Homeಮುಖಪುಟಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ: ಅತಿಭಯಾನಕ '100 ದಿನಗಳು'..

ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ: ಅತಿಭಯಾನಕ ‘100 ದಿನಗಳು’..

- Advertisement -
- Advertisement -

ಇಸ್ರೇಲ್‌- ಪ್ಯಾಲೆಸ್ತೀನ್‌ ವಿರುದ್ಧ ಯುದ್ಧ ಘೋಷಿಸಿ 100 ದಿನಗಳೇ ಕಳೆದಿದೆ. ಪ್ರತಿ 100 ಜನರಲ್ಲಿ ಒಬ್ಬರು ಮತ್ತು ಪ್ರತಿ 85 ಮಕ್ಕಳಲ್ಲಿ ಒಬ್ಬರು, ಕಳೆದ 100 ದಿನಗಳಲ್ಲಿ ಗಾಝಾದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಶಾಕಿಂಗ್‌ ಅಂಕಿ-ಅಂಶಗಳನ್ನು ಯುಎನ್‌ ಅಧೀನದ 20 ಅರಬ್ ರಾಷ್ಟ್ರಗಳ ಅಂಗವಾದ ಪಶ್ಚಿಮ ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಆಯೋಗವು ಪ್ರಕಟಿಸಿದ ವರದಿಯು ಬಹಿರಂಗಪಡಿಸಿದೆ. ಈ ದಿನಗಳು 21ನೇ ಶತಮಾನದಲ್ಲಿ  ಎಂದೂ ಕಂಡರಿಯದ 100 ದಿನಗಳ ಭಯಾನಕ ಮಾರಣಾಂತಿಕ ಸಶಸ್ತ್ರ ಸಂಘರ್ಷವಾಗಿದೆ ಎಂದು ವರದಿ ತಿಳಿಸಿದೆ.

ಪಶ್ಚಿಮ ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ವರದಿಯು ಎಲ್ಲಾ ಯುದ್ಧಗಳನ್ನು ತಕ್ಷಣವೇ ನಿಲ್ಲಿಸಲು ಕರೆ ನೀಡಿದೆ. ನಾಗರಿಕರನ್ನು ರಕ್ಷಿಸುವ ಅಗತ್ಯವನ್ನು ಮತ್ತು ಮಾನವೀಯ ನೆರವಿನ ಬಗ್ಗೆ ವರದಿಯು ಒತ್ತಿ ಹೇಳಿದೆ.

ಇಸ್ರೇಲ್‌ನಿಂದ ಗಾಝಾದ ಮೇಲಿನ ಯುದ್ಧವು ಜನವರಿ 14ರಂದು ಪ್ರಾರಂಭವಾಗಿದೆ, ಇದೀಗ ಯುದ್ಧ 100 ದಿನಗಳನ್ನೇ ದಾಟಿದೆ. 2023ರ ಅಕ್ಟೋಬರ್ 7ರಂದು ಪ್ರಾರಂಭವಾದ ಯುದ್ಧವು ವಿನಾಶಕ್ಕೆ, ಸ್ಥಳಾಂತರಕ್ಕೆ ಮತ್ತು ಸಾವುಗಳಿಗೆ ಕಾರಣವಾಯಿತು. 2024ರ ಫೆಬ್ರವರಿ 6ರವರೆಗೆ ಯುದ್ಧದಲ್ಲಿ ಸುಮಾರು 27,585 ಪ್ಯಾಲೆಸ್ತೀನ್‌ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 66,978 ಮಂದಿ ಗಾಯಗೊಂಡಿದ್ದಾರೆ ಎನ್ನುವುದನ್ನು ವರದಿಯು ಬಹಿರಂಗಪಡಿಸಿದೆ.

ಪಶ್ಚಿಮ ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ECSWA), ಸದಸ್ಯ ರಾಷ್ಟ್ರಗಳಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಮತ್ತು ಅವುಗಳ ನಡುವೆ ಪರಸ್ಪರ ಸಹಕಾರವನ್ನು ಉತ್ತೇಜಿಸುತ್ತದೆ. ESCWA 20 ಅರಬ್ ದೇಶಗಳನ್ನು ಒಳಗೊಂಡಿದೆ. ಅಲ್ಜೀರಿಯಾ, ಬಹ್ರೇನ್, ಈಜಿಪ್ಟ್, ಇರಾಕ್, ಜೋರ್ಡಾನ್, ಕುವೈತ್, ಲೆಬನಾನ್, ಲಿಬಿಯಾ, ಮಾರಿಟಾನಿಯಾ, ಮೊರಾಕೊ, ಓಮನ್, ಪ್ಯಾಲೆಸ್ತೀನ್‌, ಕತಾರ್, ಸೌದಿ ಅರೇಬಿಯಾ, ಸುಡಾನ್, ಸೊಮಾಲಿಯಾ, ಸಿರಿಯನ್ ಅರಬ್ ರಿಪಬ್ಲಿಕ್, ಟುನೀಶಿಯಾ , ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಈ ಆಯೋಗಕ್ಕೆ ಒಳಪಡುತ್ತದೆ.

ESCWA ವರದಿಯ ಪ್ರಕಾರ, ಗಾಝಾದಲ್ಲಿ ಪ್ರತಿ 100 ಜನರಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಕೇವಲ 100 ದಿನಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಇದರಿಂದ ಪ್ರತಿದಿನ 240 ಸಾವುಗಳು ಸಂಭವಿಸುತ್ತವೆ, ಈ ಸಾವಿನ ಪ್ರಮಾಣವು 21ನೇ ಶತಮಾನದಲ್ಲಿ ಯಾವುದೇ ಇತರ ಸಶಸ್ತ್ರ ಸಂಘರ್ಷಕ್ಕಿಂತ ಭಯಾನಕವಾಗಿದೆ ಎಂದು ವರದಿ ಹೇಳಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಹತ್ಯೆ:

ಗಾಝಾದಲ್ಲಿ ಕೊಲ್ಲಲ್ಪಟ್ಟ 27,585 ಜನರಲ್ಲಿ 12,345 ಮಕ್ಕಳಾಗಿದ್ದಾರೆ. 100 ದಿನಗಳಲ್ಲಿ ಪ್ರತಿ 85ರಲ್ಲಿ ಒಂದು ಮಗು ಕೊಲ್ಲಲ್ಪಟ್ಟಿದೆ ಎಂದು ವರದಿಯು ಹೇಳುತ್ತದೆ. ಇದು ಇತರ ಇತ್ತೀಚಿನ ಸಂಘರ್ಷಕ್ಕೆ ಹೋಲಿಸಿದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿದ ಮಕ್ಕಳ ಹತ್ಯೆಯಾಗಿದೆ.

ವರದಿಯು ಎಲ್ಲಾ ಯುದ್ಧಗಳನ್ನು ತಕ್ಷಣವೇ ನಿಲ್ಲಿಸಲು ಕರೆ ನೀಡಿದೆ. ಪ್ಯಾಲೆಸ್ತೀನ್‌ನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಥಿಕ ರಚನೆಯ ಮೇಲೆ ನಡೆಯುತ್ತಿರುವ ಯುದ್ಧದ ವಿನಾಶಕಾರಿ ಪರಿಣಾಮಗಳು ಮುಂಬರುವ ಪೀಳಿಗೆಯ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಈ ಪರಿಣಾಮಗಳು ಭವಿಷ್ಯದ ಹಿಂಸಾಚಾರದ ಅಪಾಯವನ್ನು ತೀವ್ರಗೊಳಿಸುತ್ತವೆ ಎಂದು ವರದಿ ಹೇಳಿದೆ.

ವರದಿಯ ಶಿಫಾರಸುಗಳಲ್ಲಿ ನಾಗರಿಕರ ಜೊತೆಗೆ ಅವರ ಮೂಲಸೌಕರ್ಯವನ್ನು ರಕ್ಷಿಸುವುದು ಮತ್ತು ಮಾನವೀಯ ಸಹಾಯ  ಖಾತ್ರಿಪಡಿಸುವುದು ಸೇರಿದೆ. ಇಂಧನ, ಔಷಧಗಳು, ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಂತೆ ಆರೋಗ್ಯ ಮೂಲಸೌಕರ್ಯಗಳನ್ನು ಪುನರ್‌ನಿರ್ಮಾಣ ಮಾಡುವ ಅಗತ್ಯವನ್ನು ಅದು ಒತ್ತಿ ಹೇಳಿದೆ. ಆಘಾತಕ್ಕೊಳಗಾದ ಜನರಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡಲು ಇದು ನಿರ್ಣಾಯಕವಾಗಿದೆ ಎಂದು ವರದಿ ಹೇಳಿದೆ.

