Homeಮುಖಪುಟಅಸ್ಸಾಂ: ಪ್ಯಾಡ್‌ವುಮೆನ್ ಆಗಿ ಬದಲಾದ ಮಾಜಿ ಬಂಡುಕೋರರು

ಅಸ್ಸಾಂ: ಪ್ಯಾಡ್‌ವುಮೆನ್ ಆಗಿ ಬದಲಾದ ಮಾಜಿ ಬಂಡುಕೋರರು

- Advertisement -
- Advertisement -

ಅಸ್ಸಾಂನ ಉದಲ್‌ಗುರಿ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಬಂದೂಕು ಹಿಡಿಯುತ್ತಿದ್ದ ಕೈಗಳು ಈಗ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲು ಕಲಿಯುತ್ತಿವೆ.

ಹೌದು, ಮಾಜಿ ಮಹಿಳಾ ಬಂಡುಕೋರರಿಗೆ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರಾಂತ್ಯ (ಬಿಟಿಆರ್) ಆಡಳಿತದಿಂದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತಿದ್ದು, ಸ್ಯಾನಿಟರಿ ಪ್ಯಾಡ್ ವಾಣಿಜ್ಯ ಉತ್ಪಾದನಾ ಘಟಕ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

“ಮಾಜಿ ಬಂಡುಕೋರರಿಗೆ ಪುನರ್ವಸತಿ ಬಹಳ ಮುಖ್ಯವಾಗಿದೆ. ನಾವು ಅವರ ಆಸಕ್ತಿ ಮತ್ತು ಪರಿಣತಿಯ ಕ್ಷೇತ್ರಗಳನ್ನು ಕಂಡು ಹಿಡಿದು, ಅವರಿಗೆ ತರಬೇತಿ ನೀಡಿ ಅದಕ್ಕೆ ಅನುಗುಣವಾಗಿ ಉದ್ಯೋಗ ಕೊಡುತ್ತಿದ್ದೇವೆ” ಎಂದು ಬಿಟಿಆರ್‌ನ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಪ್ರಮೋದ್ ಬೊರೊ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶರಣಾಗುವ ಹೋರಾಟಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆರ್ಥಿಕ ನೆರವು ನೀಡುವುದರ ಜೊತೆಗೆ ಬಿಟಿಆರ್ ಸಂಸ್ಥೆಯು ಉದ್ಯೋಗಾವಕಾಶ ಕಲ್ಪಿಸಲು ಸಹಕಾರಿಯಾಗಿದೆ ಎಂದು ಪ್ರಮೋದ್ ಬೊರೊ ಹೇಳಿದ್ದಾರೆ.

“ಮಾಜಿ ಬಂಡುಕೋರರ ಪುನರ್ವಸತಿಗೆ ಸಂಬಂಧಪಟ್ಟಂತೆ ನಾವು ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಅವುಗಳಲ್ಲಿ ಮಾಜಿ ಬಂಡುಕೋರರ ಸಹಕಾರ ಸಂಘಗಳನ್ನು ರಚಿಸುವುದು ಮತ್ತು ಅವರಿಗೆ ಜೀವನೋಪಾಯವನ್ನು ಕಂಡುಕೊಳ್ಳಲು ಸಹಾಯ ಮಾಡುವುದು ಪ್ರಮುಖವಾದುದು” ಎಂದು ಬಿಟಿಆರ್ ಮುಖ್ಯಸ್ಥರು ತಿಳಿಸಿದ್ದಾರೆ.

ನಮ್ಮ ಕಾರ್ಯಕ್ರಮಕ್ಕೆ ‘ಮಿಷನ್ ಬ್ಲಾಸಮ್ ಎಗೈನ್’ ಎಂದು ಹೆಸರಿಡಲಾಗಿದೆ. ಅಕ್ಕಿ ಗಿರಣಿಗಳಿಂದ ಹಿಡಿದು ಸ್ಯಾನಿಟರಿ ಪ್ಯಾಡ್ ತಯಾರಿಕೆ ಘಟಕಗಳವರೆಗೆ, ವಿವಿಧ ಸಹಕಾರಿ ಸಂಸ್ಥೆಗಳು ಇದರ ಅಡಿಯಲ್ಲಿ ಬರುತ್ತವೆ ಎಂದು ಬೊರೊ ಮಾಹಿತಿ ನೀಡಿದ್ದಾರೆ.

