Homeಮುಖಪುಟಮಣಿಪುರದಿಂದ ನುಹ್‌ವರೆಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ: ಮೋದಿ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ ರಾಹುಲ್

ಮಣಿಪುರದಿಂದ ನುಹ್‌ವರೆಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ: ಮೋದಿ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ ರಾಹುಲ್

- Advertisement -
- Advertisement -

ಬುಧವಾರ ಮಧ್ಯಾಹ್ನ 12ಕ್ಕೆ ಲೋಕಸಭೆ ಕಲಾಪ ಪುನಾರಂಭವಾಗಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಕಲಾಪ ಆರಂಭಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಮಾತನಾಡುತ್ತಿದ್ದಾರೆ.

ಸೋಮವಾರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ಇದು ರಾಹುಲ್ ಗಾಂಧಿಯವರ ಮೊದಲ ಭಾಷಣವಾಗಿದೆ. ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಲು ಎದ್ದು ನಿಂತ ರಾಹುಲ್ ಗಾಂಧಿ ಹಿಂದಿನ ಸಂಸತ್ತಿನ ಅಧಿವೇಶನದಲ್ಲಿ ಭಾಷಣವನ್ನು ಉಲ್ಲೇಖಿಸಿದ್ದು, ಸ್ಪೀಕರ್ ಈಗ ರಿಲ್ಯಾಕ್ಸ್ ಆಗಬಹುದು ಎಂದಿದ್ದಾರೆ.

ಅವಿಶ್ವಾಸ ನಿರ್ಣಯದ ಕುರಿತು ಮಾತನಾಡುವಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು, ತಮ್ಮ ಭಾರತ್ ಜೋಡೋ ಯಾತ್ರೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪ್ರಯಾಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಚಾಲನೆಯಲ್ಲಿದೆ ಎಂದು ಅವರು ಹೇಳಿದರು.

ಬಿಜೆಪಿಯನ್ನು ಟೀಕಿಸುವ ಮೂಲಕ ಭಾಷಣ ಆರಂಭಿಸಿದ ರಾಹುಲ್ ”ನೀವು (ಬಿಜೆಪಿ) ಇಂದು ಭಯಪಡುವ ಅಗತ್ಯವಿಲ್ಲ, ನನ್ನ ಭಾಷಣವು ಅದಾನಿ ವಿಷಯದ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ . ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು ಯಾತ್ರೆ ಇನ್ನೂ ಮುಗಿದಿಲ್ಲ. ನೀವು ಯಾತ್ರೆಯನ್ನು (ಭಾರತ್ ಜೋಡೋ ಯಾತ್ರೆ) ಏಕೆ ಪ್ರಾರಂಭಿಸಿದ್ದೀರಿ ಎಂದು ಜನರು ನನ್ನನ್ನು ಕೇಳುತ್ತಿದ್ದರು. ನಾನು ಯಾಕೆ ಯಾತ್ರೆ ಆರಂಭಿಸಿದೆ ಎಂಬುದು ನನಗೇ ಗೊತ್ತಿಲ್ಲ. ಆದರೆ ಆ ಪ್ರಯಾಣದಲ್ಲಿ  ಜನರ  ನೋವು, ಸಂಕಟ, ಸಮಸ್ಯೆಗಳು ನನ್ನದೇ ಸಮಸ್ಯೆಗಳಾದವು. ಯಾತ್ರೆಯ ವೇಳೆ ನನ್ನಲ್ಲಿದ್ದ ಅಹಂಕಾರದ ಭಾವನೆ ಮಾಯವಾಯಿತು.

”INDIA ಜನರ ಧ್ವನಿ. ಈ ಧ್ವನಿಗಳನ್ನು ಆಲಿಸಲು, ನಾವು ನಮ್ಮ ಆಸೆಗಳನ್ನು ತ್ಯಾಗ ಮಾಡಬೇಕು ಮತ್ತು ನಮ್ಮ ಅಹಂ ಮತ್ತು ದ್ವೇಷವನ್ನು ಬಿಟ್ಟುಬಿಡಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ”ಮಣಿಪುರದಿಂದ ನುಹ್ ವರೆಗೆ ನೀವು ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ” ಎಂದು ಹೇಳಿದ್ದಾರೆ.

”ಬಿಜೆಪಿಯ ರಾಜಕೀಯಕ್ಕೆ ಮಣಿಪುರವನ್ನು ಮಾತ್ರವಲ್ಲ ಇಡೀ ಭಾರತವನ್ನು ಕೊಲ್ಲಲಾಗಿದೆ… ಬಿಜೆಪಿ ದೇಶ ವಿರೋಧಿಯಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಲೋಕಸಭೆ ಸಂಸದ ಗೌರವ್ ಗೊಗೊಯ್ ಅವರು ಮಂಗಳವಾರ ಅವಿಶ್ವಾಸ ನಿರ್ಣಯವನ್ನು ಆರಂಭಿಸಿದ್ದು,  ಮಣಿಪುರ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು “ಮೌನವನ್ನು ಮುರಿಯಲು ವಿರೋಧ ಪಕ್ಷದ ಐಎನ್ ಡಿಐ(INDIA) ಮೈತ್ರಿಕೂಟವು ಈ ನಿರ್ಣಯವನ್ನು ಮಂಡಿಸಿದೆ. ಆಗಲಾದರೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉತ್ತರವನ್ನು ನೀಡುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.

ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಸರ್ಕಾರದ ಪರವಾಗಿ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ”ಪ್ರಧಾನಿ ಇದು ಅವಿಶ್ವಾಸ-ಮತವಲ್ಲ, ಇದು ‘ವಿರೋಧದ ಮೇಲಿನ ನಂಬಿಕೆ’ ಮತ ಎಂದು ಹೇಳುತ್ತಾರೆ. ಅವರನ್ನು ಯಾರು ಬೆಂಬಲಿಸುತ್ತಾರೆ ಎಂಬುದನ್ನು ಅವರು ನೋಡಲು ಬಯಸುತ್ತೇವೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...