ಗಾಝಾದ ರಫಾದಲ್ಲಿ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ ಇಸ್ರೇಲ್‌:

ಹಮಾಸ್ ನಿಯಂತ್ರಿತ ಪ್ರದೇಶದಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ, ನಿನ್ನೆ ಇಸ್ರೇಲ್‌ ನಡೆಸಿದ ವಾಯುದಾಳಿಗಳಿಗೆ ಗಾಝಾದ ದಕ್ಷಿಣ ಗಡಿಯ ರಾಫಾ ನಗರದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ ಇಸ್ರೇಲ್‌ ಪಡೆಗಳು ಈಗಾಗಲೇ ಎರಡು ಪ್ರಮುಖ ನಗರಗಳಾದ ಗಾಝಾ ಸಿಟಿ ಮತ್ತು ಖಾನ್ ಯೂನಿಸ್‌ಗಳಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಯುಎನ್‌ನ ಇತ್ತೀಚಿನ ಸುದ್ದಿಗಳ ಪ್ರಕಾರ, ಈಜಿಪ್ಟ್‌ನ ಗಡಿಯಲ್ಲಿರುವ ದಕ್ಷಿಣ ಗಾಜಾದ ರಫಾ ನಗರವು ಈಗ  ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಗೆ ಅಂದರೆ ಗಾಝಾದ ಅರ್ಧಕ್ಕಿಂತ ಹೆಚ್ಚು ಜನರಿಗೆ ನೆಲೆಯಾಗಿದೆ. ನಗರದಲ್ಲಿ ಈಗಾಗಲೇ ಸುಮಾರು 2,50,000 ಜನರು ನೆಲೆಸಿದ್ದರು. ಆ ಪ್ರದೇಶದಲ್ಲಿ ಆಹಾರ ಮತ್ತು ಶುದ್ಧ ನೀರಿನ ಸಮಸ್ಯೆ ಉದ್ಭವಿಸಿದೆ, ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ನಗರವು ಕೇವಲ ಮೂರು ತಿಂಗಳಲ್ಲಿ ಒಂದು ವರ್ಷದಲ್ಲಿ ಉತ್ಪಾದಿಸುವಷ್ಟು ಕಸವನ್ನು ಉತ್ಪಾದಿಸಿದೆ.

ಇಸ್ರೇಲ್‌ ನಡೆಸುತ್ತಿರುವ ಈ ನರಹತ್ಯೆಯನ್ನು ಮಾನವತಾವಾದಿಗಳು ಮತ್ತು ಇಸ್ರೇಲ್‌ನ ಕೆಲವು ನಿಕಟ ಮಿತ್ರರು ಕೂಡ ತೀವ್ರವಾಗಿ ಟೀಕಿಸಿದ್ದಾರೆ. ರಾಫಾದ ಮೇಲೆ ಇಸ್ರೇಲ್ ಆಕ್ರಮಣವು ದುರಂತವಾಗಿದೆ ಮತ್ತು ಅದು ಮುಂದುವರಿಯಬಾರದು ಎಂದು ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಗಾಝಾದಲ್ಲಿ ಸುರಕ್ಷಿತವಾದ ಸ್ಥಳವಿಲ್ಲ ಮತ್ತು ಗಾಝಾದ ಜನರಿಗೆ ಅಲ್ಲಿಂದ ನಿರ್ಗಮಿಸಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿದ್ದಾರೆ. UNRWA ಏಜೆನ್ಸಿಯ ಮುಖ್ಯಸ್ಥರಾದ ಫಿಲಿಪ್ ಲಾಝಾರಿನಿ ಮಾತನಾಡಿ, ರಾಫಾದಲ್ಲಿ ಆತಂಕ ಹೆಚ್ಚುತ್ತಿದೆ, ಜನರಿಗೆ ಎಲ್ಲಿಗೆ ಹೋಗಬೇಕೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ನಿರಾಶ್ರಿತರ ಶಿಬಿರದ ಮೇಲಿನ ಯಾವುದೇ ಯುದ್ಧವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಾರ್ವೇಜಿಯನ್ ನಿರಾಶ್ರಿತರ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಾನ್ ಎಗೆಲ್ಯಾಂಡ್ ಕೂಡ ಹೇಳಿದ್ದಾರೆ.

ಇದನ್ನು ಓದಿ; ಮೋದಿ ಸರ್ಕಾರ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೇರಿದೆಯೇ? ಸಂಸತ್ತಿನಲ್ಲಿ ಓವೈಸಿ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...