ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಒಂದು ವಾರದ ನಂತರ ಕೊನೆಗೂ ಸಚಿವ ಸಂಪುಟವನ್ನು ಅಂತಿಮಗೊಳಿಸಿದ್ದಾರೆ. ಒಟ್ಟು 29 ಶಾಸಕರಿಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅವರಲ್ಲಿ ಹೊಸದಾಗಿ ಸಂಪುಟ ಸೇರುತ್ತಿರುವವರ ಸಣ್ಣ ಪರಿಚಯ ಇಲ್ಲಿದೆ.
ಸುನೀಲ್ ಕುಮಾರ್
ಉಡುಪಿ ಜಿಲ್ಲೆಯ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಅರಗ ಜ್ಞಾನೇಂದ್ರ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶಾಸಕರಾದ ಅರಗ ಜ್ಞಾನೇಂದ್ರರವರು ಹೊಸ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಹಾಲಪ್ಪ ಆಚಾರ್
ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಶಾಸಕ ಹಾಲಪ್ಪ ಆಚಾರ್ ಅಂತೂ ಬೊಮ್ಮಾಯಿಯವರ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಶಂಕರ್ ಪಾಟೀಲ್ ಮುನೇನಕೊಪ್ಪ
ಧಾರವಾಡ ಜಿಲ್ಲೆಯ ನವಲಗುಂದ ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ ನೂತನ ಪಟ್ಟಿಯಲ್ಲಿದ್ದಾರೆ.
ಬಿ.ಸಿ. ನಾಗೇಶ್
ತುಮಕೂರು ಜಿಲ್ಲೆಯ ತಿಪಟೂರು ಶಾಸಕರಾದ ಬಿ.ಸಿ. ನಾಗೇಶ್ ನಾಗೇಶ್ ಸಚಿವ ಸಂಪುಟ ಸೇರಿದ ನೂತನ ಸದಸ್ಯರಾಗಿದ್ದಾರೆ.
ಬಿಎಸ್‌ವೈ ಸಂಪುಟದಲ್ಲಿದ್ದು ಈಗ ಕೈಬಿಟ್ಟವರ ಪಟ್ಟಿ
ಜಗದೀಶ್ ಶೆಟ್ಟರ್
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್‌ರವರು ಬಿ.ಎಸ್ ಯಡಿಯೂರಪ್ಪನವರ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವರಾಗಿದ್ದರು. ಅವರು ಬೊಮ್ಮಾಯಿಯವರ ಸಂಪುಟದಲ್ಲಿಲ್ಲ. ಅವರನ್ನು ಸ್ವೀಕರ್ ಅಥವಾ ಬೇರೆ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡುವ ಚಿಂತನೆ ನಡೆದಿದೆ ಅಂತೆ
ಎಸ್ ಸುರೇಶ್ ಕುಮಾರ್
ಬಿಎಸ್‌ವೈ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು. ಅವರನ್ನು ಈಗ ಕೈಬಿಡಲಾಗಿದೆ.
ಸಿ.ಪಿ ಯೋಗಿಶ್ವರ್
ಪ್ರವಾಸೋದ್ಯಮ, ಪರಿಸರ ಮತ್ತು ಭೂವಿಜ್ಞಾನ ಸಚಿವರಾಗಿ ಇದೇ ವರ್ಷ ಜನವರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿ.ಪಿ ಯೋಗಿಶ್ವರ್‌ರವರಿಗೆ ಗೇಟ್ ಪಾಸ್ ನೀಡಲಾಗಿದೆ.
ಲಕ್ಷ್ಮಣ ಸವದಿ
ಬಿಎಸ್‌ವೈ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿಯವರನ್ನು ಬಸವರಾಜ ಬೊಮ್ಮಾಯಿ ಸಂಪುಟದಿಂದ ಹೊರಗಿಡಲಾಗಿದೆ.
ಶ್ರೀಮಂತ ಪಾಟೀಲ್
ಜವಳಿ ಸಚಿವರಾಗಿದ್ದ ಶ್ರೀಮಂತ ಪಾಟೀಲ್ ಹೊಸ ಸಂಪುಟದಿಂದ ಹೊರಗುಳಿದಿದ್ದಾರೆ.
ಆರ್ ಶಂಕರ್
ರೇಷ್ಮೆ, ತೋಟಗಾರಿಕೆ ಸಚಿವರಾಗಿದ್ದ ಆರ್ ಶಂಕರ್‌ರವರು ನೂತನ ಸಚಿವರ ಪಟ್ಟಿಯಿಂದ ಹೊರಗಿದ್ದಾರೆ.
ಅರವಿಂದ ಲಿಂಬಾವಳಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಣ್ಯ ಇಲಾಖೆಯ ಸಚಿವರಾಗಿದ್ದರು. ಅವರನ್ನು ಕೈಬಿಡಲಾಗಿದೆ.
ಇದನ್ನೂ ಓದಿ: ನೂತನ ಸಚಿವರ ಪಟ್ಟಿ ಇಲ್ಲಿದೆ: ಬಿ.ವೈ ವಿಜಯೇಂದ್ರಗೆ ಇಲ್ಲ ಸಚಿವ ಸ್ಥಾನ!


