Homeಕರ್ನಾಟಕವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ

ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ

- Advertisement -
- Advertisement -

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ವಿಜಯಪುರ ನಗರ

ಕಾಂಗ್ರೆಸ್- ಅಮಿತ್ ಮುಶ್ರಫ್-ಹಿನ್ನಡೆ

ಬಿಜೆಪಿ- ಬಸನಗೌಡ ಪಾಟೀಲ್ ಯತ್ನಾಳ- ಮುನ್ನಡೆ

ಜೆಡಿಎಸ್- ಬಂದೇನವಾಜ್-ಹಿನ್ನಡೆ

ಹಿನ್ನೆಲೆ:- 2018ರಲ್ಲಿ ಬಿಜೆಪಿಯು ಕಾಂಗ್ರೆಸಿನಿಂದ ಗೆಲುವು ಕಸಿದುಕೊಂಡಿತು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್‌, ಕಾಂಗ್ರೆಸ್ಸಿನ ಅಬ್ದುಲ್ ಹಮೀದ್ ಮುಶ್ರಿಫ್‌ರನ್ನು 6,413 ಮತಗಳಿಂದ ಮಣಿಸಿದರು.

******

ಬಬಲೇಶ್ವರ

ಕಾಂಗ್ರೆಸ್- ಎಂಬಿ ಪಾಟೀಲ್-ಮುನ್ನಡೆ

ಬಿಜೆಪಿ- ವಿಜುಗೌಡ ಪಾಟೀಲ್-ಹಿನ್ನಡೆ

ಜೆಡಿಎಸ್- ಬಸವರಾಜ್ ಹೊನೆವಾಡ-ಹಿನ್ನಡೆ

ಹಿನ್ನೆಲೆ:- 2004ರಲ್ಲಿ ಹಾಗೂ 2008ರಲ್ಲಿ ಕ್ಷೇತ್ರದ ಮರುವಿಂಗಡನೆಯ ವೇಳೆ ಬದಲಾದ ಬಬಲೇಶ್ವರ ವಿಧಾನಸಭೆಯಿಂದ, 2013 ಹಾಗೂ 2018ರಿಂದ ಸತತ ಮೂರು ಬಾರಿ ಎಂ ಬಿ ಪಾಟೀಲ್ ಹ್ಯಾಟ್ರಿಕ್ಗೆಲುವು ಸಾಧಿಸಿದ್ದಾರೆ.

******

ಮುದ್ದೇಬಿಹಾಳ

ಕಾಂಗ್ರೆಸ್- ಅಪ್ಪಾಜಿ ನಾಡಗೌಡ-ಮುನ್ನಡೆ

ಬಿಜೆಪಿ- ಎಎಸ್ ಪಾಟೀಲ್ ನಡಹಳ್ಳಿ-ಹಿನ್ನಡೆ

ಜೆಡಿಎಸ್- ಬಸವರಾಜ ಭಜಂತ್ರಿ-ಹಿನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಕಾಂಗ್ರೆಸ್‌ನ ಸಿ ಎಸ್ ನಾಡಗೌಡ ಅವರು, ಬಿಜೆಪಿಯ ಬಿರಾದಾರ್ ಮಂಗಳಾ ಶಾಂತಗೌಡ್ರು ಅವರನ್ನು 2403 ಕಡಿಮೆ ಮತಗಳ ಅಂತರದಿಂದ ಸೋಲಿಸಿ ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಐದನೇ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಚಿವೆ ವಿಮಲಾಬಾಯಿ ಜಗದೇವರಾವ್ ದೇಶಮುಖ ಅವರನ್ನು 12202 ಮತಗಳ ಅಂತರದಿಂದ ಮಣಿಸಿದರು.

2018ರಲ್ಲಿ ಐದನೆ ಬಾರಿ ಶಾಸಕರಾಗಿ ಆಯ್ಕೆಯಾಗುವ ಕಾಂಗ್ರೆಸ್‌ನ ಸಿ ಎಸ್ ನಾಡಗೌಡ ಅವರ ಕನಸು ಕೈಗೂಡಲಿಲ್ಲ. ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಅಮೀನಪ್ಪ ಗೌಡ ಪಾಟೀಲ್ 8633 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

******

ದೇವರ ಹಿಪ್ಪರಗಿ

ಕಾಂಗ್ರೆಸ್- ಶರಣಪ್ಪ ಟಿ ಸುಣಗಾರ-ಹಿನ್ನಡೆ

ಬಿಜೆಪಿ- ಸೋಮನಗೌಡ ಪಾಟೀಲ್-ಹಿನ್ನಡೆ

ಜೆಡಿಎಸ್- ರಾಜುಗೌಡ ಪಾಟೀಲ್-ಮುನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾದ ನಂತರ ಕಾಂಗ್ರೆಸ್‌ನ ಎ ಎಸ್ ಪಾಟೀಲ್ ನಡಹಳ್ಳಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 30,893 ಮತಗಳ ಭಾರಿ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.

2013ರಲ್ಲಿ ಎ ಎಸ್ ಪಾಟೀಲ್ ನಡಹಳ್ಳಿಗೆ ಬಿಜೆಪಿಯ ಸೋಮನಗೌಡ ಪಾಟೀಲ್ ತೀವ್ರ ಪೈಪೋಟಿ ನೀಡಿದರೂ 8,096 ಮತಗಳ ಅಂತರದಲ್ಲಿ ಸೋತರು.

2018ರಲ್ಲಿ ಬಿಜೆಪಿಯ ಸೋಮನಗೌಡ ಪಾಟೀಲ್ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಅವರಿಗೆ ತೀವ್ರ ಪೈಪೋಟಿ ನೀಡಿ ಕೇವಲ 3,353 ಮತಗಳ ಅಂತರದಲ್ಲಿ ದೇವರ ಹಿಪ್ಪರಿಗಿಯಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದರು.

ಎ ಎಸ್ ಪಾಟೀಲ ನಡಹಳ್ಳಿ ಕೂಡ ಕಾಂಗ್ರೆಸ್‌ನಿಂದ 2008 ಮತ್ತು 2013ರಲ್ಲಿ ಈ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದಾರೆ.

*******

ಬಸವನ ಬಾಗೇವಾಡಿ

ಕಾಂಗ್ರೆಸ್- ಶಿವಾನಂದ ಪಾಟೀಲ್-ಹಿನ್ನಡೆ

ಬಿಜೆಪಿ- ಎಸ್‌ಕೆ ಬೆಳ್ಳುಬ್ಬಿ-ಹಿನ್ನಡೆ

ಜೆಡಿಎಸ್- ಸೋಮನಗೌಡ ಪಾಟೀಲ್-ಮುನ್ನಡೆ

ಹಿನ್ನೆಲೆ:- 2018ರಲ್ಲಿ ಜೆಡಿಎಸ್‌ನ ಅಪ್ಪುಗೌಡ ತೀವ್ರ ಪೈಪೋಟಿಯ ನಡುವೆಯೂ 3,186 ಮತಗಳ ಕಡಿಮೆ ಅಂತರದಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲರು ಗೆಲುವು ಸಾಧಿಸುವ ಮೂಲಕ ಬಸವನ ಬಾಗೇವಾಡಿಯಿಂದ ಮೂರನೇ ಬಾರಿ ಶಾಸಕರಾದರು. 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಶಿವಾನಂದ ಪಾಟೀಲರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ಹಾಗೂ 2018ರ ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.

*******

ನಾಗಠಾಣ (ಎಸ್‌ಸಿ ಮೀಸಲು)

ಕಾಂಗ್ರೆಸ್- ವಿಠಲ ಕಟಕದೊಂಡ-ಕಾಂಗ್ರೆಸ್

ಬಿಜೆಪಿ- ಸಂಜೀವ್ ಐಹೊಳೆ-ಹಿನ್ನಡೆ

ಜೆಡಿಎಸ್- ದೇವಾನಂದ ಚವ್ಹಾಣ-ಹಿನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ನಾಗಠಾಣದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿಯಿಂದ ವಿಠಲ ಧೋಂಡಿಬಾ ಕಟಕದೊಂಡ ಶಾಸಕರಾದರು. 2013ರಲ್ಲಿ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರನ್ನು ಕೇವಲ 667 ಮತಗಳಿಂದ ಮಣಿಸಿ ಎರಡನೇ ಬಾರಿಗೆ ಕಾಂಗ್ರೆಸ್‌ನ ರಾಜು ಅಲಗೂರ ಗೆಲುವು ಸಾಧಿಸಿದರು. 2018ರಲ್ಲಿ ಕಾಂಗ್ರೆಸ್‌ನ ವಿಠಲ ಧೋಂಡಿಬಾ ಕಟಕದೊಂಡ ಅವರ ವಿರುದ್ಧ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರು 4207 ಮತಗಳ ಅಂತರದಿಂದ ಗೆಲುವು ಕಂಡರು.

