Homeಮುಖಪುಟಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

- Advertisement -
- Advertisement -

ನಮೀಬಿಯಾದಿಂದ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದಾರೆ. ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾದ ಕಾರಣ, ಸರ್ಕಾರ ಮಾಡಿರುವ ಈ ಕೆಲಸ ಮಹತ್ವದೆಂದು ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಆದರೆ ಈ ಚೀತಾಗಳ ಹಿಂದೆಯೇ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತರಲಾಗಿರುವ ಪ್ರಾಣಿಗಳ ಮೇಲೆ ಬೀರುವ ಪರಿಣಾಮಗಳೇನು? ಏನೆಲ್ಲ ಎಚ್ಚರ ವಹಿಸಬೇಕಾಗುತ್ತದೆ? ಕುನೋ ಪ್ರದೇಶದಲ್ಲಿರುವ ಆದಿವಾಸಿಗಳ ಕಥೆ ಏನು? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪರಿಸರತಜ್ಞರು ಈ ಕುರಿತು ಹಲವಾರು ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪರಿಸರ ತಜ್ಞರಾದ ಕಲ್ಕುಳಿ ವಿಠಲ ಹೆಗ್ಡೆ ಹಾಗೂ ಪರಿಸರ ವಿಜ್ಞಾನಿ ನಾಗೇಶ ಹೆಗಡೆಯವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಲ್ಕುಳಿ ವಿಠಲ ಹೆಗ್ಡೆಯವರು ಮಾತನಾಡಿ, “ಎಲ್ಲ ಪ್ರಾಣಿಗಳೂ ತಮ್ಮದೇ ಆದ ಸೀಮಿತ ಪ್ರದೇಶಕ್ಕೆ ಹೊಂದಿಕೊಂಡಿರುತ್ತವೆ. ಅವುಗಳು ತಮ್ಮ ಪ್ರದೇಶವನ್ನು ಗುರುತು ಹಾಕಿಕೊಂಡಿರುತ್ತವೆ. ಚಿರತೆ, ಹುಲಿಯಂತಹ ಪ್ರಾಣಿಗಳು ತಾವು ಹೊಂದಿಕೊಂಡ ಪ್ರದೇಶವನ್ನು ಬಿಟ್ಟು ಹೋಗುವುದಿಲ್ಲ. ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೂ ಇಚ್ಛಿಸುವುದಿಲ್ಲ. ಯಾಕೆಂದರೆ ಬೇರೆ ಪ್ರದೇಶಕ್ಕೆ ಹೋದರೆ ಘರ್ಷಣೆಯಾಗುತ್ತದೆ. ಹೀಗಾಗಿ ಪ್ರಾಣಿಗಳಲ್ಲಿ ಪ್ರಾದೇಶಿಕವಾದ ಹೊಂದಾಣಿಕೆ ಇರುತ್ತದೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮೀಬಿಯಾದಲ್ಲಿನ ವಾತಾವರಣಕ್ಕೂ ಕುನೋ ರಾಷ್ಟ್ರೀಯ ಉದ್ಯಾನದಲ್ಲಿನ ವಾತಾವರಣಕ್ಕೂ ಯಾವುದೇ ವ್ಯತ್ಯಾಸವಿಲ್ಲದೆ ಇರಬಹುದು. ಆದರೆ ತನ್ನದಲ್ಲದ ಪ್ರದೇಶದಲ್ಲಿ ಈ ಪ್ರಾಣಿಗಳು ಬದುಕಿದಾಗ ಅತಿಹೆಚ್ಚು ಕ್ರೂರವಾಗುವ ಸಾಧ್ಯತೆಗಳು ಇರುತ್ತವೆ. ಯಾಕೆಂದರೆ ಈ ಪ್ರಾಣಿಗಳು ಸಹಜವಾಗಿ ಭಯಗೊಂಡಿರುತ್ತವೆ. ಕಂಡಕಂಡವರ ಮೇಲೆಲ್ಲಾ ಎರಗಲು ಮುಂದಾಗುತ್ತವೆ. ಕೃತಕವಾದ ಆಹಾರವನ್ನು ಕೊಡದಿದ್ದರೆ ಅವು ಭಯಗೊಂಡು ಸತ್ತೂ ಹೋಗಬಹುದು. ಎರಡು ಸಾಧ್ಯತೆ ಇದೆ. ಚೀತಾಗಳೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಎಲ್ಲವನ್ನೂ ಮುಗಿಸಬಹುದು, ಅಥವಾ ಹೆದರಿಕೊಂಡು ತಾವೇ ಸಾಯಬಹುದು” ಎಂದು ವಿವರಿಸಿದರು.