‘ಮಿಷನ್ ಬ್ಲಾಸಮ್ ಎಗೈನ್’ ವಿವರಗಳನ್ನು ಹಂಚಿಕೊಂಡ ಬಿಟಿಆರ್‌ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಬೈನೌರಲ್ ವರಿ, 30 ಸಹಕಾರಿ ಸಂಘಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಪೈಕಿ 21 ಸಹಕಾರಿ ಸಂಘಗಳು ಈಗಾಗಲೇ ರಚನೆಯಾಗಿದ್ದು, ಎಂಟು ಸಹಕಾರಿ ಸಂಘಗಳು ಮಂಜೂರಾಗಿವೆ. ಮಂಜೂರಾದ ಐದು ಯೋಜನೆಗಳು ಅಕ್ಕಿ ಗಿರಣಿಗಳನ್ನು ಸ್ಥಾಪಿಸಲು, ಒಂದು ಡೈರಿ ಸಂಸ್ಕರಣಾ ಘಟಕಕ್ಕೆ ಮತ್ತು ಇನ್ನೊಂದು ಸ್ಟೀವಿಯಾ ಸಂಸ್ಕರಣಾ ಘಟಕಕ್ಕೆ. ಸೇರಿವೆ. ಎಂಟನೇ ಸಹಕಾರಿ ಸಂಘವು ಸಂಪೂರ್ಣ ಮಹಿಳಾ ಸಂಘವಾಗಿದೆ. ಇದು ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸಲಿದೆ. ಉದಲ್‌ಗಿರಿಯಲ್ಲಿ ಇದು ಸ್ಥಾಪನೆಯಾಗಲಿದೆ. ನೀತಿ ಆಯೋಗದಿಂದ ಒದಗಿಸಲಾದ ಯಂತ್ರವನ್ನು ಈಗಾಗಲೇ ಅಲ್ಲಿ ಸ್ಥಾಪಿಸಲಾಗಿದೆ. ಮಾಜಿ ಬಂಡುಕೋರರಿಗೆ ಕಸ್ಟಮೈಸ್ ಮಾಡಿದ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

“ಒಂದೆರಡು ತಿಂಗಳೊಳಗೆ ಸ್ಯಾಟಿನರಿ ಪ್ಯಾಡ್ ಉತ್ಪಾದನೆಯನ್ನು ಪ್ರಾರಂಭಿಸುವ ಉದ್ದೇಶವಿದೆ” ಎಂದು ನ್ಯಾಶನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‌ಡಿಎಫ್‌ಬಿ) ನ, ಈಗ ವಿಸರ್ಜಿಸಲ್ಪಟ್ಟ ಬಣದ ಮಾಜಿ ಬಂಡುಕೋರ ವಾರಿ ಹೇಳಿದ್ದಾರೆ.

ಈ ಮಿಷನ್ ಅಡಿಯಲ್ಲಿ ಎಲ್ಲಾ ಉತ್ಪನ್ನಗಳನ್ನು ‘Rwdwm’ (ಬಡ್) ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಕಳೆದ ಮೂರು ವರ್ಷಗಳಲ್ಲಿ ಬಿಟಿಆರ್‌ನಲ್ಲಿ ಯಾವುದೇ ಪ್ರಮುಖ ಹಿಂಸಾಚಾರ, ಬಂದ್‌ಗಳು ಅಥವಾ ಕೋಮು ಸಂಘರ್ಷಗಳು ನಡೆದಿಲ್ಲ ಎಂದು ಹೇಳಲು ನಮಗೆ ಸಂತೋಷವಾಗ್ತಿದೆ. ಶಾಂತಿ ಪುನಃಸ್ಥಾಪಿಸಲಾಗಿದೆ. ಜನರು ಇನ್ನು ಮುಂದೆ ಭಯದಿಂದ ಬದುಕುವ ಅಗತ್ಯವಿಲ್ಲ. ಬೋಡೋಗಳು ಮತ್ತು ಬೋಡೋಗಳಲ್ಲದವರಲ್ಲಿ ನಡುವಿನ ‘ತಪ್ಪು ತಿಳುವಳಿಕೆ’ ಯನ್ನು ಪರಿಹರಿಸಲಾಗುತ್ತಿದೆ. ಅದಕ್ಕಾಗಿ ಸ್ಥಳೀಯ ಜನರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ‘ಹ್ಯಾಪಿನೆಸ್ ಮಿಷನ್’ ಆರಂಭಿಸಲಾಗಿದ್ದು, ಇದರ ಮೂಲಕ ವಿವಿಧ ಸಮುದಾಯಗಳ ನಡುವೆ ಯಾವುದೇ ಸಮಸ್ಯೆ ಎದುರಾದರೆ ಮಧ್ಯಪ್ರವೇಶಿಸಲು ಯುವಕರು ಹಾಗೂ ಸಮುದಾಯದ ಮುಖಂಡರಿಗೆ ತರಬೇತಿ ನೀಡಲಾಗುತ್ತಿದೆ. ನಾನು ಬಿಟಿಆರ್‌ನಲ್ಲಿ ವಾಸಿಸುವ ವಿವಿಧ ಸಮುದಾಯಗಳ ಪ್ರತಿನಿಧಿಗಳನ್ನು ಸಹ ಭೇಟಿ ಮಾಡುತ್ತಿದ್ದೇನೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇನೆ ಎಂದು ಪ್ರಮೋದ್ ಬೊರೊ ಹೇಳಿದ್ದಾರೆ.

