ಪಾಕಿಸ್ತಾನದ ಸಂಸತ್ತಿನಲ್ಲಿ ಮೋದಿ ಪರ ಘೋಷಣೆ ಕೂಗುತ್ತಿದ್ದಾರೆ ಎನ್ನುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಸಂಸತ್ತಿನಲ್ಲಿನ ಚರ್ಚೆಯ ವಿಡಿಯೋ ತುಣುಕಿನಲ್ಲಿ ಸದಸ್ಯರು “ಮೋದಿ, ಮೋದಿ” ಎಂದು ಕೂಗುತ್ತಿದ್ದಾರೆ ಎಂದು ಹಲವರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೋವನ್ನ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, “ಪ್ರಧಾನಿ ನರೇಂದ್ರ ಮೋದಿ ಜಿ ಅವರು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸ್ಫೂರ್ತಿ ನೀಡಿದ್ದಾರೆ! ಪಾಕಿಸ್ತಾನ ಸಂಸತ್ತಿನಲ್ಲಿ ಆಡಳಿತಾರೂಢ ಸರಕಾರದ ವಿರುದ್ಧ “ಮೋದಿ ಮೋದಿ” ಎಂದು ಘೋಷಣೆ ಹಾಕುತ್ತಿರುವುದನ್ನು ನೋಡಿ. # ಇಮ್ರಾನ್ ಖಾನ್‌ಗೆ ಭಾರಿ ಮುಜುಗರವಾಗಿದೆ” ಎಂದು ಬರೆದುಕೊಂಡಿದ್ದಾರೆ.
With his dedication, determination & vision for Bharat, PM @narendramodi
Ji have inspired the whole world not just India!See opposition of Pakistan parliament chanting "Modi Modi" against the ruling govt.
Massive embarassment for #ImranKhanpic.twitter.com/gbCOr6HCb1
— Shobha Karandlaje (@ShobhaBJP) October 29, 2020
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂಬುದು ನಿಜವೇ?
ಇಂಡಿಯಾ ಟಿವಿ, ಟೈಮ್ಸ್ ನೌ ಮತ್ತು ಸುಳ್ಳು ಸುದ್ದಿ ಹರಡುವುದರಲ್ಲಿ ಕುಖ್ಯಾತಿ ಪಡೆದಿರುವ ಒಪಿಇಂಡಿಯಾ ಸೇರಿದಂತೆ ಅನೇಕ ಮುಖ್ಯವಾಹಿನಿಯ ಸುದ್ದಿ ಮಾಧ್ಯಮಗಳು ಇದೇ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದೆ. ಜೊತೆಗೆ ಹತ್ತಾರು ಬಿಜೆಪಿ ನಾಯಕರೂ ಕೂಡ ರಾಷ್ಟ್ರವ್ಯಾಪಿ ಈ ವೀಡಿಯೋವನ್ನು ಇದೇ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಹರಡುವ ಸುಳ್ಳು ಸುದ್ದಿ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ!
ಫ್ಯಾಕ್ಟ್‌ಚೆಕ್:
ಇಂಡಿಯಾ ಟಿವಿ ಅಪ್‌ಲೋಡ್ ಮಾಡಿದ ಕ್ಲಿಪ್‌ನಲ್ಲಿ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಷಾ ಮಹಮೂದ್ ಖುರೇಷಿ ದೇಶದ ಸಂಸತ್ತಿನಲ್ಲಿ ಮಾತನಾಡುವುದನ್ನು ಕಾಣಬಹುದು. ಹಾಗಾಗಿ “ಷಾ ಮಹಮೂದ್ ಖುರೇಷಿಯವರ ಸಂಸತ್ತಿನ ಭಾಷಣ”ಕ್ಕಾಗಿ ಗೂಗಲ್‌ನಲ್ಲಿ ಹುಡುಕಿದಾಗ ಪಾಕಿಸ್ತಾನದ ಸುದ್ದಿ ವಾಹಿನಿಯಾದ 92 ನ್ಯೂಸ್ ಎಚ್‌ಡಿ ಅಪ್‌ಲೋಡ್ ಮಾಡಿದ ವೀಡಿಯೊ ಕಂಡಬಂದಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: 13 ವರ್ಷದ ಬಾಲಕಿಯನ್ನು ಮುಸ್ಲಿಂ ವ್ಯಕ್ತಿ ಅತ್ಯಾಚಾರ ಮಾಡಿ ಸುಟ್ಟಿದ್ದು ಸುಳ್ಳು!
