Homeಕರೋನಾ ತಲ್ಲಣಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

ಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

- Advertisement -
- Advertisement -

ಕೊರೊನಾ ವೈರಾಣುಗಳ ರುದ್ರ ತಾಂಡವದ ಆರ್ಭಟದಲ್ಲಿ ಅದಕ್ಕಿಂತಲೂ ಗಂಡಾಂತರಕಾರಿಯಾದ ರೋಗಗಳಿಂದ ಆಗುತ್ತಿರುವ ಅನಾಹುತವನ್ನು ಆಳುವ ಸರ್ಕಾರ ಕಡೆಗಣಿಸಿ ಕೂತಿದೆಯಾ? ರಾಜ್ಯಾದ್ಯಂತ ಇರುವ ಸಾವಿರಾರು ಕಿಡ್ನಿವೈಫಲ್ಯದ ರೋಗಿಗಳು ಅನುಭವಿಸುತ್ತಿರುವ ಸಾವುಬದುಕಿನ ನಡುವಿನ ಸಂಕಟ ಇಂತಹ ಅನುಮಾನವನ್ನು ಹುಟ್ಟುಹಾಕಿದೆ!

ಎರಡೂ ಮೂತ್ರಪಿಂಡ ವಿಫಲವಾಗಿರುವ ಮಂದಿಯದು ತೀರಾ ನಾಜೂಕಿನ ಮತ್ತು ಅಷ್ಟೇ ಕ್ಲಿಷ್ಟಕರ ಬದುಕು. ಒಂಚೂರು ಹೆಚ್ಚು ಕಮ್ಮಿಯಾದರೂ ಜೀವಕ್ಕೇ ಕುತ್ತು. ಕೆಲವರಿಗಂತೂ ವಾರದಲ್ಲಿ 2-3 ಬಾರಿ ಡಯಾಲಿಸಿಸ್ ಅನಿವಾರ್ಯ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಇಂಥ ಸುಮಾರು 30-50 ಡಯಾಲಿಸಿಸ್ ರೋಗಿಗಳಿದ್ದಾರೆ. ಇವರಲ್ಲಿ ಬಹುತೇಕರು ಬಡ ಅಥವಾ ಕೆಳ ಮಧ್ಯಮವರ್ಗದ ಕುಟುಂಬದವರು; ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಷ್ಟು ಚೈತನ್ಯ ಇಲ್ಲದವರು. ಇವರೆಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡುವ ಸರ್ಕಾರಿ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಯು.ಟಿ ಖಾದರ್‌ಗೆ ಡಯಾಲಿಸಿಸ್ ರೋಗಿಗಳ ಗೋಳು ಗೊತ್ತಾಗಿತ್ತು. ಅವರ ಐದು ವರ್ಷದ ಕಾಲಮಿತಿಯಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಡಯಾಲಿಸಿಸ್ ಕೇಂದ್ರ ನಡೆಸುವಂಥ ಯೋಜನೆ ಹಾಕಿಕೊಂಡಿದ್ದರು. ಖಾದರ್ ಈ ಯೋಜನೆ ಸಿದ್ಧಪಡಿಸುತ್ತಿದ್ದ ಸಮಯದಲ್ಲೇ ಅವರ ಬಳಿಯಿದ್ದ ಆರೋಗ್ಯ ಖಾತೆ ಹೋಗಿ, ಅವರು ಆಹಾರ ಸಚಿವರಾದರು. ಅವರ ನಂತರ ಬಂದ ರಮೇಶ್‌ಕುಮಾರ್ ಅವರಿಗೆ ಇದಕ್ಕಿಂತ ಖಾಸಗಿಯವರಿಗೆ ಡಯಾಲಿಸಿಸ್ ಯೋಜನೆಯ ಗುತ್ತಿಗೆ ನೀಡುವುದು ಅನುಕೂಲಕರ ಎಂದೆನಿಸಿರಬೇಕು. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ಹೊರಟಿದ್ದ ಅವರು ಈ ಖಾಸಗಿ ಗುತ್ತಿಗೆಯಿಂದ ಆಗುವ ಅನಾಹುತಗಳ ಬಗ್ಗೆಯೇಕೋ ಗಮನಹರಿಸಲಿಲ್ಲ.

ರಾಜ್ಯದ 23 ತಾಲ್ಲೂಕುಗಳ 122 ತಾಲ್ಲೂಕು ಕೇಂದ್ರಗಳಲ್ಲಿ ಮೂತ್ರಪಿಂಡ ಕಾಯಿಲೆಯವರಿಗೆ ಡಯಾಲಿಸಿಸ್ ನಡೆಸುವ ಗುತ್ತಿಗೆ ಅನಿವಾಸಿ ಭಾರತೀಯ ಆರೋಗ್ಯ ಉದ್ಯಮಿ ಬಿ.ಆರ್.ಶೆಟ್ಟಿಯ ಕಂಪನಿಗೆ ರಮೇಶ್ ಕುಮಾರ್ ಕಾಲದಲ್ಲಿ ಸಲೀಸಾಗಿ ದಕ್ಕಿತ್ತು. ಪ್ರತಿ ರೋಗಿಗೆ ಒಂದೂವರೆ ಸಾವಿರ ರೂ.ನಂತೆ ಡಯಾಲಿಸಿಸ್ ನಡೆಸುವ ಗುತ್ತಿಗೆಯನ್ನು ಬಿ.ಆರ್.ಶೆಟ್ಟಿ ಕಂಪನಿ ಪಡೆದುಕೊಂಡಿದೆ. ಹಾಗೆ ನೋಡಿದರೆ ತಲಾ 500-600ರೂ ಖರ್ಚು ತಗಲುವ ಈ ಡಯಾಲಿಸಿಸ್ ದುಬಾರಿ ರೇಟಿಗೆ ಬಿ.ಆರ್.ಶೆಟ್ಟಿ ಕುದುರಿಸಿಕೊಂಡಿದ್ದಾರೆ.

ಯಡಿಯೂರಪ್ಪ ಸರ್ಕಾರದಲ್ಲಿ ಡಾ. ಸುಧಾಕರ್ ಆರೋಗ್ಯ ಮಂತ್ರಿಯಾಗುವ ತನಕ ಡಯಾಲಿಸಿಸ್ ಹೇಳುವಂಥ ತೊಂದರೆ ತೊಡಕಿಲ್ಲದೆ ನಡೆದುಕೊಂಡು ಹೋಗಿತ್ತು. ದುಬೈನಲ್ಲಿ ಬಿ.ಆರ್.ಶೆಟ್ಟರ ಉದ್ಯಮ ಸಾಮ್ರಾಜ್ಯ ಪತನವಾಗುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲೂ ಆತನ ವ್ಯವಹಾರವೆಲ್ಲ ಎಡವಟ್ಟಾಗುತ್ತ ಹೋಯಿತು. ಮಂತ್ರಿ ಡಾ.ಸುಧಾಕರ್ ಮತ್ತವರ ಆರೋಗ್ಯ ಇಲಾಖೆಯ ಆಯಕಟ್ಟಿನ ಅಧಿಕಾರಿಗಳ ಮಧ್ಯೆ ಸಾಮರಸ್ಯ ಇಲ್ಲದಾಯಿತು. ಬಿಆರ್‌ಎಸ್ ಕಂಪನಿಯ ಡಯಾಲಿಸಿಸ್ ಕೇಂದ್ರಗಳಲ್ಲಿ ನಾನಾ ನಮೂನೆಯ ಅವ್ಯವಸ್ಥೆ-ಅವಾಂತರ ನಡೆಯತೊಡಗಿತು.

ರೋಗಿಗಳು ದಿಕ್ಕೆಟ್ಟು ಹೋದರು. ಸರ್ಕಾರದಿಂದ ಬರಬೇಕಾದ ಹಣ ಕಾಲ ಕಾಲಕ್ಕೆ ಪಾವತಿ ಆಗದಿರುವುದೇ ಅವ್ಯವಸ್ಥೆಗೆ ಕಾರಣವೆಂದು ಬಿಆರ್‌ಎಸ್‌ನವರು ಬಹಿರಂಗವಾಗೇ ದೂರಹತ್ತಿದರು; ಆರೋಗ್ಯ ಮಂತ್ರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದಾಗಿ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸಲು ಸಾಧ್ಯವಾಗದಂತಾಗಿದೆ ಎಂದು ಬಿಆರ್‌ಎಸ್ ಕಂಪನಿಯ ಕಾರ್ಯನಿರ್ವಾಹಕ ಹೇಳಿರುವ ಆಡಿಯೋ ಒಂದು ವೈರಲ್ ಆಯಿತು.

