ಛತ್ತೀಸ್‌ಗಢದ ಬಿಜಾಪುರದಲ್ಲಿ ಮಾವೋವಾದಿಗಳು ಮತ್ತು ಯೋಧರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 22 ಭದ್ರತಾ ಸಿಬ್ಬಂದಿ ಹುತಾತ್ಮರಾದ ನಂತರ ರಾಕೇಶ್ವರ ಸಿಂಗ್ ಮನ್ಹಾಸ್ ಎಂಬ ಯೋಧರನ್ನು ಅಪಹರಿಸಲಾಗಿದೆ ಎಂದು ಮಾವೋವಾದಿಗಳು ಸ್ಪಷ್ಟಪಡಿಸಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿಗಳು) ಏಪ್ರಿಲ್ 6 (ಮಂಗಳವಾರ) ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಪಹರಿಸಿರುವ ಯೋಧ ಸುರಕ್ಷಿತವಾಗಿದ್ದು, ಮಾತುಕತೆಗಾಗಿ ಸರ್ಕಾರವು ಮಧ್ಯಸ್ಥಿಕೆ ವಹಿಸುವವರ ಹೆಸರನ್ನು ಘೋಷಿಸಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಾವೋವಾದಿಗಳು ತಮ್ಮ ಹೇಳಿಕೆಯಲ್ಲಿ, ’ನಮ್ಮ ಹೋರಾಟವು ಭದ್ರತಾ ಸಿಬ್ಬಂದಿಯೊಂದಿಗೆ ಅಲ್ಲ, ಮೋದಿ-ಶ ಸರ್ಕಾರದ ಆದೇಶದ ಮೇರೆಗೆ ಪಡೆಗಳು ಪ್ರಾರಂಭಿಸಿದ ದಾಳಿಗೆ ತಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಹುತಾತ್ಮ ಸ್ಮಾರಕಕ್ಕೆ ಸೇರಿದ ದೇಶದ 23 ರಾಜ್ಯಗಳ 1,500 ಹಳ್ಳಿಗಳ ಮಣ್ಣು
“ಸರ್ಕಾರವು ಮೊದಲು ಮಧ್ಯವರ್ತಿಗಳ ಹೆಸರನ್ನು ಘೋಷಿಸಬೇಕು, ಅದರ ನಂತರ ನಮ್ಮ ಬಳಿ ಒತ್ತೆಯಾಳಾಗಿರುವ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಅವರು ನಮ್ಮ ಭದ್ರತೆಯಲ್ಲಿ ಸುರಕ್ಷಿತರಾಗಿರುತ್ತಾರೆ” ಎಂದು ಸಿಪಿಐ (ಮಾವೋವಾದಿಗಳು) ದಂಡಕಾರಣ್ಯ ವಿಶೇಷ ವಲಯ ಸಮಿತಿ ಮಂಗಳವಾರ ಹೇಳಿಕೆ ನೀಡಿದೆ.
ಕಮಾಂಡೋ ರಾಕೇಶ್ವರ ಸಿಂಗ್ ಮನ್ಹಾಸ್ ಅಪಹರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಅವರು ಮಾಧ್ಯಮಗಳಿಂದ ಪಡೆದದ್ದು, ನಮ್ಮ ಮತ್ತು ಮಾವೋವಾದಿಗಳ ನಡುವೆ ನೇರ ಸಂಪರ್ಕವಿಲ್ಲ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
“ಯಾರೂ ಸಿಆರ್‌ಪಿಎಫ್‌ಗೆ ಮಾಹಿತಿ ನೀಡಿಲ್ಲ. ಸಿಆರ್‌ಪಿಎಫ್ ಘಟಕವನ್ನು ಯಾರೂ ಸಂಪರ್ಕಿಸಿಲ್ಲ. ಆದರೆ, ಅಪಹರಣದ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ. ಅವರನ್ನು ಪತ್ತೆಹಚ್ಚಲು ಎಲ್ಲಾ ಹಂತಗಳಲ್ಲಿ ಎಲ್ಲಾ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುತ್ತಿದೆ ”ಎಂದು ಸಿಆರ್‌ಪಿಎಫ್ ವಕ್ತಾರ ದಲಿಪ್ ಅಂಬೇಶ್ ಅವರನ್ನು ದಿ ಕ್ವಿಂಟ್ ಉಲ್ಲೇಖಿಸಿದೆ.
ಛತ್ತಿಸ್‌ಗಢ ರಾಜಧಾನಿ ರಾಯ್‌ಪುರದಿಂದ 400 ಕಿ.ಮೀ ದೂರದಲ್ಲಿರುವ ಬಿಜಾಪುರದಲ್ಲಿ ಏಪ್ರಿಲ್ 3 ರ ಶನಿವಾರ ಮಾವೋವಾದಿಗಳೊಂದಿಗೆ ನಡೆದ ಸಂಘರ್ಷದಲ್ಲಿ ಕನಿಷ್ಠ 22 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಒಬ್ಬ ಸದಸ್ಯರೊಬ್ಬರು ಕಾಣೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ‘ಕೊರೊನಾ ನಾಟಕ’- ಜಾರಕಿಹೊಳಿ ವಿರುದ್ದ ಕಮಿಷನರ್‌ಗೆ ಪತ್ರ ಬರೆದ ವಕೀಲ ಜಗದೀಶ್


