ಲಸಿಕೆ ತೆಗೆದುಕೊಳ್ಳದೆ ಕಚೇರಿಗೆ ಬರುತ್ತಿದ್ದ ಮೂವರು ಉದ್ಯೋಗಿಗಳನ್ನು ಸಿಎನ್‌ಎನ್ ಕೆಲಸದಿಂದ ತೆಗೆದು ಹಾಕಿದೆ. ಕಳೆದ ವಾರದಿಂದ ಮೂವರು ಉದ್ಯೋಗಿಗಳು ಲಸಿಕೆ ತೆಗೆದುಕೊಳ್ಳದೆ ಕಚೇರಿಗೆ ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿತು. ಮೂವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಚಾನೆಲ್ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.
ಗುರುವಾರ CNN ನ ಹಿರಿಯ ಮಾಧ್ಯಮ ವರದಿಗಾರ ಒಲಿವರ್ ಡಾರ್ಸಿ, ತಮ್ಮ ಟ್ವಿಟರ್ ಖಾತೆಯಲ್ಲಿ, “ಕಳೆದ ವಾರದಿಂದ ಕಛೇರಿಗೆ ಲಸಿಕೆ ತೆಗೆದುಕೊಳ್ಳದೆ ಬರುತ್ತಿದ್ದ ಮೂವರು ಉದ್ಯೋಗಿಗಳ ಬಗ್ಗೆ ನಮಗೆ ತಿಳಿದು ಬಂತು. ಮೂವರನ್ನು ಕೆಲಸದಿಂದ ವಜಾ ಮಾಡಲಾಗಿದೆ ” ಎಂದಿದ್ದಾರೆ.
Jeff Zucker adds in his memo to CNN staff: "In the past week, we have been made aware of three employees who were coming to the office unvaccinated. All three have been terminated. Let me be clear — we have a zero-tolerance policy on this."
— Oliver Darcy (@oliverdarcy) August 5, 2021
ಇದನ್ನೂ ಓದಿ: ಸಾಮಾನ್ಯ ಲಸಿಕೆ ಪಡೆಯದ 30 ಲಕ್ಷ ಮಕ್ಕಳು ಭಾರತದಲ್ಲಿದ್ದಾರೆಂದ ವಿಶ್ವಸಂಸ್ಥೆ; ನಿರಾಕರಿಸಿದ ಸರ್ಕಾರ
’ಅಕ್ಟೋಬರ್ ಮಧ್ಯದಲ್ಲಿ ಎಲ್ಲರು ಕಚೇರಿಗೆ ಹಿಂತಿರುಗುವ ದಿನಾಂಕವನ್ನು ನಿಗದಿಯಾಗಿಸಲಾಗಿತ್ತು. ಆದರೆ ಅದನ್ನು ಸೆಪ್ಟೆಂಬರ್ 7ಕ್ಕೆ ನಿಗದಿ ಮಾಡಲಾಯಿತು. ಈಗ ಅದನ್ನೂ ಕೂಡ ಮುಂದೂಡಲಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಿಎನ್‌ಎನ್ ನೆಟ್ವರ್ಕ್ ಮುಖ್ಯಸ್ಥರು, ಎಲ್ಲಾ ಉದ್ಯೋಗಿಗಳಿಗೂ ತಮ್ಮ ಬಗ್ಗೆ ಕಾಳಜಿ ವಹಿಸುವಂತೆ ಕೇಳಿಕೊಂಡಿದ್ದಾರೆ. “ನಾವೆಲ್ಲರೂ ನಿರೀಕ್ಷೆ, ಆತಂಕ, ಹತಾಶೆ, ಗೊಂದಲದ ಮಿಶ್ರಣವನ್ನು ಅನುಭವಿಸುತ್ತಿದ್ದೇವೆ. ನನಗೆ ಅರ್ಥವಾಗುತ್ತಿದೆ. ನಿಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಮುಂದುವರೆಸಿ ಎಂದಿದ್ದಾರೆ.
ಇನ್ನು ಮೆಮೋನಾ ಕೊನೆಯಲ್ಲಿ”ನೀವು ಕಚೇರಿಗೆ ಬರಲು ಲಸಿಕೆ ಹಾಕಿಸಿಕೊಳ್ಳಬೇಕು. ನೀವು ಇತರ ಉದ್ಯೋಗಿಗಳೊಂದಿಗೆ ಒಂದು ಕ್ಷೇತ್ರದಲ್ಲಿ ಕೆಲಸ ಮಾಡಲು ಲಸಿಕೆ ಹಾಕಿಸಿಕೊಳ್ಳುವುದು ಮುಖ್ಯ” ಎನ್ನಲಾಗಿದೆ.
ಇತ್ತ, ಗೂಗಲ್ ಮತ್ತು ಫೇಸ್‌ಬುಕ್ ಕೂಡ ಕಚೇರಿಗೆ ಮರಳುವ ಕೆಲಸಗಾರರಿಗೆ ಲಸಿಕೆಯನ್ನು ಕಡ್ಡಾಯಗೊಳಿಸಿದೆ.
ಇದನ್ನೂ ಓದಿ: ಪೆಟ್ರೋಲಿಯಂ ಸೆಸ್‌ನ 3.4 ಲಕ್ಷ ಕೋಟಿ ರೂಗಳನ್ನು ಉಚಿತ ಲಸಿಕೆ, ಪಡಿತರಕ್ಕಾಗಿ ಬಳಸಲಾಗಿದೆ: ಸಚಿವ ಹರ್ದೀಪ್ ಪುರಿ


