Homeಮುಖಪುಟಪಶ್ಚಿಮ ಬಂಗಾಳ: ಮತದಾನದ ಮುನ್ನದಿನ ಕೇಂದ್ರೀಯ ಪಡೆ ಸದಸ್ಯರೊಂದಿಗೆ ಊಟ ಮಾಡಿದ ಬಿಜೆಪಿ ಅಭ್ಯರ್ಥಿ!

ಪಶ್ಚಿಮ ಬಂಗಾಳ: ಮತದಾನದ ಮುನ್ನದಿನ ಕೇಂದ್ರೀಯ ಪಡೆ ಸದಸ್ಯರೊಂದಿಗೆ ಊಟ ಮಾಡಿದ ಬಿಜೆಪಿ ಅಭ್ಯರ್ಥಿ!

ಈ ಕುರಿತು ಚುನಾವಣಾ ಆಯೋಗ ದಯವಿಟ್ಟು ತನಿಖೆ ಮಾಡಿ ಮತ್ತು ಕ್ರಮ ತೆಗೆದುಕೊಳ್ಳಿ ಎಂದು ಮೊಹುವಾ ಮೊಯಿತ್ರ ಒತ್ತಾಯಿಸಿದ್ದಾರೆ.

- Advertisement -
- Advertisement -

ಪಶ್ಚಿಮ ಬಂಗಾಳದ ವಿಧಾನಸಭೆಗೆ ನಾಲ್ಕು ಹಂತಗಳ ಮತದಾನ ಮುಗಿದಿದ್ದು ಏಪ್ರಿಲ್ 17ರಂದು 5ನೇ ಹಂತದ ಮತದಾನ ನಡೆಯಬೇಕಿದೆ. ಅದಕ್ಕೂ ಮುನ್ನ “ಇಂದು ಕೇಂದ್ರೀಯ ಪಡೆ ಸದಸ್ಯರು ಬಿಜೆಪಿ ಅಭ್ಯರ್ಥಿಯೊಂದಿಗೆ ಕುಳಿತು ಒಟ್ಟಿಗೆ ಊಟ ಮಾಡುತ್ತಿದ್ದಾರೆ. ಕೇಂದ್ರೀಯ ಪಡೆಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿವೆ” ಎಂದು ಟಿಎಂಸಿ ಸಂಸದೆ ಮೊಹುವಾ ಮೊಯಿತ್ರ ಆರೋಪಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಫೋಟೊವೊಂದನ್ನು ಹಂಚಿಕೊಂಡಿರುವ ಅವರು, “ರಣಘಾಟ್ ಈಶಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಪಡೆಗಳೊಂದಿಗೆ ಊಟ ಮಾಡುತ್ತಿದ್ದಾರೆ. ಸ್ವತಂತ್ರ ಕೇಂದ್ರೀಯ ಪಡೆಗಳು ಮತದಾನ ನಾಳೆ ಇರುವಾಗ ಈ ರೀತಿ ಒಂದು ಪಕ್ಷದ ಅಭ್ಯರ್ಥಿ ಪರ ಇರಲು ಹೇಗೆ ಸಾಧ್ಯ? ಈ ಕುರಿತು ಚುನಾವಣಾ ಆಯೋಗ ದಯವಿಟ್ಟು ತನಿಖೆ ಮಾಡಿ ಮತ್ತು ಕ್ರಮ ತೆಗೆದುಕೊಳ್ಳಿ” ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿಂದೆಯೂ ಚುನಾವಣಾ ಅಧಿಕಾರಿಗಳು ಮತಗಟ್ಟೆಯೊಂದರಲ್ಲಿ ಇವಿಎಂಗಳನ್ನು ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರಿನಲ್ಲಿ ಸಾಗಿಸುವ ಮೂಲಕ ವಿವಾದವೆಬ್ಬಿಸಿದ್ದರು. ನಂತರ ಆ ಅಧಿಕಾರಿಗಳನ್ನು ಅಮಾನತುಗೊಳಿಸಿ ಆ ಮತದಾನ ಕೇಂದ್ರದಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿತ್ತು.

ಅದೇ ರೀತಿಯಲ್ಲಿ ಇವಿಎಂನೊಂದಿಗೆ ಚುನಾವಣಾ ಅಧಿಕಾರಿಯೊಬ್ಬರು ಟಿಎಂಸಿ ಮುಖಂಡನ ಮನೆಯಲ್ಲಿ ತಂಗಿದ್ದರು. ಇದು ಸಹ ವಿವಾದಕ್ಕೆ ಕಾರಣವಾಗಿ ಆ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು.


ಇದನ್ನೂ ಓದಿ: ಅಸ್ಸಾಂ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ: ಮರುಮತದಾನಕ್ಕೆ ಆದೇಶ, 4 ಅಧಿಕಾರಿಗಳ ಅಮಾನತು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

0
ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000 ಮಂದಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು...