Homeಮುಖಪುಟದುರ್ಗಾ ಪೂಜೆ: ಹಿಂದೂ ಮುಸ್ಲಿಂ ಧಾರ್ಮಿಕ ಸಾಮರಸ್ಯ ಮೆರೆಯುವ ಕಿದಿರ್‌ಪುರ್‌‌ ನಗರ!

ದುರ್ಗಾ ಪೂಜೆ: ಹಿಂದೂ ಮುಸ್ಲಿಂ ಧಾರ್ಮಿಕ ಸಾಮರಸ್ಯ ಮೆರೆಯುವ ಕಿದಿರ್‌ಪುರ್‌‌ ನಗರ!

ಉತ್ಸವ ಅಥವಾ ಆಚರಣೆಯ ಕಲ್ಪನೆ ಕೇವಲ ಒಂದು ಸಮುದಾಯಕ್ಕೆ ಸೇರಿಲ್ಲ. ಅದು ದುರ್ಗಾ ಪೂಜೆಯಾಗಲಿ, ಈದ್ ಆಗಿರಲಿ, ಜನರು ಒಟ್ಟಾಗಿ ಉತ್ಸವ ಆಚರಿಸಲು ಮಾನವೀಯತೆಯ ಉತ್ಸಾಹದಲ್ಲಿ ಸೇರುತ್ತಾರೆ

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿನ ದುರ್ಗಾ ಪೂಜೆ ವೈಭವಕ್ಕೆ ಈ ಬಾರಿ ಕೊರೊನಾ ಸಾಂಕ್ರಾಮಿಕ ತಡೆ ಒಡ್ಡಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಮಧ್ಯೆ, ಆರ್ಥಿಕತೆ ಕುಸಿದಿರುವ ಸಂದರ್ಭದಲ್ಲಿ ಈ ವರ್ಷ ದುರ್ಗಾ ಪೂಜೆಯು ವಿಭಿನ್ನ ರೀತಿಯ ಅನುಭವಕ್ಕೆ ಸಾಕ್ಷಿಯಾಗಲಿದೆ.

ಕೋಲ್ಕತಾ ಹೊಸ ನಿಯಮಗಳ ಮಧ್ಯೆ ಉತ್ಸವಕ್ಕೆ ಸಜ್ಜಾಗುತ್ತಿದ್ದಂತೆ, ಅಲ್ಲಿನ ಹಳೆಯ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಒಂದಾದ ಕಿದಿರ್‌ಪುರ್ ತನ್ನ ದೀರ್ಘಕಾಲದ ಸಂಪ್ರದಾಯವಾದ ಧಾರ್ಮಿಕ ಸಾಮರಸ್ಯವನ್ನು ಆಚರಿಸಲು ಸಜ್ಜಾಗಿದೆ.

ಕಿದಿರ್‌ಪುರದ ಚೆಟ್ಲಾ ಅಗ್ರಾನಿ ಕ್ಲಬ್, ಕಿದಿರ್‌ಪುರ್ 5 ಸ್ಟಾರ್ ಕ್ಲಬ್ ಮತ್ತು ಮುನ್‌ಶೋಟೊಲಾ ದುರ್ಗೋತ್ಸವ್ ಕ್ಲಬ್ ಸ್ಥಾಪಿಸಿರುವ ಪೆಂಡಾಲ್‌ಗಳು ಈ ಪ್ರದೇಶದ ಮಸೀದಿಗೆ ಅತಿ ಸಮೀಪದಲ್ಲಿಯೇ ಇವೆ. ಎಲ್ಲಾ ಧರ್ಮದ ಜನರು ಇಲ್ಲಿ ದುರ್ಗಾ ಮಾತೆಯ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು.

ಈ ಪ್ರದೇಶದಲ್ಲಿ ಸ್ಥಾಪಿಸಲಾಗುವ ಪೆಂಡಾಲ್‌ಗಳಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದವರು. ಇವರೇ ಪೆಂಡಾಲ್‌ಗಳಿಗೆ ಹಣಕಾಸು ನೀಡುವವರಾಗಿದ್ದಾರೆ. ಇಲ್ಲಿ ಸುಮಾರು 80 ವರ್ಷಗಳ ಹಿಂದಿನಿಂದಲೂ ಪೆಂಡಾಲ್‌ಗಳನ್ನು ಸ್ಥಾಪಿಸಲಾಗುತ್ತಿದೆ.

ಚೆಟ್ಲಾ ಅಗ್ರಾನಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಸವ್ಯಸಾಚಿ ರಾಯ್‌ಚೌಧರಿ ಅವರು ನಗರದ ಇಲ್ಲಿನ ಪ್ರಸಿದ್ಧ ಪೆಂಡಾಲ್ ‌ಇತಿಹಾಸವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಕಾಳಿ ದೇವಿಯ ಮೂರ್ತಿ ಸುಟ್ಟರೆ?

