ಹರ್ಯಾಣ:ಹಿಂದೂ ಸಂಘಟನೆಯೊಂದು ಆಯೋಜಿಸಿದ್ದ ಮೆರವಣಿಗೆಯ ವೇಳೆ ಸಂಭವಿಸಿದ ನುಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿದೆ.
ಆಗಸ್ಟ್ 1 ರಂದು ವೈರಲ್ ಆದ ವಿಡಿಯೋ ಆಧಾರದಲ್ಲಿ ಬಿಟ್ಟು ಬಜರಂಗಿ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ವಿಡಿಯೋದಲ್ಲಿ ಅವರು ಕೇಸರಿ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದಾರೆ ಮತ್ತು ಬೆದರಿಕೆ ಒಡ್ಡುವ ಸಾಹಿತ್ಯ ಹೊಂದಿದ್ದ ಗೀತೆಯನ್ನು ಅವರು ಹಾಡಿದ್ದಾರೆ.
ಆತನ ವಿರದ್ಧ ದೂರುದಾರರಲ್ಲಿ ಒಬ್ಬರಾದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಉಷಾ ಅವರು, ಯಾತ್ರೆ ಹೋಗುವುದನ್ನು ತಡೆಯಲು ಪ್ರಯತ್ನಿಸಿದಾಗ, ಬಿಟ್ಟು ಬಜರಂಗಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ. ನನ್ನ ವಾಹನದ ಬಾನೆಟ್ ಮೇಲೆ ಕುಳಿತಿದ್ದಾನೆಂದು ಆರೋಪಿಸಿದ್ದಾರೆ.
ನಂತರ, ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಜರಂಗಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಬಜರಂಗಿ ನಿಧಾನ ಗತಿಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದ.ಅದರಲ್ಲಿ ಆತ ಕೇಸರಿ ದಿರಿಸು ಧರಿಸಿ, “ಗೋಲಿ ಪೆ ಗೋಲಿ ಚಲೇಂಗಿ, ಬಾಪ್ ತೋ ಬಾಪ್ ರಹೇಗಾ” ಎಂಬ ಸಾಹಿತ್ಯ ಹೊಂದಿರುವ ಗೀತೆಗೆ ಹೆಜ್ಜೆ ಹಾಕುತ್ತಿರುವುದು ಕೂಡ ದಾಖಲಾಗಿತ್ತು.
ಜು.1 ರಂದು ವಿಎಚ್‌ಪಿಯ ಯಾತ್ರೆಯ ನಂತರ ನುಹ್‌ನಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು.ಗುರುಗ್ರಾಮ್‌ನಲ್ಲಿ ಮುಸ್ಲಿಂ ಧರ್ಮಗುರುವನ್ನು ಕೊಂದರು ಮತ್ತು ರೆಸ್ಟೋರೆಂಟ್‌ಗಳಿಗೆ ಬೆಂಕಿ ಹಚ್ಚಲಾಯಿತು. ಅಂಗಡಿಗಳನ್ನು ಧ್ವಂಸಗೊಳಿಸಲಾಯ್ತು ಮತ್ತು ಹಿಂಸಾಚಾರದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು.
ಇದನ್ನು ಓದಿ: ಆ ಪದ ಬಳಸಿಲ್ಲ, ಅದನ್ನು ತಿರುಚಲಾಗಿದೆ: ಜಾತಿ ನಿಂದನೆ ಆರೋಪಕ್ಕೆ ಸಚಿವ ಮಲ್ಲಿಕಾರ್ಜುನ್ ಸ್ಪಷ್ಟಣೆ


