ಕೊರೊನಾ 3ನೇ ಅಲೆ ಸನಿಹದಲ್ಲಿದೆ, ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆಯನ್ನು ಮರೆಯಬಾರದು. ಕೊರೊನಾ ಎರಡನೇ ಅಲೆ ಕಡಿಮೆಯಾಗಿದೆ ಎನ್ನುವ ಸಂತಸದಲ್ಲಿ ಮೂರನೇ ಅಲೆಯನ್ನು ಆಹ್ವಾನಿಸಬಾರದು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಎಚ್ಚರಿಕೆ ನೀಡಿದೆ.
ದೇಶದ ವಿವಿಧ ಭಾಗಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಕೊರೊನಾ ನಿಯಮಗಳನ್ನು ನಿರ್ಲಕ್ಷಿಸುತ್ತಿರುವುದರ ಬಗ್ಗೆ ಐಎಂಎ ಎಚ್ಚರಿಕೆ ನೀಡಿದೆ.
“ವಿಶ್ವದಲ್ಲಿ ಈಗಾಗಲೇ ಕೊರೊನಾ 3ನೇ ಅಲೆ ಬಂದಿರುವ ಪುರಾವೆಗಳು ಮತ್ತು ಸಾಂಕ್ರಾಮಿಕ ರೋಗಗಳ ಇತಿಹಾಸ ಗಮನಿಸಿದರೆ, ಮೂರನೇ ಅಲೆಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಇಷ್ಟೇ ಅಲ್ಲದೆ ಮೂರನೇ ಅಲೆ ಸನಿಹದಲ್ಲಿದೆ” ಎಂದು ತಿಳಿಸಿದೆ.
“ಆತಂಕದ ಸಂಗತಿಯೆಂದರೆ, ದೇಶದ ಅನೇಕ ಭಾಗಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಎರಡನೇ ಅಲೆಯನ್ನು ಗೆದ್ದ ಸಂತಸದಲ್ಲಿದ್ದಾರೆ. ಸಾಮೂಹಿಕವಾಗಿ ಕೊರೊನಾ ನಿಯಮಾವಳಿಗಳನ್ನು ನಿರ್ಲಕ್ಷಿಸಿ ಸಾರ್ವಜನಿಕ ಕೆಲಸಗಳಲ್ಲಿ, ಸಭೆಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಐಎಂಎ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಮಹಿಳೆಯರ ಸ್ಥಿತಿ; ಬಾಣಲೆಯಿಂದ ಬೆಂಕಿಗೆ…
“ಪ್ರವಾಸೋದ್ಯಮ, ತೀರ್ಥಯಾತ್ರೆ ಪ್ರಯಾಣ, ಧಾರ್ಮಿಕ ಉತ್ಸವಗಳು ಎಲ್ಲವೂ ಬೇಕಾಗುತ್ತದೆ. ಆದರೆ ಇನ್ನೂ ಕೆಲವು ದಿನ ಇವುಗಳಿಂದ ದೂರ ಇರುವುದು ಒಳ್ಳೆಯದು. ಇವುಗಳಿಗೆ ಅವಕಾಶ ನೀಡುವುದು, ಲಸಿಕೆ ಪಡೆಯದೆ ಜನರು ಈ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕೋವಿಡ್ 3ನೇ ಅಲೆಗೆ ಆಹ್ವಾನ ನೀಡಿದಂತೆ. ಇವುಗಳು ಕೊರೊನಾ ಸೂಪರ್ ಸ್ಪ್ರೆಡರ್‌ಗಳಾಗುತ್ತವೆ” ಎಂದು ವೈದ್ಯಕೀಯ ಸಂಘ ತಿಳಿಸಿದೆ.
ಕೋವಿಡ್ ಸೋಂಕಿತ ರೋಗಿಯ ಚಿಕಿತ್ಸೆಗೆ ಖರ್ಚು ಮಾಡುವ ಹಣದಿಂದ ಉಂಟಾಗುವ ಆರ್ಥಿಕ ಪರಿಸ್ಥಿತಿಗಿಂತ ಇಂತಹ ಸಾಮೂಹಿಕ ಕಾರ್ಯಕ್ರಮಗಳನ್ನು ತಪ್ಪಿಸುವುದರಿಂದ ಉಂಟಾಗುವ ಆರ್ಥಿಕ ನಷ್ಟ ಉತ್ತಮವಾಗಿರುತ್ತದೆ ಎಂದು ಹೇಳಿದೆ.
ಸಾರ್ವತ್ರಿಕ ಲಸಿಕಾ ಅಭಿಯಾನವನ್ನು ನಡೆಸಿ, ಎಲ್ಲರಿಗೂ ಲಸಿಕೆ ತಲುಪಿದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ 3ನೇ ಅಲೆಯ ಪ್ರಭಾವವನ್ನು ತಗ್ಗಿಸಬಹುದು. ಈ ಹಂತದಲ್ಲಿ ಇನ್ನು ಮೂರು-ನಾಲ್ಕು ತಿಂಗಳು ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಬಾರದು ಎಂದು ಐಎಂಎ ಎಚ್ಚರಿಸಿದೆ.
ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘನೆ: ಒಂದು ವಾರದಲ್ಲೆ 1.77 ಲಕ್ಷ ದಂಡ ವಸೂಲಿ ಮಾಡಿದ ‘ನಮ್ಮ ಮೆಟ್ರೋ’!



Please give an explanation why, how and what base this 3rd way spreads. Just forecasting without proper explanation is most suspicious. Then only it is to believe people.