ಕಲೆಯೆನ್ನುವುದು ಆಯಾ ಸಮಾಜದ ತಳವರ್ಗದ ಸಮಸ್ಯೆಗಳನ್ನ ಪ್ರತಿನಿಧಿಸದಿದ್ದರೆ, ಖಂಡಿತವಾಗಿಯೂ ಅದು ವ್ಯರ್ಥ ಎಂದು ಖ್ಯಾತ ವಿಮರ್ಶಕ, ಚಿಂತಕ ಮತ್ತು ಕಲಾವಿದ ಸ್ತಾನಿಸ್ಲಾವ್‌ಸ್ಕಿ ಹೇಳಿದ್ದಾರೆ. ಇದಕ್ಕೆ ನುರಾರು ಉದಾಹರಣೆಗಳು (ಸಂಗೀತ, ನಾಟಕ, ಸಾಹಿತ್ಯ, ಚಿತ್ರಕಲೆ, ಸಿನಿಮಾ ಮುಂತಾದವು) ನಮ್ಮ ಮುಂದಿವೆ. ಆದರೆ, ಪ್ರಸ್ತುತದ ಝ್ವಲಂತ ಉದಾಹರಣೆಯೊಂದಿದೆ. ನವರಾತ್ರಿ ಉತ್ಸವ ಮತ್ತು ದುರ್ಗಾ ಮಾತೆಯ ಆರಾಧನೆಯನ್ನು ಕಲ್ಕತ್ತಾ ಭಾಗದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ದುರ್ಗಾ ಮಾತೆ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ ಪೂಜಿಸಲಾಗುತ್ತದೆ. ಈ ಬಾರಿ ಕಲಾವಿದರೊಬ್ಬರ ಕೈಚಳಕದಿಂದ ಪ್ರಸ್ತುತ ಕೊರೊನಾ ಕಾಲದಲ್ಲಿ ವಲಸೆ ಕಾರ್ಮಿಕರ ತಲ್ಲಣಗಳನ್ನು ತನ್ನ ಸೃಜನಶೀಲ ಚಿಂತನೆಯ ಮೂಲಕ ಮಾಗಿಸಿ, ದುರ್ಗಾ ಮಾತೆಯನ್ನು ವಲಸೆ ಕಾರ್ಮಿಕ ಮಹಿಳೆಯೊಬ್ಬಳಿಗೆ ಹೋಲಿಸುವಂತಹ ಪ್ರತಿಮೆಯೊಂದನ್ನು ನಿರ್ಮಿಸಿದ್ದಾರೆ.
ದುರ್ಗಾಮಾತೆಯನ್ನು ವಲಸೆಗಾರ ಮಹಿಳೆಗೆ ಹೋಲಿಸಿ ರಚಿಸಿರುವ ದುರ್ಗಾ ಮಾತೆ ಪ್ರತಿಮೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಖ್ಯಾತ ಚಿತ್ರಕಲಾವಿದ ಬಿಕಾಶ್ ಭಟ್ಟಾಚಾರ್ಯ ಅವರ ವರ್ಣಚಿತ್ರಗಳಿಂದ ಪ್ರೇರೇಪಿತವಾಗಿ ಇದನ್ನು ರಚಿಸಿದ್ದೇನೆ ಎಂದು ಬಂಗಾಳದ ಕಲಾವಿದ ಪಲ್ಲಬ್ ಭೌಮಿಕ್ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಮಧ್ಯೆ ಸಾವಿರಾರು ವಲಸೆ ಕಾರ್ಮಿಕರು ಸಂಕಷ್ಟ ಅನುಭವಿಸಿದ್ದರು. ಹಾಗಾಗಿ ಅವರನ್ನು ಸ್ಮರಿಸಿ ಗೌರವ ಸಲ್ಲಿಸುವ ಸಲುವಾಗಿ ದುರ್ಗಾ ಮಾತೆಯನ್ನು ‘ವಲಸೆ ತಾಯಿ’ಯಾಗಿ ರಚಿಸಿರುವ ಈ ಪ್ರತಿಮೆಯನ್ನು ಮುಂಬರುವ ದುರ್ಗಾ ಪೂಜಾ ಉತ್ಸವದ ಸಂದರ್ಭದಲ್ಲಿ ಕೋಲ್ಕತ್ತಾದ ಬರಿಷಾ ಕ್ಲಬ್ ಪಂಡಲ್‌ನಲ್ಲಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬಿಕಾಶ್ ಭಟ್ಟಾಚಾರ್ಯ ಚಿತ್ರಿಸಿರುವ, ದುರ್ಗಾ ಮಾತೆಯ ಭಂಗಿಯಂತೆಯೇ ನಿಂತಿರುವ ‘ವಲಸೆಗಾರ ಮಹಿಳೆ’ಯೊಬ್ಬಳ ವರ್ಣಚಿತ್ರದಿಂದ ತಾನು ಪ್ರೇರಿತನಾಗಿದ್ದೆ ಎಂದ ಪಲ್ಲಬ್ ಭೌಮಿಕ್, “ಪ್ರತಿಮೆಯನ್ನು ರಚಿಸಲು ತನಗೆ ಒಂದು ಉಲ್ಲೇಖ ಬೇಕು. ಅದು ಈ ಚಿತ್ರದಿಂದ ನನಗೆ ಸಿಕ್ಕಿದೆ. ಈ ಪ್ರತಿಮೆ ಪೂರ್ಣಗೊಳ್ಳಲು 2 ತಿಂಗಳು ಸಮಯ ತೆಗೆದುಕೊಂಡಿದೆ” ಎಂದು ಹೇಳಿದರು. ಪಲ್ಲಬ್ ಭೌಮಿಕ್ ಪ್ರತಿಮೆ ನಿರ್ಮಾಣದ ಮುಖ್ಯ ಕಲಾವಿದರಾಗಿ ಕೆಲಸ ಮಾಡಿದ್ದು, 4-5 ಕಲಾವಿದರ ತಂಡವು ಇದಕ್ಕೆ ನೆರವು ನೀಡಿತು.
ಇದನ್ನೂ ಓದಿ: #MigrantLivesStillMatter: ವಲಸೆ ಕಾರ್ಮಿಕರ ಗೋಳು ಕೇಳಿ – ಟ್ವಿಟ್ಟರ್ ಅಭಿಯಾನ
ಬಿಕಾಶ್ ಭಟ್ಟಾಚಾರ್ಯ ಬಂಗಾಳದ ಪ್ರಸಿದ್ಧ ವರ್ಣಚಿತ್ರಕಾರ. ಅವರ ವರ್ಣಚಿತ್ರಗಳು ಮಧ್ಯಮ ವರ್ಗದ ಬಂಗಾಳಿಗಳ ಜೀವನವನ್ನು ಪ್ರತಿಬಿಂಬಿಸುತ್ತವೆ.
ಈ ಪ್ರತಿಮೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪಲ್ಲಬ್ ಭೌಮಿಕ್ ಇದನ್ನು ದೇವರ ಆಶೀರ್ವಾದ, ತಮ್ಮ ಕೆಲಸಕ್ಕೆ ಶೇಕಡಾ 100 ರಷ್ಟು ತೊಡಗಿಸಿಕೊಂಡಿದ್ದರ ಫಲ ಇದು ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: 97 ವಲಸೆ ಕಾರ್ಮಿಕರ ಸಾವು: ಮಾಹಿತಿ ಇಲ್ಲ ಎಂದು ಹೇಳಿ, ಈಗ ಮಾಹಿತಿ ನೀಡಿದ ಕೇಂದ್ರ ಸರ್ಕಾರ!!!
ಈ ಪ್ರತಿಮೆಯನ್ನು ಟ್ವಿಟರ್ ಮೂಮೆಂಟ್ಸ್ ಇಂಡಿಯಾ, ತನ್ನ ಖಾತೆಯಲ್ಲಿ ಹಂಚಿಕೊಂಡಿದೆ.
Artist Pallab Bhaumik is winning praises for his re-imagination of Maa Durga as a migrant mother. https://t.co/Bt1VZrQPyq
— Twitter Moments India (@MomentsIndia) October 16, 2020
ಹಲವಾರು ಗಣ್ಯರು ಮತ್ತು ಪ್ರಖ್ಯಾತ ವ್ಯಕ್ತಿಗಳು ಪ್ರತಿಮೆಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನ ಸಂಕಟ: 100 ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಸಾವು RTIನಿಂದ ಬಹಿರಂಗ – ಮಾಹಿತಿಯೇ ಇಲ್ಲ ಎಂದ…
ನಟಿ ಊರ್ಮಿಳಾ ಮಾತೋಂಡ್ಕರ್ ಟ್ವೀಟ್ ಮಾಡಿ, “ಜನರು ನಿಮಗೆ ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಪದಗಳು ಮತ್ತು ಆಲೋಚನೆಗಳು ಜಗತ್ತನ್ನು ಬದಲಾಯಿಸಬಹುದು. ಬಂಗಾಳ ಕಲಾವಿದ ಪಲ್ಲಾಬ್ ಭೌಮಿಕ್ ಅವರು ರಚಿಸಿರುವ #ಮಾ ದುರ್ಗಾ ಪ್ರತಿಮೆ ಅತ್ಯಂತ ಅದ್ಭುತ ಚಿತ್ರಣ. ಮಾ ದುರ್ಗಾ ವಲಸೆಗಾರಳಾಗಿ ತನ್ನ ಮಕ್ಕಳೊಂದಿಗೆ” ಎಂದು ಬರೆದುಕೊಂಡಿದ್ದಾರೆ.
“No matter what people tell you, words n ideas can change the world”
Most stunning depiction of #maadurga by Bengal artist Pallab Bhowmik. Maa Durga as migrant worker with her children. Wishing you all #HappyNavratri ?? #Navratri2020 #NAVRATRA #navratrifestival ??? pic.twitter.com/iKEt5Wq25Y— Urmila Matondkar (@UrmilaMatondkar) October 17, 2020
ಇದನ್ನೂ ಓದಿ: ಕೊರೊನಾ ಲಾಕ್‌ಡೌನ್; ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸುಳ್ಳುಸುದ್ಧಿಗಳೇ ಕಾರಣ: ಕೇಂದ್ರ ಸರ್ಕಾರ
ಇತಿಹಾಸಕಾರ-ಪತ್ರಕರ್ತ ಹಿಂಡೋಲ್ ಸೇನ್‌ಗುಪ್ತಾ ಟ್ವೀಟ್ ಮಾಡಿ, “ಬಂಗಾಳದ ದುರ್ಗಾ ಪ್ರತಿಮೆಗಳು ಅಥವಾ ವಿಗ್ರಹಗಳ ಬಗ್ಗೆ ಅತ್ಯಂತ ಆಕರ್ಷಕ ಮತ್ತು ಧೈರ್ಯ ತುಂಬುವ ವಿಷಯವೆಂದರೆ, ಇವುಗಳನ್ನು ಪ್ರತಿವರ್ಷ ಭವ್ಯವಾದ ದೈವಿಕತೆಯೊಂದಕ್ಕೆ ಮಾತ್ರವಲ್ಲದೆ ಪ್ರಸ್ತುತ ತಲ್ಲಣಗಳಿಗೆ ಸಂಬಂಧಿಸಿದಂತೆಯೂ ನಿರ್ಮಿಸುತ್ತಾರೆ. ಈ ಬಾರಿ ಮಾ ದುರ್ಗಾ ವಲಸಿಗರ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ” ಎಂದು ಬರೆದುಕೊಂಡಿದ್ದಾರೆ.
The most fascinating and reassuring thing about Durga protimas or idols in Bengal is that each year they speak not only to a sublime divine but also to the urgent earthly. This time Ma Durga imagined as a migrant. The transcendental meets the tellurian. #DurgaPuja2020 pic.twitter.com/DNdCHOQ0zM
— HindolSengupta (@HindolSengupta) October 16, 2020
ಹೀಗೆ ಸಾವಿರಾರು ಜನರು ಈ ಪ್ರತಿಮೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದು, ಇದು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಕೊರೊನಾ ಲಾಕ್‌ಡೌನ್: 6 ರಾಜ್ಯಗಳ 67 ಲಕ್ಷ ವಲಸೆ ಕಾರ್ಮಿಕರು ತವರಿಗೆ ಮರಳಿದ್ದಾರೆ