ಸಾಹಿತ್ಯವಿಲ್ಲದ ಹೋರಾಟ, ಹೋರಾಟವಿಲ್ಲದ ಸಾಹಿತ್ಯ ಜೊಳ್ಳು: ಕಲ್ಕುಳಿ ವಿಠಲ ಹೆಗ್ಡೆ | Prajavani
ಕಲ್ಕುಳಿ ವಿಠಲ ಹೆಗ್ಡೆ

“ನಮ್ಮಲ್ಲಿ ಯಾರಾದರೂ ಹಾವುಗಳನ್ನು ಹಿಡಿದಾಗ, ಯಾವುದೋ ಒಂದು ದೂರದ ಪ್ರದೇಶಕ್ಕೆ ಬಿಡುವುದನ್ನು ನೋಡಿದ್ದೇವೆ. ತನ್ನದಲ್ಲದ ಪ್ರದೇಶವೆಂದರೆ ಈ ಹಾವಿಗೆ ಬೇರೆಯ ದೇಶಕ್ಕೆ ಹೋದಂತೆ ಭಾಸವಾಗುತ್ತದೆ. ತನಗೆ ಪರಿಚಯವಿಲ್ಲದ ನೆಲದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾದರೆ ಬಹಳ ಕಾಲ ಬೇಕಾಗುತ್ತದೆ. ಪೇಟೆಗಳಲ್ಲಿ ಮಂಗನ ಕಾಟ ಹೆಚ್ಚಾದಾಗ ಗುಟ್ಟಾಗಿ ಅವುಗಳನ್ನು ಹಿಡಿದು, ಆಗುಂಬೆ ಕಾಡಿಗೆ ತಂದು ಬಿಡುವವರು ಇದ್ದಾರೆ. ಈ ವರ್ಷ ತಂದು ಬಿಟ್ಟ ಮಂಗಗಳಲ್ಲಿ ಅರ್ಧದಷ್ಟು ಮುಂದಿನ ವರ್ಷ ಇರುವುದಿಲ್ಲ” ಎಂದರು.

“ಆಫ್ರಿಕಾದಲ್ಲಿ ಮನುಷ್ಯರೊಟ್ಟಿಗೆ ಬದುಕಿದ ಪ್ರಾಣಿಗಳನ್ನು (ಅಂದರೆ ಮೃಗಾಲಯದಲ್ಲಿ ಬೆಳೆದ ಪ್ರಾಣಿಗಳನ್ನು) ತಂದಿದ್ದಾರೆ. ಇವುಗಳು ಕಾಡಲ್ಲಿ ಬೆಳೆದ ಪ್ರಾಣಿಗಳಲ್ಲ. ಹೀಗಾಗಿ ಮನುಷ್ಯರೊಟ್ಟಿಗೆ ಬೆಳೆದ ಪ್ರಾಣಿಗಳನ್ನು ಮನುಷ್ಯರೇ ಬೆಳೆಸಬೇಕು. ಇವುಗಳು ಸ್ವತಂತ್ರವಾಗಿ ಬೆಳೆಯಲೆಂದು ಬಿಟ್ಟು ಉಪವಾಸ ಕೆಡವಿದರೆ ಮೊದಲು ದಾಳಿ ಮಾಡುವುದು ಮನುಷ್ಯರ ಮೇಲೆಯೇ. ಯಾಕೆಂದರೆ ಈ ಪ್ರಾಣಿಗಳಿಗೆ ಮನುಷ್ಯರ ವಿಷಯ ಮಾತ್ರ ಗೊತ್ತಿರುತ್ತದೆ” ಎಂದು ಎಚ್ಚರಿಸಿದರು.