*******

ಇಂಡಿ

ಕಾಂಗ್ರೆಸ್- ಯಶವಂತರಾಯಗೌಡ ಪಾಟೀಲ್-ಮುನ್ನಡೆ

ಬಿಜೆಪಿ- ಕಾಸುಗೌಡ ಬಿರಾದಾರ್-ಹಿನ್ನಡೆ

ಜೆಡಿಎಸ್- ಬಿಡಿ ಪಾಟೀಲ್-ಹಿನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ಅಂದಿನ ಚುನಾವಣೆಯಲ್ಲಿ ಡಾ ಸಾರ್ವಭೌಮ ಬಗಲಿಯವರು ಬಿಜೆಪಿಯಿಂದ ಜಯಗಳಿಸಿದ್ದರು. ಬಿಜೆಪಿಗೆ ಇದೊಂದೇ ಬಾರಿ ಇಲ್ಲಿ ಮತದಾರರು ಗೆಲುವು ನೀಡಿದ್ದರು. ನಂತರ ನಡೆದ 2013 ಚುನಾವಣೆಯಲ್ಲಿ ಕೆಜಿಪಿಯಿಂದ ಸ್ಪರ್ಧಿಸಿದ್ದ ರವಿಕಾಂತ್ ಪಾಟೀಲರನ್ನು ಕಾಂಗ್ರೆಸ್‌ನ ಯಶವಂತರಾಯ ಗೌಡ ವಿಟಾಲ ಗೌಡ ಪಾಟೀಲ್ ಅವರು 33,302 ಮತಗಳ ಭಾರಿ ಅಂತರದಿಂದ ಸೋಲಿಸಿ ಗೆಲುವು ಕಂಡಿದ್ದರು. 2018ರಲ್ಲಿ ಜೆಡಿಎಸ್‌ನ ಬಿ ಡಿ ಪಾಟೀಲ್ ಅವರನ್ನು 9,938 ಮತಗಳ ಅಂತರದಿಂದ ಮಣಿಸಿ ಕಾಂಗ್ರೆಸ್‌ನ ಯಶವಂತರಾಯ ಗೌಡ ವಿಟಾಲ ಗೌಡ ಪಾಟೀಲ್ ಅವರು ಪುನರಾಯ್ಕೆಯಾದರು.

*******

ಸಿಂದಗಿ

ಕಾಂಗ್ರೆಸ್- ಅಶೋಕ ಮನಗೂಳಿ-ಮುನ್ನಡೆ

ಬಿಜೆಪಿ- ರಮೇಶ ಭೂಸನೂರ-ಹಿನ್ನಡೆ

ಜೆಡಿಎಸ್- ವಿಜಯಶ್ರೀ ಪಾಟೀಲ್-ಹಿನ್ನಡೆ

ಹಿನ್ನೆಲೆ:- ಸಿಂದಗಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ 1962 ಹಾಗೂ 1967ರಲ್ಲಿ ಸತತ ಎರಡು ಬಾರಿ ಗೆಲುವು ಕಂಡಿದ್ದ ಸಿ ಎಂ ದೇಸಾಯಿ ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಅಭ್ಯರ್ಥಿಯು ಸತತವಾಗಿ ಜಯ ಗಳಿಸಿರಲಿಲ್ಲ. 2008 ಮತ್ತು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಭೂಸನೂರ ಎರಡೂ ಬಾರಿಯೂ ಗೆಲುವು ಪಡೆದು ಕಮಲ ಪಕ್ಷಕ್ಕೆ ಹ್ಯಾಟ್ರಿಕ್‌ ಜಯ ಕರುಣಿಸಿದರು.

2013ರಲ್ಲಿ ಎಂ ಸಿ ಮನಗೊಳಿ ತೀವ್ರ ಪೈಪೋಟಿ ನೀಡಿದರೂ 752 ಮತಗಳಿಂದ ಸಿ ಎಂ ದೇಸಾಯಿ ಶಾಸಕರಾಗಿ ಆಯ್ಕೆಯಾದರು.

1994ರಲ್ಲಿ ಗೆದ್ದಿದ್ದು ಬಿಟ್ಟರೆ, 1999ರಿಂದ ಸತತ ನಾಲ್ಕು ಬಾರಿ ಸೋತಿದ್ದ ಜೆಡಿಎಸ್‌ನ ಎಂ ಸಿ ಮನಗೊಳಿ 2018ರಲ್ಲಿ ಬಿಜೆಪಿಯ ರಮೇಶ್ ಭೂಸನೂರ ವಿರುದ್ಧ 9305 ಮತಗಳ ಅಂತರದಲ್ಲಿ ಎರಡನೇ ಬಾರಿಗೆ ಜಯ ದಾಖಲಿಸಿದರು. ಮನಗೂಳಿಯವರು ಒಟ್ಟು ಏಳು ಬಾರಿ ಸ್ಪರ್ಧಿಸಿದ್ದು, ಐದು ಬಾರಿ ಸೋತು ಎರಡು ಬಾರಿ ಗೆಲುವು ಪಡೆದಿರುವುದು ವಿಶೇಷ.

*******

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

16 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ‘ಮನರೇಗಾ’ ಪಟ್ಟಿಯಿಂದ ಕೈಬಿಟ್ಟ ಕೇಂದ್ರ ಸರ್ಕಾರ: ವರದಿ

ಯುಪಿಎ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹೆಸರನ್ನು ಬದಲಿಸಲು ಪ್ರಯತ್ನಿಸುವ 'ವಿಕ್ಷಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ–ಜಿ...

ಅಮೆರಿಕದ ಬಹು ನಿರೀಕ್ಷಿತ ‘ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆ : ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್ ಸೇರಿದಂತೆ ಪ್ರಮುಖರ ಫೋಟೋಗಳು ಬಹಿರಂಗ

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ(ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು...

ಕೋಮು ಸಾಮರಸ್ಯಕ್ಕಾಗಿ ಭಾರತದ ಮುಸ್ಲಿಮರು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು: ಜಮಾಅತ್ ಅಧ್ಯಕ್ಷ

'ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು' ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು. ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ 'ಅಖಿಲ...

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...