ಆರೋಗ್ಯ ಇಲಾಖೆ ಬಿಆರ್‌ಎಸ್ ಕಂಪನಿಯದೇ ತಪ್ಪೆನ್ನುತ್ತಿದೆ. ಬಿಆರ್‌ಎಸ್ ಕಂಪನಿ ಒಪ್ಪಂದ ಉಲ್ಲಂಘಿಸಿದೆ. ವಿದ್ಯುತ್ ಶಕ್ತಿ ಮತ್ತು ನೀರಿನ ಪೂರೈಕೆ ಬಿಆರ್‌ಎಸ್ ಕಂಪನಿಯೇ ಮಾಡಿಕೊಳ್ಳಬೇಕೆಂಬುದು ಒಪ್ಪಂದದ ಷರತ್ತು. ಆದರೆ ಬಿಆರ್‌ಎಸ್ ಕಂಪನಿಯವರು ಸರ್ಕಾರಿ ಆಸ್ಪತ್ರೆಗಳಲ್ಲಿನ ನೀರು ಮತ್ತು ವಿದ್ಯುತ್ ಬಳಸಿಕೊಂಡು ಅದರ ಖರ್ಚುವೆಚ್ಚ ಭರಿಸದೆ ಪಂಗನಾಮ ಹಾಕುತ್ತಿದ್ದಾರೆ. ಲೆಕ್ಕಪತ್ರ ಪರಿಶೀಲನೆಯಲ್ಲಿ ಇದು ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಬಿಲ್ ತಡೆಹಿಡಿಯಲಾಗಿದೆ ಎಂಬುದು ಆರೋಗ್ಯ ಇಲಾಖೆಯ ಸಮಜಾಯಿಷಿ.

ಬಿಆರ್‌ಎಸ್ ಕಂಪನಿ ಹಾಗು ಆರೋಗ್ಯ ಇಲಾಖೆಯ ಮೇಲಾಟದಲ್ಲಿ ಬಲಿ ಪಶುವಾಗುತ್ತಿರುವುದು ಮಾತ್ರ ನಿಸ್ಸಹಾಯಕ-ನಿರ್ಗತಿಕ ಡಯಾಲಿಸಿಸ್ ರೋಗಿಗಳು! ಬಿಆರ್‌ಎಸ್‌ನ ಎಲ್ಲ 122 ಡಯಾಲಿಸಿಸ್ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪಾಪದ ಪೇಶೆಂಟ್‌ಗಳು ಒದ್ದಾಡುತ್ತಿದ್ದಾರೆ. ಡಯಾಲಿಸಿಸ್‌ಗೆ ಬೇಕಾದ ರಾಸಾಯನಿಕ ಔಷಧ ಡಯಲೈಸರ್ ಮುಂತಾದ ಸಲಕರಣೆ ಸೆಂಟರ್‌ಗಳಲ್ಲಿ ಇಲ್ಲದಾಗಿದೆ! ಡಯಾಲಿಸಿಸ್ ಮಾಡುವ ನರ್ಸ್, ಟೆಕ್ನಿಶಿಯನ್‌ಗಳಿಗೆ ಬೇಕಾದ ಕನಿಷ್ಟ ಕೈಗ್ಲೌಸುಗಳು, ಮಾಸ್ಕ್‌ಗಳಿಗೂ ತತ್ವಾರವಾಗಿದೆ.

