Homeಮುಖಪುಟರಾಜ್ಯಸಭೆಗೆ ಟೊಮೆಟೊ ಹಾರವನ್ನು ಧರಿಸಿ ಬಂದ ಎಎಪಿ ಸಂಸದ

ರಾಜ್ಯಸಭೆಗೆ ಟೊಮೆಟೊ ಹಾರವನ್ನು ಧರಿಸಿ ಬಂದ ಎಎಪಿ ಸಂಸದ

- Advertisement -
- Advertisement -

ಎಎಪಿ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ಬುಧವಾರ ರಾಜ್ಯಸಭೆಗೆ ಟೊಮೆಟೊ ಹಾರವನ್ನು ಧರಿಸಿ ಬಂದಿದ್ದು, ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದರು.

ಸಂಸದರ ನಡೆಗೆ ಸಭಾಧ್ಯಕ್ಷರಾದ ಜಗದೀಪ್‌ ಧನಕರ್‌ ಅವರು ತೀವ್ರ ಆಕ್ಷೇಪ ವ್ಯಕ್ತಡಿಸಿದರಲ್ಲದೆ, ಇದರಿಂದ ಭಾರಿ ನೋವುಂಟಾಗಿದೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಕೆಲವು ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಅವರು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಪ್ರವೇಶಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಜಗದೀಪ್ ಧನಕರ್, ಸಭೆಯ ಅಧ್ಯಕ್ಷನಾಗಿ ಸುಶೀಲ್ ಗುಪ್ತಾ ಅವರು ಸಭೆಗೆ ಬಂದ ರೀತಿಯಿಂದ ನನಗೆ ಬೇಸರವಾಗಿದೆ. ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ನಾನು ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು  ಹೇಳಿ ಕಲಾಪವನ್ನು ಮುಂದೂಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಎಎಪಿ, ಮೋದಿಯ ಹಣದುಬ್ಬರ ಬಡ ಜನರ ರಕ್ತ ಹೀರುತ್ತಿದೆ.ಎಎಪಿ ಶಾಸಕರು ಟೊಮೆಟೊ ಮತ್ತು ಶುಂಠಿಯ ಹಾರವನ್ನು ಹಾಕಿ ಪಾರ್ಲಿಮೆಂಟ್ ಗೆ ಪ್ರವೇಶಿಸಿರುವುದು ಬೆಲೆಯೇರಿಕೆ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು: ರಾಹುಲ್ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read