“ಮೃಗಾಲಯದಲ್ಲಿ ಜನಿಸಿದ ಹುಲಿಗಳನ್ನು ನಾಗರಹೊಳೆ ಕಾಡಿಗೆ ಬಿಟ್ಟರು. ಹುಲಿ ಸಂತತಿ ಹೆಚ್ಚು ಮಾಡಬೇಕೆಂದು ಯೋಚಿಸಿದ್ದರು. ಈ ಹುಲಿಗಳು ಹಿಡಿದದ್ದು ಅರಣ್ಯಾ ಸಿಬ್ಬಂದಿಗಳನ್ನು ಎಂಬುದನ್ನು ಮರೆಯಬಾರದು. ಮನುಷ್ಯರ ಬಗ್ಗೆ ಈ ಪ್ರಾಣಿಗಳಿಗೆ ಗೊತ್ತಿರುತ್ತದೆಯೇ ಹೊರತು, ಶಿಕಾರಿ ಮಾಡಿ ಅಭ್ಯಾಸವಿರುವುದಿಲ್ಲ. ತಾನು ಶಿಕಾರಿ ಮಾಡಬೇಕಾದ ಸಸ್ಯಾಹಾರಿ ಪ್ರಾಣಿ ಎಲ್ಲಿರುತ್ತದೆ ಎಂದು ಈ ಚೀತಾಕ್ಕೆ ಗೊತ್ತಿರಬೇಕು, ಓಡಿಸಿಕೊಂಡು ಹೋಗಿ ಹಿಡಿಯಬೇಕು. ಆಫ್ರಿಕಾದಲ್ಲಿ ಇದ್ದ ಪರಿಸ್ಥಿತಿಗೂ ಇಲ್ಲಿಗೂ ಹೊಂದಿಕೊಳ್ಳಬೇಕು. ಇದು ಬಾಡಿಗೆ ಮನೆ ಬದಲಿಸಿದಷ್ಟು ಸುಲಭವಲ್ಲ” ಎಂದು ಅಭಿಪ್ರಾಯಪಟ್ಟರು.

“ಈ ಚೀತಾಗಳನ್ನು ಮೃಗಾಲಯದಲ್ಲಿ ಸಾಕಬಹುದಿತ್ತು. ಉದಾಹರಣೆಗೆ ಅಮೆರಿಕಾದಲ್ಲಿ ಹುಲಿ ಇರದಿದ್ದರೂ ಅಲ್ಲಿನ ಮೃಗಾಲಯಗಳಲ್ಲಿ ಭಾರತದ ಹುಲಿಗಳನ್ನು ನೋಡಬಹುದು. ಸೂಕ್ತ ವಾತಾವರಣ ಕಲ್ಪಿಸಿ ಪೋಷಣೆ ಮಾಡುತ್ತಾರೆ. ಆದರೆ ಇವುಗಳನ್ನು ಮುಕ್ತವಾದ ಕಾಡಿಗೆ ಬಿಟ್ಟರೆ ಉಳಿಯುವುದು ಕಷ್ಟ. ಮತ್ತಷ್ಟು ಅನಾಹುತಗಳಿಗೆ ಎಡೆಮಾಡಿಕೊಟ್ಟಂತೆ” ಎಂದು ಭವಿಷ್ಯ ನುಡಿದರು.

ಕಾನೂನಿನ ತೊಡಕು ಎದುರಾಗುತ್ತದೆ: ನಾಗೇಶ ಹೆಗಡೆ

ಪರಿಸರ ತಜ್ಞರಾದ ನಾಗೇಶ ಹೆಗಡೆಯವರು ಮಾತನಾಡಿ, “ಚೀತಾಗಳು ಹುಲ್ಲುಗಾವಲು ಪ್ರದೇಶದಲ್ಲಿ ಬದುಕುವ ಪ್ರಾಣಿಗಳಾಗಿವೆ. ಆದರೆ ಇಲ್ಲಿ ಹುಲ್ಲುಗಾವಲು ಇಲ್ಲ. ಇದ್ದಬದ್ಧ ಮರಗಳನ್ನು ಕಡಿದು ಹುಲ್ಲುಗಾವಲು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವುಗಳ ಆಹಾರಕ್ಕೆ ಸಾಕಾಗುವಷ್ಟು ಸಸ್ಯಾಹಾರಿ ಪ್ರಾಣಿಗಳು ಬೇಕು. ಸದ್ಯಕ್ಕೆ ಸಮಸ್ಯೆ ಇಲ್ಲವಾದರೂ ಮುಂದಿನ ವರ್ಷಗಳಲ್ಲಿ ಕೃಷ್ಣಮೃಗ, ಜಿಂಕೆ ಮೊದಲಾದ ಪ್ರಾಣಿಗಳನ್ನು ಬೇರೆ ಕಡೆಯಿಂದ ತರಬೇಕಾಗುತ್ತದೆ. ಅದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಒಂದೆರಡು ಸಾವಿರ ಜಿಂಕೆಗಳನ್ನು ತಂದು ಇಲ್ಲಿಗೆ ಬಿಟ್ಟೆವೆಂದೂ ತಿಳಿಯೋಣ. ಆದರೆ ಅಲ್ಲಿ ಈಗಾಗಲೇ ಕತ್ತೆಕಿರುಬ, ಚಿರತೆಗಳಿವೆ. ಇವುಗಳೇ ಜಿಂಕೆಗಳನ್ನು ತಿಂದು ಮುಗಿಸುತ್ತವೆ. ಚೀತಾಗಳಿಗಿಂತ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಹೇಳಿದರು.

