವರೆಗೆ ಮತ್ತು “ನಕಲಿ” ಮೇಯರ್ ಅನ್ನು ತೆಗೆದುಹಾಕುವವರೆಗೆ ಈ ಪ್ರತಿಭಟನೆಯು ಮುಂದುವರಿಯುತ್ತದೆ’ ಎಂದು ಅವರು ಹೇಳಿದರು.

35 ಸದಸ್ಯ ಬಲದ ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ತಮ್ಮ ಮೈತ್ರಿಗೆ ಸುಲಭ ಜಯವನ್ನು ಭವಿಷ್ಯ ನುಡಿದಿದ್ದವು. ಇದು ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಬಣದ ವಿರೋಧ ಪಕ್ಷಕ್ಕೆ ಆರಂಭಿಕ ಪರೀಕ್ಷೆ ಎಂದು ಬಿಂಬಿಸಲಾಗುತಿತ್ತು.

ಇದನ್ನೂ ಓದಿ; ‘ವಿಶ್ವಾಸ’ ಗಳಿಸಿದ ಚಂಪೈ; ಜಾರ್ಖಂಡ್‌ನಲ್ಲಿ ‘ರಾಷ್ಟ್ರಪತಿ ಆಳ್ವಿಕೆ’ ತಪ್ಪಿಸಿದ್ದೇಗೆ ಹೇಮಂತ್ ಸೊರೇನ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...