“ನಾವು ಇಲ್ಲಿಯವರೆಗೆ ಬರಲು ಮುಖ್ಯ ಕಾರಣ, ಬಾಬಿ (ಟಿಎಂಸಿ ನಾಯಕ) ಎಂದೂ ಕರೆಯಲ್ಪಡುವ ಫಿರಾಜ್ ಹಕೀಮ್. ನಮ್ಮಲ್ಲಿ ಮೊದಲಿಗೆ ನಾಲ್ಕು-ಐದು ಜನರು ಈ ಪೂಜೆ ಪ್ರಾರಂಭಿಸಿದರು. ನಮ್ಮ ನಡುವೆ ಯಾವತ್ತೂ ವ್ಯತ್ಯಾಸಗಳಿರಲಿಲ್ಲ. ಮುಸ್ಲಿಂ ಯಾರು, ಹಿಂದೂ ಯಾರು ಎಂಬ ಬಗ್ಗೆ ನಾವು ಎಂದಿಗೂ ಕಾಳಜಿ ವಹಿಸಲಿಲ್ಲ. ಅವರು ನಮ್ಮ ಆಚರಣೆಯ ಭಾಗವಾಗಿದ್ದಾರೆ, ನಾವು ಅವರ ಆಚರಣೆಯ ದೊಡ್ಡ ಭಾಗವಾಗಿದ್ದೇವೆ” ಎನ್ನುತ್ತಾರೆ.

Munshotola Durgotsav Club’s pandal.
PC: Malini Chakrabarty

‘ಉತ್ಸವ’ ಅಥವಾ ಆಚರಣೆಯ ಕಲ್ಪನೆ ಕೇವಲ ಒಂದು ಸಮುದಾಯಕ್ಕೆ ಸೇರಿಲ್ಲ. ಅದು ದುರ್ಗಾ ಪೂಜೆಯಾಗಲಿ, ಈದ್ ಆಗಿರಲಿ, ಜನರು ಒಟ್ಟಾಗಿ ‘ಉತ್ಸವ’ ಆಚರಿಸಲು ಮಾನವೀಯತೆಯ ಉತ್ಸಾಹದಲ್ಲಿ ಸೇರುತ್ತಾರೆ. ಕೋಮು ಸೌಹಾರ್ದತೆ ಎಷ್ಟು ಮಹತ್ವದ್ದಾಗಿದೆ ಎಂಬುದರ ಸಂಕೇತ ಇದು. ಜಾತಿ ಮತಗಳೆಂದು ದೊಂಬಿ-ಗಲಾಟೆಗಳು ನಡೆಯುತ್ತಿರುವ ಈ ಸಮಯದಲ್ಲಿ ಕೊಲ್ಕಾತ್ತಾ  ಎನು ಮಾಡುತ್ತಿದೆಯೋ ಅದು ಮತ್ತಷ್ಟು ರಾಜ್ಯಗಳಿಗೆ ಮಾದರಿಯಾಗಲಿ ಎಂದು ನಾನು ಆಶಿಸುತ್ತೇನೆ ಎಂದು ಚೆಟ್ಲಾ ಅಗ್ರಾನಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಸವ್ಯಸಾಚಿ ರಾಯ್‌ಚೌಧರಿ ಹೇಳುತ್ತಾರೆ.

“ಈ ಪೂಜೆ ಸಮಿತಿಯಲ್ಲಿ ಹೆಚ್ಚಿನ ಜನ ಇರುವುದು ನನ್ನ ಮುಸ್ಲಿಂ ಸಹೋದರರು. ಜೊತೆಗೆ ಕೆಲವು ಹಿಂದೂ ಸಹೋದರರು ಕೂಡ ಇದ್ದಾರೆ. ಈದ್, ದುರ್ಗಾ ಪೂಜೆ ಎರಡನ್ನು ಒಟ್ಟಿಗೆ ಸೇರಿ ಆಚರಿಸಲು ಇಷ್ಟಪಡುತ್ತೇವೆ” ಎಂದು ಕಿದಿರ್‌ಪುರ್ 5 ಸ್ಟಾರ್ ಕ್ಲಬ್ ಎಂಡಿ ನಜೀಮ್ ಹೇಳುತ್ತಾರೆ.

ಒಟ್ಟಾರೆ, ದುರ್ಗಾ ಪೂಜೆ ಇಲ್ಲಿನ ಜನರಲ್ಲಿ ಸಾಂಪ್ರದಾಯಿಕವಾಗಿ ಧಾರ್ಮಿಕ ಸಾಮರಸ್ಯವನ್ನು ಆಚರಿಸಲು ನಡೆಸುವ ಹಬ್ಬವಾಗಿ ಮಾರ್ಪಟ್ಟಿದೆ. ಯಾವುದೇ ಕೋಮುಸಂಘರ್ಷಣೆಗಳು ಇಲ್ಲದೆ ಒಟ್ಟಾಗಿ ಹಬ್ಬ ಆಚರಿಸುವುದು ನಮಗೆ ನೆಮ್ಮದಿ ನೀಡಿದೆ. ನಮ್ಮಲ್ಲಿ ಯಾವುದೇ ಬೇಧಭಾವವಿಲ್ಲ ಎಂದು ಇಲ್ಲಿನ ಜನ ಹೇಳುತ್ತಾರೆ.


ಇದನ್ನೂ ಓದಿ: ವಲಸೆ ಕಾರ್ಮಿಕ ಮಹಿಳೆಗೆ ಹೋಲುವ ದುರ್ಗಾ ಮಾತೆ ಪ್ರತಿಮೆ: ಕಲಾವಿದನ ಕೈಚಳಕ ವೈರಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...