Homeಚಳವಳಿಸಿಂಘು ಗಡಿನಲ್ಲಿ ಯುವಕನ ಹತ್ಯೆ: ನಿಹಾಂಗ್ ಗುಂಪು, ಮೃತ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದ ಎಸ್‌ಕೆಎಂ

ಸಿಂಘು ಗಡಿನಲ್ಲಿ ಯುವಕನ ಹತ್ಯೆ: ನಿಹಾಂಗ್ ಗುಂಪು, ಮೃತ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದ ಎಸ್‌ಕೆಎಂ

- Advertisement -
- Advertisement -

ಪ್ರತಿಭಟನಾ ನಿರತ ದೆಹಲಿಯ ಸಿಂಘು ಗಡಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ನಿಹಾಂಗ್ ಗುಂಪು ಮತ್ತು ಮೃತ ವ್ಯಕ್ತಿಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದಿದೆ.

ಹತ್ಯೆಯನ್ನು ಖಂಡಿಸಿರುವ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ, ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಪಾವಿತ್ರತೆಯನ್ನು ಬೆಂಬಲಿಸುವುದಿಲ್ಲ. ಘಟನೆಯಲ್ಲಿ ಭಾಗಿಯಾಗಿರುವ ನಿಹಾಂಗ್ ಗುಂಪು ಮತ್ತು ಮೃತ ವ್ಯಕ್ತಿ ಜೊತೆಗೆ ನಮಗೆ ಸಂಬಂಧವಿಲ್ಲ ಸ್ಪಷ್ಟಪಡಿಸಲು ಬಯಸುತ್ತದೆ ಎಂದಿದೆ.

ಮೃತರನ್ನು ಪಂಜಾಬ್‌ನ ರ್ನ್ ತರನ್ ಜಿಲ್ಲೆಯ ಚೀಮಾ ಕಲಾ ಹಳ್ಳಿಯ ದರ್ಶನ್ ಸಿಂಗ್ ಎಂಬುವರ ಮಗ ಲಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಯುವಕ ನಿಹಾಂಗ್‌ ಗುಂಪಿನ ಜೊತೆಯಲ್ಲಿಯೇ ಇದ್ದರು ಎನ್ನಲಾಗಿದೆ.

ಘಟನೆ ಕುರಿತು ಎಸ್‌ಕೆಎಂ ಪತ್ರಿಕಾ ಹೇಳಿಕೆ ಹೀಗಿದೆ. “ಇಂದು ಬೆಳಗ್ಗೆ ಸಿಂಘು ಗಡಿಯಲ್ಲಿ ಪಂಜಾಬ್‌ನ ಒಬ್ಬ ವ್ಯಕ್ತಿಯನ್ನು (ತರ್ನ್ ತರನ್ ಜಿಲ್ಲೆಯ ಚೀಮಾ ಕಲಾ ಹಳ್ಳಿಯ ದರ್ಶನ್ ಸಿಂಗ್ ಎಂಬುವರ ಮಗ ಲಖ್ಬೀರ್ ಸಿಂಗ್) ವಿರೂಪಗೊಳಿಸಿ ಕೊಲೆ ಮಾಡಲಾಗಿದೆ ಎಂಬುದು ಸಂಯುಕ್ತ ಕಿಸಾನ್ ಮೋರ್ಚಾ ಗಮನಕ್ಕೆ ಬಂದಿದೆ. ಒಂದು ನಿಹಾಂಗ್ ಗುಂಪು ಘಟನೆಯ ಹೊಣೆ ಹೊತ್ತಿದ್ದು, ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಲು ಪ್ರಯತ್ನ ಮಾಡಿದ್ದರಿಂದ ಹೀಗೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೃತ ವ್ಯಕ್ತಿ ಇದೇ ಗುಂಪಿನೊಂದಿಗೆ ಹಲವು ದಿನಗಳಿಂದ ಇದ್ದರು” ಎಂದಿದೆ.

ಇದನ್ನೂ ಓದಿ: ರೈತ ಹೋರಾಟ: ಸಿಂಘು ಗಡಿಯಲ್ಲಿ ಅನಾಮಧೇಯ ಮೃತದೇಹ ಪತ್ತೆ

“ಈ ಕ್ರೂರ ಹತ್ಯೆಯನ್ನು ಎಸ್‌ಕೆಎಂ ಖಂಡಿಸುತ್ತದೆ. ಈ ಘಟನೆಯ ಎರಡೂ ಪಕ್ಷಗಳಾದ ಈ ನಿಹಾಂಗ್ ಗುಂಪು ಮತ್ತು ಮೃತ ವ್ಯಕ್ತಿಗೂ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ. ನಾವು ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಪವಿತ್ರತೆಗೆ ವಿರುದ್ಧವಾಗಿದ್ದೇವೆ” ಎಂದು ಸ್ಪಷ್ಟನೆ ನೀಡಿದೆ.

“ಆದರೆ, ಧಾರ್ಮಿಕತೆಯ ಆಧಾರದ ಮೇಲೆ ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅನುಮತಿಸುವುದಿಲ್ಲ. ಕೊಲೆ ಆರೋಪ ಮತ್ತು ಅಪವಿತ್ರತೆಯ ಪಿತೂರಿ ಹಿಂದಿರುವವರ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತೇವೆ. ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಕಾನೂನುಬದ್ಧ ಕ್ರಮದಲ್ಲಿ ಪೊಲೀಸರು ಮತ್ತು ಆಡಳಿತದೊಂದಿಗೆ ಸಹಕರಿಸುತ್ತದೆ” ಎಂದು ಭರವಸೆ ನೀಡಿದೆ.

ಜೊತೆಗೆ “ಈ  ಪ್ರಜಾತಾಂತ್ರಿಕ ಶಾಂತಿಯುತ ರೈತ ಚಳವಳಿಯು ಯಾವುದೇ ರೀತಿಯ ಹಿಂಸೆಯನ್ನು ವಿರೋಧಿಸುತ್ತದೆ” ಎಂದು ತನ್ನ ಹೇಳಿಕೆಯಲ್ಲಿ ಎಸ್‌ಕೆಎಂ ತಿಳಿಸಿದೆ.

ಶುಕ್ರವಾರ ಸಿಂಘು ಗಡಿಯ ಪ್ರತಿಭಟನಾ ಸ್ಥಳದ ವೇದಿಕೆ ಬಳಿ ಯುವಕನ ಮೃತದೇಹ ಪತ್ತೆಯಾಗಿತ್ತು. ವೇದಿಕೆ ಮುಂಭಾಗದ ಬ್ಯಾರಿಕೇಡ್‌ಗೆ ಕಟ್ಟಲಾಗಿದ್ದ ಮೃತದೇಹದ ಎಡಗೈನ ಮುಂಗೈ ಕತ್ತರಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸೋನಿಪತ್ ಆಸ್ಪತ್ರೆಎ ಕಳುಹಿಸಲಾಗಿದೆ.

ಹತ್ಯೆ ಕುರಿತು ಹರಿಯಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸೋನಿಪತ್‌ನ ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 (ಕೊಲೆ) ಮತ್ತು 34 ಅಡಿಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.


ಇದನ್ನೂ ಓದಿ: ರೈತರನ್ನು ಬೆಂಬಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಭಾಷಣ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...