May be an image of 1 person
ನಾಗೇಶ ಹೆಗಡೆ

“ಚೀತಾಕ್ಕೆ ಹೋಲಿಸಿದರೆ ಚಿರತೆ ಅತ್ಯಂತ ಅಪಾಯಕಾರಿ ಪ್ರಾಣಿ. ಚಿರತೆಯಂತೆ ಮರ ಹತ್ತಲೂ ಬಾರದ ಪ್ರಾಣಿ ಇದು. ವೇಗವಾಗಿ ಓಡಬಲ್ಲವು ಅಷ್ಟೇ. ಆದರೆ ಚಿರತೆ ಹೊಂಚಿಹಾಕಿ ಭೇಟಿಯಾಡುತ್ತದೆ” ಎಂದು ತಿಳಿಸಿದರು.

“ನಮ್ಮಲ್ಲಿ ಸಾಕಷ್ಟು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿವೆ. ಅವುಗಳ ಉಳಿವಿಗಾಗಿ ಮೋದಿಯವರು ಏನನ್ನೂ ಮಾಡಿಲ್ಲ. ವನ್ಯಜೀವಿ ಮಂಡಳಿಗೆ ಮೋದಿಯವರೇ ಅಧ್ಯಕ್ಷರಾಗಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಿಂದ ಸಣ್ಣದೊಂದು ಸಭೆ ಮಾಡಿದ್ದು ಕಾಣಲಿಲ್ಲ” ಎಂದು ವಿಷಾದಿಸಲಿಲ್ಲ.

“ಗುಜರಾತ್‌ನಲ್ಲಿ ಒಂದೇ ಗುಂಪಿನಲ್ಲಿ ಸಿಂಹಗಳಿವೆ. ರೋಗರುಜಿನ ಬಂದರೆ ಒಮ್ಮೆಲೇ ಸಾಯುತ್ತವೆ. ಹೀಗಾಗಿ ಒಂದಿಷ್ಟು ಸಿಂಹಗಳನ್ನು ಕುನೋಗೆ ತರಬೇಕೆಂದಿದ್ದರು. ಇದಕ್ಕೆ ಗುಜರಾತ್‌ ಸರ್ಕಾರ ಇದಕ್ಕೆ ಸಿದ್ಧವಿರಲಿಲ್ಲ. ಮೋದಿಯವರು ಗುಜರಾತ್‌ನಿಂದ ಸಿಂಹಗಳನ್ನು ತಂದು ಇಲ್ಲಿ ಬಿಡಬಹುದಿತ್ತು. ಆದರೆ ನಮೀಬಿಯಾದಿಂದ ಚೀತಾಗಳನ್ನು ತಂದಿದ್ದಾರೆ” ಎಂದರು.

ಕುನೋ ರಾಷ್ಟ್ರೀಯ ಉದ್ಯಾನ ಭಾಗದಲ್ಲಿನ ಆದಿವಾಸಿಗಳ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, “ಈ ಭಾಗದಲ್ಲಿ ಸುಮಾರು 150 ಹಳ್ಳಿಗಳಿವೆ. ಅಲ್ಲಿನ ಆದಿವಾಸಿಗಳನ್ನು ಬೇರೆ ಕಡೆ ಕಳುಹಿಸಬೇಕು. ಸರಿಯಾಗಿ ಪುನರ್‌ವಸತಿ ಕಲ್ಪಿಸಿದರೆ ತಾವಾಗಿಯೇ ಖುಷಿಯಿಂದ ಆದಿವಾಸಿಗಳು ಹೊರಗೆ ಹೋಗಬಹುದು. ಆದರೆ ನಮ್ಮ ದೇಶದಲ್ಲಿ ಸರಿಯಾದ ಮೂಲಸೌಕರ್ಯ ಕಲ್ಪಿಸಿ ಪುನರ್‌ವಸತಿ ಮಾಡಿದ್ದೇ ಅಪರೂಪ. ಎಲ್ಲೋ ಒಂದು ಕಡೆ ತಗಡಿನ ಶೆಡ್ಡು ನಿರ್ಮಿಸಿ ಆದಿವಾಸಿಗಳನ್ನು ಅಲ್ಲಿಗೆ ತಂದು ಬಿಸಾಡುತ್ತಾರೆ. ಮತ್ತೆ ಆದಿವಾಸಿಗಳು ಅತಂತ್ರರಾಗುತ್ತಾರೆ. ಯಾವುದಾದರೂ ಚೀತಾ ಸತ್ತರೆ ಮತ್ತೆ ಈ ಜನರಿಗೆ ತೊಂದರೆ ಕೊಡುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...