Homeಮುಖಪುಟರಾಹುಲ್ 'ಫ್ಲೈಯಿಂಗ್ ಕಿಸ್' ವಿಚಾರ: ಬಿಜೆಪಿಯವರಿಗೆ ದ್ವೇಷವೇ ಅಭ್ಯಾಸವಾಗಿರುವಾಗ, ಪ್ರೀತಿ ಸ್ವೀಕರಿಸಲು ಸಾಧ್ಯವಿಲ್ಲ ಎಂದ ಶಿವಸೇನೆ...

ರಾಹುಲ್ ‘ಫ್ಲೈಯಿಂಗ್ ಕಿಸ್’ ವಿಚಾರ: ಬಿಜೆಪಿಯವರಿಗೆ ದ್ವೇಷವೇ ಅಭ್ಯಾಸವಾಗಿರುವಾಗ, ಪ್ರೀತಿ ಸ್ವೀಕರಿಸಲು ಸಾಧ್ಯವಿಲ್ಲ ಎಂದ ಶಿವಸೇನೆ ಸಂಸದೆ

- Advertisement -
- Advertisement -

”ಕೇಸರಿ ಪಕ್ಷಕ್ಕೆ ಪ್ರೀತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ, ಅದಕ್ಕೆ ದ್ವೇಷವೇ ತುಂಬಾ ಅಭ್ಯಾಸವಾಗಿದೆ” ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಪ್ರಿಯಾಂಕಾ ಚತುರ್ವೇದಿ ಬುಧವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ‘ಫ್ಲೈಯಿಂಗ್ ಕಿಸ್’ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಚತುರ್ವೇದಿ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

”ನಾನು ಸಂದರ್ಶಕರ ಗ್ಯಾಲರಿಯಲ್ಲಿದ್ದೆ … ರಾಹುಲ್ ಗಾಂಧಿ ಅವರು ಹೋಗುವಾಗ ನಾನು ನೋಡಿದೆ, ಅವರು ಪ್ರೀತಿಯ ಸೂಚಕವಾಗಿ ‘ಫ್ಲೈಯಿಂಗ್ ಕಿಸ್ ಮಾಡಿದರು. ಅವರು ಕೇವಲ ಮಹಿಳೆಯರಿಗೆ ಮಾತ್ರ ಮಾಡಲಿಲ್ಲ. ಅವರನ್ನು ಮೊಹಬ್ಬತ್ ಕಿ ದುಕಾನ್ ಎಂದು ಕರೆಯಲಾಗುತ್ತದೆ” ಎಂದು ಶಿವಸೇನಾ ಸಂಸದರು ಹೇಳಿದ್ದಾರೆ.

ಲೋಕಸಭೆ ಸಂಸದರಾಗಿ ಮರುಸೇರ್ಪಡೆಯಾದ ನಂತರ ಮೊದಲ ಬಾರಿಗೆ ಸಂಸತ್ತಿನ ಕೆಳಮನೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ಸಭಾಧ್ಯಕ್ಷರ ಕಡೆಗೆ ‘ಫ್ಲೈಯಿಂಗ್ ಕಿಸ್’ ನೀಡಿದ್ದಾರೆ.

2018ರಲ್ಲಿ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಮೋದಿ ಅವರನ್ನು ಅಪ್ಪಿಕೊಂಡಿದ್ದು ಮತ್ತು ಕಣ್ಣು ಮಿಟುಕಿಸುವಿಕೆಯನ್ನು ಬಿಜೆಪಿ ನಾಯಕರು ನೆನಪಿಸಿಕೊಂಡರು. ಈಗ ಹೊರಡುವಾಗಲೂ ಅವರು ಇದೇ ರೀತಿ ಸನ್ನೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹರಿಹಾಯ್ದರು.

ಬಿಜೆಪಿಯವರು ಇದನ್ನು “ನಾಚಿಕೆಗೇಡು” ಮತ್ತು “ಮಹಿಳೆಯರಿಗೆ ಅವಮಾನ” ಎಂದು ಕರೆಯುವುದರೊಂದಿಗೆ ಭಾರೀ ರಾಜಕೀಯ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಕಾಂಗ್ರೆಸ್ ಸಂಸದರು ”ಮಹಿಳಾ ಸಂಸದರನ್ನು ಅವಮಾನಿಸಿದ್ದಾರೆ” ಎಂದು ಆರೋಪಿಸಿ ಕೇಸರಿ ಪಕ್ಷದ ಮಹಿಳಾ ಸಂಸದರು ಕಾಂಗ್ರೆಸ್ ಸಂಸದರ ವಿರುದ್ಧ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಔಪಚಾರಿಕ ದೂರು ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು: ರಾಹುಲ್ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...