‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿಯ ಕಮಲದ ಚಿಹ್ನೆ ಹೊಂದಿರುವ ಟಿ ಶರ್ಟ್‌ಧರಿಸಿ ಭಾಷಣ ಮಾಡಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಅನೇಕ ಮಂದಿ ಸಾಮಾಜಿಕ ಜಾಲತಾಣ ಬಳಕೆದಾರರು, ಭಾರತ್ ಜೋಡೋ ನ್ಯಾಯ್ ಯಾತ್ರೆಯ ನಡುವೆ ರಾಹುಲ್ ಗಾಂಧಿ ಬಿಜೆಪಿಯ ಕಮಲದ ಚಿಹ್ನೆ ಹೊಂದಿದ್ದ ಬಿಳಿ ಬಣ್ಣದ ಟಿ ಶರ್ಟ್ ಧರಿಸಿ ಜನರನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಪೋಟೋ ಹಂಚಿಕೊಂಡಿದ್ದಾರೆ.

“ರಾಹುಲ್ ಗಾಂಧಿ ಬಿಜೆಪಿಯ ಏಜೆಂಟ್ ಎಂದು ನಾವು ಮೊದಲೇ ಹೇಳಿದ್ದೆವು, ಇದೀಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ ನೋಡಿ” ಎಂದು ಫೋಟೋದ ಜೊತೆಗೆ ಕೆಲವರು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ನಾನುಗೌರಿ.ಕಾಂ ಮೇಲೆ ತಿಳಿಸಿದ ವೈರಲ್ ಫೋಟೋದ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಿದೆ. ಮೊದಲು ನಾವು ಭಾರತ್ ಜೋಡೋ ನ್ಯಾಯ್ ಯಾತ್ರೆಯ ಅಧಿಕೃತ ಎಕ್ಸ್ ಖಾತೆಯನ್ನು ಪರಿಶೀಲಿಸಿದ್ದೇವೆ. ಈ ವೇಳೆ ಅದರಲ್ಲಿ ಎಲ್ಲೂ ರಾಹುಲ್ ಗಾಂಧಿ ಬಿಜೆಪಿ ಚಿಹ್ನೆ ಹೊಂದಿದ್ದ ಟಿ ಶರ್ಟ್ ಧರಿಸಿದ್ದ ಫೋಟೋ ಕಂಡು ಬಂದಿಲ್ಲ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ನಾವು ಈ ಫೋಟೋ ಕುರಿತು ಹುಡುಕಿದ್ದೇವೆ. ಅಲ್ಲಿ ಜನವರಿ 14ರಂದು ಸಂಜೆ 5:07 ಗಂಟೆಗೆ ‘Amock(@Politics_2022_)’ ಎಂಬ ಎಕ್ಸ್ ಖಾತೆಯಲ್ಲಿ ಮೇಲಿನ ಪೋಸ್ಟ್ ಆಗಿರುವುದು ಕಂಡು ಬಂದಿದೆ. ಅದರಲ್ಲಿ ರಾಹುಲ್ ಗಾಂಧಿ ಧರಿಸಿದ್ದ ಟಿ ಶರ್ಟ್‌ನಲ್ಲಿ ಬಿಜೆಪಿಯ ಕಮಲದ ಚಿಹ್ನೆ ಕಂಡು ಬಂದಿಲ್ಲ.
There is no infighting in INDIA alliance, we are on the same idea
the seat sharing is easy and we are going to sort out very quickly.
-Rahul Gandhi in Nagaland 🔥 pic.twitter.com/YczWBOPPdd
— Amock (@Politics_2022_) January 16, 2024
ವೈರಲ್ ಫೋಟೋವನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ನಾವು ಕೆಲ ಕಾಂಗ್ರೆಸ್ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಿದ್ದೇವೆ. ಈ ವೇಳೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಂಡದ ಮುಖ್ಯಸ್ಥೆ ಮತ್ತು ಎಐಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯೆ ಸುಪ್ರಿಯಾ ಶ್ರೀನಾಥೆ ಅವರ ಎಕ್ಸ್ ಖಾತೆಯಲ್ಲಿ ಫೋಟೋ ಕಂಡು ಬಂದಿದೆ. ಜನವರಿ 14ರಂದು ಸಂಜೆ 4:38 ಗಂಟೆಗೆ ಈ ಫೋಟೋವನ್ನು ಸುಪ್ರಿಯಾ ಶ್ರೀನಾಥೆ ಪೋಸ್ಟ್ ಮಾಡಿದ್ದು, “ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯ ಬಗ್ಗೆ ಮಾತನಾಡುವಾಗ, ಅದು ಮಣಿಪುರದಿಂದ ಪ್ರಾರಂಭವಾಗಬಹುದು ಎಂದು ನಾನು ಹೇಳಿದ್ದೆ” ಎಂದು ಬರೆದುಕೊಂಡಿದ್ದಾರೆ.
“जब ईस्ट से वेस्ट की यात्रा की बात हुई थी – तो मैंने कहा कि यह यात्रा सिर्फ़ और सिर्फ़ मणिपुर से शुरू हो सकती है” @RahulGandhi pic.twitter.com/eejzAEf4dt
— Supriya Shrinate (@SupriyaShrinate) January 14, 2024
ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಹಾಗೂ ಶಿಕ್ಷಣ, ಮಹಿಳೆಯರು, ಮಕ್ಕಳು, ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿ ಟಿ.ಎನ್ ಪ್ರತಾಪನ್ ಅವರು ಕೂಡ ಇದೇ ಫೋಟೋವನ್ನು ಜನವರಿ 14ರಂದು ಸಂಜೆ 4:44 ಗಂಟೆಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸುಪ್ರಿಯಾ ಶ್ರೀನಾಥೆಯಂತೆ ಬರೆದುಕೊಂಡಿದ್ದಾರೆ.
“जब ईस्ट से वेस्ट की यात्रा की बात हुई थी – तो मैंने कहा कि यह यात्रा सिर्फ़ और सिर्फ़ मणिपुर से शुरू हो सकती है” @RahulGandhi
Here we starts the journey for justice! pic.twitter.com/3K95QDMoJj
— T N Prathapan (@tnprathapan) January 14, 2024
ಭಾರತ್ ಜೋಡೊ ನ್ಯಾಯ ಯಾತ್ರೆಯ ಕುರಿತು ರಾಹುಲ್ ಗಾಂಧಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಎಲ್ಲೂ ಟಿ ಶರ್ಟ್ ಮೇಲೆ ಬಿಜೆಪಿಯ ಚಿಹ್ನೆ ಕಂಡು ಬಂದಿಲ್ಲ.
ವೈರಲ್ ಫೋಟೋದ ಕುರಿತು ನಾವು ನಡೆಸಿದ ಪರಿಶೀಲನೆಯಲ್ಲಿ ಅದು ಎಡಿಟೆಡ್ ಫೋಟೋ ಎಂಬುವುದು ಖಚಿತವಾಗಿದೆ.
ಇದನ್ನೂ ಓದಿ : Fact Check : ಮಣಿಪುರದಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಕ್ಕೆ ಚೀನಾ ಅಧ್ಯಕ್ಷ ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದ್ರಾ?



I am next April-2024 going to retair from my job.I am a teacher at government high school.So I am not wish to take loan but you wish sanction loan to my, you will deducted by my pension amount.