ಬೋಡೋಗಳು ಯಾರು, ಇವರು ಬಂದೂಕು ಹಿಡಿದದ್ದು ಯಾಕೆ?

ಹಲವಾರು ಸಮುದಾಯಗಳನ್ನು ಒಳಗೊಂಡ ಅಸ್ಸಾಂನ ಮೂಲ ನಿವಾಸಿಗಳನ್ನು ಒಟ್ಟಾಗಿ ಬೋಡೋಗಳು ಎಂದು ಕರೆಯಲಾಗುತ್ತದೆ. 1970ಕ್ಕೂ ಮುನ್ನ ಇವರೇ ಅಸ್ಸಾಂನಲ್ಲಿ ಬಹು ಸಂಖ್ಯಾತರಾಗಿದ್ದರು. 2011ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ 14 ಲಕ್ಷಗಳಷ್ಟಿತ್ತು. ಇವರು ತಮ್ಮದೇ ಆದ ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಬೋಡೋ ಪ್ರಾಂತ್ಯದಲ್ಲಿ ಸಾಕಷ್ಟು ಬುಡಕಟ್ಟು ನಿವಾಸಿಗಳೂ ಇದ್ದಾರೆ.

1971ರಲ್ಲಿ ನಡೆದ ಭಾರತ- ಪಾಕಿಸ್ತಾನ ಯುದ್ಧ ಹಾಗೂ ಬಾಂಗ್ಲಾದೇಶದ ಸೃಷ್ಟಿಯಿಂದ ಈ ಪ್ರಾಂತ್ಯದಲ್ಲಿಇದ್ದಕ್ಕಿದ್ದಂತೆ ಒತ್ತಡ ಸೃಷ್ಟಿಯಾಯಿತು. ಬಾಂಗ್ಲಾದಲ್ಲಿ ನಡೆದ ಧಾರ್ಮಿ ದೌರ್ಜನ್ಯದ ಪರಿಣಾಮ, ಅಲ್ಲಿಂದ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಮರೂ ಅಸ್ಸಾಂಗೆ ವಲಸೆ ಬಂದರು. ಮ್ಯಾನ್ಮಾರ್‌ನಿಂದ ರೋಹಿಂಗ್ಯಾ ಮುಸ್ಲಿಮರು ಬಂದರು. ಇವರ ಸಂಖ್ಯೆ ಅಧಿಕವಾಗುತ್ತ ಹೋದಂತೆ, ಸ್ಥಳೀಯ ಸಂಸ್ಕೃತಿಯಲ್ಲಿಆತಂಕ ಹೆಚ್ಚತೊಡಗಿತು. ಪ್ರಾದೇಶಿಕ ಅಸ್ಮಿತೆ, ಅಸ್ತಿತ್ವದ ಉಳಿವಿಗಾಗಿ ಬೋಡೋಗಳು, ಬುಡಕಟ್ಟು ನಿವಾಸಿಗಳು ಹೋರಾಟ ಆರಂಭಿಸಿದರು.

