Homeಮುಖಪುಟನಮ್ಮ ಫೋನ್‌ ಟ್ಯಾಪ್‌ ಮಾಡಿ ಅದನ್ನು ಆದಿತ್ಯನಾಥ್‌ ಕೇಳುತ್ತಿದ್ದಾರೆ: ಅಖಿಲೇಶ್‌ ಆರೋಪ

ನಮ್ಮ ಫೋನ್‌ ಟ್ಯಾಪ್‌ ಮಾಡಿ ಅದನ್ನು ಆದಿತ್ಯನಾಥ್‌ ಕೇಳುತ್ತಿದ್ದಾರೆ: ಅಖಿಲೇಶ್‌ ಆರೋಪ

- Advertisement -
- Advertisement -

ತಮ್ಮ ನಾಲ್ವರು ನಿಕಟವರ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಒಂದು ದಿನದ ನಂತರ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷದ ನಾಯಕರ ಫೋನ್‌ಗಳು ಮತ್ತು ಅವರ ಕಚೇರಿಯ ದೂರವಾಣಿಗಳನ್ನು ಕದ್ದಾಲಿಸುತ್ತಿದ್ದಾರೆ ಎಂದು ಭಾನುವಾರ ಆರೋಪಿಸಿದ್ದಾರೆ. ‘ಮುಖ್ಯಮಂತ್ರಿ ಪ್ರತಿ ಸಂಜೆ ಧ್ವನಿಮುದ್ರಿಕೆಗಳನ್ನು ಆಲಿಸುತ್ತಾರೆ’ ಎಂದಿರುವ ಅಖಿಲೇಶ್‌‌ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್‌ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.

ಐಟಿ ದಾಳಿಗಳ ಬಗ್ಗೆ ಮಾತನಾಡಿದ ಅವರು, ಇದು ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂಬುದರ ಸೂಚನೆಯಾಗಿದೆ ಎಂದಿದ್ದಾರೆ. ಅಖಿಲೇಶ್ ಅವರ ಖಾಸಗಿ ಕಾರ್ಯದರ್ಶಿ ಗಜೇಂದ್ರ ಯಾದವ್, ವಕ್ತಾರ ರಾಜೀವ್ ರೈ, ಪಕ್ಷದ ನಾಯಕ ಮನೋಜ್ ಯಾದವ್ ಮತ್ತು ಸ್ನೇಹಿತ ಮತ್ತು ಉದ್ಯಮಿ ರಾಹುಲ್ ಭಾಸಿನ್ ಸೇರಿದಂತೆ ಎಸ್‌ಪಿ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ಶನಿವಾರ ಸರಣಿ ದಾಳಿ ನಡೆಸಿತ್ತು.

ಇದನ್ನೂ ಓದಿ: ಚುನಾವಣೆ ಬಂದಿದೆ, ಮುಂದಕ್ಕೆ ಇಡಿ, ಸಿಬಿಐ ಬರುತ್ತದೆ: ಐಟಿ ದಾಳಿ ಬಗ್ಗೆ ಅಖಿಲೇಶ್‌ ಯಾದವ್‌

ಮುಖ್ಯಮಂತ್ರಿ ಆದಿತ್ಯನಾಥ್ ಅವರು “ಅನುಪಯೋಗಿ” ಎಂದು ಮುಖ್ಯಮಂತ್ರಿ ಆದಿತ್ಯನಾಥ್‌ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಶನಿವಾರವಷ್ಟೇ, ಪ್ರಧಾನಿ ನರೇಂದ್ರ ಮೋದಿ, ‘ಯುಪಿ ಪ್ಲಸ್‌‌ ಯೋಗಿ, ಉಪಯೋಗಿ’ ಎಂದು ಆದಿತ್ಯನಾಥ್‌ ಅವರನ್ನು ಬಣ್ಣಿಸಿದ್ದರು.

“ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮಾಡಿದಂತೆ ಬಿಜೆಪಿ ಈಗ ಕೆಲಸ ಮಾಡಲು ಪ್ರಾರಂಭಿಸಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರ ತಂತ್ರಗಳು ಹೆಚ್ಚಾಗುತ್ತವೆ. ಈ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಇದೇ ರೀತಿಯ ತಂತ್ರಗಳನ್ನು ಪ್ರಯೋಗಿಸಿತ್ತು. ಆದರೆ ಅದು ಯಾವುದೇ ಫಲಿತಾಂಶವನ್ನು ನೀಡಲಿಲ್ಲ” ಎಂದು ಅಖಿಲೇಶ್‌ ಹೇಳಿದ್ದಾರೆ.

“ಈಗ ತೆರಿಗೆ ಇಲಾಖೆ ಬಂದಿದೆ… ಮುಂದೆ ಜಾರಿ ನಿರ್ದೇಶನಾಲಯ ಶೀಘ್ರದಲ್ಲೇ ಬರಲಿದೆ ಮತ್ತು ಅದರ ಸಿಬಿಐ ಕೂಡಾ ಬರಲಿದೆ. ಆದರೆ ಸೈಕಲ್ (ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ) ಮಾತ್ರ ನಿಲ್ಲುವುದಿಲ್ಲ” ಎಂದು ಅಖಿಲೇಶ್ ಮತ್ತೇ ಉಚ್ಛರಿಸಿದ್ದಾರೆ.

ಕೆಟ್ಟ ನಾಟಕವಾಡುತ್ತಿರುವ ಅಧಿಕಾರಿಗಳ ಬಗ್ಗೆ ನನಗೆ ಅರಿವಿದೆ ಎಂದು ಹೇಳಿದ ಅಖಿಲೇಶ್, “ಅಧಿಕಾರಕ್ಕೆ ಬಂದ ಮೇಲೆ ಅವರೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸುತ್ತೇನೆ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:Fact Check: ಕಸಬ್‌ನ ಮರಣದಂಡನೆಯನ್ನು ರದ್ದುಗೊಳಿಸಲು ಕೋರಿ ಅಖಿಲೇಶ್ ಯಾದವ್ ಅರ್ಜಿಗೆ ಸಹಿ ಹಾಕಿರಲಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...