Homeಕರೋನಾ ತಲ್ಲಣದೆಹಲಿ ಲಾಕ್‌ಡೌನ್‌ ಮಾಡಲ್ಲ, ಭಯಬೇಡ: ಅರವಿಂದ್ ಕೇಜ್ರಿವಾಲ್

ದೆಹಲಿ ಲಾಕ್‌ಡೌನ್‌ ಮಾಡಲ್ಲ, ಭಯಬೇಡ: ಅರವಿಂದ್ ಕೇಜ್ರಿವಾಲ್

- Advertisement -
- Advertisement -

ಮುಖ್ಯಮಂತ್ರಿ ಅರವಿಂದ್‌‌ ಕೇಜ್ರಿವಾಲ್‌, ‘ದೆಹಲಿಯಲ್ಲಿ ಯಾವುದೇ ಲಾಕ್‌ಡೌನ್ ಇಲ್ಲ’ ಎಂದು ಮಂಗಳವಾರ ಹೇಳಿದ್ದಾರೆ. ದೆಹಲಿಯಲ್ಲಿ ಕೊರೊನಾ ಪಾಸಿಟಿವಿಟಿ ದರವು ಏಳು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, 25% ದಷ್ಟಿದೆ.

ಕೊರೊನಾ ಪ್ರಕರಣಗಳ ಏರಿಕೆಯ ಕುರಿತು ಮಾತನಾಡಿದ ಕೇಜ್ರಿವಾಲ್‌, “ಭಯಪಡಬೇಡಿ, ನಾವು ಲಾಕ್‌ಡೌನ್ ಅನ್ನು ವಿಧಿಸುವುದಿಲ್ಲ” ಎಂದು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ದೆಹಲಿಯಲ್ಲಿ ಇಂದು ಸುಮಾರು 22,000 ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ:ಕೊರೊನಾ ಉಲ್ಭಣ: ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ?

ದೆಹಲಿಯಲ್ಲಿ ಈಗಾಗಲೆ ಎಲ್ಲಾ ಖಾಸಗಿ ಕಚೇರಿಗಳನ್ನು ಮುಚ್ಚಲು ಮತ್ತು ಅಲ್ಲಿನ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುವಂತೆ ಆದೇಶಿಸಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವವರಿಗೆ ಮಾತ್ರ ಹೊಸ ನಿಯಮದಿಂದ ವಿನಾಯಿತಿ ಪಡೆಯಲಿದ್ದಾರೆ ಎಂದು ದೆಹಲಿ ವಿಪತ್ತು ನಿರ್ವಹಣಾ ಸಂಸ್ಥೆ (ಡಿಡಿಎಂಎ) ಸಭೆ ನಿರ್ಧರಿಸಿದೆ. ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ಸಹ ಮುಚ್ಚಲಾಗಿದ್ದು, ಪಾರ್ಸೆಲ್‌ ಮತ್ತು ಹೋಮ್ ಡೆಲಿವರಿಗಳನ್ನು ಮಾತ್ರ ಅನುಮತಿಸಲಾಗಿದೆ.

“ನಗರದಲ್ಲಿ ಮುಂದಿನ 48 ಗಂಟೆಗಳಲ್ಲಿ ಅಥವಾ ಈ ವಾರದಲ್ಲಿ ಪ್ರಕರಣಗಳು ಖಂಡಿತಾ ಗರಿಷ್ಠಗೊಳ್ಳಬಹುದು” ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಸೋಮವಾರ ಹೇಳಿದ್ದರು. ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದ್ದರೂ ಮತ್ತೊಂದು ಕರ್ಫ್ಯೂ ಸಾಧ್ಯ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ:ಕೊರೊನಾ: ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 12 ಸಾವಿರ ಕೇಸ್, ಬೆಂಗಳೂರಿನಲ್ಲಿ 9 ಸಾವಿರ ಪ್ರಕರಣ

“ಪ್ರಕರಣದ ಉತ್ತುಂಗ(ಪೀಕ್‌) ಈಗಾಗಲೇ ತಲುಪಿದೆ ಅಥವಾ ಒಂದೆರೆಡು ದಿನಗಳಲ್ಲಿ ತಲುಪಲಿದೆ. ಈ ವಾರ ಖಂಡಿತವಾಗಿ ಪೀಕ್‌ ಆಗುತ್ತದೆ. ಅದರ ನಂತರ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಆದರೆ ಜನರು ಎಚ್ಚರ ತಪ್ಪದಂತೆ ನೆನಪಿಸಲು ನಾವು ಮತ್ತೊಂದು ಕರ್ಫ್ಯೂ ಅನ್ನು ಜಾರಿಗೊಳಿಸುವ ಸಾಧ್ಯತೆಯಿದೆ” ಎಂದು ಸತ್ಯೇಂದ್ರ ಸೋಮವಾರ ತಿಳಿಸಿದ್ದರು.

ಖಾಸಗಿ ಬ್ಯಾಂಕ್‌ಗಳು, ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳು, ವಿಮಾ ಕಂಪನಿಗಳು, ಫಾರ್ಮಾ ಕಂಪನಿಗಳು, ಮೈಕ್ರೋಫೈನಾನ್ಸ್ ಕಂಪನಿಗಳು, ವಕೀಲರ ಕಚೇರಿಗಳು ಮತ್ತು ಕೊರಿಯರ್ ಸೇವೆಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ:ವೀಕೆಂಡ್‌ ಕರ್ಫ್ಯೂ: ಹೊಸ ಕೊರೊನಾ ಮಾರ್ಗಸೂಚಿಯಲ್ಲಿ ಏನೇನಿದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರಾಚ್ಯ ಉದ್ವಿಗ್ನತೆ: ಯುದ್ಧ ಪೀಡಿತ ಸ್ಥಳಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸ್ಥಳಾಂತರಿಸಲು ತುರ್ತು ಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್, ಯುಎಇ, ಇರಾನ್ ಮತ್ತು ಕತಾರ್ ಸೇರಿದಂತೆ ಪೀಡಿತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸಿಸುವ ಕನ್ನಡಿಗರ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ...

ಅಮೆರಿಕ-ಇಸ್ರೇಲ್-ಇರಾನ್ ಉದ್ವಿಗ್ನತೆ: ಖಮೇನಿ ಹತ್ಯೆಯ ನಂತರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭುಗಿಲೆದ್ದ ಪ್ರತಿಭಟನೆಗಳು

ಶ್ರೀನಗರ: ಅಮೆರಿಕ-ಇಸ್ರೇಲ್ ಬಾಂಬ್ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ ನಂತರ ಶ್ರೀನಗರ ನಗರದ ಕೆಲವು ಭಾಗಗಳಲ್ಲಿ ಭಾನುವಾರ ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆದವು. ಜಮ್ಮು ಮತ್ತು ಕಾಶ್ಮೀರದ...

ದೇವನಹಳ್ಳಿ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಖಾಸಗಿ ವಸತಿ ಶಾಲೆಯ ಮಾಲೀಕ, ಪ್ರಾಂಶುಪಾಲೆಯ ಬಂಧನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಖಾಸಗಿ ವಸತಿ ಶಾಲೆಯಲ್ಲಿ ಒಬ್ಬಳು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಮತ್ತೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಮಾಲೀಕ ಹಾಗೂ ಪ್ರಾಂಶುಪಾಲೆಯಾಗಿರುವ ಆತನ...

‘ನಾಗರಿಕರ ಹತ್ಯೆ, ಹೊಸ ಯುದ್ದವನ್ನು ಅಮೆರಿಕ ಜನತೆ ಬಯಸುವುದಿಲ್ಲ’ : ಇರಾನ್‌ ಮೇಲಿನ ದಾಳಿಯನ್ನು ಖಂಡಿಸಿದ ನ್ಯೂಯಾರ್ಕ್ ಮೇಯರ್‌ ಝೊಹ್ರಾನ್ ಮಮ್ದಾನಿ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ನಡೆಸಿದ ದಾಳಿಗಳನ್ನು ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ಖಂಡಿಸಿದ್ದು, "ಅಕ್ರಮ ಆಕ್ರಮಣಕಾರಿ ಯುದ್ಧದಲ್ಲಿ ದುರಂತದ ಉಲ್ಬಣ" ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್...

