ಪ್ರತಿ ಬಾರಿ ದಸರಾ ಹಬ್ಬದಲ್ಲಿ ರಾವಣ ದಹನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರಧಾನಿ ಮೋದಿಯವರು ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿ ದಸರಾ ಆಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ #आज_का_रावण_नरेंद्र_मोदी (ಇಂದಿನ ರಾವಣ ನರೇಂದ್ರ ಮೋದಿ) ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಲಾಗುತ್ತಿದೆ. ಸಾವಿರಾರು ಮಂದಿ ರೈತರನ್ನು ಬೆಂಬಲಿಸಿ ಟ್ವೀಟ್‌ಗಳನ್ನು ಮಾಡುತ್ತಿದ್ದು, ಹಲವು ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
“ಒಬ್ಬ ವ್ಯಕ್ತಿಯ ಅಹಂಕಾರವು 630 ಕ್ಕೂ ಹೆಚ್ಚು ರೈತರ ಜೀವವನ್ನು ಕಳೆದಿದೆ. ಆದರೆ ಮೋದಿಯವರೇ ನೆನಪಿಡಿ, ರಾವಣನ ಅಹಂಕಾರವು ರಾಮನಿಂದ ನಾಶವಾಯಿತು. ಪ್ರಸ್ತುತ ನಮ್ಮ ರೈತರು ನಿಮಗೆ ರಾಮನಾಗಿದ್ದಾರೆ” ಎಂದು ಟಿಕ್ರಿ ಅಪ್‌ಡೇಟ್ ಖಾತೆ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸಿಂಘು ಗಡಿನಲ್ಲಿ ಯುವಕನ ಹತ್ಯೆ: ನಿಹಾಂಗ್ ಗುಂಪು, ಮೃತ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದ ಎಸ್‌ಕೆಎಂ
Ego of one man have costed more than 630 Farmers lives. But remember Modi, ego of ravan was also destroyed by Rama & so will be yours by current day Rama’s -Our Farmers.#आज_का_रावण_नरेंद्र_मोदी pic.twitter.com/RfNfQkWFvy
— Tikri Updates (@TikriUpdates) October 15, 2021
ಹರಿಯಾಣದ ಅಂಬಾಲದಲ್ಲಿ ರಾವಣನಂತೆ ಮೋದಿ ಪ್ರತಿಕೃತಿ ತಯಾರಿಸಿ ದಹಿಸಿದ್ದಾರೆ. ಜೊತೆಗೆ ಕಾರ್ಪೊರೇಟ್ ಕಾನೂನುಗಳ ಪ್ರತಿಗಳನ್ನು ಸ್ಥಳೀಯ ರೈತರು ಸುಟ್ಟಿದ್ದಾರೆ.
पंजाब के जीरा में किसान मजदूर महापंचायत के बाद नरेंद्र मोदी समेत भाजपा नेताओं और कॉरपोरेट का पुतला फूंका जा रहा है।#आज_का_रावण_नरेंद्र_मोदी pic.twitter.com/7gLx7etnew
— Kisan Ekta Morcha (@Kisanektamorcha) October 15, 2021
ಪಂಜಾಬ್‌ನ ಜಿರಾದಲ್ಲಿ ಕಿಸಾನ್ ಮಜ್ದೂರ್ ಮಹಾಪಂಚಾಯತ್ ನಡೆಸಿದ ರೈತರು ನಂತರ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮತ್ತು ಕಾರ್ಪೊರೇಟರ್‌ಗಳ ಪ್ರತಿಕೃತಿಗಳನ್ನು ದಹಿಸಲಾಗುತ್ತಿದೆ.
Farmers in Ambala, Haryana getting effigy of Modi Ravan ready to burn as a symbolic sign with a message “Truth always wins over evil”. Farmers will definitely win & get these crony laws repealed.#आज_का_रावण_नरेंद्र_मोदी pic.twitter.com/2TKYIvch7k
— Tikri Updates (@TikriUpdates) October 15, 2021
ಕಳೆದ ವರ್ಷವೂ ರೈತರು ರಾವಣ ಪ್ರತಿಕೃತಿಯನ್ನು ದಹಿಸಿ, ವಿವಾದಿತ ಕೃಷಿ ಕಾನೂನುಗಳ ಪ್ರತಿಯನ್ನು ಸುಟ್ಟು ದಸರಾ ಆಚರಿಸಿದ್ದರು.
Breaking the unity, and just contributing in violence is all that PM Modi can do
Big shame on the govt which is enjoying while farmers fighting for the prosperous future#आज_का_रावण_नरेंद्र_मोदी pic.twitter.com/74HnPM0VNv— Kisan Ekta Morcha (@Kisanektamorcha) October 15, 2021
ಇದನ್ನೂ ಓದಿ: ರೈತರನ್ನು ಬೆಂಬಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಭಾಷಣ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ


