Homeಮುಖಪುಟಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು: ರಾಹುಲ್ ವಾಗ್ದಾಳಿ

ಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು: ರಾಹುಲ್ ವಾಗ್ದಾಳಿ

- Advertisement -
- Advertisement -

ಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲ, ಅವರು ಭಾರತ ಮಾತೆಯ ಹಂತಕರು ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಮಣಿಪುರ ಹಿಂಸಾಚಾರ ಪ್ರಸ್ತಾಪಿಸಿ ಟ್ವಿಟ್ ಮಾಡಿರುವ ರಾಹುಲ್, ”ಇಂದು ಇಡೀ ದೇಶದ ಮೇಲೆ ಬಿಜೆಪಿಯವರು ಸೀಮೆ ಎಣ್ಣೆ ಎರಚಿದ್ದಾರೆ. ಮೊದಲು ಮಣಿಪುರದ ಮೇಲೆ ಎರಚಿದರು, ಬೆಂಕಿ ಹಚ್ಚಿದರು. ನಂತರ ಹರಿಯಾಣದ ಮೇಲೆ ಚಿಮುಕಿಸಿದರು ಅದೂ ಉರಿಯುತ್ತಿದೆ. ಇದೀಗ ಇಡೀ ದೇಶವನ್ನು ಸುಡುವಲ್ಲಿ ನಿರತರಾಗಿದ್ದಾರೆ, ಅವರು (ಬಿಜೆಪಿಗರು) ಭಾರತಮಾತೆಯ ರಕ್ಷಕರಲ್ಲ, ಅವರು ಭಾರತ ಮಾತೆಯ ಹಂತಕರು” ಎಂದು ಕಿಡಿಕಾರಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿಯೇ ಎಲ್ಲ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.

ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ಮಂಗಳವಾರದಿಂದ ಚರ್ಚೆ ಆರಂಭವಾಗಿದ್ದು, ಇಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದಿರುವುದನ್ನು ಟೀಕಿಸಿದ್ದಾರೆ.

”ಕೆಲವು ದಿನಗಳ ಹಿಂದೆಯಷ್ಟೇ ನಾನು ಮಣಿಪುರಕ್ಕೆ ಭೇಟಿ ನೀಡಿದ್ದೇನೆ ಆದರೆ, ಪುಧಾನಿ ಮೋದಿ ಇದುವರೆಗೆ ಅಲ್ಲಿಗೆ ಹೋಗಿಲ್ಲ. ಅವರು ಮಣಿಪುರವನ್ನು ದೇಶದ ಭಾಗವೆಂದು ಪರಿಗಣಿಸಿಲ್ಲ. ನಾನು ಮಣಿಪುರ ಎಂಬ ಪದವನ್ನು ಬಳಕೆ ಮಾಡಿದ್ದೇನೆ. ಅದರೆ ನಿಜಾಂಶವೆಂದರೆ ಮಣಿಪುರ ಅಸ್ತಿತ್ವದಲ್ಲಿಲ್ಲ. ಬಿಜೆಪಿ ಸರ್ಕಾರ ಮಣಿಪುರವನ್ನು ಇಬ್ಬಾಗ ಮಾಡಿದೆ. ಮಣಿಪುರವನ್ನು ಒಡೆಯಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

”ಮಣಿಪುರದಲ್ಲಿ ಭಾರತಮಾತೆಯ ಕೊಲೆಯಾಗಿದೆ. ಬಿಜೆಪಿಯವರ ರಾಜಕೀಯ ಮಣಿಪುರವನ್ನು ಮಾತ್ರವಲ್ಲ ಹಿಂದೂಸ್ತಾನವನ್ನು ಕೊಲೆ ಮಾಡಿದೆ. ಮಣಿಪುರದಲ್ಲಿ ಜನರನ್ನು ಹೊಂದಿರುವ ನೀವು ಭಾರತ ಮಾತೆಯನ್ನೂ ಕೊಂದಿದಿರಿ, ನೀವು ದೇಶಭಕ್ತರಲ್ಲ, ದೇಶದ್ರೋಹಿಗಳು” ಎಂದು ಬಿಜೆಪಿಗರ ವಿರುದ್ಧ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಿಂದ ನುಹ್‌ವರೆಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ: ಮೋದಿ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ ರಾಹುಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...