ಕೆಲವು ಸಂಘಟನೆಗಳು ಇನ್ನೂ ಮುಂದಕ್ಕೆ ಹೋಗಿ, ಪ್ರತ್ಯೇಕ ಬೋಡೋ ದೇಶವೇ ತಮಗೆ ಬೇಕೆಂದು ಹೋರಾಟ ಆರಂಭಿದ್ದರು. ಇದಕ್ಕಾಗಿ ಅವರು ಬಂದೂಕು ಹಿಡಿದಿದ್ದರು.

ಬೋಡೋ ಧಂಗೆ ತಣ್ಣಗಾಗಿದ್ದು ಹೇಗೆ?

ಗುವಾಹಟಿಯಲ್ಲಿ 1993 ರಲ್ಲಿ ಮೊದಲ ಬಾರಿಗೆ ಬೋಡೋ ಹೋರಾಟಗಾರರು ಮತ್ತು ಕೇಂದ್ರ ಸರ್ಕಾರದ ನಡುವೆ ಒಪ್ಪಂದ ನಡೆಯಿತು. ಈ ಒಪ್ಪಂದ ಪ್ರಕಾರ, ಬೋಡೋಲ್ಯಾಂಡ್‌ ಸ್ವಾಯತ್ತ ಮಂಡಳಿ ರಚನೆಯಾಯಿತು. ಆದರೆ, ಈ ಒಪ್ಪಂದಿಂದ ತಮ್ಮ ಬೇಡಿಕೆಗಳು ಈಡೇರಿಲ್ಲಎಂದು ವಾದಿಸಿದ ಬೋಡೋಗಳು ಮತ್ತೆ ಪ್ರತ್ಯೇಕ ಬೋಡೋ ಲ್ಯಾಂಡ್‌ಗಾಗಿ ಸಶಸ್ತ್ರ ಆಂದೋಲನ ಪ್ರಾರಂಭಿಸಿದ್ದರು. ಫೆಬ್ರವರಿ 10,2003ರಂದು, ಅಸ್ಸಾಂ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಬೋಡೋ ಲಿಬರೇಶನ್‌ ಟೈಗರ್ಸ್‌ ಬೋಡೋಲ್ಯಾಂಡ್‌ ಪ್ರಾದೇಶಿಕ ಮಂಡಳಿಯನ್ನು ರೂಪಿಸುವ ಒಪ್ಪಂದಕ್ಕೆ ಸಹಿ ಹಾಕಿದರು.

ಇದಾದ ಬಳಿಕ 2020 ಮೂರನೇ ಒಪ್ಪಂದಕ್ಕೆ ಒತ್ತಡ ಹೆಚ್ಚಿತು. ಈ ಬಾರಿ ಶಾಂತಿ ಒಪ್ಪಂದದಲ್ಲಿ ಭಾಗವಹಿಸಲು, ಮ್ಯಾನ್ಮಾರ್‌ನಲ್ಲಿ ತಲೆ ಮರೆಸಿಕೊಂಡಿದ್ದ ಬೋಡೋ ಉಗ್ರ ನಾಯಕರು ಭಾರತಕ್ಕೆ ಬಂದಿದ್ದರು. 2020ರ ಜನವರಿ 28 ರಂದು ಸರ್ಕಾರ ಮತ್ತು ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋ ಲ್ಯಾಂಡ್(ಎನ್‌ಡಿಎಫ್‌ಬಿ) ನಡುವೆ ಮೂರನೇ ಒಪ್ಪಂದ ನಡೆಯಿತು. ಈ ಒಪ್ಪಂದದಲ್ಲಿ ಸರ್ಕಾರ ಮೇಲುಗೈ ಸಾಧಿಸಿತ್ತು. ಎನ್‌ಡಿಎಫ್‌ಬಿ ಹೋರಾಟಗಾರರು ಶಸ್ತ್ರ ಕೆಳಗಿಟ್ಟು ಶರಣಾಗತಿಗೆ ಒಪ್ಪಿದರು. ಆ ಬಳಿಕ ಬೋಡೋ ಲ್ಯಾಂಡ್ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಜಾರ್ಖಂಡ್‌: ಬುಡಕಟ್ಟು ಸಮುದಾಯದ ಗಾಯಕನನ್ನು ಥಳಿಸಿ ಹತ್ಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...