Homeಮುಖಪುಟಪಶ್ಚಿಮ ಬಂಗಾಳ: 72 ಗಂಟೆಗಳವರೆಗೆ ಮೌನ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ

ಪಶ್ಚಿಮ ಬಂಗಾಳ: 72 ಗಂಟೆಗಳವರೆಗೆ ಮೌನ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ

- Advertisement -
- Advertisement -

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಉಳಿದ ಮೂರು ಹಂತಗಳ ಚುನಾವಣೆಗೆ 48 ಗಂಟೆಗಳ ಮೌನ ಅವಧಿಯನ್ನು (silence period) 72 ಗಂಟೆಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ. ಕೊರೊನಾ ಬಿಕ್ಕಟ್ಟಿನಿಂದ ಉಂಟಾಗುವ ಅಪಾಯಗಳಿಂದ ಪ್ರಚಾರದ ದಿನದಂದು ಸಂಜೆ 7 ರಿಂದ ಬೆಳಿಗ್ಗೆ 10 ರ ನಡುವೆ ರಾಜ್ಯದಲ್ಲಿ ಯಾವುದೇ ಪ್ರಚಾರಕ್ಕೆ ಅನುಮತಿ ಇಲ್ಲ ಎಂದು ಆಯೋಗ ತಿಳಿಸಿದೆ.

ಸಂಜೆ 7 ರಿಂದ ಬೆಳಿಗ್ಗೆ 10 ರ ನಡುವೆ ಯಾವುದೇ ಚುನಾವಣಾ ರ್‍ಯಾಲಿಗಳು ಅಥವಾ ಸಭೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಲಾಗಿದೆ. ಗುರುವಾರವಷ್ಟೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಲ್ಕು ಹಂತದ ಚುನಾವಣೆಗಳನ್ನು ಒಂದೇ ದಿನ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆದರೆ ಆಯೋಗ ಇದನ್ನು ನಿರಾಕರಿಸಿತ್ತು.

ವಿಪರಿತ ಜನಸಂದಣಿಯಿಂದ ಕುಡಿದ ಚುನಾವಣಾ ಪ್ರಚಾರದ ರೋಡ್ ಶೋಗಳು ಮತ್ತು ಸಭೆಗಳು ಬಂಗಾಳದಲ್ಲಿ ಕಾಣಿಸಿಕೊಂಡ ನಂತರ ಈ ಆದೇಶ ಪ್ರಕಟವಾಗಿದೆ. ದೇಶದಲ್ಲಿ ದಾಖಲೆಯ ಕೊರೊನಾ ಉಲ್ಬಣದ ನಡುವೆ ಚುನಾವಣಾ ರ್‍ಯಾಲಿಗಳು ಅಗತ್ಯವಿರುವ ಕೊರೊನಾ ಮುನ್ನೆಚ್ಚರಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿವೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: ಕೊರೊನಾ ನೆಗೆಟಿವ್ ವರದಿಯಿಲ್ಲದೆ ಬಂಗಾಳಕ್ಕೆ ಹೊರಗಿನವರು ಬರದಂತೆ ತಡೆಯಿರಿ- ಮಮತಾ ಬ್ಯಾನರ್ಜಿ

 

ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳು ಕೊರೊನಾ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದ್ದ ಎಂದು ಚುನಾವಣಾ ಆಯೋಗ ತನ್ನ ಆದೇಶ ಪತ್ರದಲ್ಲಿ ತಿಳಿಸಿದೆ.

ಎಲ್ಲಾ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮಾಸ್ಕ್‌ಗಳನ್ನು ಧರಿಸಬೇಕು. ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ರ್‍ಯಾಲಿ ಸಂಘಟಕರ ಕರ್ತವ್ಯವಾಗಿದೆ ಎಂದು ಸಮೀಕ್ಷಾ ಸಮಿತಿ ಹೇಳಿದೆ.

ಮುಂದಿನ ಏಪ್ರಿಲ್ 17, 22, 26 ಮತ್ತು 29 ರಂದು ಬಂಗಾಳದಲ್ಲಿ ಮತದಾನ ನಡೆಯಲಿದೆ. ಶನಿವಾರ ನಡಯಲಿರುವ ಮತದಾನದ ಹಂತವನ್ನು ಬಿಟ್ಟ ಉಳಿದ ಮೂರು ಹಂತಗಳಿಗೆ ಮೌನ ಅವಧಿಯನ್ನು ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ.


ಇದನ್ನೂ ಓದಿ: ಪಶ್ಚಿಮ ಬಂಗಾಳ: ಮತದಾನದ ಮುನ್ನದಿನ ಕೇಂದ್ರೀಯ ಪಡೆ ಸದಸ್ಯರೊಂದಿಗೆ ಊಟ ಮಾಡಿದ ಬಿಜೆಪಿ ಅಭ್ಯರ್ಥಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...