ಸುಮಾರು 10 ನಿಮಿಷಗಳ ಸುದೀರ್ಘ ಭಾಷಣದ ಕೆಲವು ಭಾಗಗಳನ್ನು ಮೇಲೆ ತಿಳಿಸಿದ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಭಾರತೀಯ ಚಾನೆಲ್‌ಗಳು ಬಳಸುತ್ತಿರುವುದು ತಿಳಿದುಬಂದಿದೆ. ಇದರಲ್ಲಿ ’ಮೋದಿ ಮೋದಿ ಎಂದು ಕೂಗುತ್ತಿರುವಂತೆಯೇ ಕಂಡುಬಂದಿದೆ.
ಆದರೂ ವೀಡಿಯೋವನ್ನು ಸೂಕ್ಷ್ಮವಾಗಿ ಮತ್ತು ನಿಧಾನಗೊಳಿಸಿ ಆಲಿಸಿದಾಗ, ವಾಸ್ತವದಲ್ಲಿ ವಿರೋಧ ಪಕ್ಷದ ಸಂಸದರು “ವೋಟಿಂಗ್ ವೋಟಿಂಗ್” ಎಂದು ಕೂಗುತ್ತಿರುವುದನ್ನು ಕೇಳಬಹುದು.
ವೀಡಿಯೊದಲ್ಲಿ 0.15 ನಿಮಿಷದಲ್ಲಿ, ಸ್ಪೀಕರ್ ಸಂಸದರನ್ನುದ್ದೇಶಿಸಿ ಅವರನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ “वोटिंग सबकुछ होगा… सबकुछ होगा” (ಮತದಾನ ನಡೆಯಲಿದೆ) ಎಂದು ಹೇಳುವುದನ್ನು ಕೇಳಬಹುದು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!
ಇಷ್ಟೇ ಅಲ್ಲದೇ, ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಸುದ್ದಿಯನ್ನು ಸುಳ್ಳು ಎಂದು ಕಂಡುಹಿಡಿದಿದೆ. ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಸದಸ್ಯರು ಮಂಡಿಸಿದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ವಿರೋಧ ವ್ಯಕ್ತವಾಯಿತು. ಈ ವೇಳೆ ಸದಸ್ಯರು “ಮತದಾನ, ಮತದಾನ” (ಓಟಿಂಗ್.. ಓಟಿಂಗ್) ಎಂದು ಕೂಗುತ್ತಿದ್ದಾರೆ. ಗಮನ ಹರಿಸದೇ ಕೇಳಿದರೆ ಅದು “ಮೋದಿ, ಮೋದಿ” ಅಂತಲೇ ಕೇಳುತ್ತದೆ. ಆದರೆ ಅದು “ಮೋದಿ.. ಮೋದಿ” ಅಂತ ಕೂಗಿದ್ದಲ್ಲ “ಓಟಿಂಗ್.. ಓಟಿಂಗ್..” ಎಂದು ಕೂಗಲಾಗಿದೆ.
ಅಕ್ಟೋಬರ್ 27 ರಂದು ಪಾಕಿಸ್ತಾನದ ದಿನಪತ್ರಿಕೆ ಡಾನ್ ನೀಡಿದ ವರದಿಯು ಸದನದಲ್ಲಿ ಉಂಟಾದ ಅವ್ಯವಸ್ಥೆಯನ್ನು ಸಹ ವಿವರಿಸಿದ್ದು, ವಿರೋಧ ಪಕ್ಷದ ಸದಸ್ಯರು ‘ಮತದಾನ ಮತದಾನ’ ಘೋಷಣೆಗಳನ್ನು ಎತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಆದ್ದರಿಂದ, ಪಾಕಿಸ್ತಾನದ ಸಂಸತ್ತಿನ ಸಂಸದರು “ಮತದಾನ, ಮತದಾನ” ಎಂದು ಕೂಗುತ್ತಿದ್ದರು. ಹಾಗಾಗಿ “ಮೋದಿ, ಮೋದಿ” ಎಂದು ಕೂಗುತ್ತಿರುವುದಲ್ಲ ಎಂದು ಸ್ಪಷ್ಟವಾಗಿದೆ.
ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲಿದೆ ವಿವರ