ಇರಾನ್‌ನ ಶಾಲೆಗಳ ಮೇಲೆ ಇಸ್ರೇಲ್ ದಾಳಿ : ಮಕ್ಕಳು ಸೇರಿ 100ಕ್ಕೂ ಹೆಚ್ಚು ಜನರು ಸಾವು

ದಕ್ಷಿಣ ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್ ನಗರದ ಪ್ರಾಥಮಿಕ ಬಾಲಕಿಯರ ಶಾಲೆಯ ಮೇಲೆ ಶನಿವಾರ (ಫೆ.28) ಇಸ್ರೇಲ್ ನಡೆಸಿದ ದಾಳಿಯಲ್ಲಿ 108 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್‌-ಜಝೀರಾ ವರದಿ ಮಾಡಿದೆ. ಮಿನಾಬ್‌ನಲ್ಲಿರುವ ಶಜರೆಹ್...

ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಸಾವು : ದೃಢಪಡಿಸಿದ ಇರಾನ್

ಇಸ್ರೇಲ್- ಅಮೆರಿಕ ಶನಿವಾರ (ಫೆ.28) ಇರಾನ್‌ ಮೇಲೆ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯಾತುಲ್ಲಾ ಅಲಿ ಖಮೇನಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ದೃಢಪಡಿಸಿರುವುದಾಗಿ Al Jazeera...

ಅಮೆರಿಕ, ಇಸ್ರೇಲ್, ಇರಾನ್ ದಾಳಿ-ಪ್ರತಿ ದಾಳಿ : ಈವರೆಗೆ ಕನಿಷ್ಠ 8 ಸಾವು

ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ನಡೆಸಿದ ಪ್ರತಿ-ದಾಳಿಗಳಲ್ಲಿ ಹಲವು ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ. ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಹೆಣ್ಣು...

ಮಧ್ಯಪ್ರಾಚ್ಯ ಉದ್ವಿಗ್ನ : ಯುಎಇ, ಬಹ್ರೇನ್‌, ಕತಾರ್, ಕುವೈತ್‌ನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಪ್ರತಿ ದಾಳಿ!

ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ, ಇರಾನ್ ಅಮೆರಿಕದ ಮಿಲಿಟರಿ ನೆಲೆಗಳಿರುವ ಹಲವು ಅರಬ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್...

ರಾಜ್ಯಸಭೆಗೆ ಮೇನಕಾ ಗುರುಸ್ವಾಮಿ : ದೇಶದ ಮೊದಲ LGBTQ+ ಸಂಸದೆಯಾಗಲು ಅಣಿಯಾದ ಹಿರಿಯ ವಕೀಲೆ

ರಾಜ್ಯಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ (ಫೆ.27) ವಕೀಲೆ ಮೇನಕಾ ಗುರುಸ್ವಾಮಿ, ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್, ರಾಜ್ಯ ಸಂಪುಟ ಸಚಿವ ಬಾಬುಲ್ ಸುಪ್ರಿಯೋ ಮತ್ತು ನಟಿ...

ದಾಳಿ ಮುಂದುವರಿಸುವ ಸೂಚನೆ ನೀಡಿದ ಟ್ರಂಪ್ : ಇರಾನ್‌ನಿಂದ ತೀವ್ರ ಪ್ರತಿದಾಳಿಯ ಎಚ್ಚರಿಕೆ

ಅಮೆರಿಕದ ಸಹಯೋಗದೊಂದಿಗೆ ಇಸ್ರೇಲ್ ಶನಿವಾರ (ಫೆ.28) ಇರಾನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗುವಾಗ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇಸ್ರೇಲ್‌ ಇರಾನ್‌ನ ರಾಜಧಾನಿ ಟೆಹ್ರಾನ್‌ ಸೇರಿದಂತೆ ದೇಶದ ಹಲವು ಸ್ಥಳಗಳ...