Homeಕರ್ನಾಟಕಅಡ್ಡಂಡ ಕಾರ್ಯಪ್ಪ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ; ವಜಾಕ್ಕೆ ಮತ್ತೆ ಆಗ್ರಹ

ಅಡ್ಡಂಡ ಕಾರ್ಯಪ್ಪ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ; ವಜಾಕ್ಕೆ ಮತ್ತೆ ಆಗ್ರಹ

ರಂಗಾಯಣ ನಿರ್ದೇಶಕರ ನಡೆಗೆ ಮಾಜಿ ನಿರ್ದೇಶಕರು ಮತ್ತು ಚಿಂತಕರು ಕಿಡಿ ಕಾರಿದ್ದಾರೆ

- Advertisement -
- Advertisement -

ರಂಗಾಯಣ ವಿವಾದ ಮತ್ತೆ ಬುಗಿಲೆದ್ದಿದ್ದು, ಭಾನುವಾರ ನಡೆದ ಆನ್‌ಲೈನ್ ಚಿಂತನಾ ಕಾರ್ಯಕ್ರಮದಲ್ಲಿ ರಂಗಾಯಣದ ಮಾಜಿ ನಿರ್ದೇಶಕರುಗಳು ಮತ್ತು ಚಿಂತಕರುಗಳು ರಂಗಾಯಣದ ಹಾಲಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ. ಅವರ ವಿರುದ್ದ ಮಾನನಷ್ಟ ಮೊಕದ್ದಮೆಗೆ ನಿರ್ಧಾರ ಮಾಡಿರುವುದಾಗಿ ಹಿರಿಯ ರಂಗಕರ್ಮಿ, ರಂಗಾಯಣದ ಮಾಜಿ ನಿರ್ದೇಶಕರೂ ಆಗಿರುವ ಸಿ.ಬಸವಲಿಂಗಯ್ಯ ಹೇಳಿದ್ದಾರೆ.

‘ಸಮುದಾಯ ಕರ್ನಾಟಕ ರಾಜ್ಯ ಸಮಿತಿ’ ಮತ್ತು ಸಮಾನ ಆಸಕ್ತ ಸಂಘಟನೆಗಳು ಭಾನುವಾರ ನಡೆಸಿದ ‘ರಂಗಾಯಣ ಉಳಿಸಿ’ ಆನ್‌ಲೈನ್ ಪ್ರತಿರೋಧ ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕರನ್ನು ವಜಾಗೊಳಿಸಲು ಮತ್ತೆ ಆಗ್ರಹಿಸಲಾಯಿತು. ಬಹುತ್ವ ಸಂಸ್ಕೃತಿಗೆ ಧಕ್ಕೆಯಾಗಬಾರದು, ಹಾಗಾಗಿ ನಮಗೆ ಯಾವುದೇ ಪಟ್ಟ ಕಟ್ಟಿದರೂ ಹೋರಾಟದಿಂದ ಹಿಂಜರಿಯುವುದಿಲ್ಲ ಎಂದು ಗುಡುಗಿದ್ದಾರೆ.

ಇದನ್ನೂ ಓದಿ:ರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

ಈ ವೇಳೆ ರಂಗಾಯಣ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಮಾತನಾಡಿ, ರಂಗಾಯಣದಲ್ಲಿ ರಾಜಕೀಯ ಅಜೆಂಡಾ ಶುರುವಾಗಿದೆ. ಧನಿ ಎತ್ತಬೇಕಾದ ಕಲಾವಿದರೂ ಮೌನ ವಹಿಸಿದ್ದಾರೆ. ಸಂಘ ಪರಿವಾರದ ಚಿಂತನೆ ಯುವ ಸಮೂಹದ ದಿಕ್ಕು ತಪ್ಪಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ರಂಗಾಯಣದಲ್ಲಿ ಪ್ರಸನ್ನ ಅವರು ಬಹುರೂಪಿ ಉತ್ಸವ ಜಾರಿಗೆ ತಂದರು. ನನ್ನ ಅವಧಿಯಲ್ಲಿ ಚಿಣ್ಣರ ಮೇಳ ಶುರುವಾಯಿತು. ಹೀಗೆ ಪ್ರತಿ ನಿರ್ದೇಶಕರೂ ಒಂದೊಂದು ಹೊಸ ಯೋಜನೆ ತಂದಿದ್ದಾರೆ. ಜನಮೆಚ್ಚುಗೆ ಪಡೆದ ಯೋಜನೆಗಳು ಉಳಿದುಕೊಂಡಿವೆ. ಕಾರ್ಯಪ್ಪ ಅವರೂ ಹೊಸ ಯೋಜನೆ ತರಲಿ. ಅವರ ಆರ್‌ಎಸ್‌ಎಸ್ ಸಂಸ್ಕೃತಿಯದ್ದೇ ನಾಟಕ ಮಾಡಿ ಪ್ರದರ್ಶಿಸಲಿ. ನಮ್ಮನ್ನು ಮಾವೋವಾದಿಗಳು ಎನ್ನುವವರು ನಮ್ಮ ಯೋಜನೆಗಳನ್ನೇಕೆ ಮುಂದುವರಿಸಬೇಕು” ಎಂದು ಬಸವಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಪ್ಪ ರಾಜಕೀಯ ಆಕಾಂಕ್ಷಿ:

ರಂಗಕರ್ಮಿ ಮತ್ತು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಮಾತನಾಡಿ, “ಕಾರ್ಯಪ್ಪ ಅವರು ಮೂಲ ರಾಜಕೀಯ ಆಕಾಂಕ್ಷಿ. ಜನವಿರೋಧಿ ನೀತಿಗಳ ಮೂಲಕ ರಂಗಾಯಣ ನೀತಿಗೆ ವಿರೋಧವಾಗಿ ಮಾತನಾಡುವುದು, ರಾಜಕೀಯ ಬೆರಸುವುದು, ‘ಕೋಮುವಾದ ಪಡೆಯಿಂದ ಬಂದಿದೇನೆ ಏನು ಬೇಕಾದರೂ ಮಾಡಿಕೊಳ್ಳಿ’ ಎನ್ನುವ ಅಪ್ರಬುದ್ಧ ಹೇಳಿಕೆಗಳನ್ನು ಬಳಸುತ್ತಿರುವುದು ರಂಗಾಯಣದ ಇತಿಹಾಸಲ್ಲಿ ಇದೇ ಮೊದಲು. ಇಂಥವರ ವಿರುದ್ಧ ಕ್ರಮ ಆಗಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, “ವ್ಯಕ್ತಿಗೆ ಯಾವುದೇ ಸಿದ್ದಾಂತವಿದ್ದರೂ, ಧರ್ಮ ಅನುಸರಿಸಿದರೂ ರಂಗಾಯಣಕ್ಕೆ ಬಂದ ಮೇಲೆ ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಹಿಂದಿನ ನಿರ್ದೇಶಕರೆಲ್ಲರೂ ಕಲೆ ಸಂಸ್ಕೃತಿ ಬೆಳೆಸುವತ್ತ ಚಿತ್ತ ಹರಿಸಿದ್ದರು. ಆದರೆ, ಕಾರ್ಯಪ್ಪ ಅವರು ಹಿಂದೂ ಧರ್ಮದ ಪರ ವಾಲಿದ್ದಾರೆ” ಎಂದು ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, “ಅಡ್ಡಂಡ ಸಿ.ಕಾರ್ಯಪ್ಪ ಅವರ ನೇಮಕಾತಿಯನ್ನು ನಾವು ವಿರೋಧಿಸಿರಲಿಲ್ಲ. ಏಕೆಂದರೆ ರಂಗಪ್ರಜ್ಞೆ ಹೊಂದಿದ್ದ ವ್ಯಕ್ತಿ ಎಂದು ಖುಷಿಯಾಗಿತ್ತು. ನಂತರದಲ್ಲಿ ನಡವಳಿಕೆಯನ್ನು ನೋಡಿದಾಗ ರಂಗಾಯಣವನ್ನು ಆರ್‌ಎಸ್‌ಎಸ್ ಪ್ರೇರಿತ ಆದೇಶಗಳ ವೇದಿಕೆಯಾಗಿ ರೂಪಿಸುತ್ತಿದ್ದಾರೆ ಎನ್ನಿಸುತ್ತಿದೆ.

ವಿಶ್ವಪ್ರಜ್ಞೆಯಂತೆ ಎಲ್ಲರನ್ನೂ ಒಳಗೊಳ್ಳುವ ರಂಗಾಯಣದಲ್ಲಿ ಎಡ-ಬಲವನ್ನು ತರುತ್ತಾ, ಆರ್‌ಎಸ್‌ಎಸ್ ಬೈಠಕ್ ಕೇಂದ್ರವಾಗಿ ನಡೆದುಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ. ಕಾರ್ಯಪ್ಪ ಅವರ ಮನಸ್ಸು- ಮಾತು, ಅಸಾಂಸ್ಕೃತಿಕ ಮತ್ತು ರಂಗಾಯಣಕ್ಕೆ ಅಪಚಾರ ಮಾಡುವ ರೀತಿ ನಡೆಯುತ್ತಿದೆ. ಹಾಗಾಗಿ, ರಂಗಾಯಣ ಕೋಮುವಾದದೆಡೆಗೆ ಹೋಗದಂತೆ ಎಚ್ಚರವಹಿಸಬೇಕಿದೆ” ಎಂದು ಕರೆ ನೀಡಿದ್ದಾರೆ.

ರಂಗಾಯಣ ಮಾಜಿ ನಿರ್ದೇಶಕರಾದ ಚಿದಂಬರರಾವ್ ಜಂಬೆ, ಭಾಗೀರಥಿ ಬಾಯಿ ಕದಂ, ಲಕ್ಷ್ಮೀ ಚಂದ್ರಶೇಖರ್, ನಾ.ದಿವಾಕರ್, ಸುಮಾ, ಕೆ.ಎಸ್.ವಿಮಲಾ, ಟಿ.ಸುಂದರ್‌ರಾವ್, ಗೋಪಾಲಕೃಷ್ಣ, ಎಸ್.ದೇವೇಂದ್ರಗೌಡ, ಜೆ.ಸಿ.ಶಶಿಧರ್, ಅಶ್ವಿನಿ, ಬಾಬು ಇಲಿಗರ್, ಜೆ.ಸಿ.ಶಶಿಧರ್, ಡಿ.ಆರ್.ಲಕ್ಷ್ಮೀನಾರಾಯಣ, ಕಾವ್ಯ ಅಚ್ಚುತ್, ಎನ್.ಎಸ್.ಶಾಂತಕುಮಾರ್, ಲಾವಣಿಕಾ, ಪುರುಷೋತ್ತಮ್, ಸುಷ್ಮಾ, ಮಲ್ಲಿಕಾರ್ಜುನ ಕಡಕೊಳ, ಸುಶೀಲ, ಲಕ್ಷ್ಮಣ್, ಪ್ರವೀಣ್ ರೆಡ್ಡಿ ರಾಯಚೂರು ಇನ್ನಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಸೂಲಿಬೆಲೆ ಹೇಳುವುದು ನಿಮಗೆ ಸುಳ್ಳಾಗಿರಬಹುದು, ನಮಗಲ್ಲ: ರಂಗಾಯಣ ನಿರ್ದೇಶಕ

ರಂಗಾಯಣದಲ್ಲಿ ಈ ರೀತಿಯ ನಡವಳಿಕೆಯಾಗಲಿ, ನಿರ್ದೇಶಕರಿಂದ ಈ ರೀತಿ ಮಾತುಗಳಾಗಲಿ ನಾವು ಕಂಡರಿಲಿಲ್ಲ. ಸಾಮಾಜಿಕವಾಗಿ ಮಾಡುವ ಕೆಲಸವನ್ನು ಬಿಟ್ಟು , ಉಳಿದೆಲ್ಲವನ್ನೂ ಮಾಡುತ್ತಿದ್ದಾರೆ. ನನ್ನ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿದ್ದು, ನೋವುಂಟು ಮಾಡಿದೆ.
-ಭಾಗೀರಥಿ ಬಾಯಿ ಕದಂ, ರಂಗಾಯಣ ಮಾಜಿ ನಿರ್ದೇಶಕರು

ಯಾವುದೇ ವ್ಯಕ್ತಿಯ ರಾಗದ್ವೇಷ ಆ ಸಂಸ್ಥೆಯದ್ದಾಗಬಾರದು. ಇಂದಿನ ವಿದ್ಯಮಾನ ಕಂಡು ಬೇಸರವಾಗಿದೆ. ರಂಗಾಯಣ ತನ್ನ ಘನತೆಯಂತೆಯೇ ಬೆಳೆಯಬೇಕು. ನಿರ್ದೇಶಕರು ಪೂರಕವಾಗಿ ಜವಾಬ್ದಾರಿ ನಿರ್ವಹಿಸಬೇಕು. ಹೊರತುಪಡಿಸಿ, ಬೇಜಾಬ್ದಾರಿಯಿಂದ ಮಾತನಾಡುವುದು ಆ ಸ್ಥಾನಕ್ಕೆ ಅವಮಾನ ಮಾಡಿದಂತೆ. ಅಡ್ಡಂಡ ಸಿ.ಕಾರ್ಯಪ್ಪ ಅವರು ರಂಗಾಯಣ ಕಟ್ಟುವ ಬಗ್ಗೆ ಯೋಚನೆ ಮಾಡಿಲ್ಲ. ಮಾಡಿದ್ದರೆ ಉದ್ಧಟತನದ ಮಾತುಗಳು ಬರುತ್ತಿರಲಿಲ್ಲ.
-ಚಿದಂಬರ ರಾವ್ ಜಂಬೆ, ರಂಗಾಯಣ ಮಾಜಿ ನಿರ್ದೇಶಕರು

ಅಡ್ಡಂಡ ಸಿ.ಕಾರ್ಯಪ್ಪ ಅವರು ರಂಗಾಯಣದಲ್ಲಿ ಆರ್‌ಎಸ್‌ಎಸ್- ಬಿಜೆಪಿ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಅವರನ್ನು ವಿರೋಧಿಸುತ್ತಿದ್ದೇವೆ. ನಾವು ಅವರನ್ನು ಕೋಮುವಾದಿ ಅಂದೆವು. ಆದರೆ, ಕೆಟ್ಟ ಭಾಷೆಗಳನ್ನು ಉಪಯೋಗಿಸಿಲ್ಲ. ಆದರೆ, ಅವರು ತಮ್ಮ ಪದ ಪ್ರಯೋಗದಿಂದ ಸಂಸ್ಕೃತಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಹಾಗಾಗಿ, ಎಂತಹ ಸಂದರ್ಭ ಬಂದರೂ ಅವರು ವರ್ಗಾವಣೆ ಆಗಬೇಕು. ನಾವೆಲ್ಲರೂ ಸಂಘಟಕರಾಗಿ ಹೋರಾಡಬೇಕು.
– ಪ.ಮಲ್ಲೇಶ್, ಸಮಾಜವಾದಿ

ಇದನ್ನೂ ಓದಿ:ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...