ಕೆಲವು ತಾಲ್ಲೂಕಿನ ರೋಗಿಗಳು ಅಥವಾ ಅವರ ಸಂಬಂಧಿಕರು ತೀರಾ ಅಗತ್ಯವಾದ ಪರಿಕರ-ಔಷಧ-ರಾಸಾಯನಿಕ ತಂದುಕೊಟ್ಟು ಡಯಾಲಿಸಿಸ್ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಸರಿಯಾಗಿ ಸಂಬಳ ಸಿಗದೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಿಆರ್‌ಎಸ್ ಕಂಪನಿ ಬಿಟ್ಟು ಹೋಗುತ್ತಿರುವುದು, ರೋಗಿಗಳು ಮತ್ತವರ ಪರಿವಾರದವರನ್ನು ಚಿಂತೆಗೀಡುಮಾಡಿದೆ! ಸರ್ಕಾರದಿಂದ ಬರೋಬ್ಬರಿ 28 ಕೋಟಿ ಹಣ ಬರದಿರುವುದರಿಂದ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸುವುದು ಸಾಧ್ಯವೇ ಇಲ್ಲವೆಂದು ಬಿಆರ್‌ಎಸ್ ಕಂಪನಿಯವರು ಹೇಳುತ್ತಿದ್ದಾರೆ. ಹಾಗಂತ ಸಂಬಂಧಿಸಿದ ಸಚಿವ ಅಧಿಕಾರಿಗಳಿಗೂ ಪತ್ರ ಬರೆದಿರುವುದಾಗಿ ಬಿಆರ್‌ಎಸ್ ಕಂಪನಿ ಹೇಳಿಯೂ ಆಗಿದೆ.

ಇದು ಪರ್ಸೆಂಟೇಜ್ ಪರಾಕ್ರಮದ ಅಡ್ಡ ಪರಿಣಾಮವೆಂಬ ಆರೋಪವೂ ಕೇಳಿ ಬರುತ್ತಿದೆ. ಈಗಲಾದರೂ ಆರೋಗ್ಯ ಮಂತ್ರಿ ಹಾಗು ಆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಡಯಾಲಿಸಿಸ್ ಪೇಶೆಂಟ್‌ಗಳು ಸಾಲು ಸಾಲಾಗಿ ಸಾಯುವುದು ಖಂಡಿತ! ಆರೋಗ್ಯ ಸೌಲಭ್ಯಗಳಿಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಮೊದಲೇ ಹೈರಾಣಾಗಿರುವ ಡಯಾಲಿಸಿಸ್ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ತುಂಬ ಕಷ್ಟ. ಉದಾಹರಣೆಗೆ ಉತ್ತರಕನ್ನಡದ ರೋಗಿಗಳು ಉಡುಪಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಪಣಜಿಗೆ ಹೋಗಬೇಕು. ಹೋಗಲಿಕ್ಕೆ ನಾಲ್ಕೈದು ತಾಸು ಬೇಕು; ಬರುವುದಕ್ಕೆ ಅಷ್ಟೇ ಸಮಯಬೇಕು. ಡಯಾಲಿಸಿಸ್‌ಗೆ 2-3 ಗಂಟೆ ಬೇಕಾಗುತ್ತದೆ. ಅಷ್ಟರಲ್ಲಿ ರೋಗಿ ಏದುಸಿರು ಬಿಡತೊಡಗುತ್ತಾನೆ/ಳೆ. ನಸೀಬ್ ಇದ್ದರಷ್ಟೇ ಬಚಾವ್!!

ತಕ್ಷಣಕ್ಕೆ ಮಂತ್ರಿ ಡಾ. ಸುಧಾಕರ್ ಬಿಆರ್‌ಎಸ್ ಕಂಪನಿಯನ್ನು ಹಳಿಗೆ ತರಲು ಗಂಭೀರ-ನಿಷ್ಠುರ ಪ್ರಯತ್ನ ಮಾಡಬೇಕಿದೆ; ಅದಾಗದಿದ್ದರೆ ಬಡ ರೋಗಿಗಳನ್ನು ಬದುಕಿಸಲು ಬದಲಿ ವ್ಯವಸ್ಥೆ ಮಾಡಬೇಕಿದೆ. ನಂತರ ನಿಧಾನಕ್ಕೆ ಪ್ರತಿ ತಾಲ್ಲೂಕಾಸ್ಪತ್ರೆಗಳಲ್ಲಿ ಸರಕಾರದ್ದೇ ಸ್ವತಂತ್ರ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಯೋಜನೆ ಹಾಕಿ ಕಾರ್ಯಗತಗೊಳಿಸಬೇಕಿದೆ.


ಇದನ್ನೂ ಓದಿ: ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡುತ್ತಿರುವ, ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಅಂತರರಾಷ್ಟ್ರೀಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...